Stomach Acid: ಹೊಟ್ಟೆಯ ಆಮ್ಲ ಸಮಸ್ಯೆಯ ಲಕ್ಷಣಗಳು ಮತ್ತು ನಿವಾರಣೆಗೆ ಮನೆಮದ್ದು ಯಾವವು?

ನೀವು ಸೇವಿಸುವ ಆಹಾರದಿಂದ ಅಗತ್ಯವಾದ ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಹೀರಿಕೊಳ್ಳಲು ಹೊಟ್ಟೆಯ ಆಮ್ಲ ಅಥವಾ ಗ್ಯಾಸ್ಟ್ರಿಕ್ ಆಮ್ಲವು ಅವಶ್ಯಕವಾಗಿದೆ. ಹೊಟ್ಟೆಯಲ್ಲಿ ಆಮ್ಲದ ಅಧಿಕ ಅಥವಾ ಕಡಿಮೆ ಉತ್ಪಾದನೆಯು ಎರಡೂ ಸಂದರ್ಭಗಳಲ್ಲಿ ಸಾಕಷ್ಟು ಹಾನಿ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿಮ್ಮ ಹೊಟ್ಟೆ (Stomach) ಯಾವಾಗಲೂ ತುಂಬಿರುವುದು (Fullness) ಮತ್ತು ಉಬ್ಬುವುದು (Bloating) ಹಾಗೂ ನಿಮಗೆ ಹಸಿವು ಕಡಿಮೆಯಾಗುತ್ತಿದ್ದರೆ, ನೀವು ಯಾವಾಗಲೂ ಮಲಬದ್ಧತೆಯಿಂದ (Constipation) ಬಳಲುತ್ತಿದ್ದರೆ ಇವು ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ (Digestion) ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು ಆಗಿವೆ. ಇದರಿಂದಾಗಿ ಹೆಚ್ಚಿನ ಜನರು ಪ್ರತಿದಿನ ತೊಂದರೆ ಅನುಭವಿಸುತ್ತಾರೆ. ಸಹಜವಾಗಿ, ಈ ಅಸ್ವಸ್ಥತೆಗೆ ಹಲವು ಕಾರಣಗಳಿವೆ. ಆದರೆ ಹೊಟ್ಟೆಯಲ್ಲಿ ಕಡಿಮೆ ಆಮ್ಲದ ರಚನೆಯು ಇದಕ್ಕೆ ಒಂದು ದೊಡ್ಡ ಕಾರಣ ಆಗಿದೆ. ವೈದ್ಯಕೀಯ ಭಾಷೆಯಲ್ಲಿ ಈ ಸಮಸ್ಯೆಯನ್ನು ಹೈಪೋಕ್ಲೋರಿಡ್ರಿಯಾ ಎಂದು ಕರೆಯುತ್ತಾರೆ. ಹೊಟ್ಟೆಯ ಆಮ್ಲ ಅಥವಾ ಗ್ಯಾಸ್ಟ್ರಿಕ್ ಆಮ್ಲವು ಉತ್ತಮ ಜೀರ್ಣಕ್ರಿಯೆಗೆ ಅವಶ್ಯಕ ಆಗಿದೆ.

    ಹೊಟ್ಟೆಯ ಆಮ್ಲ ಅಥವಾ ಗ್ಯಾಸ್ಟ್ರಿಕ್ ಆಮ್ಲವು

    ನೀವು ಸೇವಿಸುವ ಆಹಾರದಿಂದ ಅಗತ್ಯವಾದ ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಹೀರಿಕೊಳ್ಳಲು ಹೊಟ್ಟೆಯ ಆಮ್ಲ ಅಥವಾ ಗ್ಯಾಸ್ಟ್ರಿಕ್ ಆಮ್ಲವು ಅವಶ್ಯಕವಾಗಿದೆ. ಹೊಟ್ಟೆಯಲ್ಲಿ ಆಮ್ಲದ ಅಧಿಕ ಅಥವಾ ಕಡಿಮೆ ಉತ್ಪಾದನೆಯು ಎರಡೂ ಸಂದರ್ಭಗಳಲ್ಲಿ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಹೊಟ್ಟೆಯಲ್ಲಿ ಕಡಿಮೆ ಆಮ್ಲ ಉತ್ಪಾದನೆಯು SIBO ನಂತಹ ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಅಮೇರಿಕನ್ ವೈದ್ಯ ಮತ್ತು ಪೌಷ್ಟಿಕತಜ್ಞ ಎರಿನ್ ಕೆನ್ನಿ ಪ್ರಕಾರ, ಒತ್ತಡ ಮತ್ತು ಕಳಪೆ ಆಹಾರ ಪದ್ಧತಿ ಕಡಿಮೆ ಆಮ್ಲ ಉತ್ಪಾದನೆಯ ಎರಡು ಪ್ರಮುಖ ಅಂಶ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಸತುವಿನ ಕೊರತೆ, ಆಂಟಾಸಿಡ್ಗಳ ಬಳಕೆ, ವಯಸ್ಸು, ಔಷಧಿಗಳು, ಸೋಂಕುಗಳು, ಹೆಚ್ಚಿನ ಸಕ್ಕರೆ ಸೇವನೆಯು ಹೊಟ್ಟೆಯ ಆಮ್ಲ ಕಡಿಮೆ ಮಾಡುತ್ತವೆ.

    ಇದನ್ನೂ ಓದಿ: ರಕ್ತ ಪರೀಕ್ಷೆಯನ್ನು ಯಾವ ವಯಸ್ಸಿನವರು ಮಾಡಿಸಬೇಕು ಮತ್ತು ಯಾಕೆ? ತಜ್ಞರ ಅಭಿಪ್ರಾಯವೇನು?

    ಹೊಟ್ಟೆಯ ಕಡಿಮೆ ಆಮ್ಲದ ಲಕ್ಷಣಗಳು ಯಾವವು?

    ಕೂದಲು ಉದುರುವುದು ಮತ್ತು ಉಗುರು ಸಮಸ್ಯೆ

    ವಾಕರಿಕೆ

    ಆಹಾರ ಜೀರ್ಣವಾಗದಿರುವುದು

    ಅಸಹಜ ಕರುಳಿನ ಚಲನೆ

    ಪೌಷ್ಟಿಕಾಂಶದ ಕೊರತೆ

    ಅರುಗುಲಾ ಸಸ್ಯ

    100 ಗ್ರಾಂ ಅರುಗುಲಾದಲ್ಲಿ 91.71 ಗ್ರಾಂ ನೀರು ಮತ್ತು 1.6 ಗ್ರಾಂ ಫೈಬರ್ ಇದೆ. ಹೆಚ್ಚಿನ ಫೈಬರ್ ಅಂಶವು ನಿಮ್ಮ ಕರುಳು, ಹೊಟ್ಟೆ ಮತ್ತು ಇತರ ಜೀರ್ಣಕಾರಿ ಅಂಗಗಳಿಗೆ ಸಹ ಒಳ್ಳೆಯದು. ಇದರ ಜೊತೆಗೆ ಹೆಚ್ಚಿನ ಫೈಬರ್ ಆಹಾರ ಸೇವನೆ ಮಾಡುವುದು ಕರುಳಿನ ಕ್ಯಾನ್ಸರ್, ಅಲ್ಸರೇಟಿವ್ ಕೊಲೈಟಿಸ್ ಮತ್ತು ಡೈವರ್ಟಿಕ್ಯುಲೈಟಿಸ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಬೆಳ್ಳುಳ್ಳಿ

    ಇದು ಹೊಟ್ಟೆಯ ಕಿರಿಕಿರಿ ಮತ್ತು ಉಬ್ಬುವಿಕೆ ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ತಿನ್ನುವುದು ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆ ತಪ್ಪಿಸಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿ ಎಸಳು ಸೇವನೆ ಮಾಡುವುದು ಎದೆಯುರಿ, ಹೊಟ್ಟೆ ನೋವು ಮತ್ತು ಅಜೀರ್ಣ ಆಮ್ಲೀಯತೆಯ ಲಕ್ಷಣಗಳಿಂದ ನಿಮಗೆ ಪರಿಹಾರ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಶುಂಠಿ

    ಶುಂಠಿಯು ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ರಾಸಾಯನಿಕಗಳ ಉತ್ತಮ ಮೂಲ. ಇದು ಅನೇಕ ಔಷಧೀಯ ಪ್ರಯೋಜನ ನೀಡುತ್ತದೆ. ಇದರ ಫೀನಾಲಿಕ್ ಸಂಯುಕ್ತಗಳು ಜಠರಗರುಳಿನ ಕಿರಿಕಿರಿ ನಿವಾರಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಂಕೋಚನ ಕಡಿಮೆ ಮಾಡುತ್ತದೆ.

    ತೆಂಗಿನಕಾಯಿ

    ತೆಂಗಿನಕಾಯಿ ಆಂಟಿಹಿಸ್ಟಮೈನ್, ಸೋಂಕು ನಿವಾರಕ ಮತ್ತು ನಂಜುನಿರೋಧಕ ಗುಣ ಹೊಂದಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಮತ್ತು ಗ್ಲುಕೊಕಾರ್ಟಿಕಾಯ್ಡ್ಗಳನ್ನು ಹೆಚ್ಚಿಸುತ್ತದೆ. ಮತ್ತು ಬಲಪಡಿಸುತ್ತದೆ. ಹೊಟ್ಟೆಯ ಅಸ್ವಸ್ಥತೆ ಮತ್ತು ಆಸಿಡ್ ರಿಫ್ಲಕ್ಸ್‌ ರೋಗ ಲಕ್ಷಣ ನಿವಾರಿಸುವಲ್ಲಿ ತೆಂಗಿನಕಾಯಿ ಪರಿಣಾಮಕಾರಿಯಾಗಿದೆ.

    ಇದನ್ನೂ ಓದಿ: ಹಾಲಿನ ಜೊತೆ ಚಿಕನ್ ಯಾಕೆ ತಿನ್ನಬಾರದು? ಈ ಬಗ್ಗೆ ಆಯುರ್ವೇದ ಹೇಳೋದೇನು?

    ಕೋಕೋ

    ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಕೋಕೋ ಪರಿಹಾರವಾಗಿದೆ. ಇದು ಫ್ಲೇವನಾಯ್ಡ್‌ ಹೊಂದಿದೆ. ಇದು ಸೌಮ್ಯವಾದ ಅತಿಸಾರ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಜೀರ್ಣವಾದಾಗ ಅದರ ಫ್ಲೇವನಾಲ್‌ಗಳು ಪ್ರಿಬಯಾಟಿಕ್ ಆಗಬಹುದು. ಮತ್ತು ನಿಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾ ಸಮತೋಲನಗೊಳಿಸಲು ಪ್ರಿಬಯಾಟಿಕ್‌ಗಳು ಕೆಲಸ ಮಾಡುತ್ತವೆ.
    Published by:renukadariyannavar
    First published: