ಸಾಂಕ್ರಾಮಿಕ ಸಮಯದಲ್ಲಿ ವೃದ್ಧರ ಒಂಟಿತನಕ್ಕೆ ತಂತ್ರಜ್ಞಾನವೇ ಕಾರಣ..!

ಜನಸಂಪರ್ಕದಿಂದ ದೂರ ಉಳಿಯುವುದಕ್ಕಿಂತ ನಾವು ವರ್ಚುವಲ್ ಅಥವಾ ಆನ್ಲೈನ್ ಸಂಪರ್ಕವೇ ಉತ್ತಮ ಎಂದು ನಾವು ಭಾವಿಸುತ್ತೇವೆ. ಆದರೆ ವಯಸ್ಸಾದವರಿಗೆ ಅದು ಹೆಚ್ಚಿನ ಸಮಸ್ಯೆ ಉಂಟುಮಾಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯರ ಖಿನ್ನತೆ

ಹಿರಿಯರ ಖಿನ್ನತೆ

  • Share this:
ಈ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ತಂತ್ರಜ್ಞಾನದ ಮೊರೆಹೋಗುವುದು ಅನಿವಾರ್ಯ. ಆದರೆ, ವಯಸ್ಸಾದ ಜನರಿಗೆ ಇದು ನಿಜಕ್ಕೂ ಕಿರಿಕಿರಿ ತಂದಿದೆ. ಜನಸಂಪರ್ಕವೇ ಇಲ್ಲದೆ ಇರುವ ಸ್ಥಿತಿಗಿಂತ ಈ ರೀತಿ ತಂತ್ರಜ್ಞಾನ ಬಳಕೆಯು ವೃದ್ಧರನ್ನ ಹೆಚ್ಚು ಒಂಟಿತನ ಮತ್ತು ಖಿನ್ನತೆಗೆ ತಳ್ಳುತ್ತಿದೆ ಎಂದು ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಅಧ್ಯಯನವು ಸಾಂಕ್ರಾಮಿಕ ರೋಗವನ್ನು ಅನುಭವಿಸಿದ ವಯಸ್ಸಾದ ಜನರನ್ನು ಹೋಲಿಸಿದರೆ ಆನ್‌ಲೈನ್ ಸಾಮಾಜಿಕೀಕರಣಕ್ಕೆ ಬದಲಾದ ಪರಿಣಾಮವಾಗಿ ಅನೇಕ ವಯಸ್ಸಾದ ಜನರು ಒಂಟಿತನ ಮತ್ತು ದೀರ್ಘಕಾಲೀನ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಸಮಸ್ಯೆಗಳನ್ನು ಅನುಭವಿಸಿದ್ದಾರೆ ಎಂದು ವರದಿ ಮಾಡಿದೆ.

"ಲಾಕ್ಡೌನ್ ಸಮಯದಲ್ಲಿ ಮಾತ್ರ ವರ್ಚುವಲ್ ಸಂಪರ್ಕ ಹೊಂದಿರುವ ವಯಸ್ಸಾದ ಜನರು ಇತರ ಜನರೊಂದಿಗೆ ಯಾವುದೇ ಸಂಪರ್ಕ ಹೊಂದಿರದ ವಯಸ್ಸಾದ ಜನರಿಗಿಂತ ಹೆಚ್ಚಿನ ಒಂಟಿತನ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಅನುಭವಿಸಿದ್ದಾರೆ ಎಂದು ನಮ್ಮ ಅಧ್ಯಯನದಿಂದ ತಿಳಿದು ನಾವು ಆಶ್ಚರ್ಯಪಟ್ಟಿದ್ದೇವೆ" ಎಂದು ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಡಾ. ಹೂ ಯಾಂಗ್ ಹೇಳಿದ್ದಾರೆ.

"ಒಟ್ಟು ಪ್ರತ್ಯೇಕತೆಗಿಂತ ನಾವು ವರ್ಚುವಲ್ ಅಥವಾ ಆನ್‌ಲೈನ್‌ ಸಂಪರ್ಕ ಉತ್ತಮವಾಗಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ವಯಸ್ಸಾದವರಿಗೆ ಅದು ಹೆಚ್ಚಿನ ಸಮಸ್ಯೆ ಉಂಟುಮಾಡುತ್ತದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿವಿಯಲ್ಲಿ ಒಲಿಂಪಿಕ್ಸ್ ಆಟ ನೋಡುತ್ತಿರುವ ಬೆಕ್ಕಿನ ಪಾಡು ಎಂಥವರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ!

ಸಮಸ್ಯೆಯೆಂದರೆ ತಂತ್ರಜ್ಞಾನದ ಪರಿಚಯವಿಲ್ಲದ ವಯಸ್ಸಾದವರು ಅದನ್ನು ಹೇಗೆ ಬಳಸಬೇಕೆಂದು ಕಲಿಯುವುದು ಒತ್ತಡವನ್ನುಂಟುಮಾಡುತ್ತದೆ. ಜೊತೆಗೆ ಲಾಕ್ಡೌನ್ ಸಮಯದಲ್ಲಿ ಮಾಧ್ಯಮವನ್ನು ವ್ಯಾಪಕವಾಗಿ ಬಳಸುವುದು ಕೂಡ ತುಂಬಾ ದೊಡ್ಡದಾದ ಒತ್ತಡ ಉಂಟುಮಾಡುತ್ತದೆ. ತಂತ್ರಜ್ಞಾನದ ಪರಿಚಯವಿರುವವರು ಸಹ ಮಾಧ್ಯಮಗಳಿಂದ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ ಎಂದು ಯಾಂಗ್ ಹೇಳಿದ್ದಾರೆ. ಇದು ಕೇವಲ ಪ್ರತ್ಯೇಕತೆ ಮತ್ತು ಒಂಟಿತನ ನಿಭಾಯಿಸುವುದಕ್ಕಿಂತ ಅವರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

"ಡಿಜಿಟಲ್ ಸಂವಹನ ವಿಧಾನಗಳಿಗೆ ಹೆಚ್ಚಿನ ಮಾನ್ಯತೆ ಸಹ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಫಲಿತಾಂಶಗಳು ಬಹಳ ಸ್ಥಿರವಾಗಿವೆ" ಎಂದು ಯಾಂಗ್‌ ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಮೊದಲು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಯುಕೆಯಲ್ಲಿ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 5,148 ಜನರು ಮತ್ತು ಯುಎಸ್ನಲ್ಲಿ 1,391 ಜನರ ಡೇಟಾವನ್ನು ನಮ್ಮ ತಂಡ ಸಂಗ್ರಹಿಸಿದೆ ಎಂದು ಹೇಳಿದ್ದಾರೆ.

"ಇದು ವರ್ಚುವಲ್/ಆನ್‌ಲೈನ್‌ ಸಂಪರ್ಕದಿಂದ ಒಂಟಿತನ ಮಾತ್ರವಲ್ಲ, ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗಿವೆ: ನಾವು ಸಂಗ್ರಹಿಸಿದ ಜನರು ಹೆಚ್ಚು ಖಿನ್ನತೆಗೆ ಒಳಗಾಗಿದ್ದರು, ಹೆಚ್ಚು ಪ್ರತ್ಯೇಕವಾಗಿದ್ದರು ಮತ್ತು ವರ್ಚುವಲ್ ಸಂಪರ್ಕದ ಬಳಕೆಯ ನೇರ ಪರಿಣಾಮವಾಗಿ ಹೆಚ್ಚು ಅತೃಪ್ತರಾಗಿದ್ದರು" ಎಂದು ಯಾಂಗ್‌ ತಿಳಿಸಿದ್ದಾರೆ.

ಭವಿಷ್ಯದ ತುರ್ತು ಸಂದರ್ಭಗಳಲ್ಲಿ ಮುಖಾಮುಖಿ ಸಂಪರ್ಕದ ಸುರಕ್ಷಿತ ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ವಯಸ್ಸಾದವರ ಡಿಜಿಟಲ್ ಸಾಮರ್ಥ್ಯಗಳನ್ನು ಸುಧಾರಿಸಲು ಸಹ ಮುಂದಾಗಬೇಕು. ಸಮೀಕ್ಷೆಯ ಫಲಿತಾಂಶಗಳು ಕೇವಲ ಡಿಜಿಟಲ್ ಭವಿಷ್ಯದ ಮಿತಿಗಳನ್ನು ಮತ್ತು ದೀರ್ಘಾವಧಿಯಲ್ಲಿ ವಯಸ್ಸಾದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿವರಿಸುತ್ತದೆ ಎಂದು ಯಾಂಗ್‌ ಹೇಳಿದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

- ಏಜೆನ್ಸಿ
Published by:Vijayasarthy SN
First published: