ದೇಶದಲ್ಲಿ ಕೊರೊನಾ (Corona) ಹೆಚ್ಚಾಗಿ ಹರಡುತ್ತಿರುವುದರಿಂದ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಿಮ್ (GYM) ಗೆ ಹೋಗಿ ವ್ಯಾಯಾಮ(Exercise) ಮಾಡೋದು ಕಷ್ಟ. ಮನೆಯಲ್ಲೇ ಕೆಲವೊಂದು ವ್ಯಾಯಾಮಗಳನ್ನು ಮಾಡಿಕೊಂಡು ದೇಹದ ತೂಕವನ್ನು ಸಮತೋಲನದಲ್ಲಿಇಡಬೇಕು ಇಲ್ಲವಾದಲ್ಲಿ ದೇಹದ ತೂಕ(Body weight) ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಾಡೋದು ಗ್ಯಾರಂಟಿ. ಹೀಗಾಗಿ ಮನೆಯಲ್ಲೇ ವ್ಯಾಯಾಮ ಮಾಡಿಕೊಂಡು ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶವುಳ್ಳ ಆಹಾರಗಳ ಸೇವಿಸುತ್ತಾ ಆರೋಗ್ಯ ಕಾಪಾಡಿಕೊಳ್ಳುವಂತೆ ಆಹಾರ ತಜ್ಞ ಹಾಗೂ ಜಿಮ್ ಟ್ರೈನರ್ ಗಳು ಸಲಹೆ ನೀಡಿದ್ದಾರೆ.
ಮನೆಯಲ್ಲೇ ವ್ಯಾಯಾಮ ಮಾಡೋದು ಹೇಗೆ?
ದೇಹವನ್ನು ಆಕ್ಟೀವ್ ಆಗಿಡಲು ವ್ಯಾಯಾಮ ಅತಿ ಮುಖ್ಯವಾಗಿದೆ. ಮನೆಯಲ್ಲೇ ದಿನವಿಡಿ ಟಿವಿ, ಮೊಬೈಲ್, ಲ್ಯಾಪ್ ಟಾಪ್ ನಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ. ಹೀಗಾಗಿ ಕೂತಲ್ಲೇ ಕೂತು ದೈಹಿಕ ಚಟುವಟಿಕೆ ಇಲ್ಲದೆ ದೇಹದಲ್ಲಿ ಬೊಜ್ಜು ಸಂಗ್ರಹವಾಗುತ್ತೆ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಕೆಲವೊಂದು ವ್ಯಾಯಾಮ ಮಾಡಿ ಕ್ಯಾಲರಿ ದಹಿಸಬಹುದು.
ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ
ಮನೆಯಲ್ಲೇ ಮೆಟ್ಟಿಲುಗಳನ್ನು ಹತ್ತಿ ಇಳಿಯಿತ್ತಿರಿ. ಟಿವಿ, ಮೊಬೈಲ್ ಗೆ ಅಂಟಿಕೊಂಡು ಗಂಟೆಗಟ್ಟಲೇ ಕುಳಿತುಕೊಳ್ಳಬೇಡಿ. ಫೋನ್ ಬಂದ್ರೆ ವಾಕ್ ಮಾಡಿಕೊಂಡೇ ಮಾತನಾಡಿ. ಫ್ರೀ ಆದಾಗಲೆಲ್ಲಾ ಮನೆಯ ಟೆರೇಸ್ ಮೇಲೆ ವಾಕ್ ಮಾಡ್ತಿರಿ.
ಕುರ್ಚಿಗೆ ಅಂಟಿಕೊಳ್ಳಬೇಡಿ
ಮನೆಯಲ್ಲೇ ಆಫೀಸ್ ಕೆಲಸ ಮಾಡುತ್ತಿರುವವರು 3-4 ಗಂಟೆಗಳ ಕಾಲ ಕೂತಲ್ಲೇ ಕೂರಬೇಡಿ. ಕೆಲಸ ಮಾಡುವಾಗ ವಿರಾಮ ತೆಗೆದುಕೊಂಡು ಓಡಾಡುತ್ತಿರಿ.
ವರ್ಕ್ ಔಟ್ ಟೇಬಲ್ ಹಾಕಿಕೊಳ್ಳಿ
ಯೋಗ ಮಾಡೋದ್ರಿಂದ ದೇಹದಲ್ಲಿ ಶಕ್ತಿ ಹಾಗೂ ಸ್ಥಿರತೆ ಹೆಚ್ಚುತ್ತೆ. ವಾರಕ್ಕೆ ಎರಡು ಬಾರಿ ಯೋಗ ಮಾಡಿ. ಸೂರ್ಯ ನಮಸ್ಕಾರ ಮಾಡಿದ್ರೆ ದೇಹದ ಎಲ್ಲ ಭಾಗಗಳು ಸಕ್ರಿಯ ಕೊಂಡಂತೆ.ಒಬ್ಬರ ಆಹಾರ ದೇಹದ ಅಗತ್ಯತೆ, ಜೀವನಶೈಲಿ ಹಾಗೂ ಪರಿಸರದ ಒತ್ತಡಗಳಿಗೆ ಅನುಗುಣವಾಗಿರಬೇಕು. ಆರೋಗ್ಯಕರ ಜೀವನಶೈಲಿ ಹೊಂದಲು ಪ್ರತಿಯೊಬ್ಬರು ಕೆಲವು ಬದಲಾವಣೆ ಮಾಡಿಕೊಳ್ಳಬೇಕಿದೆ.
ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ
ರಿಫೈನ್ಡ್ ಆಯಿಲ್, ಸಕ್ಕರೆ, ಸಂಸ್ಕರಿಸಿದ ಹಿಟ್ಟು, ಸಂಸ್ಕರಿಸಿದ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮನೆಯಲ್ಲಿ ಇಂತಹ ಆಹಾರಗಳಿಂದ ದೂರವಿರಿ. ಮೊಟ್ಟೆ, ಮಾಂಸ, ಮೀನು ಹಾಗೂ ತುಪ್ಪದಂತಾ ಪೌಷ್ಠಿಕ ಆಹಾರಗಳನ್ನು ಸೇವಿಸಿ. ಹಣ್ಣು ಹಾಗೂ ಹಸಿರು ತರಕಾರಿಗಳು ದೇಹಕ್ಕೆ ಅಗತ್ಯವಿರುವ ಪ್ರೋಟಿನ್ ನೀಡುತ್ತೆ.
ಇದನ್ನು ಓದಿ : ತಲೆ ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..
ಹೀಗಿರಲಿ ನಿಮ್ಮ ಡಯೆಟ್ ಚಾರ್ಟ್
ಸರಳ ಆಹಾರ ಆರೋಗ್ಯಕ್ಕೆ ಉತ್ತಮ. ಎಷ್ಟು ಊಟ ಮಾಡುತ್ತಿರಿ ಎನ್ನುವುದಕ್ಕಿಂತ ಏನನ್ನು ತಿನ್ನುತ್ತಿದ್ದೀರಿ ಎಷ್ಟು ಗಂಟೆಗೆ ತಿನ್ನುತ್ತಿರಿ ಅನ್ನೋದು ಮುಖ್ಯ. ನಿತ್ಯ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸೋದು ಉತ್ತಮ. ಲೇಟ್ ಆಗಿ ಊಟ ಮಾಡೋದು, ಮಾಡಿದ ಕೂಡಲೇ ಮಲಗೋದು ತೂಕವನ್ನು ಮತ್ತಷ್ಟು ಹೆಚ್ಚು ಮಾಡುತ್ತೆ. ನಿತ್ಯ ಸರಿಯಾದ ಸಮಯಕ್ಕೆ ಆಹಾರ ಸೇವಿಸೋದ್ರಿಂದ ಜೀರ್ಣಕ್ರಿಯೆ ಸಹ ಸರಾಗವಾಗಿರುತ್ತೆ.
ಇದನ್ನು ಓದಿ : ಕೆಲಸದ ಮಧ್ಯೆ Power Nap ತಗೊಂಡ್ರೆ ಅಪಾಯಾನಾ? ಒಳ್ಳೆದಾ? ತಜ್ಞರು ಹೇಳೋದೇನು?
ಬೆಳಗ್ಗೆ 8 ಗಂಟೆಯಿಂದ 9 ಗಂಟೆಯೊಳಗೆ ಬೆಳಗಿನ ಬ್ರೇಕ್ ಫಾಸ್ಟ್ ಮುಗಿಸಿ. ಇಡ್ಲಿ, ಉಪ್ಪಿಟ್ಟು, ಓಟ್ಸ್ ನಂತಹ ಆರೋಗ್ಯಕರ ಆಹಾರ ತಿಂದು ದಿನ ಆರಂಭಿಸಿ. ಮಧ್ಯಾಹ್ನ 1.30ಕ್ಕೆ ಊಟ ಮಾಡಿ. ಚಪಾತಿ, ಅನ್ನ, ಬೆಳೆ ಸಾಂಬಾರ್ ಬೇಯಿಸಿದ ತರಕಾರಿ ತಿನ್ನಿ. 4 ಗಂಟೆಗೆ ಕಡಲೆಕಾಯಿ, ಬಾದಾಮಿ, ಗೋಡಂಬಿಯಂತ ನ್ಯೂಟ್ರಿಷಿಯನ್ ಫುಡ್ ತಿನ್ನಿ. ಇನ್ನು ರಾತ್ರಿ 8 ಗಂಟೆಯೊಳಗೆ ಲೈಟ್ ಆದ ಆಹಾರ ಸೇವಿಸಿ. ಚಪಾತಿ, ರೋಟಿ ಜೊತೆಗೆ ಪನೀರ್ ನಂತಹ ಆಹಾರ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ