• Home
 • »
 • News
 • »
 • lifestyle
 • »
 • Health Test: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

Health Test: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ಅಧ್ಯಯನದ ಪ್ರಕಾರ, 10 ಸೆಕೆಂಡುಗಳ ಕಾಲ ಫ್ಲೆಮಿಂಗೊ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗದವರಲ್ಲಿ ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚು ಎಂದು ಬ್ರೆಜಿಲಿಯನ್ ಸಂಶೋಧಕರು ಹೇಳಿದ್ದಾರೆ.

 • Share this:

  ಕೈ ಕುಲುಕುವಾಗ ದೌರ್ಬಲ್ಯ (Weakness) ಉಂಟಾಗುವುದು ಅಥವಾ ಮೆಟ್ಟಿಲು (Steps) ಹತ್ತುವಾಗ ಏದುಸಿರು ಬಿಡುವುದು ಈ ಸಂಕೇತಗಳು (Signs) ವ್ಯಕ್ತಿಯಲ್ಲಿ ಕಂಡು ಬಂದರೆ ಅಕಾಲಿಕ ಮರಣದ (Premature Death)  ಅಪಾಯದ (Dangerous) ಸೂಚನೆ ಹೆಚ್ಚುತ್ತಿರುತ್ತವೆ ಎಂದು ತಜ್ಞರು ಹೇಳಿದ್ದಾರೆ. ಒಂಟಿ ಕಾಲಿನ ಮೇಲೆ 10 ಸೆಕೆಂಡುಗಳ ಕಾಲ ಸಮತೋಲನ ಸಾಧಿಸಲು ಸಾಧ್ಯವಾಗದೇ ಇರುವುದು ಅಕಾಲಿಕ ಸಾಯುವ ಎಚ್ಚರಿಕೆಯ ಸಂಕೇತವಾಗಿದೆ ಎಂದು ಸಂಶೋಧನೆ ತೋರಿಸಿದೆ. ಡೈಲಿ ಮೇಲ್ ವರದಿಯ ಪ್ರಕಾರ, 50 ರಿಂದ 75 ವರ್ಷ ವಯಸ್ಸಿನ 2,000 ಜನರ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ ಬ್ರೆಜಿಲ್ ತಜ್ಞರು 10 ಸೆಕೆಂಡುಗಳ ಕಾಲ ಒಂದು ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗದವರು ಬೇಗ ಸಾಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.


  ಒಂಟಿ ಕಾಲಿನ ಮೇಲೆ ಸಮತೋಲನ ಸಾಧಿಸುವುದು


  ಇತ್ತೀಚಿನ ಅಧ್ಯಯನದ ಪ್ರಕಾರ, 10 ಸೆಕೆಂಡುಗಳ ಕಾಲ ಫ್ಲೆಮಿಂಗೊ ​​ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗದವರಲ್ಲಿ ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚು ಎಂದು ಬ್ರೆಜಿಲಿಯನ್ ಸಂಶೋಧಕರು ಹೇಳಿದ್ದಾರೆ.


  ಅಧ್ಯಯನದ ವೇಳೆ, ಭಾಗವಹಿಸಿದ ಜನರಲ್ಲಿ ಯಾವುದೇ ಬೆಂಬಲವಿಲ್ಲದೆ 10 ಸೆಕೆಂಡುಗಳ ಕಾಲ ಒಂದು ಕಾಲಿನ ಮೇಲೆ ನಿಲ್ಲುವಂತೆ ಹೇಳಲಾಗಿತ್ತು. ಒಂದು ಕಾಲನ್ನು ಇನ್ನೊಂದು ಕಾಲಿನ ಮೇಲಿರಿಸಿ ಎರಡೂ ಕೈಗಳನ್ನು ಬದಿಯಲ್ಲಿ ಇರಿಸಲು ಹೇಳಲಾಗಿತ್ತು. ಒಂದೇ ಕಾಲಿನಲ್ಲಿ ನಿಲ್ಲಲು ಅವರಿಗೆ ಕೇವಲ ಮೂರು ಅವಕಾಶ ನೀಡಲಾಯಿತು.


  ಇದನ್ನೂ ಓದಿ: ದೇಹದ ವಿವಿಧ ಭಾಗಗಳಲ್ಲಿ ಸಂಭವಿಸುವ ಕಾಯಿಲೆಯು ಯಾವ ರೀತಿಯ ಉರಿಯೂತಕ್ಕೆ ಕಾರಣವಾಗುತ್ತದೆ?


  ನಡಿಗೆಯ ವೇಗ


  ಒಂದು ಕಾಲಿನ ಮೇಲೆ ಸಮತೋಲನ ಸಾಧಿಸಲು ಸಾಧ್ಯವಾಗದವರಲ್ಲಿ ಅಕಾಲಿಕ ಮರಣದ ಅಪಾಯ ಹೆಚ್ಚು. ಫ್ರಾನ್ಸ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ರಿಸರ್ಚ್‌ ಸಂಶೋಧಕರು, 65 ವರ್ಷಕ್ಕಿಂತ ಮೇಲ್ಪಟ್ಟ 3200 ಜನರ ವಾಕಿಂಗ್ ವೇಗವನ್ನು 5 ವರ್ಷಗಳಲ್ಲಿ ಅಳೆಯುತ್ತಾರೆ. ಅಧ್ಯಯನದ ವೇಳೆ, ಎಲ್ಲಾ ಭಾಗವಹಿಸಿದವರನ್ನು 6 ಮೀಟರ್ ಉದ್ದದ ಕಾರಿಡಾರ್‌ನಲ್ಲಿ ನಡೆಯಲು ಕೇಳಲಾಯಿತು. ಈ ವೇಳೆ ಎಲ್ಲಾ ಭಾಗವಹಿಸುವವರ ವೇಗವನ್ನು ಮೂರು ವಿಭಿನ್ನ ಬಿಂದುಗಳಲ್ಲಿ ಅಳೆಯಲಾಗುತ್ತದೆ.


  ನಿಧಾನಗತಿಯ ಪುರುಷರು, 18 ನಿಮಿಷಕ್ಕೆ ನಿಮಿಷಕ್ಕೆ 90 ಮೀಟರ್ ಓಡುತ್ತಾರೆ ಎಂದು ಫಲಿತಾಂಶಗಳು ತೋರಿಸಿವೆ. ಆದರೆ ಕೆಲ ಪುರುಷರು ನಿಮಿಷಕ್ಕೆ 110 ಮೀಟರ್‌ಗಳಿಗಿಂತ ಹೆಚ್ಚು ಓಡಿದ್ದಾರೆ. ನಿಧಾನಗತಿಯ ಮಹಿಳಾ ವಾಕರ್ ಪ್ರತಿ ನಿಮಿಷಕ್ಕೆ 81 ಮೀಟರ್ ಕ್ರಮಿಸಿದರೆ, ವೇಗದ ಮಹಿಳೆ ನಿಮಿಷಕ್ಕೆ ಕನಿಷ್ಠ 90 ಮೀಟರ್ ನಡೆದರು.


  ವೇಗವಾಗಿ ನಡೆಯುವವರು ಫಿಟ್ ಆಗುತ್ತಾರೆ ಮತ್ತು ಅವರ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.


  ಕುಳಿತು ಎದ್ದೇಳುವುದು


  ಯಾವುದೇ ಆಸರೆಯಿಲ್ಲದೆ ಕುಳಿತು ನಂತರ ಎದ್ದೇಳುವುದು ನಿಮ್ಮ ಆರೋಗ್ಯ ಹೇಗೆ ಮತ್ತು ನೀವು ಎಷ್ಟು ದಿನ ಬದುಕಬಹುದು ಎಂಬುದರ ಸಂಕೇತ ಆಗಿದೆ. ಕುಳಿತು ನಂತರ ಏಳಲು ತೊಂದರೆ ಇರುವವರು ಸಾಯುವ ಸಾಧ್ಯತೆ ಐದು ಪಟ್ಟು ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ.


  ಬ್ರೆಜಿಲ್‌ನ ಗಾಮಾ ಫಿಲ್ಹೋ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು, 51 ರಿಂದ 80 ವರ್ಷ ವಯಸ್ಸಿನ 2,002 ಜನರನ್ನು ಅಧ್ಯಯನದ ಭಾಗಿಯಾಗಿಸಿತ್ತು. ಜನರಿಗೆ ಕುಳಿತುಕೊಳ್ಳಲು ಮತ್ತು ನಿಲ್ಲಲು ಹೇಳಿ ಪರೀಕ್ಷೆ ನಡೆಸಿದರು. ಸಂಶೋಧನೆಯ ಕೊನೆಯಲ್ಲಿ, ಎದ್ದೇಳಲು ಕಷ್ಟಪಡುತ್ತಿರುವವರು ಸಾಯುವ ಸಾಧ್ಯತೆ 5.4 ಪಟ್ಟು ಹೆಚ್ಚು ಎಂದು ಕಂಡು ಬಂದಿದೆ.


  ಮೆಟ್ಟಿಲುಗಳನ್ನು ಹತ್ತುವುದು


  ಸುಲಭವಾಗಿ ಮೆಟ್ಟಿಲು ಹತ್ತಲು ಸಾಧ್ಯವೋ ಇಲ್ಲವೋ ಇದು ದೀರ್ಘಕಾಲ ಬದುಕುತ್ತೀರಿ ಅಥವಾ ಅಕಾಲಿಕ ಮರಣ ಹೊಂದುತ್ತೀರಿ ಎಂಬುದರ ಸೂಚನೆ ಆಗಿದೆ. ಸ್ಪೇನ್‌ನ ಸಂಶೋಧಕರು 12,000 ಕ್ಕೂ ಹೆಚ್ಚು ಜನರನ್ನು ಟ್ರೆಡ್‌ಮಿಲ್‌ಗಳಲ್ಲಿ ಓಡಿಸಿದರು. ಈ ಸಂಶೋಧನೆಯು 5 ವರ್ಷಗಳ ಕಾಲ ನಡೆಯಿತು.


  ಕಳಪೆ ಆರೋಗ್ಯ ಹೊಂದಿರುವ ಜನರಲ್ಲಿ ಮರಣ ಪ್ರಮಾಣವು ಫಿಟ್ ಜನರಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಂಡು ಬಂದಿದೆ.


  ಇದನ್ನೂ ಓದಿ: ರೂಟ್ ಟು ಸ್ಟೀಮ್ ಕುಕ್ಕಿಂಗ್ ಎಂದರೇನು? ಈರುಳ್ಳಿ ಸಿಪ್ಪೆಯ ಚಹಾ ಮಾಡುವುದು ಹೇಗೆ?


  ಪುಷ್ಅಪ್‌ಗಳು


  10 ಪುಶ್‌ಅಪ್‌ಗಳನ್ನು ಮಾಡಲು ಕಷ್ಟ ಪಡುವ ಜನರು, 40 ಪುಶ್‌ಅಪ್‌ಗಳನ್ನು ಮಾಡುವವರಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚು. ಅಂತರಾಷ್ಟ್ರೀಯ ಸಂಶೋಧಕರ ತಂಡವೊಂದು ದೈಹಿಕ ಸಾಮರ್ಥ್ಯ ಮತ್ತು ಹೃದ್ರೋಗದ ಅಪಾಯದ ನಡುವೆ ಸಂಬಂಧವಿದೆಯೇ ಎಂದು ಹೇಳಿದೆ.

  Published by:renukadariyannavar
  First published: