Health tips: ಅಬ್ಬಬ್ಬಾ ಅರಿಶಿನದಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತೇ? ಹೊಸ ಅಧ್ಯಯನ ಏನು ಹೇಳುತ್ತೆ...

ಅರಿಶಿನದ ಹಾಲಿಗೆ ನೀವು ಕರಿ ಮೆಣಸನ್ನು ಸೇರಿಸಿ ಕುಡಿಯಬಹುದು. ಕರಿಮೆಣಸು ಪೈಪರಿನನ್ನು ಹೊಂದಿರುತ್ತದೆ ಮತ್ತು ಕರ್ಕ್ಯುಮಿನ್ ಹೀರುವಿಕೆಯನ್ನು ಉತ್ತೇಜಿಸುವ ರಾಸಾಯನಿಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಲಾಭದಾಯಕವಾಗಿರುವ(Beneficial)  ಗುಣಗಳನ್ನು ಹೊಂದಿರುವ ಅರಿಶಿನ, (Turmeric) ಪ್ರಕೃತಿ ನೀಡಿರುವ ಅಮೂಲ್ಯ ಕೊಡುಗೆ. ಇದನ್ನು ಪಾಶ್ಚಿಮಾತ್ಯ ಜಗತ್ತು ಕೂಡ ಅರ್ಥ ಮಾಡಿಕೊಂಡಿದೆ. ಇದೀಗ ರಟ್ಜರ್ಸ್ ವಿಶ್ವವಿದ್ಯಾನಿಲಯ (Rutgers University) ನಡೆಸಿದ ಹೊಸ ಸಂಶೋಧನೆಯಿಂದ, ಅರಿಶಿನವನ್ನು ಫಿನಥೈಲ್ ಐಸೋಥಿಯೋಸೈನೇಟ್‌ನೊಂದಿಗೆ(Phenethyl Isothiocyanate)  ಸಂಯೋಜಿಸಿದರೆ ಅದು ಪ್ರಾಸ್ಟೇಟ್‌ ಕ್ಯಾನ್ಸರನ್ನು ಅಭಿವೃದ್ಧಿಪಡಿಸುವ ಅಪಾಯ ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.


ರಟ್ಜರ್ಸ್ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ, ಅರಿಶಿನದಲ್ಲಿರುವ ಕರ್ಕ್ಯುಮಿನ್ ಅನ್ನು ನಿಯೋಜಿಸುವ ಮೂಲಕ ದೀರ್ಘ ಕಾಲದ ಉರಿಯೂತಕ್ಕೆ ಹೇಗೆ ಚಿಕಿತ್ಸೆ ನೀಡಬಹುದು ಮತ್ತು ಭವಿಷ್ಯದ ಕ್ಲಿನಿಕಲ್ ಪ್ರಯೋಗಗಳಲ್ಲಿ ಕರ್ಕ್ಯುಮಿನ್‌ನ ತೀವ್ರವಾದ ಉರಿಯೂತದ ಮತ್ತು ಎಪಿಜೆನೆಟಿಕ್ ಪರಿಣಾಮಗಳ ಮೌಲ್ಯಮಾಪನಕ್ಕೆ ಒಂದು ಪ್ರಕರಣವನ್ನು ಮಾಡಿದೆ.


ಅರಿಶಿನ ಭಾರತೀಯ ಅಡುಗೆ ಮನೆಯ ಅಗತ್ಯ ಸಾಮಾಗ್ರಿ:
ಭಾರತದಲ್ಲಿ ಅರಿಶಿನ ಅನಾದಿ ಕಾಲದಿಂದಲೂ ನಿತ್ಯದ ಅಡುಗೆಯಲ್ಲಿನ ಅಗತ್ಯ ಸಾಮಾಗ್ರಿಯಾಗಿ ಬಳಕೆಯಲ್ಲಿದೆ. ಭಾರತೀಯರು, ಸಾಮಾನ್ಯವಾಗಿ ಹೆಚ್ಚಿನ ಅಡುಗೆಗಳಲ್ಲಿ ಅರಿಶಿನವನ್ನು ಸೇರಿಸಿಯೇ ಸೇರಿಸುತ್ತಾರೆ ಆದರೆ -ಕಡಿಮೆ ಪ್ರಮಾಣದಲ್ಲಿ. ಸೊಪ್ಪು ತರಕಾರಿ ಸಾಂಬಾರುಗಳಲ್ಲಿ, ಮಾಂಸಹಾರಿ ಅಡುಗೆಗಳಲ್ಲಿ, ಫ್ರೈಡ್ ರೈಸ್, ಮೊಟ್ಟೆಯ ತಿನಿಸುಗಳು ಮತ್ತು ಪಲ್ಯ ಇತ್ಯಾದಿಗಳಲ್ಲಿ ಅರಿಶಿನದ ಬಳಕೆಯಿದೆ.


ಇದನ್ನೂ ಓದಿ: Health Tips: ಪ್ರತಿನಿತ್ಯ ಮೊಸರು ಸೇವಿಸಿದ್ರೆ, ಹೃದಯಾಘಾತದಿಂದ ದೂರವಿರಬಹುದಂತೆ..!

ನೀವು 90ರ ದಶಕದಲ್ಲಿ ಹುಟ್ಟಿದವರಾಗಿದ್ದರೆ ಅಥವಾ ಭಾರತದ ಸಣ್ಣ ಪಟ್ಟಣಗಳ ನಿವಾಸಿಗಳಾಗಿದ್ದರೆ, ಸಾಮಾನ್ಯವಾಗಿ ಸಣ್ಣ ಪುಟ್ಟ ಗಾಯಗಳಾದಾಗ ಅದಕ್ಕೆ ನಂಜು ನಿವಾರಕವಾಗಿ ಅರಿಶಿನದ ಪುಡಿಯನ್ನು ಲೇಪಿಸುತ್ತಾರೆ ಎಂಬುದನ್ನು ತಿಳಿದೇ ಇರುತ್ತೀರಿ. ಗಂಟಲ ಕಿರಿಕಿರಿ, ಮೂಗು ಕಟ್ಟುವುದು, ಕಫ ಮತ್ತು ಶೀತದಂತಹ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಅರಿಶಿನ ಉಪಯೋಗಕಾರಿ. ಅಂತಹ ಸಮಸ್ಯೆಗಳು ಕಾಡಿದಾಗ, ಅಜ್ಜಿ ಅಥವಾ ಅಮ್ಮ, ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕೊಟ್ಟದ್ದನ್ನು ಕುಡಿದು, ಮಲಗಿ ಬೆಳಗ್ಗೆ ಎದ್ದಾಗ ಸಾಕಷ್ಟು ಗುಣಮುಖರಾದ ಅನುಭವ ಬಹಳಷ್ಟು ಮಂದಿಗೆ ಇರಬಹುದು.


ಸೆಂಟ್ರಲ್ ಮಿಶಿಗನ್ ವಿಶ್ವವಿದ್ಯಾನಿಲಯ ಮತ್ತು ಅದರ ಜೊತೆಗಿನ ಇತರ ಯುಎಸ್ ವಿಶ್ವವಿದ್ಯಾನಿಲಯಗಳು ನಡೆಸಿದ ಮತ್ತೊಂದು ಕ್ಲಿನಿಕಲ್ ಸಂಶೋಧನೆಯ ಪ್ರಕಾರ , ಅರಿಶಿನವು ಈ ಕೆಳಗಿನ ಅಂಶಗಳ ನಿರ್ವಹಣೆಯಲ್ಲಿ ಪರಿಣಾಮಕಾರಿ ಆಗಿದೆ:
1. ಆಕ್ಸಿಡೇಟಿವ್ ಮತ್ತು ಉರಿಯೂತದ ಪರಿಸ್ಥಿತಿಗಳು
2. ವ್ಯಾಯಾಮ ಪ್ರೇರಿತ ಉರಿಯೂತ ಮತ್ತು ಸ್ನಾಯು ನೋವು
3. ಚಯಾಪಚಯ ಸಿಂಡ್ರೋಮ್
4. ಸಂಧಿವಾತ
5. ಆತಂಕ
6. ಹೈಪರ್ಲಿಪಿಡೇಮಿಯಾ
ಅಚ್ಚರಿಯೆಂದರೆ, ಕೆಲವೊಮ್ಮೆ ರೋಗಿಯು ಅನಾರೋಗ್ಯದ ಕುರಿತ ಲಕ್ಷಣಗಳನ್ನು ಹೇಳಿದರೂ , ಸುಲಭವಾಗಿ ರೋಗ ನಿರ್ಣಯ ಸಾಧ್ಯವಾಗುವುದಿಲ್ಲ, ಆದರೆ ಅರಿಶಿನ ಅದ್ಭುತಗಳನ್ನು ಮಾಡುತ್ತದೆ ಎನ್ನುತ್ತದೆ ಸೆಂಟ್ರಲ್ ಮೆಶಿಗನ್ ವಿಶ್ವವಿದ್ಯಾನಿಲಯದ ಅಧ್ಯಯನ. “ರೋಗ ನಿರ್ಣಯ ಆಗದ ವ್ಯಕ್ತಿಗಳಲ್ಲಿ ಸಂಕೀರ್ಣದ ತುಲನಾತ್ಮಕವಾಗಿ ಕಡಿಮೆ ಪ್ರಮಾಣದವು ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ” ಎನ್ನುತ್ತದೆ ಆ ಅಧ್ಯಯನ. ಅವುಗಳಲ್ಲಿ ಹೆಚ್ಚಿನ ಪ್ರಯೋಜನಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪರಿಣಾಮಗಳಿಗೆ ಸಂಬಂಧಪಟ್ಟವು ಎನ್ನಬಹುದು.


ಅರಿಶಿನಕ್ಕೆ ಸಂಬಂಧಿಸಿದ ಇತರ ಕ್ಲಿನಿಕಲ್ ಸಂಶೋಧನೆಗಳು:
1. ಕ್ಲೀವ್ಯಾಡ್ಸ್ ಕ್ಲಿನಿಕ್ (ನೋಂದಾಯಿತ ಆಹಾರ ತಜ್ಞೆ, ಆರ್‌ಡಿ) ಪ್ರಕಾರ, ಅರಿಶಿನದಲ್ಲಿರುವ ಕರ್ಕ್ಯುಮಿನ್ ಉತ್ಕರ್ಷಣಾ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಮತ್ತು ಅದು ಸಂಧಿವಾತದಿಂದ ಹಿಡಿದು, ಅಲ್ಸರೇಟಿವ್ ಕೊಲೈಟೀಸ್‌ವರೆಗೆ ಊರಿಯೂತದ ಪಾತ್ರವಿರುವ ರೋಗಗಳಲ್ಲಿ ಸಹಾಯ ಮಾಡಬಲ್ಲದೆ ಎಂಬ ಕುರಿತು ಸಂಶೋಧಕರು ಸಂಶೋಧನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Health Tips: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

2. ಡಾ. ಮೈಕೆಲ್ ಹರ್ಷಲ್ ಗ್ರೆಗರ್ ಅವರು ತಮ್ಮ “ಭಾರತದಲ್ಲಿ ಕ್ಯಾನ್ಸರ್ ದರಗಳು ಏಕೆ ಕಡಿಮೆ ?” ಎಂಬ ಲೇಖನದಲ್ಲಿ “ ಪಾಶ್ಚಿಮಾತ್ಯ ಜಗತ್ತಿನಲ್ಲಿ ಅತ್ಯಂತ ಸಾಮಾನ್ಯವಾಗಿರುವ ಕ್ಯಾನ್ಸರ್‌ಗಳು, ಆಹಾರದಲ್ಲಿ ಅರಿಶಿನವನ್ನು ವ್ಯಾಪಕವಾಗಿ ಸೇವಿಸುವ ಪ್ರದೇಶಗಳಲ್ಲಿ ಕಡಿಮೆ ಪ್ರಚಲಿತದಲ್ಲಿವೆ ಎಂದು ಜನಸಂಖ್ಯೆ ಆಧಾರಿತ ದತ್ತಾಂಶಗಳು ಸೂಚಿಸುತ್ತವೆ. ಉದಾಹರಣೆಗೆ , “ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತದಲ್ಲಿ ಒಟ್ಟಾರೆ ಕ್ಯಾನ್ಸರ್ ದರಗಳು ಕಡಿಮೆ.” ಭಾರತದಲ್ಲಿನ ಪುರುಷರಿಗಿಂತ ಯುಎಸ್ ಪುರುಷರು 23 ಪಟ್ಟು ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ ಒಳಗಾಗುತ್ತಾರೆ” ಎಂದು ಬರೆದಿದ್ದಾರೆ.
3. ಅರಿಶಿನದ ಹಾಲಿಗೆ ನೀವು ಕರಿ ಮೆಣಸನ್ನು ಸೇರಿಸಿ ಕುಡಿಯಬಹುದು. ಕರಿಮೆಣಸು ಪೈಪರಿನನ್ನು ಹೊಂದಿರುತ್ತದೆ ಮತ್ತು ಕರ್ಕ್ಯುಮಿನ್ ಹೀರುವಿಕೆಯನ್ನು ಉತ್ತೇಜಿಸುವ ರಾಸಾಯನಿಕವಾಗಿದೆ.


Published by:vanithasanjevani vanithasanjevani
First published: