Spinach Benefits: ಪಾಲಕ್ ಸೊಪ್ಪು ಸೋಂಕು ನಿವಾರಕವಂತೆ - ಇಲ್ಲಿದೆ ಅದರ ಪ್ರಯೋಜನಗಳು

ಪಾಲಕ್‌ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಾನವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪಾಲಕ್‌ ಸೊಪ್ಪ (Spinach) ನ್ನು ಆಗಾಗ ಸೇವನೆ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಪಾಲಕ್ ಸೊಪ್ಪು ನಿಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದು ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನ ಸೇವನೆಯಿಂದ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ನಿವಾರಣೆಯಾಗುತ್ತವೆ. ಪಾಲಕ್‌ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಾನವಾಗಿರುತ್ತದೆ. ಪಾಲಕ್‌ ಸೊಪ್ಪು ತಿನ್ನುವುದರಿಂದ ಹೃದಯಾಘಾತ (Hearth Attack) ದ ಅಪಾಯವೂ ಕಡಿಮೆಯಾಗುತ್ತದೆ. ಇದು ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸುತ್ತದೆ. ಮೂಳೆ (Bone) ಗಳನ್ನು ಬಲಪಡಿಸಲು ಸಹ ಇದು ಸಹಕಾರಿ. ಪಾಲಕ್‌ ಸೊಪ್ಪಿನಲ್ಲಿರುವ ಪ್ರಮುಖ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

    ಪಾಲಕ್‌ ಸೇವನೆಯಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ

    ದಿನನಿತ್ಯ ಪಾಲಾಕ್ ಸೊಪ್ಪಿನ ರಸ ಸೇವಿಸುವುದರಿಂದ ರಕ್ತಹಿನತೆಯ ಸಮಸ್ಯೆ ನಿವಾರಣೆಯಾಗುತ್ತದೆ. ದೇಹದಲ್ಲಿ ರಕ್ತದ ಕೊರತೆ ಇರುವವರು ತಮ್ಮ ಡಯಟ್‌ನಲ್ಲಿ ಪಾಲಕ್‌ ಸೊಪ್ಪನ್ನು ಅವಶ್ಯವಾಗಿ ಸೇರಿಸಿಕೊಳ್ಳಬೇಕು. ಪಾಲಕ್‌ ಸೇವನೆಯಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ. ರಕ್ತದೊತ್ತಡ ಹೆಚ್ಚು ಅಥವಾ ಕಡಿಮೆ ಇದ್ದರೆ ಪಾಲಕ್‌ ಸೊಪ್ಪನ್ನು ಸೇವನೆ ಮಾಡಿ. ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

    ಪಾಲಾಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ

    ಪಾಲಾಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ. ಏಕೆಂದರೆ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಶಕ್ತಿ ಪಾಲಾಕ್ ಸೊಪ್ಪಿನಲ್ಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪಾಲಾಕ್ ಸೊಪ್ಪನ್ನು ಹೆಚ್ಚು ಸೇವಿಸಿ. ಇದರಲ್ಲಿರುವ “ಕ್ಯಾರೋಟಿನೈಡ್” ಅಂಶ ದೇಹದಲ್ಲಿರುವ ಕೊಲೆಸ್ಟ್ರಾಲನ್ನ ಕರಗಿಸಿ, ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.

    ಇದನ್ನೂ ಓದಿ: Amla Benefits: ನೆಲ್ಲಿಕಾಯಿ ಒಗರು ಅಂತ ತಿನ್ನದೇ ಇರಬೇಡಿ? ಅದು ಎಲ್ಲಾ ರೋಗಕ್ಕೂ ರಾಮಬಾಣ

    ಮೆದುಳಿನ ನರಕೋಶಗಳ ವೃದ್ಧಿ

    ಮಕ್ಕಳಲ್ಲಿ ಅಥವಾ ವೃದ್ಧರಲ್ಲಿ ನೆನಪಿನ ಶಕ್ತಿ ಸಮಸ್ಯೆಯಿದ್ದರೆ ಪಾಲಾಕ್ ಸೊಪ್ಪು ಸೇವಿಸುವುದರಿಂದ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
    ಸಂಧಿವಾತದ ಸಂಸ್ಯೆಯಿದ್ದವರೂ ಕೂಡ ಪಾಲಾಕ್ ಸೊಪ್ಪು ಸೇವಿಸಬಹುದು.
    ಪಾಲಾಕ್ ಸೊಪ್ಪಿನಲ್ಲಿ ಹೆಚ್ಚು ನಾರಿನಂಶ ಹಾಗೂ ನೀರಿನಂಶ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದಲ್ಲದೆ, ಜೀರ್ಣಶಕ್ತಿಗೆ ಸಹಕರಿಸುತ್ತದೆ.

    ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ

    ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ
    ಪಾಲಕ್ ಸೊಪ್ಪಿನಲ್ಲಿ ಸತುವಿನ ಅ೦ಶವಿದ್ದು, ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಉತ್ಪಾದನೆಯಲ್ಲಿ ಇದು ಮಹತ್ತರವಾದ ಪಾತ್ರವಹಿಸುತ್ತದೆ. ಹೀಗಾಗಿ, ಪಾಲಕ್ ಸೊಪ್ಪು ಪರೋಕ್ಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ. ಸತುವೆ೦ಬ ಖನಿಜಾ೦ಶವು ತ್ಯಾಜ್ಯವಿಷವಸ್ತುಗಳನ್ನು ದೇಹದಿ೦ದ ಹೊರಹಾಕುವಲ್ಲಿಯೂ ಕೂಡ ಉತ್ತಮವಾದ ಕೆಲಸವನ್ನು ಮಾಡುತ್ತದೆ.

    ಇದನ್ನೂ ಓದಿ: Black Pepper Benefits: ಕರಿಮೆಣಸು ಟೆಸ್ಟ್​​​ಗೆ​​ ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ

    ತಾಯ೦ದಿರಿಗೆ ಆರೋಗ್ಯದಾಯಕವಾಗಿದೆ

    ಪಾಲಕ್ ಸೊಪ್ಪು ಗರ್ಭಿಣಿಯರಿಗೆ ಹಾಗೂ ಹಾಲುಣಿಸುತ್ತಿರುವ ತಾಯ೦ದಿರಿಬ್ಬರಿಗೂ ಒಳ್ಳೆಯದು. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಫೋಲೇಟ್ ಹಾಗೂ ಕಬ್ಬಿಣಾ೦ಶಗಳು ಗರ್ಭಿಣಿ ತಾಯ೦ದಿರಿಗೆ ಸಹಾಯಕವಾಗಿದೆ.

    ರಕ್ತನಾಳಗಳು ತೆಳ್ಳಗಾಗುವುದನ್ನು ತಡೆಗಟ್ಟುತ್ತದೆ

    ಪಾಲಕ್ ಸೊಪ್ಪಿನ ಜ್ಯೂಸ್ ರಕ್ತನಾಳಗಳು ತೆಳ್ಳಗಾಗುವುದನ್ನೂ ಕೂಡ ತಡೆಗಟ್ಟುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ಫೋಲೇಟ್‌ಗಳ ಅ೦ಶವು ಆರೋಗ್ಯಕ್ಕೆ ಒಳ್ಳೆಯದು.

    ಸೋ೦ಕುಗಳನ್ನು ತಡೆಗಟ್ಟುತ್ತದೆ

    ತಾಮ್ರವು ಸ್ವಭಾವತ ಸೂಕ್ಷ್ಮಾಣುಜೀವಿಗಳ ಪ್ರತಿಬ೦ಧಕವಾಗಿದೆ. ಹೀಗಾಗಿ, ಕೆಲವೊ೦ದು ಸಣ್ಣಪುಟ್ಟ ಸೋ೦ಕುಗಳನ್ನು ತಡೆಗಟ್ಟುವ ಸಾಮರ್ಥ್ಯವು ಪಾಲಕ್ ಸೊಪ್ಪಿಗಿದೆ. ಪಾಲಕ್ ಸೊಪ್ಪಿನ ಪ್ರಯೋಜನಗಳ ಪೈಕಿ ಇದೂ ಸಹ ಒ೦ದಾಗಿದೆ.

    ನರವ್ಯೂಹಕ್ಕೆ ಚೇತೋಹಾರಿಯಾಗಿದೆ

    ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಮೆಗ್ನೀಷಿಯ೦ ನ ತತ್ವವು ನರವ್ಯೂಹ ಹಾಗೂ ಮಾ೦ಸಖ೦ಡಗಳ ಕಾರ್ಯನಿರ್ವಹಣೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನೂ ಕೂಡ ಬಲಪಡಿಸುತ್ತದೆ.
    Published by:Swathi Nayak
    First published: