Non-Veg Recipe: ಭಾನುವಾರದ ಬಾಡೂಟ ಸವಿಯಲು ಇಲ್ಲಿದೆ ಚಿಕನ್ ಸುಕ್ಕ ರೆಸಿಪಿ

ಚಿಕನ್ ಸುಕ್ಕಾ ತಿನ್ನುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಇದರ ಮಸಾಲೆಯ ಘಮ ಕೂಡ ಬಾಯಲ್ಲಿ ನೀರೂರಿಸುತ್ತದೆ. ಹಾಗೂ ತೆಂಗಿನಕಾಯಿ ಬಳಸಿ ಇದನ್ನು ಮಾಡುವುದರಿಂದ ತಿನ್ನುವುದಕ್ಕೆ ಬಹಳ ರುಚಿಕರವಾಗಿರುತ್ತದೆ.

ಚಿಕನ್ ಸುಕ್ಕ

ಚಿಕನ್ ಸುಕ್ಕ

  • Share this:
    ಮಾಂಸ ಪ್ರಿಯರ ವೀಕೆಂಡ್ ನಲ್ಲಿ (Weekend) ಸ್ಪೈಸಿ ಆಗಿರೋ ಏನಾದರೂ ಮಾಂಸದಡುಗೆ ತಿನ್ನಬೇಕು ಅನಿಸೋದು ಕಾಮನ್. ಮಳೆಗಾಲ ಬೇರೆ ಸಂಜೆ ಮಳೆಗೆ ಸ್ಪೈಸಿ ಆಗಿರು ಚಿಕನ್ ಸುಕ್ಕ (Chicken Sukka) ಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದೀರಾ? ಚಿಕನ್ ಸುಕ್ಕಾ ತಿನ್ನುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಇದರ ಮಸಾಲೆಯ ಘಮ ಕೂಡ ಬಾಯಲ್ಲಿ ನೀರೂರಿಸುತ್ತದೆ. ಹಾಗೂ ತೆಂಗಿನಕಾಯಿ (Coconut) ಬಳಸಿ ಇದನ್ನು ಮಾಡುವುದರಿಂದ ತಿನ್ನುವುದಕ್ಕೆ ಬಹಳ ರುಚಿಕರವಾಗಿರುತ್ತದೆ. ಚಿಕನ್ ಸುಕ್ಕ ರುಚಿಯ ಜೊತೆಗೆ ಮಾಡಲು ಬಲು ಸುಲಭ. ಇದನ್ನು ತಯಾರಿಸುವ ರೆಸಿಪಿ (Recipe) ನೋಡಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು :

    1ಕೆಜಿ ಚಿಕನ್ (ಸಾಧಾರಣ ಗಾತ್ರದಲ್ಲಿ ತುಂಡುಗಳು ಇರಬೇಕು)
    ಈರುಳ್ಳಿ 2
    ಮೆಂತೆ- 1/2 ಚಮಚ
    ಅರಶಿಣ- ಚಿಟಿಕೆಯಷ್ಟು
    ಕರಿಮೆಣಸಿನ ಪುಡಿ-  1 ಚಮಚ
    ಏಲಕ್ಕಿ
    ಸಾಸಿವೆ
    ಲವಂಗ
    ಚಕ್ಕೆ
    ಒಣಮೆಣಸಿನಕಾಯಿ- 10-12
    ಬೆಳ್ಳುಳ್ಳಿ ಎಸಳು-
    ತುಪ್ಪ
    ರುಚಿಗೆ ತಕ್ಕಷ್ಟು ಉಪ್ಪು

    ತೆಂಗಿನಕಾಯಿ ತುರಿ-1/2 ಕಪ್

    ಇದನ್ನೂ ಓದಿ: Non-Veg Recipe: ಭಾನುವಾರಕ್ಕೆ ಮೀನೂಟ; ಮನೆಯಲ್ಲಿ ಮಾಡಿ ಸ್ಪೆಷಲ್ ಫಿಶ್ ಫ್ರೈ ಮಾಡಿ

    ಮಾಡುವ ವಿಧಾನ :

    ಮೊದಲಿಗೆ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಸು ಎಣ್ಣೆ ಹಾಕಿ ಕೊತ್ತಂಬರಿಕಾಳು, ಜೀರಿಗೆ, ಸಾಸಿವೆ, ಕಾಳುಮೆಣಸು, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಮೆಣಸನ್ನು ಹುರಿದುಕೊಳ್ಳಿ. ನಂತರ ಈ ವಸ್ತುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಬೇಕು.

    ನಂತರ ಈ ವಸ್ತುಗಳನ್ನು ಹುರಿದ ಒಣ ಕೆಂಪು ಮೆಣಸಿನ ಕಾಯಿ ಮತ್ತು ಅರಿಶಿಣ ಹಾಕಿ ಪುಡಿ ಮಾಡಬೇಕು (ನೀರು ಸೇರಿಸಬಾರದು). ತೆಂಗಿನ ಕಾಯಿಯನ್ನು ನೀರು ಸೇರಿಸದೆ ಅರೆದು ಇಡಬೇಕು (ಪೇಸ್ಟ್ ರೀತಿ ಮಾಡಬೇಡಿ).

    ನಂತರ ಒಂದು ಅಗಲವಾದ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಆಮೇಲೆ ಅದ್ದಕ್ಕೆ ಕತ್ತರಿಸಿಟ್ಟುಕೊಂಡ ಈರುಳ್ಳಿ, 2 ಏಲಕ್ಕಿ ಸೇರಿಸಿ ಹುರಿದುಕೊಳ್ಳಿ. ನಂತರ ಇದಕ್ಕೆ ಚಿಕನ್ ಸೇರಿಸಿ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಬಿಡಿ. ನಂತರ ಈ ಪುಡಿಯನ್ನು ಚಿಕನ್ ಜೊತೆ ಮಿಶ್ರ ಮಾಡಿ ರುಚಿಗೆ ತಕ್ಕ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಬೇಕು ( ಪೂರ್ತಿ ಬೇಯಿಸಬೇಡಿ). ಪಾತ್ರೆಯ ಬಾಯಿ ಮುಚ್ಚಬಾರದು. ಈಗ ತೆಂಗಿನ ಕಾಯಿ ಹಾಕಿ, ಪಾತ್ರೆಯ ಬಾಯಿ ಮುಚ್ಚಿ 4-5 ಚಿಕನ್ ಬೇಯಿಸಬೇಕು. ಆಗ ಚಿಕನ್ ಸಂಪೂರ್ಣವಾಗಿ ಬೆಂದಿರುತ್ತದೆ.) ಚಿಕನ್ ನೀರು ಬಿಟ್ಟುಕೊಳ್ಳುತ್ತಿದ್ದಂತೆ ರುಬ್ಬಿಟ್ಟುಕೊಂಡ ಮಸಾಲ ಸೇರಿಸಿ ಚೆನ್ನಾಗಿ ಕುದಿಸಿ.

    ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಅದರಲ್ಲಿ ಕರಿಬೇವಿನ ಎಲೆ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ , ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ಅದನ್ನು ತಯಾರಾದ ಚಿಕನ್ ಜೊತೆ ಹಾಕಿ ಮಿಶ್ರ ಮಾಡಿದರೆ ಚಿಕನ್ ಸುಕ್ಕ ರೆಡಿ. ಈಗ ನಿಮ್ಮ ಮನೆಯಲ್ಲಿ ಸಿದ್ದವಾಗಿದೆ ಚಿಕನ್ ಸುಕ್ಕ. ಈ ಭಾನುವಾರ ನಿಮ್ಮ ಮನೆಯವರೊಂದಿಗೆ ಕುಳಿತುಕೊಂಡು ಸ್ಪೈಸಿ ಹಾಗೂ ಟೇಸ್ಟಿಯಾಗಿರುವ, ಹೊಸ ಶೈಲಿಯ ಅಡುಗೆ ಸವಿಯಿರಿ.

    ಇದನ್ನೂ ಓದಿ: Breakfast Recipe: ಬರೀ 15 ನಿಮಿಷದಲ್ಲೇ ತಯಾರಿಸಿ ರುಚಿಯಾದ ಬ್ರೆಡ್ ದಹಿ ಉಪ್ಮಾ

    ಮನೆಯಲ್ಲಿ ಏನಾದರೂ ಮಾಂಸಾಹಾರದ ಅಡುಗೆ ಮಾಡಬೇಕು ಎಂದು ಎಷ್ಟೋ ಜನ ಅಂದುಕೊಂಡಿರುತ್ತಾರೆ ಹಾಗಾಗಿ ಈ ವಾರ ರುಚಿರುಚಿಯಾದ ಚಿಕನ್ ಸುಕ್ಕ  ಮಾಡಿಕೊಂಡು ಮನೆಯಲ್ಲಿ ಸೇವನೆ ಮಾಡಿ.

    ಭಾನುವಾರದ ರಜಾ ಮಜಾವನ್ನು ಎಂಜಾಯ್​ ಮಾಡುವವರು ಈ ರೆಸಿಪಿಯನ್ನು ಟ್ರೈ ಮಾಡಬಹುದು. ಏಕೆಂದರೆ ಮನೆಯಲ್ಲಿಯೇ ಕುಳಿತು ಆಹಾರ ಸವಿಯಲು ಪ್ಲಾನ್​ ಮಾಡಿಕೊಂಡವರಿಗೆ ಚಿಕನ್ ಸುಕ್ಕ ಮಾಡೋದು ಬೆಸ್ಟ್​.
    Published by:Swathi Nayak
    First published: