Non-Veg Recipe: ವಾರಾಂತ್ಯಕ್ಕೆ ಪರೋಟ ಜೊತೆ ಸವಿಯಲು ಚಿಕನ್ ಚಾಪ್ಸ್ ಮಾಡಿಕೊಳ್ಳಿ

ಈ ವೀಕೆಂಡ್ ಗೆ ಚಿಕನ್ ಚಾಪ್ಸ್ ಮಾಡಿದರೆ ಹೇಗೆ? ಹಾಗಿದ್ರೆ ನೋಡಿ ಇಲ್ಲಿದೆ ನಿಮಗೆ ಸ್ಪೈಸಿ ಚಿಕನ್ ಚಾಪ್ಸ್ ರೆಸಿಪಿ ಮಾಡುವ ವಿಧಾನ ಬಗ್ಗೆ ಸಂಪೂರ್ಣ ಮಾಹಿತಿ.

ಚಿಕನ್  ಚಾಪ್ಸ್

ಚಿಕನ್ ಚಾಪ್ಸ್

  • Share this:
    ಮಳೆಗಾಲ (Monsoon) ಈಗಾಗಲೇ ಬಂದಾಯಿತು ಈ ಮಳೆಗಾಲದಲ್ಲಿ ಹೊಸದಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ. ಅದ್ರಲ್ಲೂ ನೀವು ನಾನ್ ವೆಜ್ (Non-Veg) ಪ್ರಿಯರಾಗಿದ್ದರೆ ಅಂತೂ ಭಾನುವಾರದ (Sunday) ಮಳೆಗಾಲದ ಸಂಜೆಗೆ ಸಖತ್ ಟೇಸ್ಟಿ ಆಗಿರುವ ಸ್ಪೈಸಿ ಐಟಂ ತಿನ್ನಬೇಕು ಎನಿಸುವುದು ಕಾಮನ್. ಮತ್ತೆ ಯಾಕೆ ತಡ ಹೊಸದಾಗಿ ಏನಾದರೂ ಟ್ರೈ ಮಾಡಿ ನೋಡಬಹುದು ಅಲ್ವಾ? ಈ ವೀಕೆಂಡ್ ಗೆ ಚಿಕನ್ ಚಾಪ್ಸ್ (Chicken Chops) ಮಾಡಿದರೆ ಹೇಗೆ? ಹಾಗಿದ್ರೆ ನೋಡಿ ಇಲ್ಲಿದೆ ನಿಮಗೆ ಸ್ಪೈಸಿ ಚಿಕನ್  ಚಾಪ್ಸ್ ರೆಸಿಪಿ ಮಾಡುವ ವಿಧಾನ ಬಗ್ಗೆ ಸಂಪೂರ್ಣ ಮಾಹಿತಿ. ಅದು ಸವಿಯಲು ತುಂಬಾ ರುಚಿಕರವಾಗಿದೆ. ಒಮ್ಮೆ ನೋಡಿ.

    ಬೇಕಾಗಿರುವ ಸಾಮಾಗ್ರಿಗಳು

    ಸುಮಾರು ಅರ್ಧ ಕೆಜಿ ಚಿಕನ್
    ಈರುಳ್ಳಿ ದೊಡ್ಡ ಗಾತ್ರದ್ದು 1
    ಪುದೀನಾ 1 ಕಟ್ಟು
    ಕೊತ್ತಂಬರಿ ಸೊಪ್ಪು 1 ಕಟ್ಟು
    ಎಣ್ಣೆ 3 ರಿಂದ 4 ಚಮಚ
    ಧನಿಯ ಪುಡಿ ಸುಮಾರು ಎರಡು ಚಮಚ
    ರುಚಿಗೆ ತಕ್ಕಷ್ಟು ಉಪ್ಪು
    ಮೆಣಸಿನ ಪುಡಿ 1 ಚಮಚ
    ಹಸಿಶುಂಠಿ ಸಣ್ಣ ತುಂಡು
    ಬೆಳ್ಳುಳ್ಳಿ 3 ರಿಂದ 4 ಎಸಳು.
    ಗೋಡಂಬಿ 12 ರಿಂದ 14
    ಗಸಗಸೆ 1 ಚಮಚ

    ಮಾಡುವ ವಿಧಾನ

    ಇದನ್ನೂ ಓದಿ: Patrode Special: ನಿಮಗಿದು ಗೊತ್ತೇ? ಮಂಗಳೂರು ಸ್ಪೆಷಲ್ ಪತ್ರೊಡೆ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಗೆ ಉತ್ತಮ ಆಹಾರ!

    ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ತಯಾರು ಮಾಡಿಟ್ಟುಕೊಳ್ಳಿ. (ನೆನಪಿಡಿ ಚಿಕನ್ ನಲ್ಲಿ ಸ್ವಲ್ಪವೂ ನೀರಿನಂಶ ಉಳಿಯದಂತೆ ನೋಡಿಕೊಳ್ಳಬೇಕು)
    ನಂತರ ಒಂದು ಬಾಣಲೆಯಲ್ಲಿ ತೆಗೆದುಕೊಂಡು ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಮುಂದೆ ಧನಿಯಾ ಪುಡಿ ಹಸಿಮೆಣಸಿನಕಾಯಿ ಸಣ್ಣ ಹಸಿಶುಂಠಿಯನ್ನು ಅದೇ ಬಾಣಲೆಗೆ ಹಾಕಿ ಈರುಳ್ಳಿಯ ಜೊತೆಗೆ ಚೆನ್ನಾಗಿ ಹುರಿದುಕೊಳ್ಳಿ‌

    ಇದೀಗ ಅದೇ ಬಾಣಲೆಗೆ ಚೆನ್ನಾಗಿ ತೊಳೆದಿಟ್ಟ ಚಿಕನ್ ಅನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. ಈ ರೀತಿ ಮಾಡುವುದರಿಂದ ಚಿಕನ್ ನಲ್ಲಿ ಇರುವ ಸಂಪೂರ್ಣ ನೀರಿನಂಶ ಬಿಟ್ಟುಕೊಳ್ಳುತ್ತದೆ ಆದ್ದರಿಂದ ನೀರು ಸಂಪೂರ್ಣವಾಗಿ ಬಿಟ್ಟುಕೊಳ್ಳುವ ತನಕ ಡೀಪ್ ಫ್ರೈ ಮಾಡಿ.

    ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಗೋಡಂಬಿ ಮತ್ತು ಗಸಗಸೆ ಬೀಜವನ್ನು ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಿ. ನಂತರ ಗ್ಯಾಸ್ ಅನ್ನು ಆಫ್ ಮಾಡಿ ಒಂದು ಬದಿಯಲ್ಲಿ ಇಡಿ
    ಮುಂದೆ ಒಂದು ಮಿಕ್ಸಿಯಲ್ಲಿ ಫ್ರೈ ಮಾಡಿಟ್ಟುಕೊಂಡ ಅಂತಹ ಗಸಗಸೆ ಮತ್ತು ಗೋಡಂಬಿ ಬೀಜ ಮತ್ತು ಕೊತ್ತಂಬರಿ ಸೊಪ್ಪು ಹಾಗೂ ಪುದೀನಾವನ್ನು ಚೆನ್ನಾಗಿ ರುಬ್ಬಿಕೊಳ್ಳಿ.

    ರುಬ್ಬುವಾಗ ಆದಷ್ಟು ನುಣ್ಣಗೆ ರುಬ್ಬಿಕೊಳ್ಳಿ ಹಾಗೆ ಅಗತ್ಯಕ್ಕಿಂತ ಜಾಸ್ತಿ ನೀರು ಹಾಕಲು ಹೋಗಬೇಡಿ. ಇದೀಗ ನಂತರ ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ರುಬ್ಬಿಕೊಂಡಂತಹ ಕೊಂಡಂತಹ ಮಿಶ್ರಣವನ್ನು ಹಾಕಿ.

    ನಂತರ ಫ್ರೈ ಮಾಡಿ ಬಿಟ್ಟು ಕೊಂಡಂತಹ ಚಿಕನ್ ಮತ್ತು ಈರುಳ್ಳಿ ಮಿಶ್ರಣವನ್ನು ಜೊತೆಗೆ ಮೆಣಸಿನ ಪುಡಿ 1 ಚಮಚ ಹಾಕಿ ಸ್ವಲ್ಪ ನೀರು ಬೆರೆಸಿ ಕುದಿಯಲು ಬಿಡಿ. ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಲಿಡ್ ಮುಚ್ಚಿ 10 ನಿಮಿಷ ಬೇಯಲು ಬಿಡಿ(ಆಗಾಗ ಲಿಡ್ ತೆಗೆದು ತಿರುಗಿಸುತ್ತೀರಿ).

    ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಜೀರಾ ರೈಸ್ ವಿತ್ ಕರಿ

    ಮಸಾಲ ಮತ್ತು ಚಿಕನ್ ಚೆನ್ನಾಗಿ ಮಿಶ್ರಣ ಆಗುವಂತೆ ನೋಡಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಕುಕ್ಕರನ್ನು ಒಂದು ವಿಸಿಲ್ ಸಾಗಿಸಿದರೆ ಸಾಕು ಇದೀಗ ಸಕತ್ ಟೇಸ್ಟಿಯಾಗಿರುವ ಚಿಕನ್ ಚಾಪ್ ರೆಡಿ.

    ನೀವು ಪೂರಿ, ಪರೋಟ,ಚಪಾತಿಗಳ ಜೊತೆ ಚಿಕನ್ ಚಾಪ್ ಅನ್ನು ಸೇವಿಸಬಹುದು. ಇನ್ನು ಯಾಕೆ ತಡ ಈ ರೆಸಿಪಿಯನ್ನು ಟ್ರೈ ಮಾಡಿನೋಡಿ ವೀಕೆಂಡ್ ಅನ್ನು ಚೆನ್ನಾಗಿ ಕಳೆಯಿರಿ.
    Published by:Swathi Nayak
    First published: