Health Tips: ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಮನೆಯ ಮಸಾಲೆ ಡಬ್ಬದಲ್ಲಿದೆ ಪರಿಹಾರ.!

Spices : ಒಂದೆಲ್ಲ ಒಂದು ಆರೋಗ್ಯ ಸಮಸ್ಯೆಗಳು ನಮ್ಮನ್ನ ಕಾಡುತ್ತಲೇ ಇರುತ್ತದೆ. ಸಣ್ಣ ಪುಣ್ಣ ತೊಂದರೆಗಳಿಗೆ ಚಿಂತೆ ಮಾಡುವ ಬದಲು ನಮ್ಮ ಮನೆಯಲ್ಲಿ ಪರಿಹಾರ ಹುಡುಕುವುದು ಒಳಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯಲ್ಲಿರುವ ಮಸಾಲೆಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇದನ್ನು ನಿಮ್ಮ ಸೂಪ್, ಸ್ಮೂಥಿ, ಸ್ಟ್ಯೂ ಮತ್ತು ಬೇಯಿಸಿದ ಆಹಾರಗಳಲ್ಲಿ ಸೇರಿಸಿ ಸೇವಿಸುವುದರಿಂದ  ನಿಮ್ಮ ಮನಸ್ಸು ಮತ್ತು ದೇಹವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ದಾಲ್ಚಿನ್ನಿ: ದಾಲ್ಚಿನ್ನಿ ಹಲವಾರು ನಿತ್ಯಹರಿದ್ವರ್ಣ ಮರಗಳ ಒಳ ಮರದ ತೊಗಟೆಯಿಂದ ಬರುತ್ತದೆ. ಇದನ್ನು ಸಿರಿಧಾನ್ಯಗಳ ಪದಾರ್ಥದಲ್ಲಿ, ಪಾನೀಯಗಳಲ್ಲಿ ಸೇರಿಸಿ ಸೇವಿಸಬಹುದು. ಇದು ವಿಟಮಿನ್ ಎ, ಬಿ 6, ಸಿ, ಇ ಮತ್ತು ಕೆ ಸೇರಿದಂತೆ ಅಮೂಲ್ಯವಾದ ಪೋಷಕಾಂಶಗಳಿಂದ ಕೂಡಿದ್ದು, ಇತರ ಮಸಾಲೆಗಳಿಗೆ ಹೋಲಿಸಿದಾಗ, ನಿಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಇದು ಹೆಚ್ಚು ಸಹಾಯ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ದಾಲ್ಚಿನ್ನಿ ಸೇರಿಸಿ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಅಲ್ಜೈಮರ್ ಮತ್ತು ಪಾರ್ಕಿನ್ಸನ್ ನಂತಹ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಏಲಕ್ಕಿ: ಏಲಕ್ಕಿ ಭಾರತೀಯ ಅಡುಗೆಯಲ್ಲಿ ಸಾಮಾನ್ಯವಾದ ಮಸಾಲೆ ಪದಾರ್ಥ. ಇದನ್ನುಆಯುರ್ವೇದ ಔಷಧದಲ್ಲಿ ಉಸಿರಾಟದ ಸೋಂಕು, ಕೆಮ್ಮು, ನೆಗಡಿ ಮತ್ತು ಆಸ್ತಮಾ ರೋಗದಿಂದ ಪರಿಹಾರ ಪಡೆಯಲು ಬಳಸಲಾಗುತ್ತದೆ. ಈ ಆರೊಮ್ಯಾಟಿಕ್ ಬೀಜಗಳು ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಉತ್ತಮ ಪರಿಹಾರ. ಅಧ್ಯಯನಗಳ ಪ್ರಕಾರ ಏಲಕ್ಕಿ ನಿರ್ದಿಷ್ಟ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಅದು  ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೆಚ್ಚು ಒತ್ತಡ ಅನುಭವಿಸುತ್ತಿದ್ದೀರಾ? ಹಾಗಾದ್ರೆ ಈ ಆಹಾರಗಳನ್ನು ಟ್ರೈ ಮಾಡಿ

ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ಚೈನೀಸ್ ಪಾರ್ಸ್ಲಿ ಅಥವಾ ಸಿಲಾಂಟ್ರೋ ಎಂದೂ ಕರೆಯುತ್ತಾರೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಸೆಲ್ಯುಲಾರ್ ಹಾನಿಯನ್ನು ತಡೆಯಬಹುದು. ಕೊತ್ತಂಬರಿ ಸೊಪ್ಪಿನಲ್ಲಿ ಶಕ್ತಿಯುತವಾದ ನಿರೋಧಕಗಳಿದ್ದು ಇದು ದೇಹದೊಳಗಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿಮಾಲಯನ್ ಉಪ್ಪು: ಪಾಕಿಸ್ತಾನದ ಪಂಜಾಬ್‌ನ ಸಾಲ್ಟ್ ರೇಂಜ್ ಪರ್ವತಗಳಿಂದ ತೆಗೆದ ಹಿಮಾಲಯನ್ ಉಪ್ಪಿನಲ್ಲಿರುವ 80 ಕ್ಕೂ ಹೆಚ್ಚು ಅಂಶಗಳು ಮತ್ತು ಖನಿಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ನೈಸರ್ಗಿಕ ಮತ್ತು ಸಂಸ್ಕರಿಸದ ರೂಪದಲ್ಲಿರುವುದರಿಂದ, ಇದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಉಪ್ಪು ನಿಮ್ಮ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳಿಗೆ ಆರೋಗ್ಯಕರವಾಗಿರಿಸುತ್ತದೆ. ಇದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಸೈನಸ್ ಮತ್ತು ಉಸಿರಾಟದ ತೊಂದರೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಕರಿ ಮೆಣಸು: ಈ ಮೆಣಸನ್ನು ಭಾರತೀಯ ಅಡುಗೆಯಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಕರಿಮೆಣಸನ್ನು ಹೆಚ್ಚಾಗಿ 'ಕಪ್ಪು ಚಿನ್ನ' ಎಂದು ಕರೆಯಲಾಗುತ್ತಿತ್ತು ಏಕೆಂದರೆ ಇದು ಶ್ರೀಮಂತರು ಮಾತ್ರ ಖರೀದಿಸಬಹುದಾದ ದುಬಾರಿ ವಸ್ತು ಇದಾಗಿತ್ತು. ಇಂದು, ಕರಿಮೆಣಸನ್ನು ಮಸಾಲೆ ಭಕ್ಷ್ಯಗಳಲ್ಲಿ, ಆಯುರ್ವೇದ ತೈಲಗಳಲ್ಲಿ ಮತ್ತು ಕೆಲವು ಸೌಂದರ್ಯ ಚಿಕಿತ್ಸೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ನಿಮ್ಮ ದೇಹವನ್ನು ಉರಿಯೂತ, ಫ್ರೀ ರಾಡಿಕಲ್, ಕೆಲವು ಕ್ಯಾನ್ಸರ್ ಮತ್ತು ಹೃದಯ ರೋಗಗಳಿಂದ ಪರಿಹಾರ ನೀಡುತ್ತದೆ.

ಶುಂಠಿ: ಶುಂಠಿ ಬಿ 1, ಬಿ 2, ಬಿ 3, ಬಿ 5, ಬಿ 6 ಮತ್ತು ಬಿ 9 ನಂತಹ ಅನೇಕ  ಬಿ ವಿಟಮಿನ್ ಸಾರವನ್ನು ಹೊಂದಿದೆ. ಇದು  ಜ್ವರ  ಮತ್ತು ವಾಕರಿಕೆಗೆ ಪರಿಹಾರ ನೀಡುತ್ತದೆ. ಇದು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಶುಂಠಿಯು ದೀರ್ಘಕಾಲದ ಅಜೀರ್ಣವನ್ನು ನಿವಾರಿಸುತ್ತದೆ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
Published by:Sandhya M
First published: