Year End Trip ಹೋಗುವವರಿಗೆ ಗುಡ್ ನ್ಯೂಸ್: Spice jet, Air Asia ದಿಂದ ಬಂಪರ್ ಅಫರ್!

SpiceJet and AirAsia India Offers: ಅದಲ್ಲದೆ, ಏರ್‌ಏಷ್ಯಾ ಇಂಡಿಯಾ ತನ್ನ 'ಹೊಸ ವರ್ಷ, ಹೊಸ ಸ್ಥಳಗಳು' ಎಂಬ ಹೊಸ ಕೊಡುಗೆಯನ್ನು ಪ್ರಕಟಿಸಿದ್ದು, ಚೆನ್ನೈ-ಬೆಂಗಳೂರು, ಬೆಂಗಳೂರು-ಚೆನ್ನೈ ಮತ್ತು ಚೆನ್ನೈ-ಹೈದರಾಬಾದ್‌ನಂತಹ ಮಾರ್ಗಗಳಿಗೆ ರೂ 1,122 ರಿಂದ ಪ್ರಾರಂಭವಾಗುವ ದರಗಳೊಂದಿಗೆ ಅದರ ಹಾರಾಟ ಇರುವ ಕಡೆಯಲೆಲ್ಲಇದೇ ರೀತಿಯ ರಿಯಾಯಿತಿ ಮಾರಾಟ ದರಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿನ ದೇಶೀಯ ವಿಮಾನಯಾನ (Domestic Airlines)  ಸಂಸ್ಥೆಗಳು ರಜಾದಿನಗಳಲ್ಲಿ (Holiday) ಪ್ರಯಾಣಿಕರನ್ನು ಆಕರ್ಷಿಸಲು ಆಕರ್ಷಕ ಮಾರಾಟದ ಕೊಡುಗೆಗಳನ್ನು ಪ್ರಾರಂಭಿಸಿವೆ, ಏಕೆಂದರೆ ಈಗಾಗಲೇ  ಭಾರತದಲ್ಲಿ  ಓಮೈಕ್ರಾನ್ (Omicron)   ರೂಪಾಂತರಿ ಹರಡುತ್ತಿರುವುದು ಪ್ರಯಾಣಿಕರಲ್ಲಿ ಆತಂಕವನ್ನು ಉಂಟುಮಾಡಿದೆ. ಆದರೂ, ಈ ಹೊಸ ವರ್ಷದ ಸಮಯದಲ್ಲಿ ನಮ್ಮ ರಜಾ ದಿನಗಳನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುವ ನಿರೀಕ್ಷೆಯಿದೆ. ಹಾಗಾಗಿ ಪ್ರಯಾಣಿಕರಿಗೆ ಪ್ರಯೋಜನಗಳನ್ನು ನೀಡುವ ಕಾರಣ ಸ್ಪೈಸ್‌ಜೆಟ್ (Spice Jet) ಮತ್ತು ಏರ್‌ಏಷ್ಯಾ (Air Asia India) ಇಂಡಿಯಾ, ಇವೆರಡೂ ವಿಶೇಷ ಕೊಡುಗೆಗಳನ್ನು ಪ್ರಾರಂಭಿಸಿವೆ.

ಸ್ಪೈಸ್‌ಜೆಟ್ ತನ್ನ ದೇಶದ ಒಳ ಭಾಗದಲ್ಲಿಯೇ ಚೆನ್ನೈ-ಬೆಂಗಳೂರು, ಬೆಂಗಳೂರು-ಚೆನ್ನೈ, ಚೆನ್ನೈ-ಹೈದರಾಬಾದ್, ಜಮ್ಮು-ಶ್ರೀನಗರದಂತಹ ಪ್ರವಾಸಿ ಪ್ರದೇಶಗಳಿಗೆ ರೂ 1,122 ಕ್ಕಿಂತ ಕಡಿಮೆ ದರದಲ್ಲಿ  ಪ್ರಾರಂಭವಾಗುವ ಏಕಮುಖ ದರಗಳ ಕೊಡುಗೆಗಳನ್ನು ಪ್ರಾರಂಭಿಸಿದೆ. ಮಾರಾಟದ ಕೊಡುಗೆಯು ಡಿಸೆಂಬರ್ 27 ರಿಂದ 31 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಅನ್ವಯವಾಗಲಿದ್ದು, ಆದರೆ ಈ ಬುಕಿಂಗ್‌ಗಳಿಗೆ ಪ್ರಯಾಣದ ಅವಧಿಯು ಜನವರಿ 15, 2022 ರಿಂದ ಏಪ್ರಿಲ್ 15, 2022 ರವರೆಗೆ ಇರುತ್ತದೆ.

"ಪ್ರಯಾಣ ಯೋಜನೆಗಳಿಗೆ ಹೊಸತನವನ್ನು ಸೇರಿಸುವ ಸಲುವಾಗಿ, ಮಾರಾಟ ದರದ ಟಿಕೆಟ್‌ಗಳ ಮೇಲಿನ ಬದಲಾವಣೆಯ ಶುಲ್ಕವನ್ನು ಮನ್ನಾವನ್ನು ಮಾಡಲು ಸ್ಪೈಸ್‌ಜೆಟ್ ಸಂತೋಷದಿಂದ ನಿರ್ಧರಿಸಿದೆ. ಪ್ರಯಾಣದ ಯೋಜನೆಯಲ್ಲಿ ಬದಲಾವಣೆ ಮಾರಾಟ ದರದ ಅಡಿಯಲ್ಲಿ ಫ್ಲೈಟ್ ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರು ತಮ್ಮ ವಿಮಾನದ ದಿನಾಂಕವನ್ನು ಮಾರ್ಪಡಿಸಲು ಸಾಧ್ಯವಾಗುತ್ತದೆ " ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ನಾವಿಲ್ಲಿ ಚಳಿಯಿಂದ ನಡುಗುತ್ತಿದ್ರೆ ಈ ಪ್ರದೇಶಗಳಲ್ಲಿ ಚಳಿಯೇ ಇಲ್ವಂತೆ

ಶೂನ್ಯ ಬದಲಾವಣೆಯ ಶುಲ್ಕವನ್ನು ಪಡೆಯಲು, ಫ್ಲೈಟ್ ನಿರ್ಗಮನ ದಿನಾಂಕಕ್ಕೆ ಕನಿಷ್ಠ ಎರಡು ದಿನಗಳ ಮೊದಲು ಬುಕಿಂಗ್ ಅನ್ನು ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕೆ ಯಾವುದಾದರೂ ದರದ ವ್ಯತ್ಯಾಸವು ಅನ್ವಯವಾಗುತ್ತದೆ. ಅಷ್ಟೇ ಅಲ್ಲ, ಸ್ಪೈಸ್‌ಜೆಟ್ ಪ್ರತಿ ಮಾರಾಟದ ದರ ಬುಕಿಂಗ್‌ನೊಂದಿಗೆ 500 ರೂಪಾಯಿ ಮೌಲ್ಯದ ಕಾಂಪ್ಲಿಮೆಂಟರಿ ಫ್ಲೈಟ್ ವೋಚರ್ ಅನ್ನು ಸಹ ನೀಡುತ್ತಿದೆ. ಅವರ ಮುಂದಿನ ಪ್ರಯಾಣದಲ್ಲಿ ಮತ್ತು SpiceMax, ನಿಮಗೆ ಬೇಕಾದ ಆಸನಗಳು ಮತ್ತು ಬೇಕಾದ ಸೇವೆಗಳಂತಹ ಆಡ್-ಆನ್‌ಗಳ ಮೇಲೆ ಫ್ಲಾಟ್ 25 ಪ್ರತಿಶತ ರಿಯಾಯಿತಿ ಪಡೆಯಲು ಸಹಾಯ ಮಾಡುತ್ತದೆ.

ಅದಲ್ಲದೆ, ಏರ್‌ಏಷ್ಯಾ ಇಂಡಿಯಾ ತನ್ನ 'ಹೊಸ ವರ್ಷ, ಹೊಸ ಸ್ಥಳಗಳು' ಎಂಬ ಹೊಸ ಕೊಡುಗೆಯನ್ನು ಪ್ರಕಟಿಸಿದ್ದು, ಚೆನ್ನೈ-ಬೆಂಗಳೂರು, ಬೆಂಗಳೂರು-ಚೆನ್ನೈ ಮತ್ತು ಚೆನ್ನೈ-ಹೈದರಾಬಾದ್‌ನಂತಹ ಮಾರ್ಗಗಳಿಗೆ ರೂ 1,122 ರಿಂದ ಪ್ರಾರಂಭವಾಗುವ ದರಗಳೊಂದಿಗೆ ಅದರ ಹಾರಾಟ ಇರುವ ಕಡೆಯಲೆಲ್ಲಇದೇ ರೀತಿಯ ರಿಯಾಯಿತಿ ಮಾರಾಟ ದರಗಳನ್ನು ಹೊಂದಿದೆ.

ಇದನ್ನೂ ಓದಿ: ಹೊಸ ವರ್ಷದ ಪಾರ್ಟಿಗೆ ಬೆಂಗಳೂರು ಸುತ್ತಮುತ್ತ ಈ ರೆಸಾರ್ಟ್ ಹೋಗ್ಬಹುದು ನೋಡಿ

ಜನವರಿ 15 ರಿಂದ  2022 ರಿಂದ  ಏಪ್ರಿಲ್  15 2022 ರ ನಡುವಿನ ಪ್ರಯಾಣದ ಅವಧಿಗೆ 27ನೇ ಡಿಸೆಂಬರ್‌ನಿಂದ 31ನೇ ಡಿಸೆಂಬರ್ 2021 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಈ ಕೊಡುಗೆ ಅನ್ವಯವಾಗುತ್ತದೆ ಮತ್ತು ವಿಮಾನ ನಿರ್ಗಮನಕ್ಕೆ ಕನಿಷ್ಠ 72 ಗಂಟೆಗಳ ಮೊದಲು ಮಾಡಿದ ಬದಲಾವಣೆಗಳಿಗೆ ದಿನಾಂಕ ಬದಲಾವಣೆ ಶುಲ್ಕ ವಿನಾಯಿತಿಯನ್ನು ಒಳಗೊಂಡಿರುತ್ತದೆ," ಏರ್‌ಏಷ್ಯಾ ಇಂಡಿಯಾ ಏರ್‌ಲೈನ್ಸ್  ಸಂಸ್ಥೆ ಹೇಳಿದೆ.
Published by:Sandhya M
First published: