• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Sperm Count: ಪುರುಷರಲ್ಲಿ ಹೆಚ್ಚುತ್ತಿರುವ ಸ್ಪರ್ಮ್ ಸಮಸ್ಯೆಗೆ ಇದು ಮುಖ್ಯ ಕಾರಣವಂತೆ! ವಿಜ್ಞಾನಿಗಳ ವರದಿಯಲ್ಲಿ ಏನಿದೆ?

Sperm Count: ಪುರುಷರಲ್ಲಿ ಹೆಚ್ಚುತ್ತಿರುವ ಸ್ಪರ್ಮ್ ಸಮಸ್ಯೆಗೆ ಇದು ಮುಖ್ಯ ಕಾರಣವಂತೆ! ವಿಜ್ಞಾನಿಗಳ ವರದಿಯಲ್ಲಿ ಏನಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ವೀರ್ಯ ಕಡಿಮೆಯಾಗಲು ಸ್ಥೂಲಕಾಯ ಪ್ರಮುಖ ಮತ್ತು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ಬೊಜ್ಜು ಅನೇಕ ಸಮಸ್ಯೆಗಳ ಜೊತೆಗೆ ಪುರುಷರಲ್ಲಿ ವೀರ್ಯದ ಸಮಸ್ಯೆ ಹೆಚ್ಚಿಸುತ್ತಿದೆ.

  • Share this:

ಲೈಂಗಿಕತೆ (Sexuality) ಮಾನವ ಜೀವನದ (Human Life) ಒಂದು ಭಾಗ (Part). ಮನುಷ್ಯ ಲೈಂಗಿಕ ಸಂಭೋಗದ ಮೂಲಕ ಸಂತಾನೋತ್ಪತ್ತಿ (Progeniture) ಮಾಡಲು ಸಾಧ್ಯ. ಮಗುವಿನ (Baby) ಜನನದ ವಿಚಾರದಲ್ಲಿ ಪುರುಷನ (Men) ವೀರ್ಯದಲ್ಲಿ (Sperm) ಇರುವ ವೀರ್ಯವು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಏಕೆಂದರೆ ಲೈಂಗಿಕ ಸಮಯದಲ್ಲಿ ಮಹಿಳೆಯರು ಮೊಟ್ಟೆಗಳೊಂದಿಗೆ ಗರ್ಭಾಶಯದಲ್ಲಿ ಮಗುವನ್ನು ಸಿದ್ಧಪಡಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರ ಫಲವತ್ತತೆ ಕಡಿಮೆಯಾಗುತ್ತಿದ್ದು, ಗರ್ಭಧಾರಣೆ ಸಮಸ್ಯೆ ಹೆಚ್ಚಿಸುತ್ತಿದೆ. ಹೀಗಾಗಿ ಮಗು ಹೊಂದಲು ಸಾಕಷ್ಟು ಪ್ರಯಾಸ ಪಡುವ ಹಲವರನ್ನು ನೀವು ನೋಡಿರಬಹುದು. ಮಹಿಳೆಯರು ಗರ್ಭ ಧರಿಸಲು ಆಗುವ ಸಮಸ್ಯೆಗಳಲ್ಲಿ ಪ್ರಮುಖ ಸಮಸ್ಯೆ ಸ್ಪರ್ಮ್ ಸಮಸ್ಯೆ ಆಗಿದೆ.


ವೀರ್ಯ ಕಡಿಮೆಯಾಗಲು ಸ್ಥೂಲಕಾಯ ಪ್ರಮುಖ ಸಮಸ್ಯೆ


ಇತ್ತೀಚಿನ ದಿನಗಳಲ್ಲಿ ವೀರ್ಯ ಕಡಿಮೆಯಾಗಲು ಸ್ಥೂಲಕಾಯ ಪ್ರಮುಖ ಮತ್ತು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ಬೊಜ್ಜು ಅನೇಕ ಸಮಸ್ಯೆಗಳ ಜೊತೆಗೆ ಪುರುಷರಲ್ಲಿ ವೀರ್ಯದ ಸಮಸ್ಯೆ ಹೆಚ್ಚಿಸುತ್ತಿದೆ. ಇದಕ್ಕೆ ನಿಮ್ಮ ಆಹಾರ ಮತ್ತು ಕೆಲವು ಅಭ್ಯಾಸಗಳು ಕಾರಣ. ಸ್ಥೂಲಕಾಯದಿಂದ ಬಳಲುತ್ತಿರುವವರು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಅವುಗಳಲ್ಲಿ ಒಂದು ಕಡಿಮೆ ವೀರ್ಯ ಸಂಖ್ಯೆ ಹೊಂದುವುದು.


ಡ್ಯಾನಿಶ್ ವಿಜ್ಞಾನಿಗಳ ಅಧ್ಯಯನ ವರದಿ


ತೂಕ ನಷ್ಟ ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಡ್ಯಾನಿಶ್ ವಿಜ್ಞಾನಿಗಳು ಇದಕ್ಕಾಗಿ 56 ಪುರುಷರನ್ನು ಒಳಗೊಂಡ ಅಧ್ಯಯನ ಮಾಡಿದ್ದಾರೆ. ಅಧ್ಯಯನದಲ್ಲಿ ತೊಡಗಿರುವ ಎಲ್ಲ ಜನರನ್ನು 8 ವಾರ ಆಹಾರ ಕ್ರಮದಲ್ಲಿ ಇರಿಸಲಾಯಿತು. ಪ್ರತಿದಿನ ಕೇವಲ 800 ಕ್ಯಾಲೊರಿ ನೀಡಲಾಯಿತು.


ಇದನ್ನೂ ಓದಿ: ಕಣ್ಣುಗಳ ಕೆಳಗೆ ಕಪ್ಪಾದ ಡಾರ್ಕ್ ಸರ್ಕಲ್ ಸಮಸ್ಯೆ ಇದ್ದರೆ ನಿವಾರಣೆಗೆ ಈ ವಿಧಾನ ಅನುಸರಿಸಿ


ಅಧ್ಯಯನದ ಪ್ರಾರಂಭದಲ್ಲಿ 32 BMI ಹೊಂದಿದ್ದ ಪುರುಷರು ಈ ಅವಧಿಯಲ್ಲಿ 16.5 ಕೆಜಿ ತೂಕ ಇಳಿಸಿದ್ದಾರೆ. ಅಧ್ಯಯನದ ಸಮಯದಲ್ಲಿ ಈ ಎಲ್ಲ ಪುರುಷರ ವೀರ್ಯ ಎಣಿಕೆಯಲ್ಲಿ 41 ಪ್ರತಿಶತದಷ್ಟು ಹೆಚ್ಚಳ ಕಂಡು ಬಂದಿದೆ. ತೂಕ ಇಳಿಸಿದವರಲ್ಲಿ ಮತ್ತು ಕಡಿಮೆ ತೂಕ ಒಂದು ವರ್ಷದವರೆಗೆ ಕಾಯ್ದುಕೊಂಡವರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.


ಹೊಟ್ಟೆಯ ಕೊಬ್ಬು ಹೊಂದಿರುವವರಲ್ಲಿ ವೀರ್ಯದ ಗುಣಮಟ್ಟ ಕಳಪೆ


ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ತಜ್ಞರು, ಹೆಚ್ಚು ಹೊಟ್ಟೆಯ ಕೊಬ್ಬನ್ನು ಹೊಂದಿರುವ ಎಲ್ಲ ಜನರ ವೀರ್ಯದ ಗುಣಮಟ್ಟವು ತುಂಬಾ ಕಳಪೆಯಾಗಿದೆ ಎಂದು ತಿಳಿಸಿದ್ದಾರೆ. ಪುರುಷರಲ್ಲಿ, ವೀರ್ಯದ ಸಂಖ್ಯೆಯು 17 ರಿಂದ 40 ವರ್ಷ ವಯಸ್ಸಿನವರೆಗೆ ಗರಿಷ್ಠ ಮಟ್ಟದಲ್ಲಿರುತ್ತದೆ.


ನಂತರ ಅದು ಕಡಿಮೆಯಾಗುತ್ತದೆ. ಪ್ರತಿ ಮಿಲಿಲೀಟರ್ ವೀರ್ಯಕ್ಕೆ 15 ಮಿಲಿಯನ್ ವೀರ್ಯ ಹೊಂದಿರುವುದು ಸಾಮಾನ್ಯ ವೀರ್ಯ ಎಣಿಕೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಪುರುಷರ ವೀರ್ಯಾಣುಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ.


ಬೊಜ್ಜು, ಕಳಪೆ ಆಹಾರ ಮತ್ತು ಮಾಲಿನ್ಯ ಕಾರಣ


ಕಡಿಮೆ ವೀರ್ಯಾಣು ಹಿನ್ನೆಲೆ  ಅನೇಕ ವಿವಾಹಿತರು ಮಕ್ಕಳು ಹೊಂದುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತಿದೆ. ಇದು ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.


ಪುರುಷರ ವೀರ್ಯದಲ್ಲಿ ವೀರ್ಯದ ಕೊರತೆ ಸಂಗಾತಿ ಗರ್ಭಿಣಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಯೌವನದಲ್ಲಿ ವೀರ್ಯಾಣು ಕಡಿಮೆಯಾಗಲು ಆರೋಗ್ಯ ಮತ್ತು ಜೀವನಶೈಲಿಯ ಅಂಶ ಕಾರಣ. ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸಿದರೆ ವೀರ್ಯ ಸಂಖ್ಯೆ ಹೆಚ್ಚಿಸಬಹುದು.


ಮಾಲಿನ್ಯ


ಕಳಪೆ ಗುಣಮಟ್ಟದ ಗಾಳಿಯನ್ನು ನಾವು ಉಸಿರಾಡಿದಾಗ, ಗಾಳಿಯಲ್ಲಿರುವ ಕಣಗಳು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳೊಂದಿಗೆ ದೇಹ ಪ್ರವೇಶಿಸುತ್ತವೆ. ಇದು ಪುರುಷರ ವೀರ್ಯಕ್ಕೆ ಹಾನಿಕಾರಕ.


ಇದನ್ನೂ ಓದಿ: ಗಂಟೆಗಟ್ಟಲೆ ಟಿವಿ ಮುಂದೆ ಕೂರುತ್ತೀರಾ? ಹೃದಯಾಘಾತದ ಅಪಾಯ ಹೆಚ್ಚು


ಧೂಮಪಾನ


ಧೂಮಪಾನ ವೀರ್ಯಾಣುಗಳ ಸಂಖ್ಯೆ, ಮತ್ತು ಚಲನಶೀಲತೆಯ ಮೇಲೆ ಪರಿಣಾಮ ಬೀರುತ್ತದೆ. ಸಿಗರೇಟ್ ಸೇದುವ ಪುರುಷರಲ್ಲಿ ಫಲವತ್ತತೆ ಕಡಿಮೆಯಾಗಿರುವ ಬಗ್ಗೆ ವರದಿ ಹೇಳಿವೆ. ಧೂಮಪಾನವು ವೀರ್ಯದ ಗುಣಮಟ್ಟದ  ಮೇಲೆ ಪರಿಣಾಮ ಬೀರುತ್ತದೆ.

First published: