Family Caring Tips: ನಿಮ್ಮ ತಾಯಿಯೊಂದಿಗೆ ಸಮಯ ಕಳೆಯಲು ಮತ್ತು ಖುಷಿ ಪಡಿಸಲು ಇಲ್ಲಿವೆ ಕೆಲ ಟಿಪ್ಸ್

ಜಗತ್ತಿನಲ್ಲಿ ತಾಯಿಗಿಂತ ಉತ್ತಮ ಅಡುಗೆಯವರು ಯಾರೂ ಇಲ್ಲ. ಆದರೆ ದಿನವೂ ಕಿಚನ್ ನಲ್ಲಿರುವ ತಾಯಿಗೆ ಒಂದು ದಿನ ರೆಸ್ಟ್ ನೀಡಿ. ನೀವೇ ಒಳ್ಳೆಯ ಅಡುಗೆ ಮಾಡಿ, ನಿಮ್ಮ ಕೈಯ್ಯಾರೆ ಬಡಿಸಿ, ಪ್ರೀತಿ ಹಂಚಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕರ್ತವ್ಯ, ನಿಷ್ಠೆ, ಪ್ರೀತಿ (Love), ಕುಟುಂಬವನ್ನು (Family) ಮುನ್ನಡೆಸುವ ಜವಾಬ್ದಾರಿ ಮತ್ತು ಜತನದಿಂದಾಗಿ ತಾಯಿಯನ್ನು (Mother) ಜಗಜ್ಜನನಿ ಎಂದು ಬಣ್ಣಿಸಲಾಗುತ್ತದೆ. ಪ್ರಪಂಚದಲ್ಲಿ (World) ತಾಯಿಯ ಸೇವಾ ಕಾರ್ಯ ನೆನೆಯಲು ತಾಯಂದಿರ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಆದರೆ ತಾಯಿಯ ದಿನ ಪ್ರತಿದಿನವೂ ನಡೆಯಬೇಕು. ತಾಯಿಯ ಪ್ರೀತಿಗೆ ಯಾವುದೂ ಎಂದಿಗೂ ಸಮಾನವಾಗಿರಲು ಸಾಧ್ಯವಿಲ್ಲ. ಆದರೆ ಅವಳೊಂದಿಗೆ ವಿಶೇಷ ದಿನವನ್ನು ಕಳೆಯುವುದು ತುಂಬಾ ಮುಖ್ಯ. ಒಂದು ದಿನವೂ ಪುರಸೊತ್ತಿಲ್ಲದ ದುಡಿಮೆಯ ತಾಯಿಗೆ ಸ್ವಲ್ಪ ವಿಶ್ರಾಂತಿ ನೀಡುವುದು ಮುಖ್ಯ. ತಾಯಿಯನ್ನು ಖುಷಿಯಾಗಿರಿಸಲು ಇಲ್ಲಿ ನಾವು ಕೆಲವು ವಿಶೇಷ ಸಲಹೆಗಳನ್ನು ಹಂಚಿಕೊಂಡಿದ್ದೇವೆ. ಒಮ್ಮೆ ನೀವು ಟ್ರೈ ಮಾಡಿ.

    ನೀವು ತಾಯಿಗೆ ವಿಶ್ರಾಂತಿ, ಪ್ರೀತಿಯನ್ನು ತೋರ್ಪಡಿಸಬಹುದು. ಇದು ನಿಮ್ಮ ತಾಯಿಯನ್ನು ಸಂತೋಷಪಡಿಸುತ್ತದೆ. ತಾಯಿ ಪ್ರೀತಿ ಮತ್ತು ತ್ಯಾಗದ ಮೂರ್ತಿ. ಅವಳ ಪ್ರೀತಿಗೆ ಸರಿಗಟ್ಟುವುದು ಯಾವುದೂ ಸಾಧ್ಯವಿಲ್ಲ. ತಾಯಿಯ ಸಮರ್ಪಣೆ, ತ್ಯಾಗ ಮತ್ತು ಪ್ರೀತಿಗೆ ಕೃತಜ್ಞತೆಯನ್ನು ತಾಯಂದಿರ ದಿನಾಚರಣೆಯಂದು ಹೇಳಲಾಗುತ್ತದೆ.

    ಅಡುಗೆ ಮಾಡಿ

    ಜಗತ್ತಿನಲ್ಲಿ ತಾಯಿಗಿಂತ ಉತ್ತಮ ಅಡುಗೆಯವರು ಯಾರೂ ಇಲ್ಲ. ಆದರೆ ದಿನವೂ ಕಿಚನ್ ನಲ್ಲಿರುವ ತಾಯಿಗೆ ಒಂದು ದಿನ ರೆಸ್ಟ್ ನೀಡಿ. ನೀವೇ ಒಳ್ಳೆಯ ಅಡುಗೆ ಮಾಡಿ, ನಿಮ್ಮ ಕೈಯ್ಯಾರೆ ಬಡಿಸಿ, ಪ್ರೀತಿ ಹಂಚಿ. ನೀವು ನೀಡುವ ಈ ಸರ್ಪ್ರೈಸ್ ನಿಮ್ಮ ತಾಯಿಯನ್ನು ಪ್ರೀತಿ ಮತ್ತು ಭಾವುಕರನ್ನಾಗಿ ಮಾಡುತ್ತದೆ. ಅವರಿಂದ ನೀವು ಅಡುಗೆ ಕಲಿಯಲು ಪ್ರಯತ್ನಿಸಿ.

    ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ

    ತಾಯಿ ಜೊತೆ ಸಂಭಾಷಣೆ

    ನೀವು ನಿಮ್ಮ ತಾಯಿಯ ಜೊತೆ ಸಂಪರ್ಕದಲ್ಲಿರಿ. ಆಕೆಯ ಜೊತೆ ಹೆಚ್ಚೆಚ್ಚು ಮಾತನಾಡಿ. ಮಕ್ಕಳು ತನ್ನೊಂದಿಗೆ ಮಾತನಾಡಬೇಕು. ಸಮಯ ಕಳೆಯಬೇಕೆಂದು ತಾಯಂದಿರು ಹೆಚ್ಚು ಇಷ್ಟ ಪಡುತ್ತಾರೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ.

    ಅವರ ಬಾಲ್ಯ, ಅವರ ಸ್ನೇಹಿತರು, ಅವರ ತಾಯಿಯೊಂದಿಗೆ ಅವರ ನೆನಪುಗಳ ಬಗ್ಗೆ ಕೇಳಿ. ಅವರು ನೆನಪಿಸಿಕೊಂಡಾಗ ಅವರಿಗೆ ಸಂತೋಷವನ್ನು ನೀಡುವ ವಿಷಯಗಳನ್ನು ಕೇಳಿ. ಅವರ ಜೊತೆ ಸುಮ್ಮನೆ ಮಾತನಾಡಿ.

    ಚಲನಚಿತ್ರ ನೋಡಿ

    ನೀವು ನಿಮ್ಮ ಸ್ನೇಹಿತರೊಂದಿಗೆ ಅನೇಕ ಬಾರಿ ಪಾರ್ಟಿಗಳಿಗೆ ಹೋಗಿರಬಹುದು. ಆದರೆ ನೀವು ಎಂದಾದರೂ ನಿಮ್ಮ ತಾಯಿಯೊಂದಿಗೆ ಪಾರ್ಟಿ ಮಾಡಿದ್ದೀರಾ? ಮೂವಿ ನೋಡಿದ್ದೀರಾ? ಅಮ್ಮನೊಂದಿಗೆ ಇದೇ ರೀತಿಯ ಪೈಜಾಮ ಪಾರ್ಟಿ ಮಾಡಿ. ಅವಳ ನೆಚ್ಚಿನ ತಿಂಡಿಗಳ ಜೊತೆಗೆ ಟಿವಿಯಲ್ಲಿ ಅವಳ ನೆಚ್ಚಿನ ಚಲನಚಿತ್ರವನ್ನು ವೀಕ್ಷಿಸಿ.

    ತೊಂದರೆಯಾದಾಗ ತಾಯಿಯ ಜೊತೆ ಮಾತನಾಡಿ

    ವಯಸ್ಸಾದಂತೆ, ಈ ಅಂತರವು ಅವರಿಗೆ ತಿಳಿಯದೆ ಹೆಚ್ಚುತ್ತ ಹೋಗುತ್ತದೆ. ನಮ್ಮ ತಂದೆ-ತಾಯಿಯಿಂದ ಯಾರೂ ನಮಗೆ ಒಳ್ಳೆಯ ಸಲಹೆ ನೀಡಲಾರರು ಎಂಬುದಂತೂ ಸತ್ಯ. ನೀವು ತೊಂದರೆಯಲ್ಲಿದ್ದರೆ ಮತ್ತು ನಿಮಗೆ ಸಹಾಯ ಬೇಕಾದರೆ, ನೀವು ನಿಮ್ಮ ತಾಯಿಯನ್ನು ಸಂಪರ್ಕಿಸಬೇಕು.

    ಅಭ್ಯಾಸಗಳು

    ತಾಯಿ ತಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡಲು ಇಷ್ಟಪಡುತ್ತಾರೆ ಎಂದು ಕೇಳಿ. ಅವರು ಕವನವನ್ನು ಓದಲು ಬಯಸಿದರೆ, ಅವರಿಗೆ ಕವನ ಓದಿ ಹೇಳಿ. ಸಂಗೀತವನ್ನು ಕೇಳಲು ಇಷ್ಟಪಡುತ್ತಿದ್ದರೆ, ಅವರೊಂದಿಗೆ ಕುಳಿತು ಸಂಗೀತವನ್ನು ಕೇಳಿ. ತೋಟಗಾರಿಕೆಯಲ್ಲಿ ಉತ್ಸಾಹವಿದ್ದರೆ, ತೋಟದಲ್ಲಿ ನಡೆಯಿರಿ .

    ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?

    ಕುಟುಂಬ ಆಲ್ಬಮ್

    ನೆನಪುಗಳು ನಮ್ಮ ಅಂತರವನ್ನು ಕಡಿಮೆ ಮಾಡುತ್ತವೆ. ಕುಟುಂಬದ ಆಲ್ಬಮ್ ತೆರೆಯಿರಿ ಮತ್ತು ನಿಮ್ಮ ತಾಯಿಯೊಂದಿಗೆ ಮೆಮೊರಿ ಬಾಕ್ಸ್‌ನಲ್ಲಿ ಕಳೆದು ಹೋಗಿ. ತಾಯಿಯೊಂದಿಗೆ ಹಳೆಯ ಕುಟುಂಬದ ಫೋಟೋಗಳನ್ನು ಪರಿಶೀಲಿಸಿ. ಪ್ರತಿ ಚಿತ್ರದ ಹಿಂದಿನ ಕಥೆಯನ್ನು ಹೇಳಿ, ಕೇಳಿ ಖುಷಿ ಪಡಿ.
    Published by:renukadariyannavar
    First published: