ಭಾನುವಾರ(Sunday) ಬಂದರೆ ಸಾಕು, ನಾನ್ವೆಜ್ ಪ್ರಿಯ(Nonveg Lovers)ರಿಗೆ ಹಬ್ಬ ಬಂದಷ್ಟೇ ಖುಷಿ. ಬೆಳಗ್ಗೆನೆ ಎದ್ದು ಮಾಂಸದ ಅಂಗಡಿಗೆ ತೆರಳಿ, ಕ್ಯೂನಲ್ಲಿ ನಿಂತು ಮಾಂಸ ಖರೀದಿಸಿ ಮನಗೆ ಬಂದು ಅಮ್ಮನ ಕೈಲಿ ಕೊಟ್ಟು, ಅಡುಗೆ ಆಗುವವರೆಗೂ ಘಮ್ ಎಂದು ಕಿಚನ್(Kitchen)ನಿಂದ ಬರುವ ಸುವಾಸನೆಯನ್ನು ಸವಿಯುತ್ತಾ ಕಾಯುತ್ತಿರುತ್ತೀರಾ. ವಿಶ್ವದಲ್ಲಿಯೇ ಅತಿ ಹೆಚ್ಚು ಸೇವಿಸಲ್ಪಡುವ(Most Consumed) ಮಾಂಸಾಹಾರವೆಂದರೆ ಅದು ಕೋಳಿಮಾಂಸ. ಚಿಕಿನ್ ತಂದು ಹೊಸ ಹೊಸ ಸ್ಟೈಲ್ ಅಡುಗೆ ಮಾಡಿ ತಿಂದು ಬೋರ್ ಆಗಿದ್ಯಾ? ಡಿಫ್ರೆಂಟ್ ಡಿಫ್ರೆಂಟ್ ಸ್ಟೈಲ್ ಬಿರಿಯಾನಿ(Biryani) ಮಾಡಿ ತಿಂದು ಸಾಕಾಗಿದ್ಯಾ? ಅಸಲಿ ನಾಟಿ ಸ್ಟೈಲ್(Nati Style) ಸಿಂಪಲ್ ಐಟಂ ರೆಸಿಪಿವೊಂದನ್ನು ಟ್ರೈ ಮಾಡಬೇಕು ಅಂತ ಅಂದುಕೊಂಡಿದ್ದೀರಾ? ಹಾಗಿದ್ರೆ ಇಲ್ಲಿ ನೋಡಿ. ಮನೆಯಲ್ಲೇ ಇರುವ ಸಾಮಾಗ್ರಿ ಬಳಸಿ ರುಚಿಯಾದ ಚಿಕನ್ ಐಟಂ ರೆಡಿ ಮಾಡಬಹುದು. ಅದು ಕೇವಲ 20 ನಿಮಿಷದಲ್ಲಿ. ಹೌದು, ಚಿಕನ್ ತರುವವರೆಗೂ ಒಂದು ಕಾತುರ, ತಂದ ಮೇಲೆ ಅಡುಗೆ ಆಗುವವರೆಗೆ ಮತ್ತೊಂದು ಕಾತುರ, ಚಿಕನ್ ಐಟಂ ಮಾಡಲು ಕನಿಷ್ಠ 45 ನಿಮಿಷದಿಂದ 1 ಗಂಟೆ ಸಮಯಬೇಕು. ಅಷ್ಟು ಹೊತ್ತು ಕಾದು ತಿಂದರೆ, ಅದರ ಮಜಾನೇ ಹೋಗಿಬಿಡುತ್ತೆ. ಪಟಾಫಟ್ ಅಂತ ಕೇವಲ 20 ನಿಮಿಷದಲ್ಲಿ ರೆಡಿ ಮಾಡಬಹುದಾದ ಒಂದು ರೆಸಿಪಿ ನಿಮಗಾಗಿ ಇಲ್ಲಿದೆ ನೋಡಿ
ಈರುಳ್ಳಿ ಚಿಕನ್ ಗ್ರೇವಿ, ಅಕ್ಕಿರೊಟ್ಟಿ-ನೀರ್ದೋಸೆ ಜತೆ ಬೆಸ್ಟ್!
ಮಾಂಸಾಹಾರ ಸೇವಿಸುವ ಕುಟುಂಬಗಳಲ್ಲಿ ಕನಿಷ್ಠ ಒಂದಾದರೂ ಕೋಳಿ ಮಾಂಸದ ಅಡುಗೆ ಇದ್ದೇ ಇರುತ್ತದೆ. ಅನ್ನದೊಡನೆ ಬೇಯಿಸಿ ಬಿರಿಯಾನಿಯ ಸವಿ ಒಂದಾದರೆ ತೆಳುವಾದ ಅಕ್ಕಿರೊಟ್ಟಿ ಅಥವಾ ನೀರು ದೋಸೆಯೊಂದಿಗೆ ಖಾರವಾದ ಕೋಳಿಮಾಂಸದ ಸಾರು ಅಥವಾ ಗ್ರೇವಿ ನೆನೆಸಿಕೊಂಡು ಸವಿಯುವುದು ಕರಾವಳಿಯ ಜನರಿಗೆ ಹೆಚ್ಚು ಇಷ್ಟ. ಆದರೆ ಈ ರುಚಿಯನ್ನು ನೀವು ಸವಿಬಹುದು. ಆ ಬಿರಿಯಾನಿ, ಈ ಸ್ಟೈಲ್ ಬಿರಿಯಾನಿ ತಿಂದು ಬೋರ್ ಆಗಿದ್ದವರಿಗೆ. ಈ ಚಿಕನ್ ಈರುಳ್ಳಿ ಗ್ರೇವಿ ಸಖತ್ ಟೇಸ್ಟ್ ನೀಡುತ್ತೆ.
ಇದನ್ನು ಓದಿ:ಮಳೆಗಾಲದ ಈ ಸಂಡೇಗೆ ಸ್ಪೆಷಲ್ ಸ್ಪೈಸಿ ಚಿಕನ್ ಮಸಾಲ ಟ್ರೈ ಮಾಡಿ
ಈರುಳ್ಳಿ ಚಿಕನ್ ಗ್ರೇವಿ ಮಾಡಲು ಬೇಕಿರುವ ಸಾಮಾಗ್ರಿಗಳು
- ಕೋಳಿಮಾಂಸ ( ಐನೂರು ಗ್ರಾಂ ಅಥವಾ ಒಂದು ಕೆಜಿ)
- ಈರುಳ್ಳಿ - ಎರಡು ಕಪ್( ಸಣ್ಣದಾಗಿ ಹೆಚ್ಚಿದ್ದು)
- ಟೊಮಾಟೋ - ಒಂದು ಕಪ್( ಚೆನ್ನಾಗಿ ಹಣ್ಣಾಗಿರುಬೇಕು ಇಲ್ಲದಿದ್ದರೆ ರುಚಿ ಹುಳಿಯಾಗುತ್ತೆ)
-ಶುಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ
-ಹಸಿಮೆಣಸಿನ ಕಾಯಿ : ಐದರಿಂದ ಆರು
-ಮೊಸರು: ಒಂದು ಕಪ್
- ಕೆಂಪು ಮೆಣಸಿನ ಪುಡಿ: ಅರ್ಧ ಚಿಕ್ಕ ಚಮಚ
- ಎಣ್ಣೆ: ಅಗತ್ಯಕ್ಕೆ ತಕ್ಕಂತೆ
- ಉಪ್ಪು: ರುಚಿಗನುಸಾರ
ಚಿಕನ್ ಈರುಳ್ಳಿ ಗ್ರೇವಿ ಮಾಡುವ ವಿಧಾನ
- ಒಂದ ಬಾಣಲೆಯಲ್ಲಿ ಎಣ್ಣೆ ಹಾಕಿ ಇದಕ್ಕೆ ಈರುಳ್ಳಿ ಸುರಿದು ಮಧ್ಯಮ ಉರಿಯಲ್ಲಿ ಕಂದುಬಣ್ಣ ಬರುವವರೆಗೂ ಹುರಿದುಕೊಳ್ಳಿ
- ನಂತರ ಇದಕ್ಕೆ ಈರುಳ್ಳಿ ಮುಳುಗವಷ್ಟು ನೀರು ಹಾಕಿ, ಸುಮಾರು ಐದರಿಂದ ಹತ್ತು ನಿಮಿಷ ಬೇಯಿಸಿ
-ಈಗ ಟೊಮಾಟೋ, ಶುಂಠಿ-ಬೆಳ್ಳುಳ್ಳಿ ಪೇಸ್, ಹಸಿಮೆಣಸು, ಉಪ್ಪು ಹಾಕಿ ಹತ್ತು ನಿಮಿಷ ಬೇಯಲು ಬಿಡಿ
- ಈ ಸಮಯದಲ್ಲಿ ಮತ್ತೊಂದು ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಕೋಳಿ ಮಾಂಸವನ್ನು ಹುರಿದುಕೊಳ್ಳಿ, ಹನ್ನೆರಡು ನಿಮಿಷ ಅಥವಾ ಮಾಂಸ ಅರ್ಧಕ್ಕಿಂತ ಹೆಚ್ಚು ಬೆಂದರೆ ಸಾಕು.
- ಹುರಿದ ಮಾಂಸವನ್ನು ಈರುಳ್ಳಿ ಬೇಯುತ್ತಿರುವ ಪಾತ್ರೆಗೆ ಸುರಿಯಿರಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೊಂಚ ತಿರುವಿ ಉರಿ ಹೆಚ್ಚಿಸಿ ಬೇಯಲು ಬಿಡಿ.
-ಸುಮಾರು ಐದು ನಿಮಿಷದ ಬಳಿಕ ಮಾಂಸ ಬೆಂದಿದೆ ಅನ್ನಿಸಿದಾಗ ಉರಿ ತಗ್ಗಿಸಿ ಮೊಸರನ್ನು ಸೇರಿಸಿ ಕುದಿಯಲು ಬಿಡಿ. ಇನ್ನೂ ಐದು ನಿಮಿಷದ ಬಳಿಕ ಉರಿ ಆರಿಸಿ ಮುಚ್ಚಳ ಕೊಂಚ ತೆರೆದಿಡಿ.
ಇದನ್ನು ಓದಿ : ಸೂಪರ್ ಸಂಡೇಗೆ ಗೌಡರ ಸ್ಪೆಷಲ್ ಚಿಕನ್ ಚಾಪ್ಸ್ ರೆಸಿಪಿ
ಬಳಿಕ ಈ ರುಚಿಯಾದ ಚಿಕನ್ ಈರುಳ್ಳಿ ಗ್ರೇವಿಯನ್ನು ದೋಸೆ, ನೀರು ದೋಸೆ, ಅಕ್ಕಿರೊಟ್ಟಿ, ರಾಗಿ ರೊಟ್ಟು ಜೊತೆ ಸವಿಯಿರಿ. ಎಲ್ಲ ರೀತಿಯ ಸ್ಟೈಲ್ಗಳಲ್ಲೂ ಚಿಕನ್ ಮಾಡಿ ತಿಂದು ಬೋರ್ ಆಗಿದ್ದರೆ. ಈ ರೆಸಿಪಿ ಟ್ರೈ ಮಾಡಿ, ತಿನ್ನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ