Sunday Special Recipe: ಸೂಪರ್ ಸಂಡೇಗೆ ಗೌಡರ ಸ್ಪೆಷಲ್ ಚಿಕನ್ ಚಾಪ್ಸ್ ರೆಸಿಪಿ

Chicken Chops: ಇದನ್ನು ಗೋಡಂಬಿ ಬೀಜಗಳು, ಗಸಗಸೆ ಬೀಜಗಳನ್ನು ತುಪ್ಪದಲ್ಲಿ ಹುರಿದು ವಿಭಿನ್ನವಾಗಿ ಮಾಡಲಾಗುತ್ತದೆ.ಅಲ್ಲದೇ ಅಷ್ಟೇ ರುಚಿಕರ ಕೂಡ. ಇದನ್ನು ಬಾಣಂತಿ ಆಹಾರ ಎಂದು ಹೇಳಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾನುವಾರ(Sunday) ಬಂತು ಅಂದ್ರೆ ಸಾಕು ನಾನ್​ವೆಜ್​ (Non Veg)ಮಾಡದೇ ಇರೋದಕ್ಕೆ ಸಾಧ್ಯವಿಲ್ಲ. ಪ್ರತಿಬಾರಿ ಏನಾದರೂ ವಿಶೇಷವಾಗಿ ಮಾಡುವ ಎನ್ನುವುದು ಹಲವಾರ ಯೋಚನೆ. ಈ ಸಂಡೇ ಚಿಕನ್ ಚಾಪ್​(Chicken Chops) ಮಾಡಿದ್ರೆ ಹೇಗಿರುತ್ತೆ. ಚಿಕನ್ ಚಾಪ್ ಮೊಘಲ್(Mughal) ಪಾಕಪದ್ಧತಿಯ ಒಂದು  ಆಹಾರ ಪದ್ಧತಿ. ಇದನ್ನು ಗೋಡಂಬಿ ಬೀಜಗಳು, ಗಸಗಸೆ ಬೀಜಗಳನ್ನು ತುಪ್ಪದಲ್ಲಿ ಹುರಿದು ವಿಭಿನ್ನವಾಗಿ ಮಾಡಲಾಗುತ್ತದೆ.ಅಲ್ಲದೇ ಅಷ್ಟೇ ರುಚಿಕರ ಕೂಡ. ಇದನ್ನು ಬಾಣಂತಿ ಆಹಾರ ಎಂದು ಹೇಳಲಾಗುತ್ತದೆ. ಆದ್ರೆ ಮಕ್ಕಳಿಂದ ಹಿಡಿದು  ದೊಡ್ಡವರವೆರೆಗೂ ಚಿಕನ್ ಚಾಪ್ಸ್ ರುಚಿ ಇಷ್ಟವಾಗುತ್ತದೆ. ಹಾಗಾಧ್ರೆ ಚಿಕನ್ ಚಾಪ್ ಮನೆಯಲ್ಲಿ ಮಾಡೋದು ಹೇಗೆ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಚಿಕನ್- 1/2 ಕೆಜಿ ,

ಕೊತ್ತಂಬರಿ ಸೊಪ್ಪು - 1ಕಟ್ಟು

ಪುದಿನಾ ಸೊಪ್ಪು -1ಕಟ್ಟು

ಈರುಳ್ಳಿ- 4 ರಿಂದ 5

ಬೆಳ್ಳುಳ್ಳಿ- 2 ಎಸಳು

ಹಸಿಮೆಣಸಿನಕಾಯಿ -5,

ಮೆಣಸಿನ ಪುಡಿ -2 ಟೀಸ್ಪೂನ್,

ಧನಿಯಾ - 2 ಟೀಸ್ಪೂನ್,

ಹಸಿಶುಂಠಿ - 1ಇಂಚು

ಗೋಡಂಬಿ-10 ರಿಂದ 12

ಗಸಗಸ ಬೀಜ -1 ಟೀ ಚಮಚ

ಟೊಮೋಟೊ -1

ಇದನ್ನೂ ಓದಿ: ಸೂಪರ್ ಸಂಡೇಗೆ ಚಿಕನ್ ಮಿರ್ಚಿ ಟ್ರೈ ಮಾಡಿ

ಚಿಕನ್ ಚಾಪ್ಸ್ ಮಾಡುವ ವಿಧಾನ

ಮೊದಲು ಅಂಗಡಿಯಿಂದ ತಂಝದ ಚಿಕನ್ ಅನ್ನು ಸರಿಯಾಗಿ ತೊಳೆದುಕೊಳ್ಳಿ. ಚಿಕನ್ ತೊಳೆಯುವುದು ಅಡುಗೆಯನ್ನು ಮಾಡುವುದಕ್ಕಿಂತ ದೊಡ್ಡ ಸಾಹಸದ ಕೆಲಸ ಎಂದರೆ ತಪ್ಪಾಗಲಾರದು. ಹಾಗಾಗಿ ನಾಜೂಕಿನಿಂದ ಸ್ವಲ್ಪವೂ ನೀರು ಉಳಿದುಕೊಳ್ಳದಂತೆ ತೊಳೆಯಿರಿ.

ನಂತರ ಒಂದು ಬಾಣಲಿಯನ್ನು ತೆಗೆದುಕೊಂಡು ಅದಕ್ಕೆ ಈರುಳ್ಳಿ ಸಣ್ಣದಾಗಿ ಹೆಚ್ಚಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಮೆಣಸು, ಧನಿಯಾ, ಹಸಿಮೆಣಸಿನಕಾಯಿ, ಹಸಿಶುಂಠಿ, ಬೆಳ್ಳುಳ್ಳಿ ಎಲ್ಲವನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಿ. ಅಲ್ಲದೇ ಸಣ್ಣ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಅದರಲ್ಲಿ ಗೋಡಂಬಿ ಮತ್ತು ಗಸಗಸೆ ಬೀಜವನ್ನು ಹಾಕಿ ಹುರಿದುಕೊಳ್ಳಿ.

ಎಲ್ಲವೂ ಸರಿಯಾಗಿ ತಣ್ಣಗಾದ ನಂತರ ಮಿಕ್ಸಿಯಲ್ಲಿ ಇವೆಲ್ಲವನ್ನು ಹಾಕಿ ಕೊತ್ತಂಬರಿ ಸೊಪ್ಪು ಮತ್ತು ಪುದಿನಾ ಸೊಪ್ಪಿನ ಜೊತೆ ರುಬ್ಬಿಕೊಳ್ಳಿ. ಒಂದು ರೌಂಡ್ ರುಬ್ಬಿಕೊಂಡ ಮಿಶ್ರಣಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಗಸಗಸೆ ಬೀಜವನ್ನು ಹಾಕಿ ಮಿಕ್ಸಿ ಮಾಡಿ.  ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ಬೇಕಾದಷ್ಟು ಮಾತ್ರ ನೀರನ್ನು ಹಾಕಿ. ಹೆಚ್ಚು ನೀರು ಹಾಕಿದರೆ ಸರಿಯಾಗಿ ಮಿಕ್ಸಿಯಾಗುವುದಿಲ್ಲ.

ಮಿಕ್ಸಿ ಮಾಡಿದ ನಂತರ ಕುಕ್ಕರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಚಿಕನ್ ಹುರಿದುಕೊಳ್ಳಿ. ಸರಿಯಾಗಿ ಹುರಿದ ನಂತರ ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಚಿಕನ್ ಜೊತೆಗೆ ಬೆರೆಸಿ ಕುದಿಸಲು ಪ್ರಾರಂಭಿಸಿ. ಅದು ಕುದಿಯುವಾಗ ಮಿಶ್ರಣ ಚಿಕನ್ ಜೊತೆ ಸರಿಯಾಗಿ ಹೊಂದಿಕೊಳ್ಳಬೇಕು.

ಇದನ್ನೂ ಓದಿ: ಸೂಪರ್ ಸಂಡೇಗೆ ಮಟನ್ ಕೂರ್ಮಾ ರೆಸಿಪಿ ಇಲ್ಲಿದೆ..

ಈ ಸಮಯದಲ್ಲಿ ಟೊಮೊಟೊ ರುಬ್ಬಿಕೊಂಡು ಅದಕ್ಕೆ ಮಿಶ್ರಣ ಮಾಡಿ. ಈ ಮಧ್ಯೆ ಒಮ್ಮೆ ರುಚಿ ನೋಡಿ, ಸರಿಯಾಗಿ ಉಪ್ಪು ಸೇರಿಸಿ, ನಂತರ ಕುಕ್ಕರ್ ಮುಚ್ಚಿ. ಅಲ್ಲದೇ ಬೇರೆ ಯಾವುದಾದರು ಪದಾರ್ಥ ಬೇಕಿಂದರೆ ಅದನ್ನು ಹಾಕಿ. ಕುಕ್ಕರ್​ ಅನ್ನು ಒಂದು ಕೂಗು ಕೂಗಿಸಿದರೆ ಟೀಸ್ಟಿ ಚಿಕನ್ ಚಾಪ್ ರೆಡಿ. ಇದನ್ನು ಚಪಾತಿ, ಅನ್ನ ಯಾವುದರ ಜೊತೆ ಬೇಕಾದರು ಸೇವನೆ ಮಾಡಬಹುದು. ಇದರಲ್ಲಿ ಗೋಡಂಬಿ ಹಾಕಿರುವುದು ಹೆಚ್ಚಿನ ರುಚಿ ನೀಡುತ್ತದೆ.
Published by:Sandhya M
First published: