Non-Veg Recipe: ಕೊಡಗಿನ ಶೈಲಿಯ ರುಚಿಕರ ಸ್ಪೆಷಲ್ ಚಿಕನ್ ಫ್ರೈ, ಓಮ್ಮೆ ಟ್ರೈ ಮಾಡಿ

ಭಾನುವಾರ ಮನೆಯಲ್ಲಿ ಯಾವ ನಾನ್​ ವೆಜ್​ ಅಡುಗೆ ಮಾಡೋದು ಅಂತ ಚಿಂತೆ ಮಾಡ್ತಾ ಇದ್ದೀರಾ? ಈ ಕೊಡಗಿನ ವಿಶೇಷ ಫ್ರೈ ಚಿಕನ್ ರೆಸಿಪಿಯನ್ನು ಇಲ್ಲಿ ನೀಡುತ್ತಿದ್ದೇವೆ. ಮನೆಯಲ್ಲೇ ಈ ಫ್ರೈ ಮಾಡಿ ನೋಡಿ.

ಚಿಕನ್ ಫ್ರೈ

ಚಿಕನ್ ಫ್ರೈ

  • Share this:
ಭಾನುವಾರ (Sunday)ಬಂತು ಅಂದ್ರೆ ಸಾಕು ಭಾನುವಾರದ ಬಾಡೂಟ (Non Veg food)ಮಾಡೋಕೆ ನಾನ್ ವೆಜ್ (Non vegetarian)ಪ್ರಿಯರು ರೆಡಿ ಆಗಿರ್ತಾರೆ.. ಹೀಗಾಗಿ ಕೆಲವ್ರು ಹೋಟೆಲ್ ಗಳಿಗೆ (Hotel)ಹೋಗಿ ತಮ್ಮ ಭಾನುವಾರದ ಬಾಡೂಟ ಮಾಡಲು ವಿವಿಧ ಭೋಜನಗಳನ್ನು (Food) ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ಕೆಲವರಿಗೆ ಮನೆಯಲ್ಲಿ ನಾನ್​ ವೆಜ್ ತಿಂದಷ್ಟು ತೃಪ್ತಿ ಆಗುವುದಿಲ್ಲ. ಹೀಗಾಗಿಯೇ ನಿಮ್ಮ ಭಾನುವಾರವನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ಅಡುಗೆ ಮಾಡಿಕೊಂಡು ತಿನ್ನಲು ಮನೆಯಲ್ಲಿಯೇ (Home) ವಿವಿಧ ಬಗೆಯ ಮಾಂಸಹಾರಿ ಅಡುಗೆಗಳನ್ನು ಮಾಡಿಕೊಳ್ಳಬಹುದು. ಅದರಲ್ಲೂ ಕೂರ್ಗಿಸ್​ ಶೈಲಿಯ  (Style)  ಚಿಕನ್ ಫ್ರೈ ಮಾಡಿಕೊಂಡು ತಿಂದು ನೋಡಿ.

ಸಾಮಾಗ್ರಿಗಳು:

ಕೊತ್ತಂಬರಿ ಬೀಜ - 1 ಸ್ಪೂನ್

ಕರಿಮೆಣಸು - 10

ಜೀರಿಗೆ ಬೀಜ - 1 ಸ್ಪೂನ್

ಸಾಸಿವೆ - 1 ಸ್ಪೂನ್

ದಾಲ್ಚೀನಿ ಕಡ್ಡಿಗಳು - 1 ಇಂಚು

ಲವಂಗ - 5

ಚಿಕನ್ - 500 ಗ್ರಾಂ

ಈರುಳ್ಳಿ - 2 (ಕತ್ತರಿಸಿದ್ದು)

ಬೆಳ್ಳುಳ್ಳಿ ಎಸಳು - 5 (ಕತ್ತರಿಸಿದ್ದು)

ಕಾಚಂಪುಳಿ (ಕೊಡಗಿನ ವಿನೇಗರ್) - 2 ಸ್ಪೂನ್

ಮೆಣಸಿನ ಹುಡಿ - 1 ಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಎಣ್ಣೆ - 2 ಸ್ಪೂನ್

ಇದನ್ನೂ ಓದಿ: ವೀಕೆಂಡ್ ಸ್ಪೆಷಲ್ ಮಲಬಾರ್ ಧಮ್ ಬಿರಿಯಾನಿ ಮನೆಯಲ್ಲಿಯೇ ಮಾಡೋದು ಹೇಗೆ ಗೊತ್ತಾ..?

ಮಾಡುವ ವಿಧಾನ:

ಕೊತ್ತಂಬರಿ ಬೀಜಗಳು, ಜೀರಿಗೆ ಬೀಜಗಳು, ಸಾಸಿವೆ, ಕರಿಮೆಣಸುನ ಕಾಳು, ದಾಲ್ಚೀನಿ, ಲವಂಗ ಈ ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರ್‌ನಲ್ಲಿ ರುಬ್ಬಿಕೊಳ್ಳಿ. ಪೌಡರ್‌ನಂತೆ ಇವನ್ನು ರುಬ್ಬಿಕೊಳ್ಳಿ.

ಈ ಮೇಲೆ ತಿಳಿಸಿದ ಮಸಾಲೆ ವಿಶೇಷ ಕೊಡವ ಗರಂ ಮಸಾಲೆಯಾಗಿದ್ದು ಈ ಸಾಂಬಾರು ಪದಾರ್ಥಗಳನ್ನು ಮನೆಯಲ್ಲೇ ಬೆಳಸುವಂತಹದ್ದು, ನೀವು ಇವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಮನೆಯಲ್ಲೇ ಮಸಾಲೆ ತಯಾರಿಸಿಕೊಳ್ಳಬಹುದು.

ಚಿಕನ್ ಅನ್ನು ಈ ಕಡೆದ ಗರಂ ಮಸಾಲೆಯಲ್ಲಿ 1 ಗಂಟೆಯಷ್ಟು ಕಾಲ ಮುಳುಗಿಸಿಡಿ ಹಾಗೂ ಉಪ್ಪು ಸೇರಿಸಿ. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ.

ನೀವು ಈಗ ಮಸಾಲೆಯ ಸ್ವಲ್ಪ ಪ್ರಮಾಣದಿಂದ ಒಗ್ಗರಣೆ ಮಾಡಿಕೊಳ್ಳಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ. ಈರುಳ್ಳಿ ಕೆಂಪಗಾಗುವವರೆಗೂ ಅದನ್ನು ಹುರಿಯಿರಿ. ನಂತರ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.

ಇದನ್ನೂ ಓದಿ: ಸಿಂಪಲ್​​ ಈರುಳ್ಳಿ ಚಿಕನ್​ ಗ್ರೇವಿ: 20 ನಿಮಿಷದಲ್ಲೇ ರೆಡಿ, ಕೊಂಚ ಖಾರ-ಸಖತ್​ ರುಚಿ​!

ಮುಳುಗಿಸಿಟ್ಟ ಚಿಕನ್ ತುಂಡುಗಳನ್ನು ಪ್ಯಾನ್‌ಗೆ ಹಾಕಿ. 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇದನ್ನು ಫ್ರೈ ಮಾಡಿ. ಪ್ಯಾನ್‌ಗೆ ಸ್ವಲ್ಪ ವಿನೇಗರ್ ಹಾಕಿ. ಮುಚ್ಚಿ 5 ನಿಮಿಷಗಳಷ್ಟು ಕಾಲ ಬೇಯಿಸಿ. ಈರುಳ್ಳಿ ರಿಂಗ್ ಮತ್ತು ಹಸಿರು ಸಲಾಡ್‌ಗಳೊಂದಿಗೆ ಬಿಸಿ ಬಿಸಿಯಾಗಿ ಕೊಡವ ಚಿಕನ್ ಕರಿಯನ್ನು ಸವಿಯಲು ನೀಡಿ. ಚಪಾತಿ ಮತ್ತು ಅನ್ನದೊಂದಿಗೂ ಇದು ಉತ್ತಮ ಕಾಂಬಿನೇಶನ್.

ಚಿಕನ್ ಪೊಟ್ಯಾಟೊ (ಆಲೂಗಡ್ಡೆ) ಕಬಾಬ್ ಮಾಡುವ ವಿಧಾನ:

ಚಿಕನ್ ಆಲೂಗಡ್ಡೆ ಕಬಾಬ್ ಅನ್ನು ಹೇಗೆ ತಯಾರಿಸುವುದು ಎಂದು ಇಲ್ಲಿ ನೋಡಿಕೊಳ್ಳಿರಿ. ಈ ಪಾಕ ವಿಧಾನವನ್ನು ಪ್ರಾರಂಭಿಸಲು, ಮೊದಲು ಒಂದು ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆ ಮತ್ತು ಬೇಯಿಸಿದ ಚಿಕನ್ ಅನ್ನು ಅದಕ್ಕೆ ಸೇರಿಸಿ ಅವುಗಳನ್ನು ಸರಿಯಾಗಿ ಕಲಸಿ ಕೊಳ್ಳಿ. ಈಗ ಒಂದು ಟೇಬಲ್ ಚಮಚದಷ್ಟು ಗರಂ ಮಸಾಲ, ಉಪ್ಪು, ಹುರಿದ ಜೀರಾ ಪುಡಿ, ಕಾಲಿ ಮಿರ್ಚ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗಳನ್ನು ಅದರಲ್ಲಿ ಸೇರಿಸಿಕೊಳ್ಳಿ.

ಎಲ್ಲವೂ ಮಿಶ್ರಣ ಮಾಡಿದ ನಂತರ, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳನ್ನು ಅದಕ್ಕೆ ಸೇರಿಸಿ ಮತ್ತು ಎಲ್ಲವನ್ನೂ ಮತ್ತೆ ಮಿಶ್ರಣ ಮಾಡಿಕೊಳ್ಳಿರಿ. ನಂತರ 10 ರಿಂದ 15 ನಿಮಿಷಗಳ ಕಾಲ ಆ ಮಿಶ್ರಣವನ್ನು ನಿಮ್ಮ ಫ್ರಿಜ್‌ ನಲ್ಲಿಡಿ. ಸ್ವಲ್ಪ ಸಮಯದ ನಂತರ ಆ ಕಬಾಬ್ ಮಿಶ್ರಣವನ್ನು ಹೊರಕ್ಕೆ ತೆಗೆದಿಡಿ. ನಂತರ ಅದಕ್ಕೆ ಒಂದು ದುಂಡನೆಯ ಆಕಾರ ನೀಡಿ ಎಲ್ಲಾ ಟಿಕ್ಕಿಗಳನ್ನು ಎಣ್ಣೆಯಲ್ಲಿ ಹಾಕಿಕೊಂಡು ಡೀಪ್ ಆಗಿ ಫ್ರೈ ಮಾಡಿ ಮತ್ತು ನಿಮ್ಮ ಕಬಾಬ್‌ಗಳು ಸೇವಿಸಲು ಸಿದ್ಧವಾಗಿರುತ್ತವೆ. ನಿಮ್ಮ ಮನೆಯವರಿಗೂ ಇಷ್ಟವಾಗುತ್ತೆ
Published by:Pavana HS
First published: