ನೀವು ರೆಸ್ಟೋರೆಂಟ್‌ಗಳಲ್ಲಿ ತಂದೂರಿ ಚಿಕನ್ (Chikken) ಅನ್ನು ತಿನ್ನುವಾಗ ಅವರು ಅದನ್ನು ಹೇಗೆ ಬೇಯಿಸುತ್ತಾರೆ ಎಂದು ನೀವು ಯೋಚಿಸಿರಬಹುದು. ಅದಕ್ಕೆ ಹಾಕುವ ಮಸಾಲಾ (Masala) ಮಾತ್ರ ರಹಸ್ಯ. ಈ ಪೋಸ್ಟ್‌ನಲ್ಲಿ (Post) ಆ ಮಸಾಲವನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವುದು ಹೇಗೆ ಎಂದು ನೀವು ತಿಳಿಯಬಹುದು. ತಯಾರಿಯ ಬಗ್ಗೆ ಇರುವ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದರಂತೆ ನೀವೂ ತಂದೂರಿ ತಯಾರಿಸಿ ಭರ್ಜರಿ ಹೊಸದೊಡಕು ಊಟ (Food) ಮಾಡಿ. ಇದ್ರ ಜೊತೆ ಒಂದು ಸಖತ್ ಕಾಂಬಿನೇಶನ್ ಇಲ್ಲಿದೆ ನೋಡಿ
ಈ ಹೊಸದೊಡಕು ಊಟಕ್ಕೆ ಗಮ್ಮತ್ತಾಗಿರುವ ಒಂದು ಭರ್ಜರಿ ಊಟ ಎಂದ್ರೆ ಅದರಲ್ಲಿ ನಾನ್ವೆಜ್ ಇರ್ಲೇ ಬೇಕು. ಅದಕ್ಕೆ ತಕ್ಕಂತೆ ನೀವು ತಂದೂರಿ ತಯಾರಿಸಲು ಬೇಕಿರುವ ಎಲ್ಲಾ ಸಾಮಗ್ರಿಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಅಗತ್ಯವಿರುವ ವಸ್ತುಗಳು
ಮಸಾಲೆ ಪುಡಿ - 4 ಟೀಸ್ಪೂನ್
ಕೆಂಪು ಒಣ ಮೆಣಸಿನಕಾಯಿ - 7
ಜೀರಿಗೆ - 1 tbsp
ಮೆಂತ್ಯ - 1 tbsp
ಮೆಣಸು - 1 tbsp
ಇದನ್ನೂ ಓದಿ: Skin Care: ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಲಾಜನ್ ಇರುವ ಈ ಆಹಾರಗಳನ್ನು ಸೇವಿಸಿ!
ಕಪ್ಪು ಏಲಕ್ಕಿ - 4
ಲವಂಗ - 15
ಜಾಯಿಕಾಯಿ ಸಿಪ್ಪೆ - 4
ಜಾಯಿಕಾಯಿ - 1
ತಿಪ್ಪಿಲಿ - 3 ಗ್ರಾಂ
ಅರಿಶಿನ ಪುಡಿ - 1 tbsp
ಶುಂಠಿ ಪುಡಿ - 1 tbsp
ಚಿಕನ್
ಇದನ್ನು ಹೊರತು ಪಡಿಸಿ ಈ ಸಾಮಗ್ರಿಗಳನ್ನೂ ಸಹ ಬಳಸಬಹುದು
1/2 ಕೆಜಿ ಚಿಕನ್ 1/2 ಕಪ್ ಗ್ರೀಕ್ ಯೋಗರ್ಟ್ 3/4 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1ಚಮಚ ಗರಂ ಮಸಾಲ 1 ಚಮಚ ಖಾರದ ಪುಡಿ (ಕಾಶ್ಮೀರಿ ಅಥವಾ ಬ್ಯಾಡಗಿ) 1/4 ಚಮಚ ತರಿತರಿ ಪುಡಿ ಮಾಡಿದ ಕಾಳು ಮೆಣಸಿನ ಪುಡಿ 1 ಚಮಚ ಕೊತ್ತಂಬರಿ ಪುಡಿ 1/4 ಚಮಚ ಉಪ್ಪು 1/4 ಚಮಚ ಅರಿಶಿಣ ಪುಡಿ 1 ಚಮಚ ಕಸೂರಿ ಮೇತಿ 1 ಚಮಚ ನಿಂಬೆರಸ 11/2 ಚಮಚ ಎಣ್ಣೆ
ಪಾಕ ವಿಧಾನ
1) ಚಿಕನ್ ಸರಿಯಾಗಿ ತೊಳದಿಟ್ಟು ಕೊಳ್ಳಿ, ನಂತರ ಅದನ್ನು ಬೇಯಿಸಿ
2. ಮಿಕ್ಸ್ ಜಾರ್‌ನಲ್ಲಿ ಮೇಲಿನ ಎಲ್ಲವನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ.
3. ನಂತರ ಅವೆಲ್ಲವನ್ನೂ ಸೆಂಟರ್ ಮಿಲ್ ಮಾಡಬೇಕು.
4. ಒಂದು ಜರಡಿಯಲ್ಲಿ ಅದನ್ನು ಪುಡಿಮಾಡಿ ಮತ್ತು ಸೋಸಿ, ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ರುಬ್ಬಬೇಕು.
5. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ನೀವು ತಂದೂರಿ ಚಿಕನ್ ಮಾಡುವಾಗ ಇದನ್ನು ಬಳಸಿ. ಮಸಾಲೆಯನ್ನು ಖರೀದಿಸಿ ಅಡುಗೆ ಮಾಡಿದರೂ ಅದರ ರುಚಿ ಸಿಗುವುದಿಲ್ಲ.
ಅಥವಾ ಈ ರೀತಿಯೂ ಮಾಡಬಹುದು
ಮೊದಲಿಗೆ ಚಿಕನ್ ಅನ್ನು ಮಿಕ್ಸ್ ಮಾಡಿಡಿ, ಅದಕ್ಕೆ ಈ ಮಿಶ್ರಣ ರೆಡಿ ಮಾಡಿ. ಒಂದು ಬೌಲ್‌ಗೆ ಮೊಸರು ಹಾಕಿ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಪುಡಿ, ಖಾರದ ಪುಡಿ, ಉಪ್ಪು, ಅರಿಶಿಣ ಪುಡಿ, ಕಸೂರಿ ಮೇತಿ, ಖಾರದ ಪುಡಿ,ಕೊತ್ತಂಬರಿ ಪುಡಿ ಹಾಕಿ. ನಂತರ ಸ್ವಲ್ಪ ಎಣ್ಣೆ ಹಾಗೂ ನಿಂಬೆರಸ ಹಾಕಿ ಮಿಕ್ಸ್ ಮಾಡಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಮಿಶ್ರಣ ಗಟ್ಟಿಯಾಗಿರಬೇಕು. ಈಗ ರುಚಿಗೆ ತಕ್ಕ ಉಪ್ಪು, ಮೆಣಸಿನ ಪುಡಿ ಸೇರಿಸಿ. ಈಗ ಚಿಕನ್ ಪೀಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಡಿ. ಮಸಾಲೆ ಮಿಕ್ಸ್ ಚಿಕನ್ ಅನ್ನು 6 ಗಂಟೆ ಫ್ರಿಡ್ಜ್‌ನಲ್ಲಿಡಿ. ನಂತರ ಓವನ್ ಅಥವಾ ಸೌದೆ ಒಲೆಯಲ್ಲಿ ಇದನ್ನು ಬೇಯಿಸಿ ತಿನ್ನಿ. ಹೀಗೆ ಮಾಡಿದರೆ ಸ್ಪೈಸಿಯಾದ ರುಚಿಕರವಾದ ತಂದೂರಿ ತಿನ್ನಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ