Soursop Benefits: ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ ಈ ಹಣ್ಣು, ಇಲ್ಲಿದೆ ಹನುಮಂತ ಫಲದ ಪ್ರಯೋಜನಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಲವಾದ ಮತ್ತು ಅದ್ಭುತವಾದ ಆರೋಗ್ಯ ಪ್ರಯೋಜನ ನೀಡುವ ಹನುಮಂತ ಫಲವನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಇದು ಉತ್ತಮ ರುಚಿ ಮತ್ತು ಶಕ್ತಿಯುತ ಆರೋಗ್ಯ ಪ್ರಯೋಜನ ಹೊಂದಿದೆ. ಇಂದು ನಾವು ಹನುಮಂತ ಫಲ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ ಎಂಬುದನ್ನು ತಿಳಿಯೋಣ.

  • Share this:

    ಜಗತ್ತಿನಲ್ಲಿ (World) ಹಲವು ರೀತಿಯ ಹಣ್ಣುಗಳಿವೆ (Fruits). ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಹಣ್ಣುಗಳ ಬಳಕೆ ಹೆಚ್ಚು ಕಂಡು ಬರುತ್ತದೆ. ಹಣ್ಣುಗಳ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನ (Health Benefits) ಸಿಗುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವು ವಿಶಿಷ್ಟ ರೀತಿಯ ಹಣ್ಣುಗಳಿವೆ. ಅವುಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಕೆಲವು ಹಣ್ಣುಗಳ ಸೇವನೆ ಕ್ಯಾನ್ಸರ್ (Cancer) ಸೇರಿದಂತೆ ಹಲವು ಕಾಯಿಲೆಗಳ (Diseases) ನಿವಾರಣೆಗೆ ಪ್ರಯೋಜನಕಾರಿ ಆಗಿವೆ. ವಿವಿಧ ರೀತಿಯ ಹಣ್ಣುಗಳಲ್ಲಿ ದಿನವೂ ಸೇಬು, ಬಾಳೆಹಣ್ಣು, ದ್ರಾಕ್ಷಿ ಮತ್ತು ಕಿತ್ತಳೆ ಎಲ್ಲರೂ ಸೇವನೆ ಮಾಡುತ್ತಾರೆ. ಹೆಚ್ಚಿನ ಜನರಿಗೆ ಈ ಹಣ್ಣುಗಳ ಪ್ರಯೋಜನಗಳ ಬಗ್ಗೆ ಮಾತ್ರ ಗೊತ್ತಿದೆ.


    ಹನುಮಂತ ಫಲದ ಆರೋಗ್ಯ ಪ್ರಯೋಜನಳು


    ಆದರೆ ಆರೋಗ್ಯಕ್ಕೆ ಹೆಚ್ಚಿನ ಹಾಗೂ ಅದ್ಭುತ ಪ್ರಯೋಜನ ನೀಡುವ ಹಣ್ಣುಗಳಿವೆ. ಅದರಲ್ಲಿ ರಾಮ ಫಲ, ಲಕ್ಷ್ಮಣ ಫಲ, ಸೀತಾ ಫಲ ಮತ್ತು ಹನುಮಂತ ಫಲಗಳು ಸೇರಿವೆ. ಇಂದು ನಾವು ಹನುಮಂತ ಫಲ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ ಎಂಬುದನ್ನು ತಿಳಿಯೋಣ.


    ಬಲವಾದ ಮತ್ತು ಅದ್ಭುತವಾದ ಆರೋಗ್ಯ ಪ್ರಯೋಜನ ನೀಡುವ ಹನುಮಂತ ಫಲವನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಇದು ಉತ್ತಮ ರುಚಿ ಮತ್ತು ಶಕ್ತಿಯುತ ಆರೋಗ್ಯ ಪ್ರಯೋಜನ ಹೊಂದಿದೆ. ಇದರ ವೈಜ್ಞಾನಿಕ ಹೆಸರು ಅನ್ನೋನಾ ಮುರಿಕಟಾ (Annona muricate) ಆಗಿದೆ.




    ಅದಾಗ್ಯೂ ಹನುಮಂತ ಫಲವನ್ನು ವಿವಿಧ ಪ್ರದೇಶಗಳ ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಗುನಾಬನಾ, ಪಾವ್ ಪಾವ್, ಗ್ರೇವಿಯೋಲಾ ಎಂದು ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಸೀತಾಫಲ ಕುಟುಂಬಕ್ಕೆ ಸೇರಿದ ಹಣ್ಣು ಎಂದು ಹೇಳಲಾಗಿದೆ.


    ಹನುಮಂತ ಫಲದಲ್ಲಿರುವ ಪೋಷಕಾಂಶಗಳು


    ಈ ದೊಡ್ಡ ಅಂಡಾಕಾರದ ಹಣ್ಣಿನ ಹೊರಭಾಗವು ಹಸಿರು ಬಣ್ಣದಿಂದ ಕೂಡಿದೆ. ಒಳಭಾಗವು ಬಿಳಿಯಾಗಿದೆ. ಹಣ್ಣಿನ ಮೇಲೆ ಮುಳ್ಳುಗಳಿವೆ. ಹನುಮಾನ್ ಹಣ್ಣು ವಿಟಮಿನ್ ಸಿ ಯ ಉಗ್ರಾಣ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ.


    ಈ ಹಣ್ಣು ಮತ್ತು ಅದರ ಎಲೆಗಳಲ್ಲಿ ಫೈಟೊಸ್ಟೆರಾಲ್‌ಗಳು, ಟ್ಯಾನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಿವೆ. ಉತ್ಕರ್ಷಣ ನಿರೋಧಕಗಳು ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ವಿವಿಧ ಆರೋಗ್ಯ ಸಮಸ್ಯೆಯಿಂದ ರಕ್ಷಿಸಲು ಸಹಕಾರಿ.


    ಹನುಮಂತ ಫಲದ ಸೇವನೆ ಜೀರ್ಣಕ್ರಿಯೆ ಸರಿಪಡಿಸುತ್ತದೆ


    ಹನುಮಂತ ಫಲದ ಸೇವನೆಯಿಂದ ಫೈಬರ್‌ ಸಿಗುತ್ತದೆ. ಜೀರ್ಣಕ್ರಿಯೆಯ ಆರೋಗ್ಯಕ್ಕೆ ಫೈಬರ್ ಅತ್ಯಗತ್ಯ. ಫೈಬರ್ ಜೀರ್ಣಕ್ರಿಯೆ ಮತ್ತು ಕರುಳಿನ ಕಾರ್ಯವನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆ ಜೀರ್ಣಕಾರಿ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ


    ಹನುಮಂತ ಫಲವು ಕ್ಯಾನ್ಸರ್ ನಿವಾರಕ ಗುಣ ಹೊಂದಿದೆ. ಇದರ ಬಳಕೆಯು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ನೀಡುತ್ತದೆ. ಹನುಮಂತ ಫಲವು ಸ್ತನ ಕ್ಯಾನ್ಸರ್ ಗೆಡ್ಡೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ಕ್ಯಾನ್ಸರ್ ಕೋಶಗಳನ್ನು ನಿವಾರಿಸುತ್ತದೆ. ಹಣ್ಣಿನ ರಸವು ಲ್ಯುಕೇಮಿಯಾ ಕೋಶಗಳು ರೂಪುಗೊಳ್ಳುವುದನ್ನು ತಡೆಯುತ್ತದೆ.


    ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ


    ಹನುಮಂತ ಫಲವು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದರ ರಸವು ಕುಳಿಗಳು ಮತ್ತು ವಸಡು ರೋಗ ಉಂಟು ಮಾಡುವ ಬ್ಯಾಕ್ಟೀರಿಯಾ ಕೊಲ್ಲುತ್ತದೆ. ಕಾಲರಾ ವಿರುದ್ಧವೂ ಪರಿಣಾಮಕಾರಿಯಾಗಿದೆ.


    ಉರಿಯೂತ ಕಡಿಮೆ ಮಾಡುತ್ತದೆ


    ಈ ಹಣ್ಣಿನಲ್ಲಿ ಉರಿಯೂತ ಶಮನಕಾರಿ ಗುಣವಿದೆ. ಇದು ದೀರ್ಘಕಾಲದ ಕಾಯಿಲೆಗಳ ಉರಿಯೂತ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ದೇಹದ ಆರೋಗ್ಯ ಕಾಪಾಡುವ ಸೌತೆಕಾಯಿ ಸೌಂದರ್ಯವನ್ನೂ ಹೆಚ್ಚಿಸುತ್ತದೆ!


    ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ


    ಹನುಮಂತ ಫಲವು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ತಿನ್ನುವುದು ಮತ್ತು ಸಕ್ರಿಯ ಜೀವನಶೈಲಿಯು ಮಧುಮೇಹ ರೋಗಿಗಳಿಗೆ ಪ್ರಯೋಜನ ನೀಡುತ್ತದೆ.

    Published by:renukadariyannavar
    First published: