Sour Curd: ಹುಳಿ ಮೊಸರನ್ನು ಎಸೆಯುವ ಅಭ್ಯಾಸ ಇದ್ರೆ ಈಗಲೇ ನಿಲ್ಲಿಸಿ, ಈ ಆಹಾರ ಪದಾರ್ಥಗಳನ್ನು ತಯಾರಿಸಿ..

Food Recipe: ಮೊಸರು ಹುಳಿಯಾಗಿದ್ದರೆ, ಹೆಚ್ಚಿನ ಜನರು ಅದನ್ನು ಕಸದ ತೊಟ್ಟಿಗೆ ಎಸೆಯುತ್ತಾರೆ. ಮೊಸರು ಹುಳಿಯಾಗುತ್ತದೆ ಏಕೆಂದರೆ, ಬ್ಯಾಕ್ಟೀರಿಯಾಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ಹಾಲಿನ ಒಳಗೆ ಹೆಚ್ಚು ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊಸರಿನಷ್ಟು(Curd) ರುಚಿಯಾದ ಮತ್ತು ಹಿತವಾದ ಆಹಾರ ಪದಾರ್ಥ ಇನ್ನೊಂದಿಲ್ಲ. ಪ್ರತಿಯೊಂದು ಭಾರತೀಯ ಮನೆಯಲ್ಲೂ  ಮೊಸರು ಇದ್ದೇ ಇರುತ್ತದೆ.  ಮೊಸರು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ, ಉದಾಹರಣೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಹೃದಯದ ಆರೋಗ್ಯವನ್ನು ಸುಧಾರಿಸುವುದು, ಜೀರ್ಣಕ್ರಿಯೆ(Digestion) ಸೇರಿದಂತೆ ಹಲವಾರು. ಆದರೆ, ಮೊಸರು ಹುಳಿಯಾಗಿದ್ದರೆ, ಹೆಚ್ಚಿನ ಜನರು ಅದನ್ನು ಕಸದ ತೊಟ್ಟಿಗೆ ಎಸೆಯುತ್ತಾರೆ. ಮೊಸರು ಹುಳಿಯಾಗುತ್ತದೆ ಏಕೆಂದರೆ, ಬ್ಯಾಕ್ಟೀರಿಯಾಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ಹಾಲಿನ ಒಳಗೆ ಹೆಚ್ಚು ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತವೆ. ಅದಕ್ಕಾಗಿಯೇ ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇಡಬೇಕು. ಆದರೆ, ಹುಳಿ ಮೊಸರನ್ನು ಬಳಸಿ ಹಲವಾರು ಆಹಾರ ಪದಾರ್ಥಗಳನ್ನು ತಯಾರಿಸಬಹುದು.

ಕಢಿ,

ಗುಜರಾತ್​ನ  ಪ್ರಸಿದ್ಧ ಈ ಖಾದ್ಯ ಭಾರತದಾದ್ಯಂತ ಜನಪ್ರಿಯವಾಗಿದೆ. ಇದನ್ನು ಕಢಿ ಪಕೋಡಾ, ಪಾಲಕ್ ಕಢಿ, ಸಿಂಧಿ ಕಢಿ ಅಥವಾ ಬೂಂದಿ ಕಢಿ ಮೊದಲಾದ ರೀತಿಯಲ್ಲಿ ತಯಾರಿಸಲಾಗುತ್ತದೆ. ಇದು ಹುಳಿ ಮತ್ತು ಖಾರದ ಮಿಶ್ರಣವಾಗಿದ್ದು ಇದಕ್ಕೆ ಹುಳಿ ರುಚಿ ಹುಳಿ ಮೊಸರಿನಿಂದ ಬರುತ್ತದೆ.  ಇದನ್ನು ಕಡ್ಲೆ ಹಿಟ್ಟಿನಿಂದಲೂ ಮಾಡಬಹುದು ಅಥವಾ ಹೆಸರು ಬೇಳೆಯ ಹಿಟ್ಟಿನಿಂದಲೂ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

2 ಕಪ್ ಹುಳಿ ಮೊಸರು

1 ಕಪ್ ಗ್ರಾಂ  ಕಡ್ಲೇ ಹಿಟ್ಟು

1 ಚಮಚ ಅಡುಗೆ ಎಣ್ಣೆ

½ ಚಮಚ ಅರಿಶಿನ

1 ಟೀ ಚಮಚ ಜೀರಿಗೆ

1 ಚಮಚ ಕೆಂಪು ಮೆಣಸಿನಕಾಯಿ

2 ಹಸಿರು ಮೆಣಸಿನಕಾಯಿ

3-4 ಕರಿಬೇವಿನ ಎಲೆಗಳು

1 ಪಿಂಚ್ ಇಂಗು

1 ಟೀಚಮಚ ಸಾಸಿವೆ

ರುಚಿಗೆ ಉಪ್ಪು

ಮಾಡುವ ವಿಧಾನ

ಒಂದು ಬೌಲ್ ತೆಗೆದುಕೊಳ್ಳಿ, ಮೊಸರು, ಕಡ್ಲೇ ಹಿಟ್ಟು, ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ನೀರನ್ನು ಸೇರಿಸಿ.  ಅದನ್ನು ಕುದಿಸಿ. ಇನ್ನೊಂದು ಸಣ್ಣ ಬಾಣಲೆಯಲ್ಲಿ ಎಣ್ಣೆ, ಜೀರಿಗೆ, ಕರಿಬೇವು, ಹಸಿರು ಮೆಣಸಿನಕಾಯಿ, ಇಂಗು, ಒಣ ಕೆಂಪು ಮೆಣಸಿನಕಾಯಿ, ಸಾಸಿವೆ ಬೀಜಗಳನ್ನು ಸೇರಿಸಿ ಒಗ್ಗರಣೆ ಹಾಕಿ. ಕಢಿಯಲ್ಲಿ ಮಿಶ್ರಣವನ್ನು ಸುರಿಯಿರಿ ಮತ್ತು ಇನ್ನೊಂದು 3-5 ನಿಮಿಷ ಬೇಯಲು ಬಿಡಿ.

ಇದನ್ನೂ ಓದಿ: ಗಾರ್ಲಿಕ್‌ ಬ್ರೆಡ್‌ನಲ್ಲಿ ನಿಜವಾಗಿಯೂ ಬೆಳ್ಳುಳ್ಳಿ ಇದೆಯೇ..? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

ರವೆ ದೋಸೆ

ಸುಲಭವಾಗಿ ತಯಾರಿಸಬಹುದಾದ ಈ ಆಹಾರ ಭಾರತದ ಜನರ ನೆಚ್ಚಿನ  ಉಪಹಾರದ ಆಯ್ಕೆಗಳಲ್ಲಿ ಒಂದಾಗಿದೆ.  ದಕ್ಷಿಣ ಭಾರತದಲ್ಲಿ ಇದನ್ನು ಹೆಚ್ಚಾಗಿ ಮಾಡಲಾಗುತ್ತದೆ. ಇದನ್ನು ಉದ್ದಿನ ಬೇಳೆಯಿಂದ ಕೂಡ ತಯಾರಿಸಬಹುದಾದರೂ, ರವೆ ಬಳಸಿ ತಯಾರಿಸಿದವು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಬೇಕಾಗುವ ಪದಾರ್ಥಗಳು

1 ½ ಕಪ್ ರವೆ

½ ಕಪ್ ಹುಳಿ ಮೊಸರು

1  ಹಸಿರು ಮೆಣಸಿನಕಾಯಿ

ರುಚಿಗೆ ಉಪ್ಪು

1 ಚಮಚ ಅಡುಗೆ ಎಣ್ಣೆ

ಮಾಡುವ ವಿಧಾನ

ಒಂದು ಬೌಲ್ ತೆಗೆದುಕೊಳ್ಳಿ ಅದರಲ್ಲಿ ರವೆ ಮತ್ತು ಮೊಸರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ¼ ಕಪ್ ನೀರು ಸೇರಿಸಿ ಕಲಸಿ. ಆ ಹಿಟ್ಟನ್ನು 20 ನಿಮಿಷಗಳ ಕಾಲ ಬಿಡಿ. ನಂತರ ದೋಸೆ ಮಾಡಿ. ಹುಳಿ ಮೊಸರಿನ ಅಂಶ ಅದ್ಭುತವಾದ ರುಚಿಯನ್ನು ನೀಡುತ್ತದೆ.

ದಹಿ ಆಲೂ

ನಿಮಗೆ ಮಸಾಲೆಯುಕ್ತ ಆಹಾರ ಇಷ್ಟವಿಲ್ಲ ಎಂದರೆ, ದಹಿ ಆಲೂ ಪ್ರಯತ್ನಿಸಿ. ಇದು ರುಚಿಕರವಾಗಿರುತ್ತದೆ.

ಬೇಕಾಗುವ ಪದಾರ್ಥಗಳು

4 ಬೇಯಿಸಿದ ಆಲೂಗಡ್ಡೆ

1 ಕಪ್ ಹುಳಿ ಮೊಸರು

2 ಟೇಬಲ್ಸ್ಪೂನ್ ಕಡ್ಲೇ ಹಿಟ್ಟು

½ ಟೀಚಮಚ ಇಂಗು

1 ಟೀಚಮಚ ಜೀರಿಗೆ

1  ಕತ್ತರಿಸಿದ ಈರುಳ್ಳಿ

½ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

1  ಕತ್ತರಿಸಿದ ಹಸಿರು ಮೆಣಸಿನಕಾಯಿ

1 ಟೀಚಮಚ ಕೆಂಪು ಮೆಣಸಿನ ಪುಡಿ

½ ಟೀಚಮಚ ಕೊತ್ತಂಬರಿ ಪುಡಿ

ಅರಿಶಿನ ಪುಡಿ

ರುಚಿಗೆ ಉಪ್ಪು

2 ಟೇಬಲ್​ ಸ್ಪೂನ್

ಅಡುಗೆ ಎಣ್ಣೆ

ಇದನ್ನೂ ಓದಿ: ಮಣ್ಣಿನ ಪಾತ್ರೆಯಲ್ಲಿ ಆಹಾರ ಸೇವನೆ ಎಷ್ಟು ಆರೋಗ್ಯಕರ ಗೊತ್ತಾ?

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ, ಮೊಸರು, ಕಡ್ಲೇ ಹಿಟ್ಟು ಹಾಕಿ , ¼ ಕಪ್ ನೀರು ಹಾಕಿ  ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ನಂತರ  ಎಣ್ಣೆ, ಜೀರಿಗೆ ಮತ್ತು ಇಂಗ್​  ಸೇರಿಸಿ. ನಂತರ  ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಅರಿಶಿನ ಸೇರಿಸಿ ಸರಿಯಾಗಿ ಹುರಿಯಿರಿ. ನಂತರ ಅದೇ ಮಸಾಲಾಗೆ ಆಲೂಗಡ್ಡೆ ಸೇರಿಸಿ ಬೇಯಿಸಿ. ಇದಕ್ಕೆ ಹುಳಿ ಮೊಸರನ್ನು ಹಾಕಿ ಉಪ್ಪು ಸೇರಿಸಿ ಮತ್ತು ಅದನ್ನು ಬೇಯಲು ಬಿಡಿ.
Published by:Sandhya M
First published: