ಸ್ಥೂಲಕಾಯದ ಸಮಸ್ಯೆಗೆ ಉಮಾಮಿ ಸೂಪ್ ಪರಿಹಾರ..!

news18
Updated:July 10, 2018, 7:48 PM IST
ಸ್ಥೂಲಕಾಯದ ಸಮಸ್ಯೆಗೆ ಉಮಾಮಿ ಸೂಪ್ ಪರಿಹಾರ..!
news18
Updated: July 10, 2018, 7:48 PM IST
-ನ್ಯೂಸ್ 18 ಕನ್ನಡ

ಆಹಾರ ಪ್ರಿಯರಿಗೊಂದು ಶುಭಸುದ್ದಿ. ಊಟಕ್ಕೂ ಮೊದಲು ಉಮಾಮಿ ಸೂಪ್ ಕುಡಿಯುವುದರಿಂದ  ಮೆದುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ದೇಹದ ತೂಕವನ್ನು ನಿಯಂತ್ರಿಸಲು ಬೆಣ್ಣೆ, ಕ್ರೀಮ್, ಚೀಸ್ ಮತ್ತು ಮಾಂಸದ ಆಹಾರಗಳನ್ನು ತ್ಯಜಿಸುವುದು ವಾಡಿಕೆ. ಆದರೆ ಇನ್ನು ಮುಂದೆ ಉಮಾಮಿ ಸೂಪ್​ ಸೇವಿಸಿದರೆ ಸ್ಥೂಲಕಾಯದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಉಮಾಮಿ ಎಂಬ ಪದವು ಮೂಲತಃ ಜಪಾನಿ ಶಬ್ದವಾಗಿದ್ದರೂ, ಸಿಹಿ, ಉಪ್ಪು, ಕಹಿ ಮತ್ತು ಹುಳಿ ಜೊತೆ ಐದನೇ ರುಚಿಯನ್ನು ಉಮಾಮಿ ಎಂದು ಕರೆಯಲಾಗುತ್ತದೆ. ಉಮಾಮಿ ಎಂಬುದು ಉಳಿದ ನಾಲ್ಕು ರುಚಿಗಳ ಮಿಶ್ರಣವಾಗಿದ್ದು, ಇದನ್ನು ಕನ್ನಡದಲ್ಲಿ ಎಂದರೆ ಸವಿ ರುಚಿ ಎಂದು ಕೂಡ ಕರೆಯಬಹುದು.

ಇತ್ತೀಚಿನ ದಿನಗಳಲ್ಲಿ ಎಲ್ಲ ಆಹಾರಗಳಲ್ಲಿ ಉಮಾಮಿ ರುಚಿ ಕಂಡು ಬರುತ್ತದೆ. ಗ್ಲುಟಮೇಟ್ ಎಂಬುದು ಉಮಾಮಿ ರುಚಿ ಹೆಚ್ಚಿಸುವ ಪದಾರ್ಥವಾಗಿದ್ದು, ಹಾಗೆಯೇ ನೈಸರ್ಗಿಕ ಅಮಿನೊ ಆಮ್ಲವು ಬಹುತೇಕ ಎಲ್ಲಾ ಆಹಾರಗಳಲ್ಲಿ ಬಳಸಲಾಗುತ್ತದೆ. ಅದರಲ್ಲೂ ಡೈರಿ ಉತ್ಪನ್ನಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

'ಪ್ರಪಂಚದಾದ್ಯಂತ ಹಲವು ಕಡೆ ಸಂಸ್ಕೃತಿಯ ಭಾಗವಾಗಿ ಊಟಕ್ಕೂ ಮುಂಚಿತವಾಗಿ ಸೂಪ್ ಕುಡಿಯುವ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಉಮಾಮಿ ಸಮೃಧ್ಧವಾಗಿರುವ ಸೂಪ್​ ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು' ಎಂಬ ವಿಷಯ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಡೀಕನೆಸ್ ಮೆಡಿಕಲ್ ಸೆಂಟರ್ (ಬಿಐಡಿಎಂಸಿ)ನ ಮಿಗುಯೆಲ್ ಅಲೊನ್ಸೊ ತಿಳಿಸಿದ್ದಾರೆ.

ಊಟಕ್ಕೆ ಮುಂಚಿತವಾಗಿ ಉಮಾಮಿ ಸಮೃಧ್ಧ ಸೂಪ್ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಾಗೆಯೇ ಆಹಾರ ಸೇವಿಸುವಾಗ ಮೆದುಳಿನ ಕ್ರಿಯೆಯು ಉತ್ತೇಜನಗೊಳ್ಳುತ್ತದೆ. ಅಲ್ಲದೆ ಈ ಸೂಪನ್ನು ಕುಡಿದರೆ ದ ಸ್ಥೂಲಕಾಯದ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ