ಕೊನೆಗೂ ಸಿಕ್ತು ಪರಿಹಾರ: ಇನ್ನು ಮುಂದೆ ಬೋಳು ತಲೆಯವರು ಇರೋದೇ ಇಲ್ಲ..!

zahir | news18
Updated:July 26, 2019, 7:27 PM IST
ಕೊನೆಗೂ ಸಿಕ್ತು ಪರಿಹಾರ: ಇನ್ನು ಮುಂದೆ ಬೋಳು ತಲೆಯವರು ಇರೋದೇ ಇಲ್ಲ..!
REUTERS/Regis Duvignau
zahir | news18
Updated: July 26, 2019, 7:27 PM IST
ತಲೆ ಕೂದಲು ಉದುರುವುದೇ ದೊಡ್ಡ ತಲೆ ಬಿಸಿ. ಬೋಳು ತಲೆ ಸಮಸ್ಯೆ ಪರಿಹಾರ ಹುಡುಕುವುದರಲ್ಲಿಯೇ ನಮ್ಮ ಅರ್ಧ ಆಯಸ್ಸು ಕಳೆದು ಹೋಯಿತು ಎನ್ನುವವರನ್ನು ಕೇಳಿರುತ್ತೀರಿ. ಮಾರುಕಟ್ಟೆಯಲ್ಲಿ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಅನೇಕ ಔಷಧಿಗಳು ಲಭವಿದ್ದರೂ, ಪುನಃ ಕೂದಲು ಬೆಳೆಯುತ್ತದೆ ಎಂದು ಯಾವೊಂದು ಕಂಪೆನಿ ಕೂಡ ಗ್ಯಾರೆಂಟಿ ನೀಡುವುದಿಲ್ಲ. ಇಂತಹ ಸಮಸ್ಯೆ ಎದುರಿಸುವವರು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ನಿರೀಕ್ಷೆಯಲ್ಲಿರುತ್ತಾರೆ.

ಇದೀಗ ಅಮೆರಿಕದ ಕಂಪೆನಿಯೊಂದು ಬೊಕ್ಕತಲೆಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಹೇಳಿಕೊಂಡಿದೆ. ಫಿನಾಸ್ಟರೈಡ್ ಮತ್ತು ಮಿನೊಕ್ಸಿಡಿಲ್ (ಪ್ರೊಪೆಸಿಯಾ ಮತ್ತು ರೊಗೈನ್ ಎಂಬ ಕಂಪೆನಿ) ಎಂಬ ಔಷಧಿಗಳ ಆನ್‌ಲೈನ್ ಮಾರಾಟ ಕಂಪೆನಿ ಇಂತಹದೊಂದು ಗುಡ್  ನ್ಯೂಸ್ ನೀಡಿದೆ. ಕೂದಲು ಉದುರುವಿಕೆ ಸಮಸ್ಯೆಗೆ ಸಂಶೋಧನೆಯಲ್ಲಿ ಪ್ರಗತಿ ಸಾಧಿಸಿದೆ. ಆದರೆ ಇದನ್ನೇ ಕಳೆದ ದಶಕಗಳಿಂದ ಪ್ರೊಪೆಸಿಯಾ ಮತ್ತು ರೊಗೈನ್ ಕಂಪೆನಿ ಮಾರಾಟ ಮಾಡುತ್ತಿದೆ ಎಂದು ಹೇಳಿದೆ. ಈ ಚಿಕಿತ್ಸಾ ಕ್ರಮವನ್ನು ಅನುಸರಿಸುವುದರಿಂದ ಕೂದಲು ಉದುರುವಿಕೆ ಸಮಸ್ಯೆ ದೂರವಾಗುವುದಲ್ಲದೆ, ಹೊಸ ಕೂದಲು ಬೆಳೆಯಲು ಸಹಕಾರಿ ಎಂದು ಕಂಪೆನಿ ತಿಳಿಸಿದೆ. ಇದಕ್ಕಾಗಿ ಕಂಪೆನಿಯು ತಿಂಗಳಿಗೆ 44 ಡಾಲರ್ ವೆಚ್ಚದ ಚಿಕಿತ್ಸಾ ವಿಧಾನವನ್ನು ಪರಿಚಯಿಸಿರುವುದಾಗಿ ರೊಗೈನ್ ಕಂಪೆನಿ ಹೇಳಿಕೊಂಡಿದೆ.

ಬೋಳುತಲೆಯ ಸಮಸ್ಯೆಗೆ ಅನೇಕ ಪರಿಹಾರಗಳನ್ನು ಕಂಡುಕೊಳ್ಳಲಾಗಿದ್ದರೂ, ಶಾಶ್ವತ ಪರಿಹಾರದಿಂದ ವೈಜ್ಞಾನಿಕ ಕ್ಷೇತ್ರ ಹಿಂದೆ ಉಳಿದಿತ್ತು. ಆದರೀಗ ಸ್ಟೆಮ್-ಸೆಲ್ ಸಂಶೋಧನೆ ಮತ್ತು 3D ಪ್ರಿಟಿಂಗ್ ಒಳಗೊಂಡಿರುವ ಸಂಶೋಧನೆಯಲ್ಲಿ ಪ್ರಗತಿ ಸಾಧಿಸಿದ್ದು, ಇದರಿಂದ ಬೊಕ್ಕತಲೆಯಲ್ಲಿ ಪುನಃ ಕೂದಲು ಬೆಳೆಯುವಂತೆ ಮಾಡಬಹುದಾಗಿದೆ. ಇದನ್ನೇ ಕಳೆದ ಹತ್ತು ವರ್ಷಗಳಿಂದಲೂ ನಾವು ಮಾಡುತ್ತಿರುವುದಾಗಿ ಕೂದಲು ಕಸಿ ಪರಿಣತಿ ಹೊಂದಿರುವ ಚರ್ಮರೋಗ ವೈದ್ಯ ರಾಬರ್ಟ್​ ಬರ್ನ್​ಸ್ಟೈನ್ ಹೇಳಿದ್ದಾರೆ.

ಕೂದಲ ಬೆಳವಣಿಗೆಯ ಸಂಶೋಧನೆಯಲ್ಲಿ ದೇಹದ ಎಲ್ಲಾ ಭಾಗಗಳಲ್ಲೂ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ದೇಹದ ಮೇಲಿರುವ ಪ್ರೊಟೀನ್ ತಂತುಗಳ ಎಳೆಗಳು ಕೂದಲು ಒಂದಕ್ಕೊಂದು ಸುತ್ತಿಕೊಂಡಿರುವುದು ಕಂಡು ಬಂದಿದೆ. ಅದೇ ರೀತಿ ಕೂದಲು ಯಕೃತ್ತು ಅಥವಾ ಮೆದುಳಿನ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಕೂದಲು ಬೆಳೆಯುವುದು ಮುಖ್ಯವಾಗಿರಬೇಕು ಹೊರತು ಉದುರುವುದಲ್ಲ ಎಂಬುದು ಕಂಡುಕೊಳ್ಳಲಾಗಿದೆ.

ದೇಹದಲ್ಲಿ ಗಟ್ಟಿಯಾದ ಎಳೆಯನ್ನು ಉತ್ಪಾದಿಸಬಲ್ಲ, ಪ್ರತಿ ಕೂದಲು ಕೋಶಕದ ಬುಡದಲ್ಲಿ ಡರ್ಮಲ್ ಪ್ಯಾಪಿಲ್ಲೆ ಎಂದು ಕರೆಯಲ್ಪಡುವ ಸಾವಿರಾರು ಸ್ಟೆಮ್ ಸೆಲ್​ಗಳನ್ನು ಒಳಗೊಂಡಿದೆ. ಮಾನವನ ನೆತ್ತಿಯು ಸುಮಾರು 100,000 ಕೂದಲು ಕಿರುಚೀಲಗಳನ್ನು ಹೊಂದಿರುತ್ತವೆ. ಆದರೆ ಅವುಗಳ ಜೀವಿತಾವಧಿಯು ಸೀಮಿತವಾಗಿರುತ್ತದೆ. ವಯಸ್ಸಾಗುತ್ತಿರುವಂತೆ ಚರ್ಮದ ಪ್ಯಾಪಿಲ್ಲೆಗಳು ಕಣ್ಮರೆಯಾಗುತ್ತವೆ. ಈ ರೀತಿಯಾಗಿ, ಬೋಳು ವ್ಯಕ್ತಿಯ ತಲೆಯ ಬುಡದಲ್ಲಿ ಇನ್ನೂ ಕೂದಲನ್ನು ಹೊಂದಿರುತ್ತವೆ. ಇಂತಹ ಪ್ಯಾಪಿಲ್ಲೆಗಳನ್ನು ಮರಳಿ ಪಡೆಯುವುದರಿಂದ ಕೂದಲನ್ನು ಬೆಳೆಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಹಿಂದೆ ದೇಹ ಭಾಗದ ಕೂದಲನ್ನು ಚಿಕಿತ್ಸೆ ಮೂಲಕ ತಲೆಗೆ ಕಸಿ ಮಾಡಲಾಗಿತ್ತಾದರೂ, ಅಂತಹ ಚಿಕಿತ್ಸೆಯಿಂದ ಬೋಳುತಲೆ ಹೊಂದಿರುವವರು ಸಂತುಷ್ಠರಾಗಿರಲಿಲ್ಲ. ಆದರೆ ನೂತನ ಸಂಶೋಧನೆಯಲ್ಲಿ ಸೆಲ್ ಥೆರಪಿ ಎಂದು ಕರೆಯಲ್ಪಡುವ ಸ್ಟೆಲ್ ಸೆಮ್​ ಮೂಲಕ ಕೂದಲನ್ನು ಪುನಃ ಪಡೆಯುವ ಸಂಶೋಧನೆ ಪ್ರಗತಿಯಲ್ಲಿದೆ. ಇದರ ಚಿಕಿತ್ಸೆಗಾಗಿ ಸೆಲ್​ಗಳನ್ನು ವ್ಯಕ್ತಿಯ ಸ್ವಂತ ಕಾಂಡಕೋಶಗಳಿಂದ ಪಡೆಯಲಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಳೆದ ತಿಂಗಳು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಸ್ಟೆಮ್ ಸೆಲ್ ರಿಸರ್ಚ್‌ನ ಮಾನವ ಕೂದಲಿನ ಸ್ಟೆಮ್ ಸೆಲ್​ಗಳನ್ನು ಇಲಿಗಳ ಮೇಲೆ ಪರೀಕ್ಷಿಸಲಾಯಿತು. ಈ ಸಂಶೋಧನೆ ಯಶಸ್ವಿಯಾಗಿದ್ದು, ಇಲಿಗಳು ಕೂದಲಿಂದ ಗೊಂಬೆಯಾಕಾರವನ್ನು ಪಡೆದುಕೊಂಡಿತ್ತು. ಹೀಗಾಗಿ ಮಾನವನ ದೇಹದ ಯಾವುದೇ ಭಾಗದಲ್ಲೂ ಕೂದಲು ಬೆಳೆಯಬಹುದು ಎಂದು ಸಂಶೋಧಕರ ವಾದ ಮಹತ್ವ ಪಡೆದುಕೊಂಡಿತು.



ಕೂದಲಿನ ಕೋಶಗಳನ್ನು ಕ್ಲೋನ್ ಮಾಡಲು ಪ್ರಯತ್ನಿಸಿದಾಗ, ಕಾಲಾನಂತರದಲ್ಲಿ ಅವು ಕೂದಲನ್ನು ಉತ್ಪತ್ತಿ ಮಾಡುತ್ತವೆ ಮತ್ತು ನಿಲ್ಲಿಸುತ್ತವೆ ಎಂದು ಈ ಹಿಂದೆ ಸಂಶೋಧಕರು ಹೇಳಿದ್ದರು. ಆದರೆ ಇದೀಗ ಇಂತಹ ಸಮಸ್ಯೆಯನ್ನು ಸಂಶೋಧಕರು ಪರಿಹರಿಸಿದ್ದಾರೆ ಎಂದು ವೈದ್ಯಕೀಯ ಸಂಶೋಧಕ ಬರ್ನ್​ಸ್ಟೈನ್ ಹೇಳಿದ್ದಾರೆ.

ಏತನ್ಮಧ್ಯೆ, ಕೊಲಂಬಿಯಾ ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಡರ್ಮಟಾಲಜಿ ವಿಭಾಗದ ಪ್ರಾಧ್ಯಾಪಕ ಏಂಜೆಲಾ ಕ್ರಿಸ್ಟಿಯಾನೊ ಅವರು ಜೆಲ್-ಒ ಅಚ್ಚನ್ನು ಉತ್ಪಾದಿಸಲು 3D ಪ್ರಿಟಿಂಗ್​ನ್ನು ಬಳಸಿದ್ದಾರೆ. ಇದು ಕೂದಲನ್ನು ಬೇರ್ಪಡಿಸುವಾಗ ಕೋಶಕ ಮತ್ತು ಚರ್ಮದ ಪ್ಯಾಪಿಲ್ಲೆಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಜೀವಕೋಶಗಳಿಂದ ಸಂಪೂರ್ಣ ಕೂದಲನ್ನು ಪುನರುತ್ಪಾದಿಸುವ ಸಾಮರ್ಥ್ಯವು ವಿವಿಧ ರೀತಿಯ ಅಲೋಪೆಸಿಯಾ ಮತ್ತು ದೀರ್ಘಕಾಲದ ಗಾಯಗಳ ವೈದ್ಯಕೀಯ ನಿರ್ವಹಣೆಯ ಮೇಲೆ ಪರಿವರ್ತಕ ಪರಿಣಾಮ ಬೀರುತ್ತದೆ ಎಂದು ಕ್ರಿಸ್ಟಿಯಾನೊ ತಿಳಿಸಿದ್ದಾರೆ.

ಕೂದಲು ಉದುರುವಿಕೆ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ಆದರೆ ಇಂತಹ ಸಮಸ್ಯೆಗೆ ಶ್ರೀಮಂತರು ಮಾತ್ರ ಪರಿಹಾರ ಕಂಡುಕೊಳ್ಳುತ್ತಿದ್ದರು. ಕೋಶಕದಿಂದ ಕೋಶಕ, ಬೆಸ್ಪೋಕ್ 3D ಪ್ರಿಂಟಿಂಗ್ ಸ್ಕ್ಯಾಫೋಲ್ಡ್ ಚಿಕಿತ್ಸೆಗಳು ಬಡವರಿಗೆ ದುಬಾರಿಯಾಗಿದ್ದವು. ಆದರೀಗ ವೈದ್ಯಕೀಯ ಬೆಳವಣಿಗೆ ಮತ್ತು ಹೊಸ ಸಂಶೋಧನೆಯಿಂದ ಚಿಕಿತ್ಸಾ ವೆಚ್ಚಗಳು ಕಡಿಮೆಯಾಗುವ ಸಾಧ್ಯತೆಯಿದೆ. ಇದೊಂದು ದೊಡ್ಡ ಪ್ರಗತಿಯಾಗಿದ್ದು, ಇನ್ನೂ ಅನೇಕ ಅಂಶಗಳ ಸಂಶೋಧನೆ ನಡೆಯಬೇಕಿದೆ ಎಂದು ಬರ್ನ್‌ಸ್ಟೈನ್ ಹೇಳಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಬೋಳುತಲೆಗಳು ಸಂಪೂರ್ಣ ಮಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published:July 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...