ಬಾಲಿವುಡ್ ನಟಿ (Bollywood Actress) ಸೋನಮ್ ಕಪೂರ್ (Sonam Kapoor) ತಮ್ಮ ಪತಿಯೊಂದಿಗೆ ದೆಹಲಿಯಲ್ಲಿ (Delhi) ನಡೆದ ಈವೆಂಟ್ ಒಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಸೋನಮ್ ಕಡೆಗೆ ಎಲ್ಲರ ಚಿತ್ತ ನೆಟ್ಟಿತ್ತು ಎಂಬುದು ವಾಸ್ತವವಾಗಿತ್ತು. ಒಂದು ಮಗುವಿನ ತಾಯಿಯಾಗಿದ್ದರೂ ಸೋನಮ್ ತಮ್ಮ ಹಿಂದಿನ ಮೈಮಾಟವನ್ನು ಹಾಗೆಯೇ ಕಾಪಾಡಿಕೊಂಡಿದ್ದಾರೆ ಹಾಗೂ ಯುವತಿಯರನ್ನು ನಾಚಿಸುವಂತೆ ಪತಿಯೊಂದಿಗೆ ಈವೆಂಟ್ ಸಮಾರಂಭಕ್ಕೆ ಆಗಮಿಸಿದ್ದರು. ಬರೇ ಮೂರು ತಿಂಗಳಲ್ಲಿ ತೂಕ ಇಳಿಕೆಯನ್ನು (Weight Loss) ಮಾಡಿಕೊಂಡಿರುವ ನಟಿ, ಪುತ್ರ ವಾಯು ಕಪೂರ್ ಅಹುಜಾ ಜನನದ ನಂತರ ಕೂಡ ತಮ್ಮ ಹಿಂದಿನ ಅದೇ ಮೈಮಾಟವನ್ನು ನಿರ್ವಹಿಸುವಲ್ಲಿ ಸಫಲರಾಗಿದ್ದಾರೆ. ದೆಹಲಿಯಲ್ಲಿ ಈವೆಂಟ್ ಒಂದರಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಆನಂದ್ ಅಹುಜಾರೊಂದಿಗೆ ಬಂದಿದ್ದ ಸೋನಮ್ ವಿಮಾನ ನಿಲ್ದಾಣದಲ್ಲಿಯೇ ಕ್ಯಾಮೆರಾ ಕಣ್ಣುಗಳಲ್ಲಿ ಸುಂದರವಾಗಿ ಸೆರೆಯಾದರು.
ಸೋನಮ್ ಹಾಗೂ ಆನಂದ್ ಅಹುಜಾ ತಮ್ಮ ಮೊದಲ ಮಗು ವಾಯು ಕಪೂರ್ ಅಹುಜಾರನ್ನು ಆಗಸ್ಟ್ 20 ರಂದು ಬರಮಾಡಿಕೊಂಡಿದ್ದರು. ವಾಯುವಿನ ಜನನದ ನಂತರ ಸೋನಮ್ ಪಾಲ್ಗೊಳ್ಳುತ್ತಿರುವ ಮೊದಲ ಸಾರ್ವಜನಿಕ ಈವೆಂಟ್ ಇದಾಗಿದ್ದು, ತಾಯ್ತನದ ಕಳೆಯಿಂದ ಮಿಂಚುತ್ತಿರುವ ಸೋನಮ್ ಅನ್ನು ಆನಂದ್ ಪ್ರಶಂಸನೀಯ ಕಣ್ಣುಗಳಿಂದ ಮೆಚ್ಚುಗೆ ಸೂಸಿದ್ದನ್ನು ಕ್ಯಾಮೆರಾಗಳು ಸೆರೆಹಿಡಿದಿವೆ.
ಪತ್ನಿಯ ಸೌಂದರ್ಯಕ್ಕೆ ಪತಿಯ ಮೆಚ್ಚುಗೆ
ತಮ್ಮ ಪತ್ನಿಯ ತೂಕ ಇಳಿಕೆಯ ಬಗ್ಗೆ ಸ್ವತಃ ಆಶ್ಚರ್ಯ ವ್ಯಕ್ತಪಡಿಸಿರುವ ಆನಂದ್ ಸೋನಮ್ ಅವರ ಮುಂಬೈ ಏರ್ಪೋರ್ಟ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬರೇ ಮೂರು ತಿಂಗಳಲ್ಲಿ ತೂಕ ಇಳಿಕೆ ಎಂಬ ಶೀರ್ಷಿಕೆ ನೀಡಿ ಹೃದಯದ ಕಣ್ಣುಗಳುಳ್ಳ ಎಮೋಜಿಯನ್ನು ತಮ್ಮ ಪೋಸ್ಟ್ಗೆ ಸೇರಿಸಿದ್ದಾರೆ. ಮಿಂಟ್ ಹಸಿರು ಬಣ್ಣದ ಸ್ಕರ್ಟ್ ಹಾಗೂ ಕಪ್ಪು ಬಣ್ಣದ ಬ್ಲೇಜರ್ ಧರಿಸಿದ್ದ ಸೋನಂ ಕಪ್ಪು ಬಣ್ಣದ ಶೂ ಹಾಗೂ ಅದೇ ಬಣ್ಣದ ಬ್ಯಾಗ್ ಧರಿಸಿ ಏರ್ಪೋರ್ಟ್ಗೆ ಆಗಮಿಸಿದರು
ಇದನ್ನೂ ಓದಿ: ಈ ಸಮಸ್ಯೆಗಳಿದ್ರೆ ಚಳಿಗಾಲದಲ್ಲಿ ಬಾದಾಮಿ ತಿನ್ನೋದು ಡೇಂಜರ್ ಅಂತೆ
ಸೋನಂ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಆನಂದ್ ಹಂಚಿಕೊಂಡಿದ್ದು ಸೋನಂ ಈವೆಂಟ್ ಒಂದರಲ್ಲಿ ಪಾಲ್ಗೊಳ್ಳಲು ಕಪ್ಪು ಔಟ್ಫಿಟ್ ಅನ್ನು ಧರಿಸಿ ಫೋಟೋಗೆ ಫೋಸ್ ನೀಡಿದ್ದನ್ನು ಕಾಣಬಹುದು. ಈ ಫೋಟೋಗೆ ಕೂಡ ಆನಂದ್ ಆಶ್ಚರ್ಯ ಮಿಶ್ರಿತ ಪ್ರಶ್ನಾರ್ಥಕ ಚಿಹ್ನೆಯನ್ನು ಸೂಚಿಸಿದ್ದು ವ್ಹಾಟ್ ಎಂಬ ಶೀರ್ಷಿಕೆ ನೀಡಿ ಸೋನಂರ ತೂಕ ಇಳಿಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದನ್ನು ನಾವು ನೋಡಬಹುದು.
ಸಹೋದರಿ ರಿಯಾರಿಂದ ಸೋನಮ್ ಹೊಗಳಿಕೆ
ಸೋನಂ ಸಹೋದರಿ ರಿಯಾ ಕಪೂರ್ ಕೂಡ ಸೋನಮ್ ಪೋಸ್ಟ್ ಅನ್ನು ಹಂಚಿಕೊಂಡು ಇದನ್ನು ಪುನರ್ ಆಗಮನ ಎಂದು ಕರೆಯಬೇಡಿ ಎಂದು ತಿಳಿಸಿದ್ದಾರೆ. ಅನುಷ್ಕಾ ಶರ್ಮಾ ಫೈರ್ ಎಮೋಜಿ ಹಾಕಿರುವ ಸೋನಮ್ರ ಇತ್ತೀಚಿನ ಇನ್ಸ್ಟಾ ಪೋಸ್ಟ್ ಒಂದನ್ನು ರಿಯಾ ಹಂಚಿಕೊಂಡಿದ್ದಾರೆ.
ಹೆರಿಗೆ ಹಾಗೂ ಹೆರಿಗೆಯ ನಂತರ ಆರೈಕೆಗೆ ನಟಿಯ ಸಲಹೆ
ಹೆರಿಗೆಯ ಕುರಿತು ಹಾಗೂ ಹೆರಿಗೆಯ ನಂತರ ಸೋನಮ್ ಯಾವೆಲ್ಲಾ ರೀತಿಯಲ್ಲಿ ತಮ್ಮ ದೇಹದ ಆರೈಕೆಯನ್ನು ಮಾಡಿದ್ದರು ಎಂಬುದಾಗಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆಕೆ ಸುಲಭವಾಗಿ ವಾಯುವಿಗೆ ಜನ್ಮನೀಡಿದ್ದು ಇದರಿಂದ ಶೀಘ್ರವೇ ಹಾಲುಣಿಸಲು ಸಾಧ್ಯವಾಯಿತು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು. ಹಾಗೂ ಸ್ಟ್ರೆಚ್ಮಾರ್ಕ್ಗಳ ನಿವಾರಣೆಗೆ ತಾವು ಕೈಗೊಂಡ ಸಲಹೆಗಳನ್ನು ಸೋನಮ್ ಹಂಚಿಕೊಂಡಿದ್ದಾರೆ.
ಹೃದಯಸ್ಪರ್ಶಿ ಪೋಸ್ಟ್
ಮಾರ್ಚ್ 2021 ರಂದು ಸೋನಮ್ ತಾವು ತಾಯಿಯಾಗುತ್ತಿರುವ ಸಂತೋಷವನ್ನು ಅಷ್ಟೇ ಸುಂದರವಾದ ಬರಹದೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ನಾಲ್ಕು ಕೈಗಳೊಂದಿಗೆ (ಸೋನಮ್, ಆನಂದ್) ನಮಗೆ ಸಾಧ್ಯವಾಗುವಷ್ಟು ಮಟ್ಟಿಗೆ ನಿನ್ನನ್ನು ಬೆಳೆಸುತ್ತೇವೆ. ನಿನ್ನ ಹೃದಯದೊಂದಿಗೆ ಎರಡು ಹೃದಯಗಳು ಜೊತೆಯಾಗಿ ನಿನ್ನ ಪ್ರತಿ ಹೆಜ್ಜೆಯಲ್ಲಿ ಮಿಡಿಯುತ್ತವೆ.
ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಗೆ ಕಾರಣ ಇದಂತೆ, ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ
ಒಂದೇ ಕುಟುಂಬವಾಗಿ ನಿನಗೆ ಬೆಂಬಲ ಹಾಗೂ ಪ್ರೀತಿಯ ಮಳೆಯನ್ನೇ ಸುರಿಸುತ್ತೇವೆ. ನಿನ್ನನ್ನು ಸ್ವಾಗತಿಸಲು ನಾವು ತುದಿಗಾಲಿನಲ್ಲಿ ನಿಂತಿರುವೆವು. ಪುತ್ರನ ಹೆಸರನ್ನು ಆತನ ಜನನದ ಬಳಿಕ ಕೆಲವು ತಿಂಗಳ ನಂತರ ಆನಂದ್ ಹಾಗೂ ಸೋನಮ್ ವಾಯು ಎಂದು ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ