ದೇಹವು (Body) ಆರೋಗ್ಯವಾಗಿರಲು (Health) ಅದರಲ್ಲೂ ದೇಹವನ್ನು ಹೊತ್ತು ನಿಲ್ಲುವ ಹಾಗೂ ಎಲ್ಲಾ ರೀತಿಯ ಚಟುವಟಿಕೆಗಳಿಗೆ (Activities) ಸಹಕಾರಿಯಾಗುವ ಮೂಳೆಗಳ ಆರೋಗ್ಯ (Bones Health) ಕಾಪಾಡುವುದು ಮುಖ್ಯ. ಬೆನ್ನು ಹುರಿ ಹಾಗೂ ಮೊಣಕಾಲು, ಬೆರಳು, ಪೆಲ್ವಿಕ್ ಮಸಲ್ಸ್ ಹೀಗೆ ಎಲ್ಲಾ ರೀತಿಯ ಮೂಳೆಗಳು ಗಟ್ಟಿಯಾಗಿ, ಸದೃಢವಾಗಿರುವುದು ತುಂಬಾ ಮುಖ್ಯವಾಗಿದೆ. ಪ್ರೋಟೀನ್ (Protein), ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಸತು, ತಾಮ್ರ, ಸೆಲೆನಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಎಲ್ಲಾ ಅಗತ್ಯ ಪೋಷಕಾಂಶಗಳು (Nutrients) ಉತ್ತಮವಾಗಿ ಕೆಲಸ ಮಾಡಲು ಮತ್ತು ದೇಹದ ಆರೋಗ್ಯ ಕಾಪಾಡಲು ಅತ್ಯಗತ್ಯವಾಗಿದೆ. ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯು ಹಲವು ಕಾಯಿಲೆಗೆ ಕಾರಣವಾಗುತ್ತದೆ.
ಒಟ್ಟಾರೆ ಆರೋಗ್ಯಕ್ಕೆ ಬೇಕು ಪೋಷಕಾಂಶಗಳು
ಮೇಲೆ ಹೇಳಿದಂತೆ ದೇಹದ ಆರೋಗ್ಯಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಅತ್ಯಂತ ಅವಶ್ಯಕವಾಗಿ ಬೇಕು. ಈ ಪೋಷಕಾಂಶಗಳ ಕೊರತೆಯು ನಿಮ್ಮ ದೇಹದ ಪ್ರತಿಯೊಂದು ಭಾಗವನ್ನು ದುರ್ಬಲವಾಗಿಸುತ್ತದೆ.
ಹಾಗೂ ಅನಾರೋಗ್ಯಕ್ಕೆ ಕಾರಣ ಆಗುತ್ತದೆ. ಉತ್ತಮ ಸಂಗತಿ ಅಂದ್ರೆ ಈ ಎಲ್ಲಾ ಪೋಷಕಾಂಶ ಭರಿತ ಹಣ್ಣುಗಳು ಮತ್ತು ತರಕಾರಿಗಳು ಚಳಿಗಾಲದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತವೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಿಷ್ಟಪಡಿಸುತ್ತವೆ.
ಮತ್ತು ಸುಲಭವಾಗಿ ಸೋಂಕಿಗೆ ತುತ್ತಾಗುವ ಅಪಾಯ ತಡೆಗೆ ಇದು ಸಹಾಯ ಮಾಡುತ್ತದೆ. ಆಹಾರವು ಎಲ್ಲಾ ಅಂಶಗಳನ್ನು ಒಳಗೊಂಡಿರಬೇಕು. ಅದು ನಿಮ್ಮ ದೇಹವನ್ನು ಒಳಗೆ ಮತ್ತು ಹೊರಗಿನಿಂದ ಬಲಪಡಿಸುತ್ತದೆ. ಹಾಗೂ ರೋಗಗಳಿಂದ ದೂರವಿರಿಸಲು ಸಹಕಾರಿ.
ಕಾಯಿಲೆ ತಡೆಗೆ ಈ ಪದಾರ್ಥಗಳ ಸೇವನೆ ಪರಿಣಾಮಕಾರಿ
ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕೆಲವು ತರಕಾರಿಗಳು, ಪದಾರ್ಥಗಳು ಕಾಯಿಲೆಗಳ ವಿರುದ್ಧ ಹೋರಾಡಲು ಸಹಕಾರಿ ಆಗಿದೆ. ಶೀತದಲ್ಲಿ ಕಂಡು ಬರುವ ಕೆಲವು ಪದಾರ್ಥಗಳು ಸೋಂಕು ತಡೆಗೆ ಸಹಕಾರಿ.
ಈ ತರಕಾರಿಗಳು ಮಧುಮೇಹ, ಕ್ಯಾನ್ಸರ್, ಬೊಜ್ಜು, ಮೂತ್ರಪಿಂಡದ ಕಾಯಿಲೆ, ಚರ್ಮ ರೋಗ, ಆಸ್ಟಿಯೊಪೊರೋಸಿಸ್ ಮತ್ತು ಜೀರ್ಣಕಾರಿ ಅಸ್ವಸ್ಥತೆ ತಡೆಯುತ್ತದೆ.
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ವರ್ಷಪೂರ್ತಿ ಸಿಗುತ್ತದೆ. ಆದರೆ ಈ ಚಳಿಗಾಲದಲ್ಲಿ ಹೆಚ್ಚು ತಾಜಾ ಮತ್ತು ಇಳುವರಿ ಹೊಂದಿರುತ್ತದೆ. ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಹಾಕಿದರೆ ಅದು ಆಹಾರದ ರುಚಿ ಮತ್ತು ನೋಟ ಎರಡನ್ನೂ ಚೆನ್ನಾಗಿರಿಸುತ್ತದೆ.
ಕೊತ್ತಂಬರಿ ಸೊಪ್ಪಿನ್ಲಿ ಫೈಬರ್ ಅಂಶ ಉತ್ತಮವಾಗಿದೆ. ಇದು ಕಣ್ಣು, ಹೃದಯ, ಚರ್ಮ ಮತ್ತು ಯಕೃತ್ತಿನ ಆರೋಗ್ಯ ಕಾಪಾಡಲು ಪ್ರಯೋಜನ ನೀಡುತ್ತದೆ.
ಇದು ಹಸಿವು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ ಆಗಿದೆ. ಯಕೃತ್ತಿಗೆ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ. ಹಸಿರು ಬೆಳ್ಳುಳ್ಳಿ ಮತ್ತು ಈರುಳ್ಳಿ ಸೊಪ್ಪು.
ಬೆಳ್ಳುಳ್ಳಿ ಸೊಪ್ಪು ಮತ್ತು ಈರುಳ್ಳಿ ಸೊಪ್ಪು
ಬೆಳ್ಳುಳ್ಳಿ ಮತ್ತು ಈರುಳ್ಳಿ ಗೆಡ್ಡೆಗಳನ್ನು ಎಲ್ಲರೂ ಬಳಸುತ್ತಾರೆ. ಆದರೆ ಬೆಳ್ಳುಳ್ಳಿ ಸೊಪ್ಪು ಮತ್ತು ಈರುಳ್ಳಿ ಸೊಪ್ಪು ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತದೆ. ಬೆಳ್ಳುಳ್ಳಿ ಸೊಪ್ಪು ಮತ್ತು ಈರುಳ್ಳಿ ಸೊಪ್ಪುಗಳಲ್ಲಿ ಪೋಷಕಾಂಶಗಳು ಮತ್ತು ರುಚಿ ಹೆಚ್ಚು.
ಬೆಳ್ಳುಳ್ಳಿ ಸೊಪ್ಪು ಮತ್ತು ಈರುಳ್ಳಿ ಸೊಪ್ಪು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ಬೆಳ್ಳುಳ್ಳಿ ಸೊಪ್ಪು ಮತ್ತು ಈರುಳ್ಳಿ ಸೊಪ್ಪು ಸಹಕಾರಿ. ಶೀತ, ಕೆಮ್ಮು ಮತ್ತು ಜ್ವರದಿಂದ ಬೆಳ್ಳುಳ್ಳಿ ಸೊಪ್ಪು ಮತ್ತು ಈರುಳ್ಳಿ ಸೊಪ್ಪು ರಕ್ಷಿಸುತ್ತವೆ.
ಹಸಿರು ಬಟಾಣಿ
ಹಸಿರು ಬಟಾಣಿ ಕಾಳು ಪ್ರೋಟೀನ್‌ನ ಅತ್ಯುತ್ತಮ ಮೂಲ. ಇದರಲ್ಲಿ ವಿಟಮಿನ್ ಕೆ ಮತ್ತು ಸಿ, ಕಬ್ಬಿಣ ಮತ್ತು ಮ್ಯಾಂಗನೀಸ್ ನಂತಹ ಖನಿಜಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತವೆ.
ಜೊತೆಗೆ ಬಟಾಣಿಗಳ ಸಣ್ಣ ಧಾನ್ಯಗಳು ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿವೆ. ಇದು ನಿಮ್ಮ ರೋಗ ನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ.
ಟೊಮೆಟೊ
ಟೊಮೆಟೊಗಳು ವಿಟಮಿನ್ ಸಿ ಸಮೃದ್ಧವಾಗಿವೆ. ಆಹಾರದ ರುಚಿ ಹೆಚ್ಚಿಸುತ್ತವೆ. ಚರ್ಮಕ್ಕೆ ಹೊಳಪು ನೀಡುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಮಧುಮೇಹ ಮತ್ತು ಕೊಲೆಸ್ಟ್ರಾಲ್ ರೋಗಿಗಳಿಗೆ ಟೊಮೆಟೊ ಉತ್ತಮ ಆಯ್ಕೆ. ದೃಷ್ಟಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಚೆನ್ನಾಗಿಡಲು ಸಹಕಾರಿ.
ಇದನ್ನೂ ಓದು: ಅಸ್ತಮಾ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಸುತ್ತಾರಾ? ಅದು ರೋಗಿಯ ತೂಕ ಹೆಚ್ಚಿಸುತ್ತಾ?
ಹಲಸಿನ ಹಣ್ಣು
ಹಲಸಿನ ಹಣ್ಣು ಮಲಬದ್ಧತೆ ಸರಿಪಡಿಸಲು ಸಹಕಾರಿ. ರಕ್ತದೊತ್ತಡ ನಿಯಂತ್ರಿಸುತ್ತದೆ. ಆತಂಕ ನಿವಾರಿಸುತ್ತದೆ. ಉತ್ತಮ ನಿದ್ರೆಗೆ ಸಹಕಾರಿ. ಇದರಲ್ಲಿ ಮೆಗ್ನೀಸಿಯಮ್, ತಾಮ್ರದ ಅಂಶವಿದೆ. ಆಸ್ಟಿಯೊಪೊರೋಸಿಸ್ ಕಡಿಮೆ ಮಾಡುತ್ತದೆ. ಮೂಳೆಯ ಆರೋಗ್ಯ ಸುಧಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ