Cancer Symptoms: ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಅದು ಕಿಡ್ನಿ ಕ್ಯಾನ್ಸರ್​ ಇರಬಹುದು..! ಎಚ್ಚರ

Kidney Cancer: ನಿಮ್ಮ ಹೊಟ್ಟೆ ಸುತ್ತಲು ಅಥವಾ ಕಿಡ್ನಿಯ ಜಾಗದಲ್ಲಿ ಬೊಕ್ಕೆ ಕಾಣಿಸುವುದು ಕೂಡ ಕಿಡ್ನಿ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಈ ಬೊಕ್ಕೆಯು ಆರಂಭಿಕ ಹಂತದಲ್ಲಿ ತುಂಬಾ ಕಠಿಣವಾಗಿರುವುದು. ಹೆಚ್ಚುವರಿ ಪರೀಕ್ಷೆ ಮಾಡಿದರೆ ವೈದ್ಯರಿಗೆ ಈ ಬೊಕ್ಕೆ ಹಿಂದಿರುವಂತಹ ನಿಜವಾದ ಕಾರಣವು ತಿಳಿದುಬರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಿಡ್ನಿ ಕ್ಯಾನ್ಸರ್ ನ(Kidney Cancer) ಲಕ್ಷಣಗಳು(Symptoms) ಮೂತ್ರನಾಳ ಅಥವಾ ಸೊಂಟದಲ್ಲಿ ಕಾಣಿಸಿಕೊಳ್ಳಬಹುದು. ಕಿಡ್ನಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ(Last Stage) ಬರುವ ತನಕ ಅಥವಾ ಗಡ್ಡೆ ಬೆಳೆಯುವ ತನಕ ನಿಮಗೆ ಅದರ ಲಕ್ಷಣ ಕಾಣಸಿಗದು. ಸಾಮಾನ್ಯ ಪರೀಕ್ಷೆ(Test) ವೇಳೆ ಇದು ಆಕಸ್ಮಿಕವಾಗಿ ಕಂಡುಬರಬಹುದು. ಕೆಲವೊಮ್ಮೆ ಕ್ಯಾನ್ಸರ್ ಕಿಡ್ನಿಗೆ ತಲುಪುವ ಮೊದಲು ದೇಹವು(Body) ಕೆಲವೊಂದು ಲಕ್ಷಣಗಳನ್ನು ತೋರಿಸುವುದು. ಈ ಚಿಹ್ನೆ ಹಾಗೂ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸುವುದು ಅತೀ ಅಗತ್ಯವಾಗಿದೆ. ಕಿಡ್ನಿ ಕ್ಯಾನ್ಸರ್ ಯಾರಿಗೂ ಬರಬಹುದು. ಆದರೆ ಆಲ್ಕೋಹಾಲ್(Alcohol) ಮತ್ತು ಧೂಮಪಾನ(Smoking) ಮಾಡುವಂತಹ ಜನರಲ್ಲಿ ಈ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಅತಿಯಾಗಿರುವುದು.

  ಕೊರೊನಾವೈರಸ್ (Corona virus) ಸಾಂಕ್ರಾಮಿಕ ಪಿಡುಗಿಗಿಂತಲೂ ಮೊದಲ ಜಗತ್ತನ್ನು ಕಾಡಿದ್ದು ಮಾರಕ ರೋಗ ಕ್ಯಾನ್ಸರ್. ಎಲ್ಲ ವಯೋಮಾನದವರಿಗೂ ಕ್ಯಾನ್ಸರ್ ರೋಗ ಅಪಾಯಕಾರಿ ಆಗಿರುತ್ತದೆ. ಕ್ಯಾನ್ಸರ್ ರೋಗದ ಬಗ್ಗೆ ಸೂಕ್ತ ಸಂದರ್ಭದಲ್ಲಿ ಪತ್ತೆ ಮಾಡದೇ ಹೋದರೆ ಸಾವಿನ ಅಪಾಯ ಕಟ್ಟಿಟ್ಟ ಬುತ್ತಿ. ಸಮಯ ಮೀರಿದರೆ ಈ ರೋಗಕ್ಕೆ ಚಿಕಿತ್ಸೆಯೂ ಇಲ್ಲ. ಈ ಕಾರಣದಿಂದಲೇ ವಿಶ್ವದಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ಇದೇ ಕ್ಯಾನ್ಸರ್ ರೋಗದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಹೆಚ್ಐವಿ ಏಡ್ಸ್, ಮಲೇರಿಯಾ ಮತ್ತು ಕ್ಷಯ ರೋಗಕ್ಕಿಂತ ಕ್ಯಾನ್ಸರ್ ರೋಗದಿಂದಲೇ ಅತಿಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅದ್ರಲ್ಲೂ ಯಾವುದೇ ರೀತಿಯ ಕ್ಯಾನ್ಸರ್ ಆದರೂ ಅದು ತುಂಬಾ ಅಪಾಯಕಾರಿ. ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದರೆ ಅದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಕೆಲವೊಂದು ರೀತಿಯ ಕ್ಯಾನ್ಸರ್ ಅಂತಿಮ ಹಂತದ ತನಕ ಸುಳಿವು ಬಿಟ್ಟುಕೊಡುವುದಿಲ್ಲ. ಇದರಿಂದ ಅದನ್ನು ಪತ್ತೆ ಹಚ್ಚುವುದು ಕಷ್ಟಕರ. ಸಾಮಾನ್ಯವಾಗಿ ಚರ್ಮ, ಸ್ತನ ಮತ್ತು ಜನನಾಂಗದ ಕ್ಯಾನ್ಸರ್ ಹೆಚ್ಚಿನವರಿಗೆ ತಿಳಿದಿದೆ. ಅದೇ ರೀತಿಯಾಗಿ ಕಿಡ್ನಿಯ ಕ್ಯಾನ್ಸರ್ ಕೂಡ ತುಂಬಾ ಅಪಾಯಕಾರಿ.ಹೀಗಾಗಿ ಕೆಲವೊಂದು ಸೂಚನೆ ಕಾಣಿಸುತ್ತಿದ್ದಂತೆ ಎಚ್ಚರಿಕೆಯಿಂದ ಇರುವುದು ಸೂಕ್ತ.

  ಇದನ್ನೂ ಓದಿ: ಚಳಿಗಾಲದಲ್ಲಿ ಶೀತ, ಗಂಟಲು ನೋವು ಹೆಚ್ಚಾಗಿದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

  ಮೂತ್ರಪಿಂಡ ಕ್ಯಾನ್ಸರ್ ಎಂದರೇನು..?

  ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ತೇವಾಂಶದ ಸಮತೋಲನವನ್ನು ಕಾಪಾಡಿಕೊಂಡು ಮೂತ್ರದ ಮೂಲಕ ದೇಹದಿಂದ ವಿಷವನ್ನು ಹೊರಹಾಕುವ ಪ್ರಮುಖ ಅಂಗವಾಗಿದೆ. ಟ್ಯೂಬುಲ್ಸ್ ಎಂದು ಕರೆಯಲ್ಪಡುವ ಈ ಅಂಗದಲ್ಲಿನ ಸಣ್ಣ ಟ್ಯೂಬ್​ಗಳು ರಕ್ತವನ್ನು ಫಿಲ್ಟರ್ ಮಾಡುತ್ತವೆ, ತ್ಯಾಜ್ಯವನ್ನು ಹೊರಹಾಕುತ್ತವೆ. ಅಸಹಜ ಜೀವಕೋಶಗಳು ಅಂಗದಲ್ಲಿ ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಇದು ಗೆಡ್ಡೆಯ ರಚನೆಗೆ ಕಾರಣವಾಗುತ್ತದೆ. ಅದನ್ನೇ ಕಿಡ್ನಿ ಕ್ಯಾನ್ಸರ್ ಎನ್ನಲಾಗುತ್ತದೆ.

  ಮೂತ್ರಪಿಂಡ ಕ್ಯಾನ್ಸರ್ ಗೆ ಕಾರಣವೇನು..?

  ಕಿಡ್ನಿ ಕ್ಯಾನ್ಸರ್ ನ ಲಕ್ಷಣಗಳು ಮೂತ್ರನಾಳ ಅಥವಾ ಸೊಂಟದಲ್ಲಿ ಕಾಣಿಸಿಕೊಳ್ಳಬಹುದು. ಕಿಡ್ನಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ ಬರುವ ತನಕ ಅಥವಾ ಗಡ್ಡೆ ಬೆಳೆಯುವ ತನಕ ನಿಮಗೆ ಅದರ ಲಕ್ಷಣ ಕಾಣಸಿಗದು. ಸಾಮಾನ್ಯ ಪರೀಕ್ಷೆ ವೇಳೆ ಇದು ಆಕಸ್ಮಿಕವಾಗಿ ಕಂಡುಬರಬಹುದು. ಕೆಲವೊಮ್ಮೆ ಕ್ಯಾನ್ಸರ್ ಕಿಡ್ನಿಗೆ ತಲುಪುವ ಮೊದಲು ದೇಹವು ಕೆಲವೊಂದು ಲಕ್ಷಣಗಳನ್ನು ತೋರಿಸುವುದು. ಈ ಚಿಹ್ನೆ ಹಾಗೂ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸುವುದು ಅತೀ ಅಗತ್ಯವಾಗಿದೆ. ಕಿಡ್ನಿ ಕ್ಯಾನ್ಸರ್ ಯಾರಿಗೂ ಬರಬಹುದು. ಆದರೆ ಆಲ್ಕೋಹಾಲ್ ಮತ್ತು ಧೂಮಪಾನ ಮಾಡುವಂತಹ ಜನರಲ್ಲಿ ಈ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಅತಿಯಾಗಿರುವುದು.

  ಕಿಡ್ನಿ ಕ್ಯಾನ್ಸರ್ ನ ಲಕ್ಷಣಗಳೇನು...?

  1) ತೂಕ ಕಡಿಮೆಯಾಗುವುದು: ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುತ್ತದೆ ಎಂಬುದು ಅನೇಕರಿಗೆ ಒಳ್ಳೆಯ ವಿಷಯವಾಗಿರುತ್ತದೆ. ಎಷ್ಟೋ ಜನರು ತೂಕ ಇಳಿಸಿಕೊಳ್ಳಲು ಹರಸಾಹಸ ಮಾಡುತ್ತಾರೆ. ಆದರೆ, ನೀವು ಯಾವ ಪ್ರಯತ್ನವನ್ನೂ ಮಾಡದೆ ತೂಕ ಕಡಿಮೆಯಾಗುತ್ತಿದ್ದರೆ ಅದರ ಬಗ್ಗೆ ನೀವು ಯೋಚನೆ ಮಾಡಲೇಬೇಕು. ಇದು ಮೂತ್ರಪಿಂಡದ ಕ್ಯಾನ್ಸರ್ ಬಗ್ಗೆ ಸೂಚನೆ ಕೂಡ ಆಗಿರಬಹುದು. ಕಿಡ್ನಿ ಕ್ಯಾನ್ಸರ್ ಗೆಡ್ಡೆಯ ಗಾತ್ರದಿಂದಾಗಿ ಇದು ಸಂಭವಿಸುತ್ತದೆ. ಕಾಲಾನಂತರದಲ್ಲಿ ಅದು ಬೆಳೆದಾಗ ಜೀರ್ಣಕಾರಿ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ ಇದರ ಪರಿಣಾಮವಾಗಿ ಹಸಿವು ಕಡಿಮೆಯಾಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ.

  2) ಮೂತ್ರದಲ್ಲಿ ರಕ್ತ: ಕಿಡ್ನಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳ ಮೊದಲ ಚಿಹ್ನೆ ಅಥವಾ ಲಕ್ಷಣವೆಂದರೆ ಅದು ಮೂತ್ರದಲ್ಲಿ ರಕ್ತ ಬರುವುದು. ಮೂತ್ರದಲ್ಲಿ ರಕ್ತ ಕಾಣಿಸಿಕೊಂಡರೆ ಅದು ಕಿಡ್ನಿ ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಕೆಲವೊಂದು ಸಂದರ್ಭದಲ್ಲಿ ಮೂತ್ರದಲ್ಲಿ ರಕ್ತದ ಪ್ರಮಾಣವು ತುಂಬಾ ಕಡಿಮೆ ಇರುವುದು. ಇದರಿಂದ ಅದನ್ನು ಮೂತ್ರ ಪರೀಕ್ಷೆ ಮೂಲಕವೇ ಪತ್ತೆ ಹಚ್ಚಬೇಕಾಗಿದೆ. ಮೂತ್ರದಲ್ಲಿ ರಕ್ತದ ಅಂಶ ಕಂಡುಬಂದರೆ ಆಗ ನೀವು ನೇರವಾಗಿ ವೈದ್ಯರಲ್ಲಿ ಹೋಗಿ ಪರೀಕ್ಷೆ ಮಾಡಿಕೊಳ್ಳಿ.

  3) ರಕ್ತಹೀನತೆ: ಕಿಡ್ನಿಯು ಕೆಂಪು ರಕ್ತದ ಕಣಗಳ ಉತ್ಪತ್ತಿಯನ್ನು ಕೂಡ ನಿಯಂತ್ರಿಸುವುದು. ಕಿಡ್ನಿ ಕ್ಯಾನ್ಸರ್ ಲಕ್ಷಣವಾದರೆ ದೇಹದಲ್ಲಿ ಕೆಂಪು ರಕ್ತದ ಕಣಗಳ ಉತ್ಪತ್ತಿಯು ತುಂಬಾ ಕಡಿಮೆ ಆಗಬಹುದು. ಇದರಿಂದ ರಕ್ತಹೀನತೆ ಕಾಣಿಸಬಹುದು. ರಕ್ತಹೀನತೆ ಸಮಸ್ಯೆಯಿದ್ದರೆ ಆಗ ಯಾವಾಗಲೂ ನಿಶ್ಯಕ್ತಿಯು ಕಾಡುವುದು.

  4) ಬೆನ್ನಿನ ಕೆಳ ಭಾಗದಲ್ಲಿ ನೋವು: ಕೆಲವು ಸಂದರ್ಭಗಳಲ್ಲಿ ಕಿಡ್ನಿ ಕ್ಯಾನ್ಸರ್ ಬೆನ್ನು ನೋವನ್ನು ಪ್ರಚೋದಿಸಬಹುದು. ಈ ರೋಗಲಕ್ಷಣವು ಹಲವಾರು ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿದ್ದರೂ, ಕಿಡ್ನಿ ಕ್ಯಾನ್ಸರ್‌ಗೆ ಸಂಬಂಧಿಸಿದ ಕೆಳ ಬೆನ್ನು ನೋವು ಹಿಂಭಾಗದಲ್ಲಿ ಅಥವಾ ಎರಡೂ ಬದಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಅನೇಕ ದಿನಗಳವರೆಗೆ ಇದ್ದರೆ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

  5) ಹೊಟ್ಟೆಯ ಬಳಿಯಲ್ಲಿ ಬೊಕ್ಕೆ: ನಿಮ್ಮ ಹೊಟ್ಟೆ ಸುತ್ತಲು ಅಥವಾ ಕಿಡ್ನಿಯ ಜಾಗದಲ್ಲಿ ಬೊಕ್ಕೆ ಕಾಣಿಸುವುದು ಕೂಡ ಕಿಡ್ನಿ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಈ ಬೊಕ್ಕೆಯು ಆರಂಭಿಕ ಹಂತದಲ್ಲಿ ತುಂಬಾ ಕಠಿಣವಾಗಿರುವುದು. ಹೆಚ್ಚುವರಿ ಪರೀಕ್ಷೆ ಮಾಡಿದರೆ ವೈದ್ಯರಿಗೆ ಈ ಬೊಕ್ಕೆ ಹಿಂದಿರುವಂತಹ ನಿಜವಾದ ಕಾರಣವು ತಿಳಿದುಬರಲಿದೆ.

  ಇದನ್ನೂ ಓದಿ: ಸ್ಥೂಲಕಾಯದಿಂದ ವಸಡಿಗೂ ಸಮಸ್ಯೆಯಿದೆ ಅಂತಿದೆ ಹೊಸ ಅಧ್ಯಯನ.. ಹೇಗೆ ಗೊತ್ತೇ?

  ಕಿಡ್ನಿ ಕ್ಯಾನ್ಸರ್ ಗೆ ಚಿಕಿತ್ಸೆಯೇನು..?

  ಕಿಡ್ನಿ ಕ್ಯಾನ್ಸರ್ ಗೆ ಚಿಕಿತ್ಸೆ ಕಿಡ್ನಿ ಕ್ಯಾನ್ಸರ್ ನ್ನು ವಿಕಿರಣ, ಕಿಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆ ಮೂಲಕವಾಗಿ ಚಿಕಿತ್ಸೆ ನೀಡಬಹುದು. ಮೊದಲಿಗೆ ವೈದ್ಯರು ಕ್ಯಾನ್ಸರ್ ಯಾವ ಹಂತದಲ್ಲಿ ಇದೆ ಎಂದು ಪತ್ತೆ ಮಾಡಿದ ಬಳಿಕ ಚಿಕಿತ್ಸೆ ಸೂಚಿಸುವರು. ಕಿಡ್ನಿ ಸಮೀಪ ಇರುವಂತಹ ಇತರ ಕೆಲವು ಭಾಗಗಳಿಗೆ ಇದು ಹಬ್ಬಿದೆಯಾ ಎಂದು ತಿಳಿಯಲು ಪರೀಕ್ಷೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ಚಿಕಿತ್ಸೆಯು ಆರಂಭವಾಗುವುದು. ನಿಮಗೆ ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ವೈದ್ಯರನ್ನು ತಕ್ಷಣವೇ ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಆರಂಭದಲ್ಲೇ ಪತ್ತೆ ಮಾಡಿದರೆ ಅದರಿಂದ ಕ್ಯಾನ್ಸರ್ ಹೆಚ್ಚಾಗುವುದನ್ನು ತಡೆಯಬಹುದು. ಕಿಡ್ನಿ ಕ್ಯಾನ್ಸರ್ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಆರಂಭದಲ್ಲೇ ಆದರೆ ಇದು ಬೆಳವಣಿಗೆ ಆಗದಂತೆ ತಡೆಯಬಹುದು.
  Published by:ranjumbkgowda1 ranjumbkgowda1
  First published: