Monsoon Makeup: ಮಳೆಗಾಲದಲ್ಲಿ ನಿಮ್ಮ ಮೇಕಪ್ ಹೇಗಿರಬೇಕು? ನಿಮಗೆ ಇಲ್ಲಿದೆ ಟಿಪ್ಸ್

ಮಳೆಗಾಲದಲ್ಲಿ ಮೇಕಪ್‌ ಮಾಡಿಕೊಂಡರೆ ಅದು ನೀರಲ್ಲಿ ಕರಗಿ ಫಜೀತಿ ಆಗಿಬಿಡುತ್ತವೆ ಎಂಬ ಚಿಂತೆ ಕಾಡುತ್ತಿದೆಯೇ? ಮಳೆಗಾಲದಲ್ಲೂ ನಾವೂ ಮೇಕಪ್‌ ಮಾಡಿಕೊಳ್ಳಬಹುದಾ ಎಂಬ ಪ್ರಶ್ನೆಗೆ ಹೌದು ಎನ್ನುವುದು ನಮ್ಮ ಉತ್ತರ ಆಗಿದೆ. ಮಳೆಗಾಲದಲ್ಲಿ ಮೇಕಪ್‌ ಹೇಗಿರಬೇಕು ಎಂದು ತಿಳಿಯುವ ಕುತೂಹಲ ನಿಮ್ಮದಾಗಿದ್ದರೆ, ಈ ಲೇಖನ ಓದುವುದನ್ನು ಮುಂದುವರಿಸಿ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲ (Rainy Season) ಎಂದರೆ ಎಷ್ಟು ಸಂಭ್ರಮವೋ ಹಾಗೆಯೇ ಅದರಿಂದ ಉಂಟಾಗುವ ತೊಂದರೆಗಳು ಅನೇಕ ಎಂದು ಹೇಳಬಹುದು. ಈ ಜಡಿ ಮಳೆಯಲ್ಲಿ ಸೌಂದರ್ಯದ (Beauty) ಬಗ್ಗೆ ಕಾಳಜಿ ವಹಿಸುವುದು ಸ್ವಲ್ಪ ಕಷ್ಟ ಆದರೂ ಅಸಾಧ್ಯವೇನಲ್ಲ. ಈ ಮಳೆಗಾಲದಲ್ಲಿ ಮೇಕಪ್‌ (Makeup) ಮಾಡಿಕೊಂಡರೆ ಅದು ನೀರಲ್ಲಿ ಕರಗಿ ನಾವು ಮುಂಚೆ ಹೇಗಿದ್ದೇವೋ ಆಗೆ ಆಗಿಬಿಡುತ್ತೆವೆ ಎಂಬ ಚಿಂತೆ ಕಾಡುತ್ತಿದೆಯೇ, ಈ ಮಳೆಗಾಲದಲ್ಲೂ ನಾವೂ ಮೇಕಪ್‌ ಮಾಡಿಕೊಳ್ಳಬಹುದಾ ಎಂಬ ಪ್ರಶ್ನೆಗೆ ಹೌದು ಎನ್ನುವುದು ನಮ್ಮ ಉತ್ತರ ಆಗಿದೆ. ಮಳೆಗಾಲದಲ್ಲಿ ಮೇಕಪ್‌ ಹೇಗಿರಬೇಕು ಎಂದು ತಿಳಿಯುವ ಕುತೂಹಲ ನಿಮ್ಮದಾಗಿದ್ದರೆ, ಈ ಲೇಖನ ಓದುವುದನ್ನು ಮುಂದುವರಿಸಿ.

ಮೇಕಪ್‌ ಎಂದ ತಕ್ಷಣ ಮದುಮಗಳ ತರ ರೆಡಿ ಆಗುವುದು ಈ ಮಳೆಗಾಲದಲ್ಲಿ ಕಷ್ಟ. ಆದರೆ ಕೆಲವು ದಿನನಿತ್ಯ ಬಳಸುವ ಮೇಕಪ್‌ ಉತ್ಪನ್ನಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ನೀವು ಮಾಡಿಕೊಂಡ ಮೇಕಪ್‌ ನಿಮ್ಮ ಮುಖದ ಮೇಲೆ ಇಡೀ ದಿನ ಇರುವುದರಲ್ಲಿ ಸಂಶಯವಿಲ್ಲ.

ಮಳೆಗಾಲದಲ್ಲಿ ಮೇಕಪ್‌ ಬಗ್ಗೆ ಕೆಲವು ಸಲಹೆಗಳು
ಇದೆಲ್ಲದರ ಹೊರತಾಗಿ ನೀವು ಮೇಕಪ್‌ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ದಿನನಿತ್ಯದ ಮೇಕಪ್‌ ಅಲ್ಲಿನ ಕೆಲ ಬದಲಾವಣೆಗಳು ಮಳೆಯಿಂದ ನಿಮ್ಮ ಮೇಕಪ್‌ ಹಾಳಾಗದಂತೆ ತಡೆಯಲು ಸಹಾಯಕವಾಗುತ್ತವೆ.

ಇದನ್ನೂ ಓದಿ: Feet Care: ಕೈ ಮತ್ತು ಪಾದಗಳ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಈ ಮನೆಮದ್ದು ಟ್ರೈ ಮಾಡಿ ನೋಡಿ

ಇತ್ತಿಚಿಗೆ ಈ ಮಳೆಗಾಲಕ್ಕೆ ʼರೇನ್‌-ಪ್ರೂಪ್‌ ಮೇಕಪ್‌ʼ ಎಂಬ ಟ್ರೆಂಡ್‌ ಜಾಸ್ತಿಯಾಗತೊಡಗಿದೆ. ಆದ್ದರಿಂದ ನೀವು ನಿಮ್ಮ ಹಚ್ಚುವ ಫೌಂಡೇಶನ್‌, ಮಸ್ಕರಾ, ಐಲೈನರ್‌ಗಳ ಬಗ್ಗೆ ಹೆಚ್ಚು ಯೋಚಿಸುವುದನ್ನು ಕೂಡಲೇ ನಿಲ್ಲಿಸಿ. ಮಳೆಗಾಲದಲ್ಲಿ ನಿಮ್ಮ ಮೇಕಪ್‌ ಕರಗುವುದನ್ನು ತಪ್ಪಿಸಲು ಅವಶ್ಯವಾಗಿ ತಿಳಿದುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ.

1) ನಿಮ್ಮ ಮಾಯಿಶ್ಚರೈಸರ್‌ ಬದಲಿಸಿ
ಈ ಮಳೆಗಾಲಕ್ಕೆ ಮೊದಲು ನೀವು ಮಾಡಬೇಕಿರುವುದು ನಿಮ್ಮ ಮಾಯಿಶ್ಚರೈಸರ್‌ ಅನ್ನು ಬದಲಿಸಬೇಕು. ವಾಟರ್‌ ಬೆಸ್ಡ್‌ ಮಾಯಿಶ್ಚರೈಸರ್‌ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಎಣ್ಣೆ ಆಧಾರಿತ ಮಾಯಿಶ್ಚರೈಸರ್‌ ಗಳು ನಿಮ್ಮ ಮುಖವನ್ನು ಜಿಡ್ಡಿನಿಂದ ಮುಕ್ತಗೊಳಿಸುವುದಿಲ್ಲ ಹಾಗೂ ಇದರಿಂದ ನಿಮ್ಮ ಮೇಕಪ್‌ ತುಂಬಾ ಕೆಟ್ಟದಾಗಿ ಕಾಣುತ್ತದೆ. ಅದಕ್ಕೆ ಆಯಿಲ್‌ ಮಾಯಿಶ್ಚರೈಸರ್‌ಗೆ ಗುಡ್‌ ಬೈ ಹೇಳಿ, ವಾಟರ್‌ ಬೆಸ್ಡ್‌ ಮಾಯಿಶ್ಚರೈಸರ್‌ಗೆ ಜೈ ಅನ್ನಿ.

2) ಕಾಂಪಾಕ್ಟ್‌ ಪೌಡರ್‌ ಬಳಸಿ: ಮಳೆಗಾಲದಲ್ಲಿ ಮುಖದ ಮೇಲೆ ಫೌಂಡೇಶನ್ ಮತ್ತು ಕನ್ಸೀಲರ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ಅದರ ಬದಲಿಗೆ ಫೌಂಡೇಶನ್ ಪೌಡರ್ ಅಥವಾ ಕಾಂಪ್ಯಾಕ್ಟ್‌ ಅಥವಾ ಅಂತಹುದೇ ಉತ್ಪನ್ನಗಳನ್ನು ಬಳಸಿ. ಇದರಿಂದ ನಿಮ್ಮ ಮೇಕಪ್‌ ಹೆಚ್ಚು ಕಾಲ ಉಳಿಯುತ್ತದೆ ಮತ್ತು ನಿಮ್ಮ ಮುಖವು ಮ್ಯಾಟ್ ಫಿನಿಶ್ ಲುಕ್‌ ಅನ್ನು ಪಡೆಯುತ್ತದೆ.

3) ಕಣ್ಣಿನ ಮೇಕಪ್ ಬಗ್ಗೆ ಗಮನವಿರಲಿ: ವಿಶೇಷವಾಗಿ ನಿಮ್ಮ ಮುಖದ ಅಂದ ಹೆಚ್ಚಿಸುವುದು ಈ ಕಣ್ಣಿನ ಮೇಕಪ್‌ ಆಗಿರುತ್ತದೆ. ಆದ್ದರಿಂದ ನಿಮ್ಮ ಚರ್ಮವು ಹೆಚ್ಚು ಎಣ್ಣೆಯುಕ್ತ ಚರ್ಮವಾಗಿದ್ದರೆ, ಐಲೈನರ್ ಅನ್ನು ಬಳಸಬೇಡಿ. ಮಳೆಗಾಲದ ದಿನಗಳಲ್ಲಿ ಲೈನರ್ ಕರಗಿ ಕಣ್ಣುಗಳು ಕೆಟ್ಟದಾಗಿ ಕಾಣಬಹುದು. ಇದು ನಿಮ್ಮ ಸಂಪೂರ್ಣ ಲುಕ್‌ ಅನ್ನೆ ಹಾಳುಮಾಡುತ್ತದೆ. ಐ ಲೈನರ್‌ ಬಳಸಲೇಬೇಕು ಎಂದರೆ ನೀವು ವಾಟರ್‌ ಪ್ರೂಫ್ ಐ ಲೈನರ್‌ ಬಳಸಿ.

4) ಮ್ಯಾಟ್ ಲಿಪ್‌ಸ್ಟಿಕ್‌ಗೆ ಜೈ ಅನ್ನಿ: ಈ ಮಳೆಗಾಲದ ದಿನಗಳಲ್ಲಿ ಲಿಪ್‌ಸ್ಟಿಕ್‌ಗಳು ಕರಗಿ ಮುಖದ ಅಂದ ಹಾಳು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಮ್ಯಾಟ್ ಲಿಪ್‌ಸ್ಟಿಕ್‌ ಅನ್ನು ಬಳಸುವುದು ನಿಮ್ಮ ಮೇಕಪ್‌ಗೆ ನೀವು ಕೊಡುವ ಉತ್ತಮ ಉಡುಗೊರೆ ಆಗಿದೆ. ಈ ಮ್ಯಾಟ್‌ ಲಿಪ್‌ಸ್ಟಿಕ್‌ಗಳು ತುಟಿಗಳ ಮೇಲೆ ಹೆಚ್ಚು ಕಾಲ ಉಳಿಯುತ್ತವೆ.

ಇದನ್ನೂ ಓದಿ: Healthy Hair: ನಿಮ್ಮ ಕೂದಲು ಆರೋಗ್ಯವಾಗಿ ಇರಬೇಕಾ? ಹಾಗಾದ್ರೆ ಈ 5 ಬಯೋಟಿನ್ ಭರಿತ ಆಹಾರಗಳನ್ನು ಸೇವಿಸಿ

ಅಬ್ಬಾ ಮಳೆಗಾಲದಲ್ಲಿ ಮೇಕಪ್‌ ಮಾಡದೇ ಹೇಗೆ ಇರೋದು ಎಂದು ಯೋಚಿಸುತ್ತಿರುವರು, ಕೂಡಲೇ ಈ ಸಲಹೆಗಳ ಅನುಸಾರವಾಗಿ ಮೇಕಪ್‌ ಮಾಡಿಕೊಂಡು, ನಿಮ್ಮ ಮುಖವನ್ನು ಮತ್ತಷ್ಟು ಅಂದಗೊಳಿಸಿ, ಈ ಮಳೆಗಾಲದಲ್ಲಿ ನಿಮ್ಮ ಖುಷಿ ಕ್ಷಣಗಳನ್ನು ಎಂಜಾಯ್‌ ಮಾಡಿ.
Published by:Ashwini Prabhu
First published: