• Home
 • »
 • News
 • »
 • lifestyle
 • »
 • Fasting And Health: ನವರಾತ್ರಿಯ ಒಂಬತ್ತು ದಿನಗಳ ಉಪವಾಸದಲ್ಲಿ ಕೆಲವು ನೈಸರ್ಗಿಕ ಪಾನೀಯ ಸೇವನೆ ಆರೋಗ್ಯಕ್ಕೆ ಲಾಭಕಾರಿ!

Fasting And Health: ನವರಾತ್ರಿಯ ಒಂಬತ್ತು ದಿನಗಳ ಉಪವಾಸದಲ್ಲಿ ಕೆಲವು ನೈಸರ್ಗಿಕ ಪಾನೀಯ ಸೇವನೆ ಆರೋಗ್ಯಕ್ಕೆ ಲಾಭಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಮಯೋಚಿತ ಮತ್ತು ಪೌಷ್ಟಿಕಾಂಶ ಭರಿತ ಊಟ ಮಾಡುವುದು ಆರೋಗ್ಯಕ್ಕೆ ಹಿತ. ನವರಾತ್ರಿ ಉಪವಾಸದ ವೇಳೆ ದೇಹವನ್ನು ಚೆನ್ನಾಗಿ ಹೈಡ್ರೀಕರಿಸುವುದು ಮುಖ್ಯ ಆಗಿದೆ. ಆರೋಗ್ಯಕರವಾಗಿ ಮತ್ತು ರಿಫ್ರೆಶ್ ಆಗಿರಲು ಮನೆಯಲ್ಲಿ ಕೆಲವು ನೈಸರ್ಗಿಕ ಪಾನೀಯ ಸೇವನೆ ಮಾಡುವುದು ಉತ್ತಮ.

 • Share this:

  ಒಂಬತ್ತು ದಿನಗಳ (Nine Days) ನವರಾತ್ರಿ ಉಪವಾಸವು (Navaratri Fasting) ಸೆಪ್ಟೆಂಬರ್ 26 ಅಂದ್ರೆ ನಿನ್ನೆಯಿಂದ ಶುರುವಾಗಿದೆ. ಇದು ಅಕ್ಟೋಬರ್ 4 ರವರೆಗೆ ಮುಂದುವರೆಯಲಿದೆ. ಶರತ್ಕಾಲದ ಅಶ್ವಿನ್ ಮಾಸದಲ್ಲಿ ಬರುವ ನವರಾತ್ರಿಯನ್ನು ಶರನ್ನವರಾತ್ರಿ ಎಂದು ಕರೆಯುತ್ತಾರೆ. ಹಾಗೆಯೇ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಆಚರಿಸಲಾಗುವ ನವರಾತ್ರಿಯನ್ನು ಮೊದಲ ವರ್ಷದಲ್ಲಿ ಚೈತ್ರ ನವರಾತ್ರಿ ಎಂದು ಕರೆಯುತ್ತಾರೆ. ಈ ಎರಡೂ ನವರಾತ್ರಿಗಳಲ್ಲಿ ಮಾ ದುರ್ಗೆಯ ಆರಾಧನೆ, ಪೂಜೆ, ಉಪವಾಸ ವ್ರತ ಮಾಡಲಾಗುತ್ತದೆ. ಮಾ ದುರ್ಗೆಯ ಕಟ್ಟು ನಿಟ್ಟಿನ ಆರಾಧಕರು ತಪ್ಪದೇ ಒಂಭತ್ತು ದಿನಗಳವರೆಗೆ ಉಪವಾಸ ಮಾಡುತ್ತಾರೆ. ಉಪವಾಸದ ವೇಳೆ ಹಣ್ಣು (Fruits), ಕೆಲವು ಪಾನೀಯ (Drinks), ನೀರು, ದ್ರವ ಪದಾರ್ಥ ಪಥ್ಯ ಫಾಲೋ ಮಾಡುತ್ತಾರೆ.


  ನವರಾತ್ರಿ ಉಪವಾಸ


  ಕೆಲವರು ನಿರ್ಜಲ ಉಪವಾಸ ಮಾಡುತ್ತಾರೆ. ಮತ್ತು ಇನ್ನು ಕೆಲವರು ಹಬ್ಬದ ಸಮಯದಲ್ಲಿ ಕೆಲವು ಆಯ್ದ ಧಾನ್ಯಗಳು, ಸಾಬುದಾನ ಅಕ್ಕಿ, ಹುರುಳಿ ಹಿಟ್ಟು, ರಾಜಗೀರ, ಸಿಂಗಾರ ಹಿಟ್ಟಿನಿಂದ ತಯಾರಿಸಿದ ಸಾತ್ವಿಕ ಆಹಾರ ತಯಾರಿಸಿ ಸೇವಿಸುತ್ತಾರೆ. ಅದರಲ್ಲಿ ಗೋಧಿ, ಅಕ್ಕಿ, ದ್ವಿದಳ ಧಾನ್ಯ, ಈರುಳ್ಳಿ, ಬೆಳ್ಳುಳ್ಳಿ ಬಳಸಲ್ಲ.


  ಸಾಕಷ್ಟು ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್‌, ಆರೋಗ್ಯಕರ ಕೊಬ್ಬು, ವಿಟಮಿನ್‌ ಮತ್ತು ಖನಿಜಗಳ ಸಮತೋಲಿತ ಆಹಾರ ಸೇವನೆ ಮಾಡಬೇಕು. ಇದು ಉಪವಾಸದ ವೇಳೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


  ಸಮಯೋಚಿತ ಮತ್ತು ಪೌಷ್ಟಿಕಾಂಶ ಭರಿತ ಆಹಾರ ಸೇವನೆ


  ಸಮಯೋಚಿತ ಮತ್ತು ಪೌಷ್ಟಿಕಾಂಶ ಭರಿತ ಊಟ ಮಾಡುವುದು ಮಧುಮೇಹ, ರಕ್ತದೊತ್ತಡ, ಹೃದ್ರೋಗದಂತಹ ದೀರ್ಘಕಾಲ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.


  ನವರಾತ್ರಿ ಉಪವಾಸದ ವೇಳೆ ದೇಹವನ್ನು ಚೆನ್ನಾಗಿ ಹೈಡ್ರೀಕರಿಸುವುದು ಮುಖ್ಯ ಆಗಿದೆ. ಫ್ಯಾಟ್ ಟು ಸ್ಲಿಮ್‌ನ ನಿರ್ದೇಶಕಿ, ಪೌಷ್ಟಿಕತಜ್ಞ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ಹೇಳುವ ಪ್ರಕಾರ, ಆರೋಗ್ಯಕರವಾಗಿ ಮತ್ತು ರಿಫ್ರೆಶ್ ಆಗಿರಲು ಮನೆಯಲ್ಲಿ ಈ ನೈಸರ್ಗಿಕ ಪಾನೀಯ ಸೇವನೆ ಮಾಡಲು ಸೂಚಿಸುತ್ತಾರೆ.


  ಎಳನೀರು


  ನೀವು ನೈಸರ್ಗಿಕ ಎಳನೀರು ಸೇವಿಸಬಹುದು. ಇಲ್ಲವೇ ಎಳನೀರು ಪಾನೀಯವನ್ನು ಈ ರೀತಿ ಜ್ಯೂಸ್ ಮಾಡಿ ಸೇವಿಸಬಹುದು. ಕೇವಲ ಮೂರು ಪದಾರ್ಥಗಳೊಂದಿಗೆ ಈ ಪಾನೀಯ ತಯಾರಿಸಿ. ಇದು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಮತ್ತು ರುಚಿಕರವಾಗಿದೆ.


  ದೊಡ್ಡ ಮಗ್‌ಗೆ ಎಳನೀರಿನ ತೆಳುವಾದ ಗಂಜಿಯನ್ನು ಸುರಿಯಿರಿ. ಇದಕ್ಕೆ ಬಿಸಿ ನೀರು ಸೇರಿಸಿ ಮತ್ತು ನೊರೆ ಬರುವವರೆಗೆ ಕಲಕಿ. ನಂತರ ತೆಂಗಿನ ಹಾಲು ಮತ್ತು ನಿಮ್ಮ ಆಯ್ಕೆಯ ಸಿಹಿಕಾರಕ ಸೇರಿಸಿ ಸವಿಯಿರಿ.


  ಕಿತ್ತಳೆ ಜೊತೆ ನಿಂಬೆ ಪಾನಕ ರಸ


  ಹೊಸದಾಗಿ ಸ್ಕ್ವೀಝ್ ಮಾಡಿದ ಕಿತ್ತಳೆ ರಸ ಮತ್ತು ಕಿತ್ತಳೆ ಹೋಳು ಸೇರಿಸಿ ಅದ್ಭುತವಾದ ಮನೆಯಲ್ಲಿ ಮಾಡಿದ ನಿಂಬೆ ಪಾನಕ ಸೇವಿಸಿ. ಈ ಪಾನೀಯದಲ್ಲಿ ಹುಳಿ-ಸಿಹಿ ರುಚಿ ಕೂಡ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಿತ್ತಳೆ ಮತ್ತು ನಿಂಬೆಯ ಪರಿಮಳ ಹೆಚ್ಚು ಅದ್ಭುತ ಪರಿಮಳ ಮತ್ತು ರುಚಿ ನೀಡುತ್ತದೆ. ಈ ಪಾನೀಯವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.


  ಅರಿಶಿನ ಪಾನೀಯ


  ಒಂದು ಚಿಟಿಕೆ ಕರಿಮೆಣಸಿನ ಜೊತೆಗೆ ಅರಿಶಿನ ಮತ್ತು ಖರ್ಜೂರ ತೆಗೆದುಕೊಳ್ಳಿ. ಈ ಎಲ್ಲಾ ವಸ್ತುಗಳನ್ನು ಬಾದಾಮಿ ಹಾಲಿನಲ್ಲಿ ಮಿಶ್ರಣ ಮಾಡಿ. ರುಚಿ ಹೆಚ್ಚಿಸಲು ಉಪ್ಪನ್ನು ಸೇರಿಸಬಹುದು.


  ತಣ್ಣನೆಯ ಶುಂಠಿ ಮತ್ತು ಹಸಿರು ಚಹಾ


  ಬಿಸಿಯಾದ ಹಸಿರು ಚಹಾ ಕುಡಿಯಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಆದರೆ ಹಸಿರು ಚಹಾವನ್ನು ತಣ್ಣಗಾಗಿಸಿ ಮತ್ತು ಅದಕ್ಕೆ ಸ್ವಲ್ಪ ನಿಂಬೆ, ಜೇನುತುಪ್ಪ ಮತ್ತು ಹೊಸದಾಗಿ ಹಿಂಡಿದ ಶುಂಠಿ ರಸ ಸೇರಿಸಿ. ಇದನ್ನು ಪುದೀನ ಎಲೆಗಳಿಂದ ಅಲಂಕರಿಸಿ ಸೇವಿಸಿ.


  ಕಲ್ಲಂಗಡಿ ಮತ್ತು ತುಳಸಿ ರಸ


  ಒಂದು ಪಿಂಚ್ ಕಪ್ಪು ಉಪ್ಪು, ತಾಜಾ ತುಳಸಿ ಮತ್ತು ನಿಂಬೆ ರಸ ಬೇಕು. ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ. ಅದರಲ್ಲಿ ಕಲ್ಲಂಗಡಿ ತುಂಡು ಸಹ ಹಾಕಬಹುದು. ಮೇಲೆ ಐಸ್ ಕ್ಯೂಬ್‌ ಹಾಕಿ ಸೇವಿಸಿ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.


  ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


  ಚಿಯಾ-ಕೋಕೋ ನೀರು


  ತಾಜಾ ತೆಂಗಿನ ನೀರು ಉತ್ತಮ ನಿರ್ವಿಶೀಕರಣ ಆಗಿದೆ. ಮತ್ತು ಅದನ್ನು ಉತ್ತಮಗೊಳಿಸಲು ಚಿಯಾ ಬೀಜ ಸೇರಿಸಿ. ಈ ಸಣ್ಣ ಬೀಜಗಳು ಫೈಬರ್, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲಗಳಾಗಿವೆ. ನೀವು ಚಿಯಾ ಬೀಜಗಳ ಬದಲಿಗೆ ತುಳಸಿ ಬೀಜ ಸಹ ಸೇವಿಸಬಹುದು.

  Published by:renukadariyannavar
  First published: