Periods Mistakes: ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡುವ ಕೆಲ ತಪ್ಪುಗಳು ಆರೋಗ್ಯಕ್ಕೆ ಅಪಾಯಕಾರಿ!

ಪಿರಿಯಡ್ಸ್ ಅಂದರೆ ಋತುಚಕ್ರವು ಮಹಿಳೆಯರಿಗೆ ಪ್ರತಿ ತಿಂಗಳ ಚಕ್ರವಾಗಿದೆ. ಎಲ್ಲಾ ಮಹಿಳೆಯರು ಮುಟ್ಟಿನ ಸಮಯದಲ್ಲಿ ಕೆಲವು ರೀತಿಯ ನೋವು ಎದುರಿಸುತ್ತಾರೆ. ಕೆಲವು ಮಹಿಳೆಯರು ಪ್ಯಾಡ್ ಮತ್ತು ಆಹಾರಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿ ಮಹಿಳೆ (Women) ಋತುಚಕ್ರದ (Periods) ಸಮಯದಲ್ಲಿ (Time) ವಿವಿಧ ಸಮಸ್ಯೆ (Problem) ಎದುರಿಸಬೇಕಾಗುತ್ತದೆ. ಈ ಸಮಸ್ಯೆ ಅವರ ಒಂದು ದಿನದ ಸಮಸ್ಯೆಯಲ್ಲ. ಪ್ರತಿ ತಿಂಗಳು (Every Month) ಬರುವ ಋತುಚಕ್ರ ಐದು ದಿನಗಳವರೆಗೆ ಮಹಿಳೆಯರ ಹಾರ್ಮೋನ್ಸ್, ಮೂಡ್, ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅಷ್ಟೆ ಅಲ್ಲ ಯಾರಾದರೂ ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆ, ಹೈಜಿನ್ ಬಗ್ಗೆ ಸರಿಯಾಗಿ ಗಮನ ಕೊಡದೇ ಹೋದರೆ ಸಾಂಕ್ರಾಮಿಕ ರೋಗದ ಭೀತಿಯು ಹೆಚ್ಚುತ್ತದೆ. ಪಿರಿಯಡ್ಸ್ ಸಮಯದಲ್ಲಿ ಕೆಲವರಿಗೆ ತೀವ್ರ ಹೊಟ್ಟೆ ನೋವು, ಕೆಲವರಿಗೆ ಆಯಾಸ, ಕೆಲವರಿಗೆ ವಾಂತಿ ಸಮಸ್ಯೆ, ಕೆಲವರಿಗೆ ದೇಹ ನೋವು, ಕೆಲವರಿಗೆ ತಲೆನೋವು, ಕೆಲವರಿಗೆ ಏನಾದರೂ ಸಮಸ್ಯೆ ಅಥವಾ ಇನ್ನೇನೋ ಇರುತ್ತದೆ.

    ಮಹಿಳೆಯರ ಮುಟ್ಟಿನ ಸಮಯದ ನೋವು

    ಈ ಆರೋಗ್ಯ ಸಮಸ್ಯೆಯಿಂದ ಮಹಿಳೆಯರ ದಿನವೂ ವ್ಯರ್ಥವಾಗುತ್ತದೆ ಮತ್ತು ಮನಸ್ಥಿತಿ ಕೂಡ ಕೆಟ್ಟದಾಗಿರುತ್ತದೆ. ಪಿರಿಯಡ್ಸ್ ಅಂದರೆ ಋತುಚಕ್ರವು ಮಹಿಳೆಯರಿಗೆ ಪ್ರತಿ ತಿಂಗಳ ಚಕ್ರವಾಗಿದೆ. ಎಲ್ಲಾ ಮಹಿಳೆಯರು ಮುಟ್ಟಿನ ಸಮಯದಲ್ಲಿ ಕೆಲವು ರೀತಿಯ ನೋವು  ಎದುರಿಸುತ್ತಾರೆ.

    ಪಿರಿಯಡ್ಸ್ ಸಮಯದಲ್ಲಿ ಮಹಿಳೆಯಲ್ಲಿ ತಲೆನೋವು, ದೇಹ ನೋವು, ರಕ್ತಸ್ರಾವ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಾಹಿತಿ ಕೊರತೆಯಿಂದ ಈ ಸಮಸ್ಯೆ ಹೋಗಲಾಡಿಸಲು ಅನೇಕ ಬಾರಿ ಕೆಲವು ಮಹಿಳೆಯರು ಪ್ಯಾಡ್ ಮತ್ತು ಆಹಾರಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡುತ್ತಾರೆ.

    ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು

    ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಸಮಸ್ಯೆ

    ಆಹಾರ ಮತ್ತು ಪಾನೀಯದ ಕಾರಣದಿಂದಾಗಿ ಮತ್ತು ಕೆಲವು ಸಮಯದಲ್ಲಿ ರಕ್ತಸ್ರಾವ ನಿಲ್ಲಿಸಲು ನಾವು ಬಳಸುವ ಔಷಧದಿಂದಾಗಿ ತಪ್ಪು ಮಾಡುತ್ತಿದ್ದರೆ ನಿಲ್ಲಿಸಿ. ಮತ್ತು ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಈಗ ಪಿರಿಯಡ್ಸ್ ಸಮಯದಲ್ಲಿ ಯಾವ ತಪ್ಪು ಮಾಡಬಾರದು ಎಂಬುದನ್ನು ಇಲ್ಲಿ ಹೇಳಲಾಗಿದೆ.

    ಪ್ಯಾಡ್ಗಳು ಅಥವಾ ಟ್ಯಾಂಪೂನ್ಗಳ ಬಳಕೆ

    ಋತುಚಕ್ರದ ಸಮಯದಲ್ಲಿ ರಕ್ತಸ್ರಾವ ತಡೆಯಲು ಅನೇಕ ಜನರು ಪ್ಯಾಡ್ಗ ಅಥವಾ ಟ್ಯಾಂಪೂನ್ಗಳನ್ನು ಬಳಸುತ್ತಾರೆ. ಆದರೆ ಇದು ಹತ್ತಿ ಮತ್ತು ರೇಯಾನ್ ಮಿಶ್ರಣದಿಂದ ತಯಾರಿಸಲ್ಪಟ್ಟಿದೆ. ಅಪಾಯಕಾರಿ ರಾಸಾಯನಿಕ ಮತ್ತು ಕೀಟನಾಶಕ ಇದರಲ್ಲಿದೆ. ಈ ಕಾರಣದಿಂದಾಗಿ, ಮಹಿಳೆಯು ಫಲವತ್ತತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಸಾವಯವ ಪ್ಯಾಡ್ಗಳು ಅಥವಾ ಟಪಾನ್ಗಳನ್ನು ಬಳಸುವುದು ಉತ್ತಮ.

    ನೋವು ನಿವಾರಕಗಳ ಸೇವನೆ

    ಪಿರಿಯಡ್ಸ್ ಅವಧಿಯಲ್ಲಿ ಅನೇಕ ಬಾರಿ, ಮಹಿಳೆಯರು ದೇಹದಲ್ಲಿ ಅಂತಹ ತೀವ್ರವಾದ ನೋವನ್ನು ಎದುರಿಸಬೇಕಾಗುತ್ತದೆ. ಅದನ್ನು ತಪ್ಪಿಸಲು ಅವರು ನೋವು ನಿವಾರಕ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಈ ಔಷಧಿ ಬಳಕೆಯಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ನೀವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.

    ಪ್ಯಾಡ್  ಬದಲಿಸಿ

    ಮಹಿಳೆಯರು ಯಾವುದನ್ನು ಬಳಸಿದರೂ ಅದನ್ನು ನೇರವಾಗಿ ರಾತ್ರಿಯಲ್ಲಿ ಬದಲಾಯಿಸುತ್ತಾರೆ. ಇದರಿಂದ ನೀವು ಅನೇಕ ರೋಗಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಪ್ರತಿ 4 ರಿಂದ 8 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುವುದು ಉತ್ತಮ.

    ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ

    ಈ ಸಮಯದಲ್ಲಿ, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ರಕ್ತಸ್ರಾವವು ಅಹಿತಕರ ವಾಸನೆ  ಉಂಟು ಮಾಡಬಹುದು. ಆದರೆ ಇದು ಸೋಂಕು ಅಲ್ಲ. ಬದಲಿಗೆ, ಶುಚಿಗೊಳಿಸುವಿಕೆಯು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ

    ಅಧಿಕ ಕಾಫಿ ಸೇವನೆ

    ಈ ಸಮಯದಲ್ಲಿ ನಿದ್ರೆ ಇಲ್ಲ, ಸುಸ್ತು, ತಲೆನೋವು ಕೂಡ ಉಂಟಾಗುತ್ತದೆ. ಇದನ್ನು ತಪ್ಪಿಸಲು, ಮಹಿಳೆಯರು ಕಾಫಿ ಕುಡಿಯುತ್ತಾರೆ. ಕಾಫಿಯಲ್ಲಿರುವ ಕೆಫೀನ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
    Published by:renukadariyannavar
    First published: