ಲೈಂಗಿಕ ಕ್ರಿಯೆಯ ಬಳಿಕ ನಿಮ್ಮಲ್ಲಿ ಪಾಪ ಪ್ರಜ್ಞೆ ಕಾಡುತ್ತಿದೆಯೇ? ಇಲ್ಲಿದೆ ಕಾರಣ

news18
Updated:October 3, 2018, 5:47 PM IST
ಲೈಂಗಿಕ ಕ್ರಿಯೆಯ ಬಳಿಕ ನಿಮ್ಮಲ್ಲಿ ಪಾಪ ಪ್ರಜ್ಞೆ ಕಾಡುತ್ತಿದೆಯೇ? ಇಲ್ಲಿದೆ ಕಾರಣ
  • Advertorial
  • Last Updated: October 3, 2018, 5:47 PM IST
  • Share this:
-ನ್ಯೂಸ್ 18 ಕನ್ನಡ

ಲೈಂಗಿಕ ಜೀವನದಲ್ಲಿ ಭಾವನೆಗಳಿಗೂ ಮಹತ್ತರ ಪಾತ್ರವಿದೆ. ಸಾಮಾನ್ಯವಾಗಿ ಪುರುಷರು ಲೈಂಗಿಕ ಕ್ರಿಯೆಯ ಬಳಿಕ ಸಂಗಾತಿಯಿಂದ ದೂರ ಸರಿಯಲು ಪ್ರಯುತ್ನಿಸುತ್ತಾರೆ. ಈ ರೀತಿಯ ವರ್ತನೆಯು ಸಂಗಾತಿಯಲ್ಲಿ ಹಲವು ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಅಧ್ಯಯನ ತಂಡವೊಂದು ಕಾರಣವನ್ನು ಪತ್ತೆಹಚ್ಚಿದ್ದಾರೆ.

ಪುರುಷರಲ್ಲಿ ಲೈಂಗಿಕ ಕ್ರಿಯೆಯ ನಂತರ ಉಂಟಾಗುವ ಇಂತಹ ಮನಸ್ಥಿತಿಗೆ ಪೋಸ್ಟ್​ಕೊಯ್ಟಲ್ ಡೈಸ್ಫೋರಿಯಾ(PCD)ಅಂಶ ಮುಖ್ಯ ಕಾರಣ ಎಂದು ಹೇಳಲಾಗಿದೆ. ಇದರಿಂದಾಗಿ ಸಂಭೋಗ ಕ್ರಿಯೆಯ ಬಳಿಕ ಪುರುಷರಲ್ಲಿ ಶೂನ್ಯತಾಭಾವ, ದುಃಖದ ಭಾವನೆ ಮತ್ತು ಮನದಲ್ಲಿ ಕಿರಿಕಿರಿ ಉಂಟಾಗುತ್ತದೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.

ಕ್ವೀನ್​ಲ್ಯಾಂಡ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು ನಡೆಸಿದ ಈ  ಸಮೀಕ್ಷೆಯಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ರಷ್ಯಾ, ನ್ಯೂಜಿಲ್ಯಾಂಡ್, ಜರ್ಮನಿ ಸೇರಿದಂತೆ ಹಲವು ದೇಶಿಯರು ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ 1,208 ಪುರುಷರಲ್ಲಿ ಶೇ.41 ರಷ್ಟು ಮಂದಿ PCDಯ  ಅನುಭವ ಉಂಟಾಗುತ್ತದೆ ಎಂದಿದ್ದಾರೆ.

ಲೈಂಗಿಕ ಕ್ರಿಯೆ ಬಳಿಕ ಸಂಗಾತಿಯಿಂದ ಕೆಲ ಸಮಯದವರೆಗೆ ದೂರ ಉಳಿಯಬೇಕೆಂದು ಈ ಸಮಯದಲ್ಲಿ ಅನಿಸುತ್ತದೆ. ಸೆಕ್ಸ್ ನಂತರ ಯಾರೂ ಕೂಡ ನನ್ನನ್ನು ಮುಟ್ಟಬಾರದು, ಚಡಪಡಿಕೆ, ಒಂಟಿಯಾಗಿ ಮಲಗಬೇಕು ಎಂಬಿತ್ಯಾದಿ ಭಾವನೆಗಳು ಕಾಡುತ್ತದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಕೆಲ ಪುರುಷರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆದರೆ ಇನ್ನೂ ಕೆಲವರು ಈ ಅಭಿಪ್ರಾಯಕ್ಕೆ ತದ್ವಿರುದ್ಧವೆಂಬಂತೆ, ಲೈಂಗಿಕ ಕ್ರಿಯೆಯ ಬಳಿಕ ಹೆಚ್ಚಿನ ಸಂತೃಪ್ತಿ ದೊರೆತಿದ್ದು, ಇದರಿಂದ ನಾನು ಸಂಗಾತಿಯೊಂದಿಗೆ ಇನ್ನಷ್ಟು ಹತ್ತಿರವಾಗಿದ್ದೇನೆ ಎಂಬ ಭಾವನೆ ಮೂಡಿದೆ ಎಂದಿದ್ದಾರೆ.

ಈ ರೀತಿಯ ಭಾವನೆಗಳಿಗೆ ಹಲವಾರು ಕಾರಣಗಳಿದ್ದು, ಇದು ಜೈವಿಕ ಮತ್ತು ಮಾನಸಿಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಇದೇ ರೀತಿಯ ಅನುಭವ ಮಹಿಳೆಯರಲ್ಲೂ ಕೂಡ ಕಾಣಿಸಿಕೊಳ್ಳುತ್ತದೆ. ಆದರೆ  ಪೋಸ್ಟ್​ಕೊಯ್ಟಲ್ ಡೈಸ್ಫೋರಿಯಾ(PCD)ಯಿಂದ ಇಂತಹ ಭಾವನೆಗಳು ಪುರುಷರಲ್ಲಿ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಸ್ತ್ರೀಯರು ಲೈಂಗಿಕ ಕ್ರಿಯೆಯ ಬಳಿಕ ಚುಂಬನ, ಮುದ್ಧಾಟ ಮತ್ತು ಮಾತುಕತೆಯನ್ನು ನಿರೀಕ್ಷಿಸುತ್ತಾರೆ. ಇದರಿಂದ ದಂಪತಿಗಳಲ್ಲಿ ಅನ್ಯೋನ್ಯತಾ ಭಾವನೆ ಮೂಡಿ ಸಂತೃಪ್ತಿ ದೊರೆಯುತ್ತದೆ. ಆದರೆ ಪುರುಷರಲ್ಲಿ ಕಾಣಿಸಿಕೊಳ್ಳುವ ಪಿಸಿಡಿ ಸಮಸ್ಯೆಯಿಂದ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯಗಳೇ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
First published:October 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ