ಬ್ಯೂಟಿ ಕ್ವೀನ್ ನೀವಾಗಬೇಕಾ?; ಹಾಗಿದ್ದರೆ ಸೌಂದರ್ಯಕ್ಕೆ ಅಡ್ಡಿಪಡಿಸುವ ಈ ಆಹಾರದಿಂದ ದೂರವಿರಿ

ಕೆಲವೊಂದು ಆಹಾರಗಳು ನಿಮ್ಮ ಆರೋಗ್ಯವನ್ನು, ಸೌಂದರ್ಯವನ್ನು ಹಾಳು ಮಾಡುತ್ತದೆ. ಇವುಗಳಿಂದ ನಿಮ್ಮ ತ್ವಚೆ ಕಳೆಗುಂದಬಹುದು. ಈಗಾಗಲೇ ಅಂತಹ ಆಹಾರಗಳನ್ನು ನೀವು ಸೇವಿಸಿರಬಹುದು. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಅಂತಹ ಆಹಾರ ಸೇವನೆಯಿಂದ ದೂರವಿರಿ.

news18-kannada
Updated:July 23, 2020, 8:06 PM IST
ಬ್ಯೂಟಿ ಕ್ವೀನ್ ನೀವಾಗಬೇಕಾ?; ಹಾಗಿದ್ದರೆ ಸೌಂದರ್ಯಕ್ಕೆ ಅಡ್ಡಿಪಡಿಸುವ ಈ ಆಹಾರದಿಂದ ದೂರವಿರಿ
ಸಾಂದರ್ಭಿಕ ಚಿತ್ರ.
  • Share this:
ಸೌಂದರ್ಯ ಎನ್ನುವುದು ಹುಟ್ಟಿನಿಂದ ಬಂದ ಬಳುವಳಿಯಲ್ಲ. ಹಾಗಂತ ಸೌಂದರ್ಯವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಸಾಧ್ಯವೂ ಇಲ್ಲ. ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳೋದು ನಮ್ಮ ಕೈಯಲ್ಲಿದೆ. ತಿನ್ನುವ ಆಹಾರದಿಂದ, ಕುಡಿಯುವ ಪಾನೀಯ ಸೇವನೆಯವರೆಗೂ ಮಿತವಾಗಿ ಆಹಾರ ಸೇವಿಸಿದರೆ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಚೆನ್ನಾಗಿಡಬಹುದು.

ಕೆಲವೊಂದು ಆಹಾರಗಳು ನಿಮ್ಮ ಆರೋಗ್ಯವನ್ನು, ಸೌಂದರ್ಯವನ್ನು ಹಾಳು ಮಾಡುತ್ತದೆ. ಇವುಗಳಿಂದ ನಿಮ್ಮ ತ್ವಚೆ ಕಳೆಗುಂದಬಹುದು. ಈಗಾಗಲೇ ಅಂತಹ ಆಹಾರಗಳನ್ನು ನೀವು ಸೇವಿಸಿರಬಹುದು. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಅಂತಹ ಆಹಾರ ಸೇವನೆಯಿಂದ ದೂರವಿರಿ.

ಕಾಫಿ

ಕಾಫಿಯಲ್ಲಿರುವ ಕೆಫೆನ್​ ಅಂಶ ಸ್ಟ್ರೆಸ್​ ಹಾರ್ಮೋನ್​ ಲೆವೆಲ್​ ಹೆಚ್ಚಿಸುತ್ತದೆ. ಹಾಗಾಗೀ ಕಾಫಿ ಸೇವನೆಯಿಂದ ಸ್ಕಿನ್​ ಡ್ಯಾಮೇಜ್​ ಆಗುವುದರೊಂದಿಗೆ ಚರ್ಮದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Virat Kohli 1000th Post: ಇನ್​​ಸ್ಟಾಗ್ರಾಂನಲ್ಲಿ 1000ನೇ ಫೋಟೋ ಹಂಚಿಕೊಂಚ ವಿರಾಟ್​; ಯಾವುದು ಗೊತ್ತಾ?

ಕರಿದ ಆಹಾರಗಳು

ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವಿಸಿದರೂ ತ್ವಜೆಗೆ ಮಾರಾಕವಾಗುತ್ತದೆ. ಕರಿದ ತಿಂಡಿಗಳನ್ನು ತಿನ್ನುವುದರಿಂದ ಫ್ಯಾಟ್​ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಚರ್ಮಕ್ಕೆ ಬೇಕಾದ ಆಮ್ಲಜನಕವು ಸಿಗುವುದಿಲ್ಲ. ಇದರಿಂದ ಚರ್ಮದ ಕಾಂತಿಯನ್ನು ಕಳೆದುಕೊಳ್ಳುತ್ತೀರಿ.Happy Birthday Suriya: ಒಂದು ಕಾಲದಲ್ಲಿ ಗಾರ್ಮೆಂಟ್ ನೌಕರ; ಇಂದು ಕಾಲಿವುಡ್​​ನ ಖ್ಯಾತ ನಟ!

ಸ್ಟೈಸಿ ಆಹಾರಗಳು

ಸ್ಪೈಸಿ ಆಹಾರವನ್ನು ಸೇವಿಸುದರಿಂದ ದೇಹದ ಟೆಂಪರೇಚರ್​ ಹೆಚ್ಚಾಗುತ್ತದೆ. ಇದರಿಂದ ಬ್ಲಡ್​ ವೆಸೆಲ್ಸ್​ ಹರಡುವ ಕಾರಣ ಕಾಂಪ್ಲೆಕ್ಷನ್​​ ಡಾರ್ಕ್​ ಆಗುತ್ತದೆ.

Lifestyle Tips: ಮದುವೆಗೂ ಮುನ್ನ ನೀವು ಇದನ್ನು ಮಾಡಲೇಬಾರದು!

ವೈಟ್​ ಬ್ರೆಡ್​

ಬೆಳಗ್ಗಿನ ಜಾವ ಅಡುಗೆ ಮಾಡಲು ಉದಾಸಿನ ಮಾಡುವವರು ಹೆಚ್ಚಾಗಿ ವೈಟ್​ ಬ್ರೆಡ್​​ ಜೊತೆಗೆ ಜಾಮ್​ ಸೇರಿಸಿಕೊಂಡು ಸೇವನೆ ಮಾಡುತ್ತಾರೆ. ಪ್ರತಿದಿನ ವೈಟ್​ ಬ್ರೆಡ್​ ತಿನ್ನುವುದರಿಂದ ಇನ್ಸುಲಿನ್​ ಲೆವೆಲ್​​ ಹೆಚ್ಚಾಗುತ್ತದೆ. ಜೊತೆಗೆ ತ್ವಜೆಯಲ್ಲಿ ಎಣ್ಣೆಯ ಅಂಶ ಹೆಚ್ಚಾಗುತ್ತದೆ. ಇದರಿಂದ ಮುಖದ ಬಣ್ಣ ಬೇಗ ಕಳೆಗುಂದುತ್ತದೆ.
Published by: Harshith AS
First published: July 23, 2020, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading