• Home
  • »
  • News
  • »
  • lifestyle
  • »
  • Cancer Cause: ಜನಪ್ರಿಯ ಆಹಾರ ಪೂರಕಗಳಿಂದ ಕ್ಯಾನ್ಸರ್​ಗೆ ಆಹ್ವಾನ, ಅಧ್ಯಯನದಲ್ಲಿ ಬಹಿರಂಗ!

Cancer Cause: ಜನಪ್ರಿಯ ಆಹಾರ ಪೂರಕಗಳಿಂದ ಕ್ಯಾನ್ಸರ್​ಗೆ ಆಹ್ವಾನ, ಅಧ್ಯಯನದಲ್ಲಿ ಬಹಿರಂಗ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Supplements May Increase Cancer: ಹಲವಾರು ಸಂಶೋಧನೆಗಳು ಅತಿಯಾಗಿ ಪೂರಕಗಳನ್ನು ತೆಗೆದುಕೊಳ್ಳುವುದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವ ಕುರಿತು ಅಧ್ಯಯನ ಮಾಡಿದೆ.

  • Share this:

ಕೊರೊನಾ (Corona) ನಂತರ ಆರೋಗ್ಯ ಬಗ್ಗೆ ಕಾಳಜಿವಹಿಸುವುದು ಬಹಳ ಅವಶ್ಯಕವಾಗಿದೆ. ಹಾಗಾಗಿ ಜನರು ಸಹ ವಿವಿಧ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ವಿವಿಧ ವಿಟಮಿನ್​ ಮಾತ್ರೆಗಳನ್ನು ಸಹ ಸೇವಿಸುತ್ತಿದ್ದಾರೆ. ಆದರೆ, ಈ ವಿಟಮಿನ್ B3 (Vitamin)  ನ ರೂಪವಾದ ನಿಕೋಟಿನಮೈಡ್ ರೈಬೋಸೈಡ್ (NR) ನಂತಹ ಜನಪ್ರಿಯ ಪೂರಕದ (Supplement) ಸೇವನೆಯು ಕ್ಯಾನ್ಸರ್ (Cancer) ಸೇರಿದಂತೆ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವು (Study)  ಕಂಡುಹಿಡಿದಿದ್ದು, ಇದು ಒಂದು ಎಚ್ಚರಿಕೆಯ ಸೂಚನೆ ಎನ್ನಬಹುದು. ಹೆಚ್ಚಿನ ಮಟ್ಟದ ಎನ್‌ಆರ್ ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮೆದುಳಿಗೆ ಕ್ಯಾನ್ಸರ್ ಹರಡಲು ಕಾರಣವಾಗಬಹುದು ಎಂದು ಸಂಶೋಧಕರ ತಂಡವು ಕಂಡುಹಿಡಿದಿದೆ ಎಂದು ಅಧ್ಯಯನವು ಬಹಿರಂಗಗೊಳಿಸಿದೆ.  


ವಿವಿಧ ವಿಚಾರ ಬಹಿರಂಗ ಮಾಡಿದ ಸಂಶೋಧನೆ


ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್ ಅನ್ನು ಇತರ ರೀತಿಯ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅದು ಬೇಗ ಬೆಳೆಯುತ್ತದೆ. ಅಲ್ಲದೇ ಈ ಕ್ಯಾನ್ಸರ್​ ಪತ್ತೆಯಾದ ಸಮಯದಲ್ಲಿ ಹರಡುವ ಸಾಧ್ಯತೆ ಹೆಚ್ಚು ಮತ್ತು ಚಿಕಿತ್ಸೆಯ ನಂತರ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ.  ಕ್ಯಾನ್ಸರ್ ಮೆದುಳಿಗೆ ತಲುಪಿದ ನಂತರ, ಅದರ ಪರಿಣಾಮಗಳು ಹೆಚ್ಚು ಮಾರಕವಾಗಬಹುದು ಏಕೆಂದರೆ ಈ ಸಮಯದಲ್ಲಿ ಯಾವುದೇ ಪರಿಹಾರ ನೀಡುವ ಚಿಕಿತ್ಸಾ ಆಯ್ಕೆಗಳು ಇಲ್ಲ, ಎಂದು ಬಯೋಸೆನ್ಸರ್ಸ್ ಮತ್ತು ಬಯೋಎಲೆಕ್ಟ್ರಾನಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಸಂಶೋಧಕ ಎಲೆನಾ ಗೌನ್ ಹೇಳಿದ್ದಾರೆ.




ಕೆಲವು ಜನರು ವಿಟಮಿನ್ ತೆಗೆದುಕೊಳ್ಳಬೇಕು ಎಂದು ಈ  ಪೂರಕಗಳನ್ನು ತೆಗೆದುಕೊಳ್ಳುತ್ತಾರೆ ಏಕೆಂದರೆ ಜೀವಸತ್ವಗಳು ಮತ್ತು ಪೂರಕಗಳು ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಮಾತ್ರ ಹೊಂದಿವೆ ಎಂದು ಅವರು ಊಹಿಸಿಕೊಂಡಿದ್ದಾರೆ. ಆದರೆ ಅವು ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಬಹಳ ಕಡಿಮೆ ಮಾಹಿತಿ ಇದೆ,ಗೌನ್ ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ನಿಮ್ಮ ಹೃದಯ ಸೇಫ್ ಆಗಿರ್ಬೇಕು ಅಂದ್ರೆ ಈ ಹಣ್ಣುಗಳನ್ನು ಪ್ರತಿದಿನ ತಿನ್ನಿ


ಈ ಮಾಹಿತಿಯ ಕೊರತೆಯಿಂದಾಗಿ, ದೇಹದಲ್ಲಿ ಈ ವಿಟಮಿನ್ ಪೂರಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಸುತ್ತಲಿನ ಕೆಲ ಮೂಲ ಪ್ರಶ್ನೆಗಳ ಬಗ್ಗೆ ಅಧ್ಯಯನ ಮಾಡಲು ಮುಖ್ಯ ಕಾರಣ ಎನ್ನುತ್ತಾರೆ ಸಂಶೋದಕರು. ತನ್ನ 59 ವರ್ಷದ ತಂದೆ ಕರುಳಿನ ಕ್ಯಾನ್ಸರ್ ಪತ್ತೆಯಾದ ಕೇವಲ 3 ತಿಂಗಳಲ್ಲಿ ನಿಧನ ಹೊಂದಿದರು. ಇದು ನನಗೆ ಕ್ಯಾನ್ಸರ್ ಚಯಾಪಚಯ ಅಥವಾ ದೇಹದಲ್ಲಿ ಕ್ಯಾನ್ಸರ್ ಹರಡುವ ಶಕ್ತಿಯ ಬಗ್ಗೆ ಉತ್ತಮ ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸಲು ಸಹಾಯವಾಯಿತು ಎಂದು ಹೇಳಿಕೊಂಡಿದ್ದಾರೆ.




ಪೂರಕಗಳು ಬಹಳ ಅಪಾಯ


NR ಸೆಲ್ಯುಲಾರ್ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಲು ಬಳಸುವ ಪೂರಕವಾಗಿದೆ. ಆದರೆ, ಇದು ಕ್ಯಾನ್ಸರ್ ಕೋಶಗಳು ತಮ್ಮ ಹೆಚ್ಚಿದ ಚಯಾಪಚಯ ಕಾರಣದಿಂದ ಆ ಶಕ್ತಿಯನ್ನು ತಿನ್ನುತ್ತವೆ. ಹಾಗಾಗಿ ಸಂಶೋಧಕ ಗೌನ್ ಕ್ಯಾನ್ಸರ್ ಬೆಳವಣಿಗೆ ಮತ್ತು ಹರಡುವಿಕೆಯಲ್ಲಿ NR ಪಾತ್ರದ ಕುರಿತು ಸಂಶೋಧನೆ ಮಾಡಲು ಕಾರಣವಾಯಿತು ಎಂದಿದ್ದಾರೆ.


some dietary supplements may increase cancer risk says study
ಸಾಂದರ್ಭಿಕ ಚಿತ್ರ


ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಎಲ್ಲಾ ಕ್ಯಾನ್ಸರ್‌ಗಳು ಒಂದೇ ರೀತಿ ಇರುವುದಿಲ್ಲ, ವಿಶೇಷವಾಗಿ ಚಯಾಪಚಯ ಲಕ್ಷಣಗಳ ದೃಷ್ಟಿಕೋನದಿಂದ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್​ಗಳು ಕಿಮೊಥೆರಪಿಯ ಮೊದಲು ಅಥವಾ ನಂತರ ತಮ್ಮ ಚಯಾಪಚಯವನ್ನು ಬದಲಾಯಿಸಬಹುದು. ಹಾಗಾಗಿ ಯಾವುದೇ ಪೂರಕಗಳನ್ನು ತೆಗೆದುಕೊಳ್ಳುವಾಗ ಸರಿಯಾದ ಮಾಹಿತಿಯ ಅಗತ್ಯವಿದೆ.



ಇದನ್ನೂ ಓದಿ: ಸ್ಟೀಲ್ ಪಾತ್ರೆ ತೊಳೆಯೋದು ತಲೆನೋವಾಗಿದ್ರೆ ಚಿಂತೆ ಬಿಡಿ, ಸುಲಭ ಉಪಾಯ ಟ್ರೈ ಮಾಡಿ


ಕೇವಲ ಈ ಸಂಶೋಧನೆ ಮಾತ್ರವಲ್ಲದೇ, ಇನ್ನೂ ಹಲವಾರು ಸಂಶೋಧನೆಗಳು ಅತಿಯಾಗಿ ಪೂರಕಗಳನ್ನು ತೆಗೆದುಕೊಳ್ಳುವುದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವ ಕುರಿತು ಅಧ್ಯಯನ ಮಾಡಿದೆ. ನಾವು ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡ ಹಲವಾರು ವಸ್ತುಗಳು ಸಮಸ್ಯೆಯ ಮೂಲ ಕಾರಣವಾಗುತ್ತದೆ. ವೈದ್ಯರ ಸಲಹೆ ಇಲ್ಲದೇ, ಯಾವುದೇ ಪೂರಕಗಳನ್ನು ತೆಗೆದುಕೊಳ್ಳುವುದು ಅಪಾಯಕ್ಕೆ ಆಹ್ವಾನಕೊಟ್ಟಂತೆ ಎನ್ನುತ್ತಾರೆ ತಜ್ಞರು.

Published by:Sandhya M
First published: