Food Hacks: ಬೇಳೆ ಕಾಳು ತಿಂದ್ರೆ ಗ್ಯಾಸ್ ಸಮಸ್ಯೆ ಆಗುತ್ತಾ? ಈ ರೀತಿ ಬೇಯಿಸಿ, ಏನೂ ತೊಂದರೆ ಆಗಲ್ಲ

Cooking Hacks : ಪೌಷ್ಟಿಕ ತಜ್ಞ ಶೋನಾಲಿ ಸಬೆರ್ವಾಲ್ ಪ್ರಕಾರ, ಉದ್ದಿನ ಬೇಳೆ, ಚನ್ನಾ ಮತ್ತು ಮಸೂರ್ ನಂತಹ ಒಣ ಬೀನ್ಸ್ ಅನ್ನು ಜೀರ್ಣಕಾರಿ ಸಮಸ್ಯೆಯನ್ನು ಕಡಿಮೆ ಮಾಡಲು ಸರಿಯಾದ ರೀತಿಯಲ್ಲಿ ನೆನೆಸಿ ನಂತರ ಬೇಯಿಸಬೇಕು. ಅದರ ಹೊರಗಿನ ಸಿಪ್ಪೆಯಲ್ಲಿರುವ ವಿಷದ ಅಂಶವನ್ನು ತೆಗೆದುಹಾಕಿ ಸೇವನೆ ಮಾಡುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮಲ್ಲಿ ಹೆಚ್ಚಿನವರು ದ್ವಿದಳ ಧಾನ್ಯಗಳು (Legumes) ಮತ್ತು  ಬೀನ್ಸ್ (Beans) ತಿನ್ನುವುದನ್ನು ಇಷ್ಟಪಡುತ್ತಾರೆ. ಆದರೆ ಅವುಗಳನ್ನು ಸೇವಿಸಿದ ನಂತರ ಹೊಟ್ಟೆ ಭಾರ, ಉಬ್ಬರ ಮತ್ತು ಗ್ಯಾಸ್ ಕಾಣಿಸಿಕೊಳ್ಳುವುದು ಸಹ ಸಾಮಾನ್ಯವಾಗಿದೆ. ನೀವು ಬೀನ್ಸ್ ಇನ್ನು ತಿನ್ನುವುದರಿಂದ ಈ ಸಮಸ್ಯೆ (Health Problem)   ಉಂಟಾಗುತ್ತದೆ ಎಂದು ಅದನ್ನು ತಿನ್ನುವುದನ್ನ ಬಿಡಬಾರದು. ಅವುಗಳನ್ನು ಸರಿಯಾದ ರೀತಿಯಲ್ಲಿ ನೆನೆಸಿ ಮತ್ತು ಅಡುಗೆ ಮಾಡುವ ಮೂಲಕ ಈ ಉಬ್ಬಾರದ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.  ಪೌಷ್ಟಿಕ ತಜ್ಞ ಶೋನಾಲಿ ಸಬೆರ್ವಾಲ್ ಪ್ರಕಾರ, ಉದ್ದಿನ ಬೇಳೆ, ಚನ್ನಾ ಮತ್ತು ಮಸೂರ್ ನಂತಹ ಒಣ ಬೀನ್ಸ್ ಅನ್ನು ಜೀರ್ಣಕಾರಿ ಸಮಸ್ಯೆಯನ್ನು ಕಡಿಮೆ ಮಾಡಲು ಸರಿಯಾದ ರೀತಿಯಲ್ಲಿ ನೆನೆಸಿ ನಂತರ ಬೇಯಿಸಬೇಕು. ಅದರ ಹೊರಗಿನ ಸಿಪ್ಪೆಯಲ್ಲಿರುವ ವಿಷದ ಅಂಶವನ್ನು ತೆಗೆದುಹಾಕಿ ಸೇವನೆ ಮಾಡುವುದು ಉತ್ತಮ.  

ಬೀನ್ಸ್ ಹೆಚ್ಚಿನ ಫೈಬರ್ ಹೊಂದಿರುತ್ತದೆ, ಆದರೆ ನಮ್ಮ ದೇಹವು ಹೆಚ್ಚಿನ ಪ್ರಮಾಣದ ಫೈಬರ್​ಗೆ ಒಗ್ಗಿಕೊಂಡಿಲ್ಲದಿದ್ದರೆ, ಉಬ್ಬುವುದು ಮತ್ತು ನೋವು ಉಂಟುಮಾಡಬಹುದು. ನೀವು ಬೀನ್ಸ್ ಅನ್ನು ಚೆನ್ನಾಗಿ ನೆನೆಸಿಡಬೇಕು. ರಾತ್ರಿ ಸುಮಾರು ಎಂಟು ಗಂಟೆಗಳ ಕಾಲ ನೆನೆಸುವುದು ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಅಲ್ಲದೇ ಅದು ಉಬ್ಬುವುದರಿಂದ ನಮ್ಮ ಹೊಟ್ಟೆ ಉಬ್ಬುವ ಸಮಸ್ಯೆ ಬರುವುದಿಲ್ಲ.  ಬೀನ್ಸ್ ಅನ್ನು ನೆನಸಿದಾಗ ಇದು ಅನಿಲ ಅಂಶವನ್ನು ನಿವಾರಿಸುತ್ತದೆ. ಆಗ ಗ್ಯಾಸ ತುಂಬಿದ ಅನುಭವವಾಗುವುದಿಲ್ಲ.

ಹಾಗೆಯೇ ನೀವು ಅವುಗಳನ್ನು ಸುಮಾರು ಒಂದು ಗಂಟೆ ಬೆಚ್ಚಗಿನ ನೀರಿನಲ್ಲಿ ನೆನೆಸಿಡಬಹುದು, ಆದ್ದರಿಂದ ಅವುಗಳು ಅವುಗಳ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚಾಗುತ್ತವೆ. "ಅವುಗಳನ್ನು ಬೇಯಿಸಿದಾಗ ಅವುಗಳ ಆಕಾರವನ್ನು ಉಳಿಸಿಕೊಳ್ಳಲು ಇದು ಒಂದು ಮಾರ್ಗ ಸಿಗುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಅಂಜೂರ ಹಣ್ಣನ್ನು ಹೀಗೆ ತಿಂದ್ರೆ ತೂಕ ಇಳಿಸೋದು ಸುಲಭ

ನೀವು ಬೀನ್ಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಅಥವಾ ನಿಮಗೆ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ನಂತರ ಅವುಗಳನ್ನು ಬೇಯಿಸಿ. ಇದು ಅವರಿಗೆ ಹೆಚ್ಚು ಜೀರ್ಣವಾಗುವಂತೆ ಮಾಡುತ್ತದೆ ಹಾಗೂ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಅಲ್ಲದೇ ಬೆಯಿಸಿದ ನಂತರ ಅದನ್ನು ತಣ್ಣಗಾಗಲು ಬಿಡಿ. ಹೊಗೆಯಾಡಲು ಅವಕಾಶ ಕೊಡಬೇಕು.

ಅಲ್ಲದೇ ನೀವು ಉಪ್ಪು ಮತ್ತು ಟೊಮ್ಯಾಟೊ, ವಿನೆಗರ್ ನಂತಹ ಯಾವುದೇ ಆಮ್ಲದ ಅಂಶವನ್ನು ಹೊಂದಿರುವ ಪದಾರ್ಥವನ್ನು ಕೊನೆಯಲ್ಲಿ ಮಾತ್ರ ಸೇರಿಸಿ, ಅದು ಹುರುಳಿ ಅಥವಾ ಧಾನ್ಯಗಳು ಮೃದುವಾಗುವುದನ್ನು ತಡೆಯುತ್ತದೆ. ಅದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ.

ಇದನ್ನೂ ಓದಿ: PCOS ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿದೆ ಪರಿಹಾರ

ಅವುಗಳಿಗೆ ಸಿಹಿ ಅಂಶ ಬೇಕು ಎಂದರೆ, ಅವುಗಳನ್ನು ಬೇಯಿಸುವಾಗ ಕೆಂಪು ಕುಂಬಳಕಾಯಿ, ಕ್ಯಾರೆಟ್ ಮತ್ತು ಈರುಳ್ಳಿಯಂತಹ ತರಕಾರಿಗಳನ್ನು ಸೇರಿಸಿ. ದೊಡ್ಡ ಪ್ರಮಾಣದ ತರಕಾರಿಗಳನ್ನು ಸೇರಿಸಿ ಅದಕ್ಕೆ ತಕ್ಕಂತೆ ನೀರನ್ನು ಹಾಕಿ.  ನೀರಿನ ಪ್ರಮಾಣ ಹೆಚ್ಚು ಅಥವಾ ಕಡಿಮೆಯಾಗಬಾರದು.
Published by:Sandhya M
First published: