Kitchen Hacks: ಸ್ಟೀಲ್ ಪಾತ್ರೆ ಮೇಲೆ ಇರೋ ತುಕ್ಕಿನ ಕಲೆ ಹೋಗಿಸೋಕೆ ಸೂಪರ್ ಉಪಾಯ ಇಲ್ಲಿದೆ

Tips To Get rid Of Rust: ಇದರ ಜೊತೆಗೆ ಕಾರ್ ಮತ್ತು ಇತರ ವಾಹನಗಳಿಗೆ ಸಂಬಂಧಪಟ್ಟ ಟೂಲ್​ಗಳಲ್ಲಿ ಸಹ ತುಕ್ಕು ಹಿಡಿದಿದ್ದರೆ ಅದನ್ನು ನೀವು ಬೇಕಿಂಗ್ ಸೋಡಾ ಮೂಲಕ ಸ್ವಚ್ಛ ಮಾಡಬಹುದು. ಅಲ್ಲದೇ ನೀವು ಕೇವಲ ಅಡುಗೆ ಸೋಡಾ ಜೊತೆಗೆ ಉಪ್ಪನ್ನ ಸಹ ಸೇರಿಸಿ ತುಕ್ಕಿನ ಕಲೆಗಳ ಮೇಲೆ ಹಾಕಿ ಉಜ್ಜಿದರೆ ಕಲೆಗಳು ಬೇಗ ಮಾಯವಾಗುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯ ಹೃದಯ (Heart)  ಎಂದರೆ ಅಡುಗೆ ಮನೆ (kitchen) ಎನ್ನಲಾಗುತ್ತದೆ.  ಅದು ಮನೆಯ ಸದಸ್ಯರ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ, ಆರೋಗ್ಯದ ಕೀಲಿ ಕೈ ಸಹ ಎನ್ನಬಹುದು. ನಾವು ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟು ಆರೋಗ್ಯ (Health) ಚನ್ನಾಗಿರುತ್ತದೆ ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ಅಡುಗೆ ಮನೆಯ ನೆಲದಲ್ಲಿ ಅಥವಾ ಅಡುಗೆ ಮಾಡುವ ಸ್ಲ್ಯಾಬ್​ ಮೇಲೆ ತುಕ್ಕಿನ ( Rust Stains) ಕಲೆಗಳಾಗುತ್ತದೆ. ಅಲ್ಲದೇ ಪಾತ್ರೆಗಳಲ್ಲಿ ಸಹ ತುಕ್ಕಿನ ಕಲೆಗಳು ಉಂಟಾಗುತ್ತದೆ. ಪಾತ್ರೆಗಳು ಸ್ವಚ್ಛವಾಗಿಲ್ಲದಿದ್ದರೆ ಅಡುಗೆ ಮಾಡಲು ಮನಸ್ಸು ಬರುವುದಿಲ್ಲ ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಬ್ಬಿಣದ ವಸ್ತುಗಳನ್ನು ಅಡಿಗೆ ಮನೆ ಅಥವಾ ಬಾತ್ ರೂಮಿನಲ್ಲಿ ನೆಲದ ಮೇಲೆ ಇರಿಸಿದರೆ, ಅದರ ಕಲೆಗಳು ಅಂಟಿಕೊಳ್ಳುತ್ತವೆ.  ಎಷ್ಟೇ ಉಜ್ಜಿದರೂ ಕಲೆ ಹೋಗುವುದಿಲ್ಲ. ಪಾತ್ರೆಗಳ ಮೇಲೆ ಮತ್ತು ನೆಲದ ಮೇಲೆ ತುಕ್ಕಿನ ಕಲೆಯಾಗಿದ್ದರೆ ಅದನ್ನು ಹೋಗಲಾಡಿಸುವ ಸುಲಭ ವಿಧಾನ ಇಲ್ಲಿದೆ.  

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ ಹಲವಾರು ಪ್ರಯೋಜನಗಳನ್ನು ಹೊಂದಿದೆ.  ಅದನ್ನು ಬಹಳಷ್ಟು ವಸ್ತುಗಳನ್ನು ಸ್ವಚ್ಛ ಮಾಡಲು ಬಳಕೆ ಮಾಡಲಾಗುತ್ತದೆ. ತುಕ್ಕು ಹಿಡಿದಿರುವ ನೆಲ ಮತ್ತು ಪಾತ್ರೆಯನ್ನು ಸಹ ನೀವು ಬೇಕಿಂಗ್ ಸೋಡಾ ಬಳಸಿ ಸ್ವಚ್ಛ ಮಾಡಬಹುದು.  ತುಕ್ಕು ಹಿಡಿದ ಸ್ಥಳದಲ್ಲಿ ಬೇಕಿಂಗ್ ಸೋಡಾ ಹಾಕಿ 2 ರಿಂದ 3 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಚನ್ನಾಗಿ ಉಜ್ಜಿ, ಇದನ್ನ 2 ರಿಂದ 3 ಬಾರಿ ಮಾಡಿದರೆ ತುಕ್ಕಿನ ಕಲೆಗಳು  ಮಾಯವಾಗುತ್ತದೆ. ಅಲ್ಲದೇ ನೀವು ಬೇಕಿಂಗ್ ಸೋಡಾವನ್ನು ಬೆಳ್ಳಿ ಪಾತ್ರೆಗಳನ್ನು ಸಹ ಸ್ವಚ್ಛ ಮಾಡಲು ಬಳಕೆ ಮಾಡಬಹುದು.

ಇದರ ಜೊತೆಗೆ ಕಾರ್ ಮತ್ತು ಇತರ ವಾಹನಗಳಿಗೆ ಸಂಬಂಧಪಟ್ಟ ಟೂಲ್​ಗಳಲ್ಲಿ ಸಹ ತುಕ್ಕು ಹಿಡಿದಿದ್ದರೆ ಅದನ್ನು ನೀವು ಬೇಕಿಂಗ್ ಸೋಡಾ ಮೂಲಕ ಸ್ವಚ್ಛ ಮಾಡಬಹುದು. ಅಲ್ಲದೇ ನೀವು ಕೇವಲ ಅಡುಗೆ ಸೋಡಾ ಜೊತೆಗೆ ಉಪ್ಪನ್ನ ಸಹ ಸೇರಿಸಿ ತುಕ್ಕಿನ ಕಲೆಗಳ ಮೇಲೆ ಹಾಕಿ ಉಜ್ಜಿದರೆ ಕಲೆಗಳು ಬೇಗ ಮಾಯವಾಗುತ್ತದೆ.  ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಯಾವುದಾದರೂ ಸೋಪಿನ ಪೌಡರ್ ಹಾಕಿ ಕಲಸಿ, ನಂತರ ಅದಕ್ಕೆ ಬೇಕಿಂಗ್ ಸೋಡಾ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಈಗ ತುಕ್ಕು ಇರುವ ಜಾಗದಲ್ಲಿ ಅದನ್ನು ಹಾಕಿ ಟೂತ್​ಬ್ರೆಷ ತೆಗೆದುಕೊಂಡು ಉಜ್ಜಿದರೆ ಕಲೆಗಳು ಬೇಗ ಹೋಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕೂದಲು ಒಣಗದಂತೆ ಕಾಪಾಡಲು ಮನೆಯಲ್ಲಿಯೇ ಹೇರ್​ಮಾಸ್ಕ್​ಗಳನ್ನು ತಯಾರಿಸಿ

ಉಪ್ಪು ಮತ್ತು ನಿಂಬೆಹಣ್ಣು

ಉಪ್ಪು ಮತ್ತು ನಿಂಬೆಹಣ್ಣಿನ ಮಿಶ್ರಣವನ್ನು ಮ್ಯಾಜಿಕ್ ಎಂದು ಕರೆಯಬಹುದು. ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ನಿಂಬೆಹಣ್ಣು ಆರೋಗ್ಯದ ದೃಷ್ಟಿಯಿಂದ ಸಹ ಬಹಳ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತುಕ್ಕು ಇರುವ ಜಾಗಕ್ಕೆ ಹಚ್ಚಿ ಚನ್ನಾಗಿ ಉಜ್ಜಬೇಕು. ಐದು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಅದನ್ನು ಸ್ವಚ ಬಟ್ಟೆಯಿಂದ ಒರೆಸಬೇಕು.

ವಿನೇಗರ್

ಅಡುಗೆ ಸೋಡಾಕ್ಕಿಂತ ಹೆಚ್ಚು ಪರಿಣಾಮಕಾರಿ ವಿನೆಗರ್  ಎನ್ನಲಾಗುತ್ತದೆ. ಇದನ್ನ ತುಕ್ಕಿರುವ ಪ್ರದೇಶಗಳಿಗೆ ಹಾಕಿ ಚನ್ನಾಗಿ ಉಜ್ಜಿದರೆ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ನೀವು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ವಿನೇಗರ್ ಅನ್ನು ಸೇರಿಸಿ ಮಿಶ್ರಣ  ಮಾಡಿ ಒಂದು ಟೂತ್​ ಬ್ರೆಷ್  ಬಳಸಿ ತುಕ್ಕು ಇರುವ ಸ್ಥಳದಲ್ಲಿ ಹಾಕಿ ಚನ್ನಾಗಿ ಉಜ್ಜಿ.

ಅಲ್ಲದೇ ಪಾತ್ರೆಯ ಮೆಲಿನ ತುಕ್ಕನ್ನ ತೆಗೆದು ಹಾಕಲು ಮತ್ತೊಂದು ವಿಧಾನ ಎಂದರೆ ಆಲೂಗೆಡ್ಡೆಯ ತುಂಡನ್ನು ತೆಗೆದುಕೊಂಡು ತುಕ್ಕು ಇರುವ ಪಾತ್ರೆಯ ಮೇಲೆ ಹಾಕಿ 5 ನಿಮಿಷಗಳ ಕಾಲ ಉಜ್ಜಿದರೆ ಕಲೆ ಮಾಯವಾಗುತ್ತದೆ.

ಇದನ್ನೂ ಓದಿ: ನಿಮ್ಮ ಶೂ ಸೈಜ್ ಮೇಲೆ ನಿಮ್ಮ ಕ್ಯಾರೆಕ್ಟರ್ ಹೇಳಬಹುದು.. ಚೆಕ್ ಮಾಡಿ

ಇನ್ನು ಸೀಮೆಎಣ್ಣೆ ತುಕ್ಕಿನ ಕಲೆಗಳನ್ನು ನಿವಾರಿಸಲು ಸುಲಭ ಮಾರ್ಗ ಎನ್ನಲಾಗುತ್ತದೆ. ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಕಲೆಗಳ ಮೆಲೆ ಹಾಕಿ ಉಜ್ಜಿ ನೋಡಿ, ಕಲೆಗಳು ಹೋಗುತ್ತದೆ.
Published by:Sandhya M
First published: