Travel Tips: ದಕ್ಷಿಣ ಭಾರತದಲ್ಲಿ ನೀವು ನೋಡಲೇಬೇಕಾದ ಸ್ಥಳಗಳಿವು

South India: ಅದರ ಕುರುಹುಗಳನ್ನು ನೀವಿಲ್ಲಿ ಕಾಣಬಹುದು. ಮೈಸೂರು ಕೇವಲ ಐತಿಹಾಸಿಕ ತಾಣ ಮಾತ್ರವಲ್ಲ ಗಂಧದ ನಾಡು ಕೂಡ. ಹೌದು, ಈ ಜಿಲ್ಲೆ ಶ್ರೀ ಗಂಧದ ಮರ,  ಮೈಸೂರು ರೇಷ್ಮೆ ಮತ್ತು ಧೂಪ ದೃವ್ಯದ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ, ಭಾರತದಲ್ಲಿ ಯೋಗವನ್ನು ಅಭ್ಯಾಸ ಮಾಡಲು ಸೂಕ್ತವಾದ ಅತ್ಯುತ್ತಮ ಸ್ಥಳ ಇದಾಗಿದೆ ಎಂಬುವುದನ್ನು ಮರೆಯುವ ಹಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತ (South India) ಪ್ರವಾಸಿಗರ ಪಾಲಿನ ಸ್ವರ್ಗ. ಹಚ್ಚ ಹಸಿರಿನ ಬೆಟ್ಟಗಳು, ಪ್ರಶಾಂತ ಕಣಿವೆಗಳು, ಮನ ಸೆಳೆಯುವ ಪರ್ವತಗಳು ಮತ್ತು ಸುಂದರ ಕಡಲ ತೀರಗಳನ್ನು (Sea)  ಹೊಂದಿರುವ ಇಲ್ಲಿನ ತಾಣಗಳಲ್ಲಿ ಪ್ರವಾಸಿಗರು (Tourist) ಅವಿಸ್ಮರಣೀಯ ಅನುಭವಗಳನ್ನು ಪಡೆಯಲು ಸಾಧ್ಯ. ದಕ್ಷಿಣ ಭಾರತ ಪ್ರವಾಸ ಮಾಡಲು ಬಯಸುವವರು ಭೇಟಿ ನೀಡಲೇಬೇಕಾದ ಕೆಲವು ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.

1. ವರ್ಕಳ
ಇದು ಕೇರಳದ ಕರಾವಳಿ ಪಟ್ಟಣಗಳಲ್ಲಿ ಒಂದು. ವರ್ಕಳವು ಬೆಟ್ಟಗಳು, ಪ್ರಾಚೀನ ಕಡಲ ತೀರಗಳು, ಕೋಟೆಗಳು, ಸರೋವರಗಳು ಮತ್ತು ದೀಪಸ್ಥಂಭಗಳಿಂದ ಕೂಡಿದ ಪ್ರವಾಸಿ ತಾಣವಾಗಿದೆ. ಸಮುದ್ರ ಆಹಾರ ಭೋಜನ ಪ್ರಿಯರಿಗಂತೂ ಇದು ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಎಂದೆಂದಿಗೂ ಮರೆಯದ ಪ್ರವಾಸದ ಕ್ಷಣಗಳನ್ನು ನಿಮ್ಮ ನೆನಪಿನ ಬುಟ್ಟಿಯಲ್ಲಿ ಕಟ್ಟಿಕೊಳ್ಳಬೇಕೆಂಬ ಇಚ್ಚೆ ನಿಮಗಿದ್ದರೆ ಖಂಡಿತಾ ನೀವಿಲ್ಲಿಗೆ ಭೇಟಿ ನೀಡಬೇಕು. ವರ್ಕಳ ಬೀಚ್, ಜನಾರ್ದನ ಸ್ವಾಮಿ ದೇವಸ್ಥಾನ ಮತ್ತು ಪಾಪನಾಶಂ ಸಮುದ್ರ ತೀರ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಕೆಲವು.

2. ಮೈಸೂರು
ಮೈಸೂರು ದಕ್ಷಿಣ ಭಾರತದ ಪ್ರಮುಖ ಆಕರ್ಷಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಚಕ್ರಾಧಿಪತ್ಯದ ಪರಂಪರೆ ಮತ್ತು ಅತ್ಯಂತ ಮನಮೋಹಕ ಕಟ್ಟಡಗಳಿಗೆ ಹೆಸರುವಾಸಿಯಾಗಿರುವ ಮೈಸೂರಿಗೆ ಭೇಟಿ ನೀಡಿದರೆ ನಿಮ್ಮ ಪ್ರವಾಸ ಸಂಪೂರ್ಣ ವಿಭಿನ್ನ ಹಾಗೂ ಅವಿಸ್ಮರಣೀಯ ಎನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಮೈಸೂರು ಟಿಪ್ಪು ಸುಲ್ತಾನನ ಉದಯ ಮತ್ತು ದಂಗೆಗೆ ಸಾಕ್ಷಿಯಾದ ಸ್ಥಳವಾಗಿದೆ. ಅದರ ಕುರುಹುಗಳನ್ನು ನೀವಿಲ್ಲಿ ಕಾಣಬಹುದು. ಮೈಸೂರು ಕೇವಲ ಐತಿಹಾಸಿಕ ತಾಣ ಮಾತ್ರವಲ್ಲ ಗಂಧದ ನಾಡು ಕೂಡ. ಹೌದು, ಈ ಜಿಲ್ಲೆ ಶ್ರೀ ಗಂಧದ ಮರ,  ಮೈಸೂರು ರೇಷ್ಮೆ ಮತ್ತು ಧೂಪ ದೃವ್ಯದ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ, ಭಾರತದಲ್ಲಿ ಯೋಗವನ್ನು ಅಭ್ಯಾಸ ಮಾಡಲು ಸೂಕ್ತವಾದ ಅತ್ಯುತ್ತಮ ಸ್ಥಳ ಇದಾಗಿದೆ ಎಂಬುವುದನ್ನು ಮರೆಯುವ ಹಾಗಿಲ್ಲ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡಿದ್ರೆ ನೀವು ಈ ದೇಶಗಳಿಗೆ ಟ್ರಿಪ್ ಹೋಗ್ಬೋದು

3. ಹಂಪಿ
ದಕ್ಷಿಣ ಭಾರತದ ಈ ಐತಿಹಾಸಿಕ ಪ್ರವಾಸಿ ಸ್ಥಳವು ವಿಶ್ವದ ವಿವಿಧೆಡೆಗಳಿಂದ ಬರುವ ಪ್ರವಾಸಿಗರಿಗೆ ಸ್ವರ್ಗ ಸಮಾನವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಅತ್ಯಂತ ಅಮೋಘವಾಗಿರುವ ಈ ಪ್ರವಾಸಿ ತಾಣವು ತುಂಗಾಭದ್ರ ನದಿಯ ಬದಿಯಲ್ಲಿ ವ್ಯಾಪಿಸಿದ್ದು, ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಗೆ ನೆಲೆಯಾಗಿದೆ. ಇತಿಹಾಸ ಮತ್ತು ಅಳಿದುಹೋದ ಸಾಮ್ರಾಜ್ಯಗಳ ಕುರಿತು ಇನ್ನಷ್ಟು ಚಿತ್ರಣವನ್ನು ಪಡೆಯಲು ಅಥವಾ ತಿಳಿದುಕೊಳ್ಳಲು ನೀವು ಹಂಪಿಗೆ ಭೇಟಿ ನೀಡಬಹುದು. ಇಲ್ಲಿ, ಇತಿಹಾಸದ ಅವಶೇಷಗಳು ನೀಡುವ ಜ್ಞಾನ ಒಂದೆಡೆಯಾದರೆ, ಪುರಾತನ ದೇಗುಲಗಳ ವಾಸ್ತು ಆಕರ್ಷಕ ವಾಸ್ತುಶೈಲಿಯನ್ನು ವೀಕ್ಷಿಸಿದಾಗ ಸಿಗುವ ಆನಂದ ಇನ್ನೊಂದು ರೀತಿಯದ್ದು. ನಿಜ, ಪುರಾತನ ದೇಗುಲಗಳು ಮತ್ತು ಕಟ್ಟಡಗಳ ಸೌಂದರ್ಯ ಈ ತಾಣದ ಇನ್ನೊಂದು ಪ್ರಮುಖ ಆಕರ್ಷಣೆಯಾಗಿದೆ. ಅವೆಲ್ಲದರ ಹೊರತಾಗಿ, ಪ್ರವಾಸಿಗರು ಮನಸ್ಸಿಗೆ ಮುದ ನೀಡುವ ಇನ್ನೂ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಾಧ್ಯವಿದೆ.

4. ಮಂಗಳೂರು
ಪ್ರಶಾಂತವಾದ ಸ್ಥಳಕ್ಕೆ ಭೇಟಿ ನೀಡಲು ಬಯಸುವವರು ಪ್ರವಾಸಕ್ಕಾಗಿ ಬಹಳ ಸುಂದರವಾಗಿರುವ ಕರಾವಳಿ ತಾಣವಾದ ಮಂಗಳೂರನ್ನು ಆಯ್ಕೆ ಮಾಡಿಕೊಳ್ಳಬಹುದು. ನಗರದ ಜಂಜಾಟಗಳಿಂದ ದೂರವಾಗಿ, ಕಡಲ ತೀರದಲ್ಲಿ ಸಮುದ್ರದ ಅಲೆಗಳ ಸೌಂದರ್ಯವನ್ನು ಸವಿಯುತ್ತಾ ಕೆಲವು ಸಮಯವನ್ನು ಕಳೆಯುವ ಆಸೆ ನಿಮ್ಮದಾಗಿದ್ದರೆ ಖಂಡಿತಾ ಮಂಗಳೂರಿಗೆ ಭೇಟಿ ನೀಡಿ. ಮಂಗಳೂರಿನ ಮಳೆಗಾಲದ ಅನುಭವ ಅದ್ಭುತ. ಆದರೆ ನಿಮಗೆ ಮಳೆಗಾಲ ಇಷ್ಟವಾಗುವುದಿಲ್ಲ ಎಂದಾದಲ್ಲಿ, ನೀವು ಚಳಿಗಾಲದಲ್ಲಿ ಕೂಡ ಇಲ್ಲಿಗೆ ಭೇಟಿ ನೀಡಿ ಪ್ರವಾಸದ ಮಜಾವನ್ನು ಪಡೆಯಬಹುದು.

5. ವಯನಾಡ್
ಹಚ್ಚ ಹಸಿರಿನ ಬೆಟ್ಟಗಳನ್ನು ನೋಡುತ್ತಾ ಮೈಮರೆಯಬೇಕು ಎಂಬ ಕನಸು ನಿಮ್ಮದಾಗಿದ್ದರೆ, ದಕ್ಷಿಣ ಭಾರತದ ಗಿರಿಧಾಮ ವಯನಾಡ್‍ಗೆ ಪ್ರವಾಸ ಹೋಗುವುದು ಸೂಕ್ತ ಆಯ್ಕೆ. ಬೇರೇನನ್ನೂ ಮಾಡದೇ ಎಲ್ಲಾ ಚಿಂತೆಗಳನ್ನು ಮರೆತು ಕೇವಲ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು ಎಂದು ಬಯಸುವ ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದ ತಾಣ ಎನ್ನಲಡ್ಡಿಯಿಲ್ಲ. ವಯನಾಡ್‍ನಲ್ಲಿ ಸಿಲ್ವನ್ ಹೈಟ್ಸ್‌ಗೆ ಟ್ರಕ್ಕಿಂಗ್ ಹೋಗಬಹುದು, ಅಪರೂಪದ ವನ್ಯ ಜೀವಿಗಳನ್ನು ವೀಕ್ಷಿಸಬಹುದು, ನಿಗೂಢ ಗುಹೆಗಳನ್ನು ಕಾಣಬಹುದು, ಸುಂದರ ಅಣೆಕಟ್ಟು ಮತ್ತು ಅಪರೂಪದ ದ್ವೀಪಗಳಲ್ಲಿ ದೋಣಿ ವಿಹಾರವನ್ನು ಕೂಡ ಮಾಡಬಹುದು.

6. ಮುನ್ನಾರ್
ಮುನ್ನಾರ್, ಸುಂದರವಾದ ಚಹಾ ತೋಟಗಳಿಂದ ಅಲಂಕರಿಸಲಟ್ಟಿರುವ ಆಕರ್ಷಕ ಗಿರಿಧಾಮ. ಇದು ದೇಶದ ಚಹಾ ಬೆಳೆಯುವ ಅತೀ ದೊಡ್ಡ ಪ್ರದೇಶಗಳಲ್ಲಿ ಒಂದಾಗಿದೆ. ಇದೊಂದು ಪ್ರಶಾಂತವಾದ ತಾಣ. ಇಡುಕ್ಕಿ ಜಿಲ್ಲೆಯಲ್ಲಿರುವ ಈ ಸ್ಥಳವು ಪ್ರವಾಸಿಗರನ್ನು ತನ್ನಡೆಗೆ ಸೆಳೆಯುವ ಅನೇಕ ರೀತಿಯ ಆಕರ್ಷಣೆಗಳನ್ನು ಹೊಂದಿದೆ. ಟೀ ಮ್ಯೂಸಿಯಂ, ಸಂತ ಆ್ಯಂಥೋನಿ ಪ್ರತಿಮೆ ಮತ್ತು ಸ್ಥಳೀಯ ಬಜಾರ್‌ನಲ್ಲಿ ಖರೀದಿ ಅಂತಹ ಆಕರ್ಷಣೆಗಳಲ್ಲಿ ಕೆಲವು.

7. ಅಲೆಪ್ಪಿ
ಅಲೆಪ್ಪಿಯನ್ನು ಪೂರ್ವದ ವೆನಿಸ್ ಎಂದು ಕರೆಯುತ್ತಾರೆ. ಅದು ಸಮರ್ಥನೀಯ ಹೆಸರು ಕೂಡ. ಏಕೆಂದರೆ, ಹಿನ್ನೀರು ಮತ್ತು ಅರೇಬಿಯನ್ ಸಮುದ್ರದ ನಡುವೆ ಬೆಸೆದಿರುವ , ಉಷ್ಣವಲಯದ ಹಸಿರು, ಮನಮೋಹಕ ದ್ವೀಪಗಳು, ವಿಲಕ್ಷಣ ಹಳ್ಳಿಗಳು, ಹೊಯ್ದಾಡುವ ತೆಂಗಿನ ಮರಗಳು ಮತ್ತು ಐಶಾರಾಮಿ ಹೌಸ್‍ಬೋಟ್‍ಗಳನ್ನು ಹೊಂದಿರುವ ಈ ಜಾಗದ ಸೌಂದರ್ಯ ಅಂತದ್ದು. ಬ್ಯಾಕ್ ಪ್ಯಾಕರ್ಸ್ ಮತ್ತು ಐಶಾರಾಮಿ ಪ್ರವಾಸ ಪ್ರಿಯರಿಬ್ಬರಿಗೂ ಸಮಾನವಾಗಿ ಸೂಕ್ತವಾದ ಜಾಗ ಇದಾಗಿದೆ.

ಇದನ್ನೂ ಓದಿ: ಬಾತ್​ ರೂಂ ಸ್ವಚ್ಛವಾಗಿರಬೇಕು ಅಂದ್ರೆ ಹೀಗೆ ಮಾಡಿ

8. ಕೋವಲಂ
ಅರೇಬಿಯನ್ ಸಮುದ್ರದ ಈ ಬೀಚ್ ಪಟ್ಟಣವು ಕೇರಳದ ತಿರುವನಂತಪುರಂ ನಗರದಲ್ಲಿದೆ. ಐತಿಹಾಸಿಕ ಆಕರ್ಷಣೆಗಳು, ತೆರೆದ ಕಡಲ ತೀರಗಳು ಮತ್ತು ಇಲ್ಲಿನ ರುಚಿಕರ ಸಮುದ್ರ ಆಹಾರ ಪ್ರವಾಸಿಗರನ್ನು ಸೆಳೆಯುತ್ತವೆ.
Published by:Sandhya M
First published: