Mud House In Bengaluru: ಮಣ್ಣಿನಿಂದ ಮನೆ ಕಟ್ಟಿಕೊಂಡ ದಂಪತಿ; ಪರಿಸರ ಸ್ನೇಹಿ ಮನೆ ಹೇಗಿದೆ ನೀವೇ ನೋಡಿ

ಒಂದು ಸಮಯದಲ್ಲಿ ಉದ್ಯಾನ ನಗರಿ ಎಂಬ ಖ್ಯಾತಿಯನ್ನು ಹೊಂದಿದ್ದಂತಹ ಬೆಂಗಳೂರು ಮಹಾನಗರದಲ್ಲಿ ಎಲ್ಲಿ ನೋಡಿದರೂ ಮರ ಗಿಡಗಳು ಇದ್ದವು. ನಗರೀಕರಣ, ಮಾಹಿತಿ ಮತ್ತು ತಂತ್ರಜ್ಞಾನದಿಂದ ಈಗ ಕಾಂಕ್ರೀಟ್ ನಗರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪರಿಸರಸ್ನೇಹಿಯಾಗಿ ಬದುಕಬಹುದು ಎಂಬುದನ್ನು ಈ ದಂಪತಿಗಳು ತೋರಿಸಿಕೊಟ್ಟಿದ್ದಾರೆ.

ಪರಿಸರಸ್ನೇಹಿ ಮನೆ

ಪರಿಸರಸ್ನೇಹಿ ಮನೆ

  • Share this:
ಒಂದು ಸಮಯದಲ್ಲಿ ಉದ್ಯಾನ ನಗರಿ (Garden City) ಎಂಬ ಖ್ಯಾತಿಯನ್ನು ಹೊಂದಿದ್ದಂತಹ ಬೆಂಗಳೂರು (Bengaluru) ಮಹಾನಗರದಲ್ಲಿ ಎಲ್ಲಿ ನೋಡಿದರೂ ಮರ ಗಿಡಗಳು ಇದ್ದವು. ಆದರೆ ಈಗ ರಸ್ತೆ ಅಗಲೀಕರಣ, ನಗರೀಕರಣ (Urbanization), ಮಾಹಿತಿ ಮತ್ತು ತಂತ್ರಜ್ಞಾನದ (Information and technology) ಬೆಳವಣಿಗೆ ಅಭಿವೃದ್ದಿ ಅಂತ ನೂರಾರು ಕಾರಣಗಳನ್ನು ನೀಡಿ ಈಗ ಕಾಂಕ್ರೀಟ್ (Concrete) ನಗರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಜನರು ತಮ್ಮ ಉದ್ಯೋಗಗಳನ್ನು ಮಾಡುತ್ತಾ ತುಂಬಾನೇ ಬ್ಯುಸಿ ಬದುಕನ್ನು ಸಾಗಿಸುತ್ತಿರುವ ಈ ಬೆಂಗಳೂರು ಮಹಾನಗರದಲ್ಲಿ ಈಗಲೂ ಕೆಲವರು ಹೀಗೆ ಬದುಕಬೇಕು ಎಂದು ಗುರಿಯನ್ನು ಇರಿಸಿಕೊಂಡು ಮತ್ತು ನಗರದಲ್ಲೂ ಸಹ ನಾವು ಪರಿಸರಸ್ನೇಹಿಯಾಗಿ (Eco-friendly) ಬದುಕಬಹುದು ಎಂಬುದನ್ನು ಅನೇಕರು ತೋರಿಸಿ ಕೊಟ್ಟಿದ್ದಾರೆ.

ಪರಿಸರ ಸ್ನೇಹಿ ಜೀವನಶೈಲಿ

ಒಂದೆಡೆ ಈ ಮಹಾನಗರಗಳ ಬದುಕು ಹೆಚ್ಚು ತಾಂತ್ರಿಕಮಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಹಲವಾರು ಜನರು ತಾವು ಪರಿಸರಸ್ನೇಹಿಯಾದ ಜೀವನಶೈಲಿ ರೂಪಿಸಿಕೊಳ್ಳಬೇಕೆಂದು ನಾನಾ ರೀತಿಯ ಹೊಸ ಹೊಸ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ ಎಂದು ಹೇಳಬಹುದು.ಈ ಮಹಾನಗರದಲ್ಲಿ ಇದ್ದುಕೊಂಡು ತಮ್ಮ ಕೆಲಸವನ್ನು ಮಾಡಿಕೊಂಡು ಸಹ ನಗರೀಕರಣಕ್ಕೆ ಒಡ್ಡಿಕೊಳ್ಳದಂತೆ ಹೇಗೆ ಪರಿಸರಸ್ನೇಹಿ ಜೀವನವನ್ನು ಈ ದಂಪತಿಗಳು ನಡೆಸುತ್ತಿದ್ದಾರೆ ಎಂದು ಒಮ್ಮೆ ನೋಡಿ. ಇವರ ಈ ಬದುಕು ಅನೇಕ ಜನರಿಗೆ ಒಂದು ಸ್ಪೂರ್ತಿಯಾಗಬಹುದು.

ರೇವಾ ಹಾಗೂ ರಂಜನ್ ಮಲಿಕ್ ಎಂಬ ದಂಪತಿಗಳು ಬೆಂಗಳೂರು ನಗರದಲ್ಲಿ ಇದ್ದುಕೊಂಡು ಪರಿಸರಸ್ನೇಹಿ ಜೀವನ ನಡೆಸುತ್ತಿದ್ದಾರೆ. ಮುಂಚೆ ಈ ದಂಪತಿಗಳು ಸಹ ಇತರೆ ಬೆಂಗಳೂರಿನ ವಾಸಿಗಳ ಹಾಗೆಯೇ ಜೀವನ ನಡೆಸುತ್ತಿದ್ದರು. ಆದರೆ, ಈಗ ಇವರು ಬೆಂಗಳೂರಿನಲ್ಲೂ ಸಹ ಸುಸ್ಥಿರವಾದ ಹಾಗೂ ಪರಿಸರಸ್ನೇಹಿಯಾದ ಜೀವನ ನಡೆಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

 ಇದನ್ನೂ ಓದಿ:  Children name: ಆಗ್ಲೇ ತಮ್ಮ ಮಕ್ಕಳಿಗೆ ಏನು ಹೆಸರಿಡೋದು ಅಂತ ದೊಡ್ಡ ಲಿಸ್ಟ್ ರೆಡಿ ಇಟ್ಕೊಂಡಿದಾರೆ ರಣ್ವೀರ್ ಸಿಂಗ್! ಯಾವಾಗ ಸಿಹಿಸುದ್ದಿ?

‘ರ್‍ಯಾಮ್ಡ್ ಅರ್ಥ್ ಹೌಸ್’

ರೇವಾ ಹಾಗೂ ರಂಜನ್ ಅವರ ಈ ಮನೆ ತುಂಬಾನೇ ವಿಶಿಷ್ಟವಾಗಿದ್ದು, ತಾಂತ್ರಿಕವಾಗಿ ಇದನ್ನು ‘ರ್‍ಯಾಮ್ಡ್ ಅರ್ಥ್ ಹೌಸ್’ ಎಂದು ಕರೆಯಲಾಗುತ್ತದೆ. ರ್‍ಯಾಮ್ಡ್ ಅರ್ಥ್ ಎಂಬುದು ಪುರಾತನ ಸಮಯದಲ್ಲಿ ರೂಢಿಯಲ್ಲಿದ್ದ ಪದ್ಧತಿ ಎಂದು ಹೇಳಲಾಗುತ್ತಿದೆ.

ಈ ವಿಧಾನದಲ್ಲಿ ಮನೆಗಳನ್ನು ಮಣ್ಣು, ಉಸುಕು, ಲೈಮ್, ಚಾಕ್ ಮುಂತಾದ ಪದಾರ್ಥಗಳನ್ನು ಸ್ವಲ್ಪ ಮಟ್ಟಿನ ಸಿಮೆಂಟ್ ನೊಂದಿಗೆ ಮಿಶ್ರಣ ಮಾಡಿ ನಿರ್ಮಿಸಲಾಗುತ್ತದೆ. ಈ ವಿಧಾನ ಪರಿಸರಸ್ನೇಹಿ ಹಾಗೂ ಸುಸ್ಥಿರ ಎನ್ನಲಾಗಿದೆ. ಈ ಮನೆಯನ್ನು ನಿರ್ಮಿಸಲು ಇವರಿಗೆ 8 ತಿಂಗಳಿಗಿಂತಲೂ ಹೆಚ್ಚು ಸಮಯ ಬೇಕಾಯ್ತು ಎಂದು ಹೇಳಲಾಗುತ್ತಿದೆ.ಈ ಮನೆಯ ಬಗ್ಗೆ ಮಾತಾಡುತ್ತಾ ರೇವಾ ಮಲಿಕ್ ಅವರು “ನಾನು ಮೊದಲಿನಿಂದಲೂ ಈ ಹಳ್ಳಿಗಳಲ್ಲಿ ಬದುಕುವ ಪದ್ದತಿಯನ್ನು ಇಷ್ಟ ಪಡುತ್ತಿದ್ದೆ, ಸುಮಾರು ಜನರು ನಮ್ಮನ್ನು ನೀವು ಇಷ್ಟೊಂದು ಪರಿಸರಸ್ನೇಹಿಯಾಗಿ ಬದುಕಲು ಹೇಗೆ ಪ್ರೇರಣೆ ಸಿಕ್ತು ಅಂತ ಕೇಳುತ್ತಾರೆ” ಎಂದು ಅವರು ಹೇಳಿದರು.

ಈ ದಂಪತಿ ಬೆಂಗಳೂರಿಗೆ ಬಂದು ನೆಲೆಸುವ ಮುಂಚೆ ದೆಹಲಿಯಲ್ಲಿ ಇದ್ದರು ಮತ್ತು ಅವರು ಎಲ್ಲರಂತೆ ತುಂಬಾನೇ ಬ್ಯುಸಿಯಾದ ಬದುಕನ್ನು ಸಾಗಿಸುತ್ತಿದ್ದರು.

ಪರಿಸರ ಸ್ನೇಹಿ ಮನೆ ಕಟ್ಟಲು ಬೆಂಗಳೂರು ಒಳ್ಳೆಯ ಸ್ಥಳ
“ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ತಂದೆಯ ಜೊತೆ ಸುಮಾರು ಬೇರೆ ಬೇರೆ ಊರುಗಳಿಗೆ ಹೋಗಿ ಇದ್ದೆವು, ಮದುವೆಯಾದ ನಂತರವೂ ನಾವು ಸುಮಾರು ಸ್ಥಳಗಳಲ್ಲಿ ಇದ್ದೆವು. ಆದರೆ ನನಗೆ ಈ ದೆಹಲಿ ಸುತ್ತಮುತ್ತಲಿರುವ ಹಳ್ಳಿಗಳಲ್ಲಿರುವ ಮತ್ತು ಉತ್ತರ ಭಾರತದ ಹಳ್ಳಿಗಳ ಜೀವನ ಇಷ್ಟವಾಯಿತು. ನಾವು ಏಕೆ ಈ ರೀತಿಯಾಗಿ ಸರಳವಾಗಿ ಬದುಕಬಾರದು ಎಂದು ಆಲೋಚಿಸಿ ಇದಕ್ಕೆ ಬೆಂಗಳೂರು ಒಳ್ಳೆಯ ಸ್ಥಳ ಎಂದು ಆಯ್ಕೆ ಮಾಡಿ ಇಲ್ಲಿಗೆ ಬಂದು ಮಣ್ಣಿನ ಮನೆಯನ್ನು ಮಾಡಿಕೊಂಡು ಪರಿಸರಸ್ನೇಹಿ ಜೀವನವನ್ನು ಸಾಗಿಸುತ್ತಿದ್ದೇವೆ” ಎಂದು ರೇವಾ ಮಲಿಕ್ ಅವರು ವೀಡಿಯೋದಲ್ಲಿ ಹೇಳಿದ್ದಾರೆ.ದಂಪತಿಗಳು ಬೆಂಗಳೂರು ನಗರದ ಹೊರವಲಯದಲ್ಲಿ 3000 ಚದರ ಅಡಿಯಷ್ಟು ಜಾಗ ಖರೀದಿಸಿದರು, 2018ರ ವರೆಗೆ ಈ ಭೂಮಿಯನ್ನು ಸಾವಯವ ಕೃಷಿಗೆ ಬಳಸಲಾಗುತ್ತಿತ್ತು.

ಇದನ್ನೂ ಓದಿ:  Explained: ಈ ಮಹಿಳೆ ತಿಂಗಳಿಗೆ 18 ಲಕ್ಷ ಲೀಟರ್ ನೀರು ಉಳಿಸುತ್ತಾರಂತೆ! ಏನು ಮಾಡುತ್ತಾರೆ ಇವರು? ನಾವು ನೀವು ಮಾಡಬೇಕಾಗಿರೋದೇನು?

ಈ ಮನೆಯ ಬಗ್ಗೆ ಮಾತಾಡುತ್ತಾ ರಂಜನ್ ಅವರು “ಬೆಂಗಳೂರಿಗೆ ಬಂದಾಗ ಇಲ್ಲಿನ ಸಂಸ್ಕೃತಿ ಮತ್ತು ವಾತಾವರಣ ನಮಗೆ ತುಂಬಾನೇ ಇಷ್ಟವಾಯಿತು, ಅದಕ್ಕೆ ಈ ಸ್ಥಳದಲ್ಲಿಯೇ ನಾವು ನೆಲೆಸಬೇಕು ಎಂದು ನಿರ್ಧಾರ ಮಾಡಿದೆವು” ಎಂದು ಹೇಳುತ್ತಾರೆ.

“ನಗರದಲ್ಲಿ ನಾವು ಎಲ್ಲಾ ವಸ್ತುಗಳು ಇರುವ ಮನೆಯನ್ನು ನೋಡುತ್ತೇವೆ ಮತ್ತು ಮಕ್ಕಳಿಗೆ ಈ ವಸ್ತುಗಳ ಮೇಲೆ ಆಸಕ್ತಿ ಜಾಸ್ತಿ ಆಗಿ, ಮನುಷ್ಯರ ಮೇಲೆ ಆಸಕ್ತಿ ಕಡಿಮೆ ಆಗುವುದನ್ನು ನಾನು ಅರಿತುಕೊಂಡು, ನಮ್ಮ ಮಕ್ಕಳಿಗಾಗಿ ನಾವು ಇಂತಹ ಐಷಾರಾಮಿ ಸೌಲಭ್ಯಗಳು ಇಲ್ಲದ ಒಂದು ಜಾಗಕ್ಕೆ ಹೋಗಿ ಜೀವನ ನಡೆಸಬೇಕು ಎಂದು ಅಂದು ಕೊಂಡೆ” ಎಂದು ರಂಜನ್ ಹೇಳುತ್ತಾರೆ.ಈ ಮನೆಯಲ್ಲಿ ನೀರಿನ ಬಳಕೆ ಹೀಗಿದೆ
ರೇವಾ ಅವರು “ಕಾಂಕ್ರೀಟ್ ಮನೆಗಳು ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಅವು ಉಸಿರುಗಟ್ಟಿಸುವಂತೆ ಇರುತ್ತವೆ, ಅದೇ ಮಣ್ಣಿನ ಮನೆಗಳಲ್ಲಿ ಗಾಳಿಯು ಚೆನ್ನಾಗಿರುತ್ತದೆ ಮತ್ತು ಉಸಿರಾಡಲು ತುಂಬಾನೇ ಅನುಕೂಲತೆ ಇರುತ್ತದೆ” ಎಂದು ಹೇಳುತ್ತಾರೆ. ಈ 770 ಚದರ ಅಡಿಯಲ್ಲಿ ನಿರ್ಮಿಸಲಾದ ಮನೆಗೆ ಒಂದೇ ಮೇಲ್ಛಾವಣಿ ಇದ್ದು, ಇದರಲ್ಲಿ ಒಂದು ಮಲಗುವ ಕೋಣೆ, ಅಡುಗೆಮನೆ ಮತ್ತು ದೊಡ್ಡ ಲಿವಿಂಗ್ ರೂಮ್ ಸಹ ಇದೆ. ಇದನ್ನು ನಿರ್ಮಿಸಬೇಕಾದರೆ ಸುಮಾರು 25 ಲಕ್ಷ ರೂಪಾಯಿ ವೆಚ್ಚ ತಗುಲಿದೆ.

ಈ ಮನೆಯಲ್ಲಿ ಯಾವುದೇ ರೀತಿಯ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಗಳಿಲ್ಲ, ಒಲೆಯ ಮೇಲೆ ಮಾಡಲಾಗುತ್ತದೆ ಮತ್ತು ಮನೆಯಲ್ಲಿ ಎಲ್ಲಿಯೂ ಸಹ ನಲ್ಲಿ ಗಳಿಲ್ಲ, ಏಕೆಂದರೆ ನಲ್ಲಿಗಳಿಂದ ಹೆಚ್ಚು ನೀರು ವ್ಯರ್ಥವಾಗುತ್ತದೆ ಎಂದು ಚಿಕ್ಕ ಹ್ಯಾಂಡ್ ಪಂಪ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಇದರಲ್ಲಿ ಈ ಬಳಸಿದ ನೀರನ್ನು ಅಲ್ಲೇ ಇರುವ ಅವರ ಚಿಕ್ಕ ತೋಟಕ್ಕೆ ಬಿಡಲಾಗುವುದು. ಹೀಗೆ ಇಲ್ಲಿ ಯಾವುದು ವ್ಯರ್ಥವಾಗದಂತೆ ನೋಡಿಕೊಳ್ಳಲಾಗಿದೆ.
Published by:Ashwini Prabhu
First published: