• Home
  • »
  • News
  • »
  • lifestyle
  • »
  • Solar Eclipse 2022: ಸೂರ್ಯ ಗ್ರಹಣದ ಸಮಯದಲ್ಲಿ ತಪ್ಪು ಮಾಡಿದ್ರೆ ಈ ಆರೋಗ್ಯ ಸಮಸ್ಯೆಗಳು ಬರಬಹುದು

Solar Eclipse 2022: ಸೂರ್ಯ ಗ್ರಹಣದ ಸಮಯದಲ್ಲಿ ತಪ್ಪು ಮಾಡಿದ್ರೆ ಈ ಆರೋಗ್ಯ ಸಮಸ್ಯೆಗಳು ಬರಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Solar Eclipse 2022 Effects: ಈ ಗ್ರಹಣ ಒಂದು ಸಾಮಾನ್ಯ ಪ್ರಕ್ರಿಯೆ ಆಗಿದ್ದರೂ ಸಹ, ಇದು ಮಾನವನ ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ಗ್ರಹಣ ಯಾವ ರೀತಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ಇಲ್ಲಿದೆ.  

  • Share this:

ಇಂದು ಹಬ್ಬದ (Festival) ಜೊತೆ ಸೂರ್ಯಗ್ರಹಣ (Solar Eclipse 2022) ಸಹ ಬಂದಿದ್ದು, ವರ್ಷದ ಕೊನೆಯ ಗ್ರಹಣವಾಗಿದೆ. ಸರಿ ಸುಮಾರು 27 ವರ್ಷದ ನಂತರ ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಈ ಗ್ರಹಣ ಬಂದಿದೆ. ಸರಳವಾಗಿ ಹೇಳುವುದಾದರೆ, ಸೂರ್ಯ, ಚಂದ್ರ ಮತ್ತು ಭೂಮಿಯು ನೇರ ರೇಖೆಯಲ್ಲಿ ಬಂದಾಗ ಮತ್ತು ಸೂರ್ಯನ ಕಿರಣಗಳನ್ನು ಭೂಮಿಗೆ ತಲುಪದಂತೆ ಚಂದ್ರನು ತಡೆಯುವುದನ್ನ ಸೂರ್ಯಗ್ರಹಣ ಎಂದು ಹೇಳಲಾಗುತ್ತದೆ. ಈ ಗ್ರಹಣ ಒಂದು ಸಾಮಾನ್ಯ ಪ್ರಕ್ರಿಯೆ ಆಗಿದ್ದರೂ ಸಹ, ಇದು ಮಾನವನ ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ಗ್ರಹಣ ಯಾವ ರೀತಿ ಸಮಸ್ಯೆಗಳಿಗೆ (Problems)  ಕಾರಣವಾಗಬಹುದು ಎಂಬುದು ಇಲ್ಲಿದೆ.  


ಗರ್ಭಿಣಿ ಮಹಿಳೆಯರು ಬಹಳ ಎಚ್ಚರಿಕೆಯಿಂದ ಇರಬೇಕು 


ಗರ್ಭಿಣಿ ಮಹಿಳೆಯರಿಗೆ ಸೂರ್ಯ ಗ್ರಹಣ ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ಮನೆಯಿಂದ ಹೊರ ಹೋಗುವುದು ಒಳ್ಳೆಯದಲ್ಲ. ಸೂರ್ಯ ಗ್ರಹಣದ ವೇಳೆ ಭೂಮಿಗೆ ಬೀಳುವ ಕಿರಣಗಳು ಗರ್ಭಿಣಿ ಹಾಗೂ ಮಗುವಿನ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಅಲ್ಲದೇ, ಈ ಗ್ರಹಣದ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ಮೈ ಒಡ್ಡಿಕೊಂಡರೆ ಮುಂದೆ ಮಹಿಳೆಯರು ಹೆರಿಗೆಯ ಸಮಯದಲ್ಲಿ ತೊಂದರೆ ಉಂಟಾಗುತ್ತದೆ, ಹಾಗೂ ಜನನದ ನಂತರ ಸಹ ಮಗುವಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು.


 ಕಣ್ಣಿನ ಆರೋಗ್ಯದ ಬಗ್ಗೆ ಇರಲಿ ಕಾಳಜಿ


ಮುಖ್ಯವಾಗಿ ಸೂರ್ಯಗ್ರಹಣವನ್ನು ನೇರವಾಗಿ ಬರಿಗಣ್ಣಿನಿಂದ ನೋಡುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರ ಕಿರಣಗಳು ನಿಮ್ಮ ರೆಟಿನಾವನ್ನು ಹಾನಿಗೊಳಿಸಬಹುದು ಅಥವಾ ಕುರುಡುತನಕ್ಕೂ ಸಹ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ನಿಮಗೆ ಗ್ರಹಣ ನೋಡಬೇಕು ಎನಿಸಿದರೆ ವಿಶೇಷ ಸೂರ್ಯಗ್ರಹಣದ ಕನ್ನಡಕವನ್ನು ಬಳಸಿ ನೋಡುವುದು ಸೂಕ್ತ.


ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ


ನೀವು ಗಮನಿಸಿ ನೋಡಿ ಯಾವುದೇ ಗ್ರಹಣದ ಸಮಯದಲ್ಲಿ ಗ್ರಹಣದ ಸಮಯಲ್ಲಿ ಯಾವುದೇ ರೀತಿಯ ಆಹಾರ ಸೇವಿಸಬೇಡಿ ಎಂದು ಹೇಳಲಾಗುತ್ತದೆ. ಇದಕ್ಕೆ ವೈದ್ಯಕೀಯ ಕಾರಣಗಳು ಸಹ ಇದೆ. ಗ್ರಹಣದ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಇದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಿ, ಸಮಸ್ಯೆಗಳನ್ನು ತಂದೊಡ್ಡಬಹುದು. ಇದೇ ಕಾರಣಕ್ಕೆ ಈ ಗ್ರಹಣದ ಸಮಯದಲ್ಲಿ ಊಟ ಮಾಡುವುದು ಅಥವಾ ಏನನ್ನಾದರೂ ಕುಡಿಯುವುದು ನಿಷಿದ್ಧ.


ಇದನ್ನೂ ಓದಿ: ಪಟಾಕಿ ಹೊಡೆಯುವಾಗ ಮಿಸ್​ ಮಾಡದೇ ಈ ವಸ್ತುಗಳನ್ನು ಹತ್ತಿರವಿಟ್ಟುಕೊಳ್ಳಿ


 ಆಲಸ್ಯಕ್ಕೆ ಕಾರಣವಾಗಬಹುದು


ಸೂರ್ಯನ ಕಿರಣಈ ಗ್ರಹಣದ ಸಮಯದಲ್ಲಿ ನಿದ್ದೆ ಜಾಸ್ತಿ ಬಂದ ಹಾಗೆ ಆಗುತ್ತದೆ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದಕ್ಕೆ ಕಾರಣ ಸೂರ್ಯನ ಕಿರಣಗಳು ಎನ್ನುತ್ತಾರೆ. ಹಾಗಾಗಿ, ಸೂರ್ಯ ಗ್ರಹಣ ಸಮಯದಲ್ಲಿ ಹೊರಗೆ ಹೋಗಬೇಡಿ. ನಿಮಗೆ ಆಕಸ್ಮಿಕವಾಗಿ ಒತ್ತಡ, ಆಯಾಸ ಉಂಟಾದರೆ ವಿಶ್ರಾಂತಿ ತೆಗೆದುಕೊಳ್ಳಿ.




ಮಾನಸಿಕ ಬದಲಾವಣೆಗೆ ಕಾರಣವಾಗುತ್ತದೆ


ಸೂರ್ಯ ಗ್ರಹಣ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಮಾನಸಿಕ ಬದಲಾವಣೆಗೆ ಕಾರಣವಾಗುತ್ತದೆ. ಕಿರಿಕಿರಿ ಆಗಬಹುದು, ಒತ್ತಡ ಉಂಟಾಗಬಹುದು. ಹಾಗಾಗಿ ಈ ಸಮಯದಲ್ಲಿ ಸಾಧ್ಯವಾದಷ್ಟು ಶಾಂತವಾಗಿ ಇರಲು ಪ್ರಯತ್ನಿಸಿ.


ಇದನ್ನೂ ಓದಿ: ತೂಕ ಇಳಿಸಬೇಕು ಅಂತ ಇವನ್ನೆಲ್ಲಾ ಕುಡಿತೀರಾ? ಹುಷಾರ್, ಈಗಲೇ ಈ ಅಭ್ಯಾಸ ಬಿಟ್ಟುಬಿಡಿ!


ಮುನ್ನೆಚ್ಚರಿಕೆವಹಿಸಿ


ಸಮಸ್ಯೆಗಳು ಬರದಂತೆ ತಡೆಯುವುದು ಸಮಸ್ಯೆ ಬಂದ ಮೇಲೆ ಪರಿಹಾರ ಪಡೆಯುವುದಕ್ಕಿಂತ ಮಿಗಿಲು ಎನ್ನಲಾಗುತ್ತದೆ. ಹಾಗಾಗಿ ಹಿರಿಯರು ಹೇಳುವ ಮಾತುಗಳನ್ನು ಕೇಳಿ. ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಕನ್ನಡಕ ಹಾಕಿ ಗ್ರಹಣ ನೋಡಿ. ಹಾಗೆಯೇ, ಈ ಸಮಯದಲ್ಲಿ ಆಹಾರಗಳನ್ನು ಸೇವಿಸದೇ, ಅನಿವಾರ್ಯವಿದ್ದರೆ ಮಾತ್ರ ತಿನ್ನುವುದು ಉತ್ತಮ.

Published by:Sandhya M
First published: