• Home
  • »
  • News
  • »
  • lifestyle
  • »
  • Hair Care: ತೂಕ ಇಳಿಸೋಕೆ ಮಾತ್ರ ಅಲ್ಲ ಕೂದಲಿನ ಸಮಸ್ಯೆಗೂ ರಾಮಬಾಣ ಈ ಗ್ರೀನ್ ಟೀ

Hair Care: ತೂಕ ಇಳಿಸೋಕೆ ಮಾತ್ರ ಅಲ್ಲ ಕೂದಲಿನ ಸಮಸ್ಯೆಗೂ ರಾಮಬಾಣ ಈ ಗ್ರೀನ್ ಟೀ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಲೆಹೊಟ್ಟು ಶುಷ್ಕತೆ ಮುಂತಾದ ಸಮಸ್ಯೆ ಕಾಡುತ್ತಿದ್ದರೆ ತಜ್ಞರು ಸಲಹೆ ಮತ್ತು ಸಂಶೋಧನೆ ಆಧಾರದ ಮೇಲೆ ಹಸಿರು ಚಹಾವನ್ನು ಕೂದಲು ಆರೈಕೆಗೆ ಟ್ರೈ ಮಾಡಬಹುದು. ಇದು ಈ ಹಬ್ಬದ ಋತುವಿನಲ್ಲಿ ನಿಮ್ಮ ಕೂದಲಿಗೆ ಆರೋಗ್ಯಕರ ಮತ್ತು ಹೊಳೆಯುವ ನೋಟ ನೀಡುತ್ತದೆ.

  • Share this:

    ವಾಯು ಮಾಲಿನ್ಯ, ಕೆಟ್ಟ ಜೀವನಶೈಲಿ (Bad Lifestyle), ಕೆಟ್ಟ ಆಹಾರ ಪದ್ಧತಿಯಿಂದ (Bad Food Plan) ಕೂದಲಿನ ಸಮಸ್ಯೆ (Hair Care) ದಿನದಿಂದ ದಿನಕ್ಕೆ ಸಾಮಾನ್ಯ ಹೆಚ್ಚುತ್ತಾ ಹೋಗುತ್ತದೆ. ಕೂದಲು ಉದುರುವುದು (Hair Fall), ತುದಿ ಸೀಳುವುದು, ಡ್ಯಾಂಡ್ರಫ್, ಬಿಳಿ ಕೂದಲು ಸಮಸ್ಯೆ ಕಾಡುತ್ತದೆ. ಕೂದಲು ಹಾಳಾಗುತ್ತಿದ್ದರೆ ಅಥವಾ ತಲೆಹೊಟ್ಟು, ಶುಷ್ಕತೆ ಮುಂತಾದ ಸಮಸ್ಯೆ, ಕಾಡುತ್ತಿದ್ದರೆ ತಜ್ಞರು ಸಲಹೆ ಮತ್ತು ಸಂಶೋಧನೆ ಆಧಾರದ ಮೇಲೆ ಹಸಿರು ಚಹಾವನ್ನು ಕೂದಲು ಆರೈಕೆಗೆ ಟ್ರೈ ಮಾಡಬಹುದು. ಇದು ಈ ಹಬ್ಬದ ಋತುವಿನಲ್ಲಿ ನಿಮ್ಮ ಕೂದಲಿಗೆ ಆರೋಗ್ಯಕರ ಮತ್ತು ಹೊಳೆಯುವ ನೋಟ ನೀಡುತ್ತದೆ. ಇಂತಹ ಹಲವು ಪ್ರಮುಖ ಪೋಷಕಾಂಶಗಳು ಗ್ರೀನ್ ಟೀಯಲ್ಲಿ ಹೇರಳ ಆಗಿವೆ.


    ಗ್ರೀನ್ ಟೀ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ


    ಇದು ನಿಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಅಂತಹ ವೇಳೆ ನೀವು ಗ್ರೀನ್ ಟೀಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರ ಹೊರತಾಗಿ ನೀವು ನೇರವಾಗಿ ನಿಮ್ಮ ಕೂದಲಿನ ಮೇಲೆ ಸ್ಥಳೀಯವಾಗಿ ಬಳಕೆ ಮಾಡಬಹುದು.


    ಹಾಗಾಗಿ ಗ್ರೀನ್ ಟೀ ಮತ್ತು ಕೂದಲಿನ ನಡುವಿನ ಸಂಬಂಧದ ಬಗ್ಗೆ ಸ್ವಲ್ಪ ಹೆಚ್ಚು ವಿವರವಾಗಿ ನೋಡೋಣ. ಗ್ರೀನ್ ಟೀ ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ನೋಡೋಣ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ


    ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಅಂತಹ ವೇಳೆ ಗ್ರೀನ್ ಟೀಯಲ್ಲಿರುವ ಮೆಲಟೋನಿನ್, ಒಮೆಗಾ 3, ಒಮೆಗಾ 6, ವಿಟಮಿನ್ ಡಿ, ಇತ್ಯಾದಿ ಅಗತ್ಯ ಪೋಷಕಾಂಶಗಳು ಕೂದಲು ಉದುರುವಿಕೆ ಸಮಸ್ಯೆಗೆ ಪ್ರಯೋಜನಕಾರಿ ಆಗಿದೆ.


    ಕೂದಲು ಬೆಳವಣಿಗೆಗೆ ಸಹಕಾರಿ


    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನ ಪ್ರಕಾರ, ಹಸಿರು ಚಹಾ ಕೂದಲಿನ ಕಿರುಚೀಲಗಳ ಆರೋಗ್ಯ ಕಾಪಾಡುತ್ತದೆ. ಮತ್ತು ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಇದು ಇದು ಕೂದಲಿನ ಕೋಶಗಳನ್ನು ಹಾನಿಯಾಗದಂತೆ ಕಾಪಾಡುತ್ತದೆ.


    ಶುಷ್ಕತೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ


    ರಾಸಾಯನಿಕಯುಕ್ತ ಉತ್ಪನ್ನಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ಕೂದಲಿಗೆ ಹಾನಿ ಆಗುತ್ತದೆ. ಇದು ತಲೆಹೊಟ್ಟು ಸಮಸ್ಯೆಗೆ ಅನೇಕರಲ್ಲಿ ಕಾಣಿಸಿಕೊಳ್ಳುತ್ತದೆ. ಹಸಿರು ಚಹಾ ಬಳಕೆ ಈ ಎಲ್ಲಾ ಸಮಸ್ಯೆ ತೊಡೆದು ಹಾಕಲು ಸಹಕಾರಿ ಆಗಿದೆ.


    ಕೂದಲಿಗೆ ಹಸಿರು ಚಹಾವನ್ನು ಹೇಗೆ ಬಳಸುವುದು?


    ಪ್ರತಿದಿನ ಎರಡು ಕಪ್ ಗ್ರೀನ್ ಟೀ ಕುಡಿಯಿರಿ


    ಗ್ರೀನ್ ಟೀ ಸೇವನೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಕೂದಲಿನ ಆರೋಗ್ಯವನ್ನು ದೀರ್ಘಕಾಲ ಕಾಪಾಡುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಎರಡು ಕಪ್ ಹಸಿರು ಚಹಾ ಸೇರಿಸಿ. ಇದು ನಿಮ್ಮ ಕೂದಲು, ತ್ವಚೆ ಹಾಗೂ ನೆತ್ತಿಯ ಆರೋಗ್ಯ ಕಾಪಾಡುತ್ತದೆ.


    ಹಸಿರು ಚಹಾದೊಂದಿಗೆ ಕೂದಲು ತೊಳೆಯುವುದು


    ನಿಮ್ಮ ಕೂದಲಿನ ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ಹಸಿರು ಚಹಾ ಅತ್ಯಂತ ಪರಿಣಾಮಕಾರಿ ಮತ್ತು ಸುಲಭ ಮಾರ್ಗ ಆಗಿದೆ. ಹಸಿರು ಚಹಾದಿಂದ ಕೂದಲನ್ನು ತೊಳೆಯಲು ಮೊದಲು ನೀವು ಸಾಮಾನ್ಯವಾಗಿ ಶಾಂಪೂ ಮಾಡಬೇಕು.


    ನಂತರ ಸಿದ್ಧಪಡಿಸಿದ ಹಸಿರು ಚಹಾ ನಿಮ್ಮ ಕೂದಲಿಗೆ ಮೂಲದಿಂದ ತುದಿಗೆ ಹಾಕಿ. ಇದು ನಿಮ್ಮ ಕೂದಲಿನ ಮೂಲವನ್ನು ಬಲಪಡಿಸುತ್ತದೆ ಮತ್ತು ಅದನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.


    ಹಸಿರು ಚಹಾ ಕೂದಲು ಮಾಸ್ಕ್


    ಜನರ ಮೇಲೆ ಹಸಿರು ಚಹಾ ಮಾಸ್ಕ್ ನ್ನು ಅನ್ವಯಿಸಿದ ನಂತರ ನಿಮ್ಮ ಕೂದಲಿನಲ್ಲಿ ಬಹಳಷ್ಟು ಬದಲಾವಣೆ ನೀವು ನೋಡುತ್ತೀರಿ. ಇದಕ್ಕಾಗಿ ನೀವು ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಆಲಿವ್ ಎಣ್ಣೆ, ಎರಡು ಚಮಚ ಹಸಿರು ಚಹಾ ಮತ್ತು ಮೊಟ್ಟೆಯ ಹಳದಿ ಲೋಳೆ ತೆಗೆದುಕೊಳ್ಳಬೇಕು.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಮತ್ತು ದಪ್ಪ ಕೇಕ್ ಪೇಸ್ಟ್ ತಯಾರಿಸಿ. ನಂತರ ನಿಮ್ಮ ಕೂದಲಿಗೆ ಚೆನ್ನಾಗಿ ಹಚ್ಚಿ. 25 ನಿಮಿಷದ ನಂತರ ಸಾಮಾನ್ಯ ನೀರಿನಿಂದ ಕೂದಲು ಸ್ವಚ್ಛಗೊಳಿಸಿ.

    Published by:renukadariyannavar
    First published: