• Home
  • »
  • News
  • »
  • lifestyle
  • »
  • Children Health: ತಮ್ಮ ದೇಹವನ್ನೇ ಇಷ್ಟಪಡುತ್ತಿಲ್ಲ ಮಕ್ಕಳು! ಅಪಾಯದ ಮುನ್ಸೂಚನೆ ನೀಡಿದ ವರದಿ

Children Health: ತಮ್ಮ ದೇಹವನ್ನೇ ಇಷ್ಟಪಡುತ್ತಿಲ್ಲ ಮಕ್ಕಳು! ಅಪಾಯದ ಮುನ್ಸೂಚನೆ ನೀಡಿದ ವರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸೋಶಿಯಲ್‌ ಮೀಡಿಯಾ ಗೀಳು ಮಕ್ಕಳಲ್ಲಿ ಹತಾಶೆ, ಖಿನ್ನತೆ, ಸಿಟ್ಟು, ಆತಂಕ, ಒತ್ತಡಗಳಿಗೆ ಬಹು ಮುಖ್ಯ ಕಾರಣವಾಗಿದೆ. ಅಷ್ಟೇ ಅಲ್ಲ ಚಿಕ್ಕ ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದಾಗಿ ತಮ್ಮ ದೇಹ, ಸೌಂದರ್ಯದ ಬಗ್ಗೆಯೂ ನಾಚಿಕೆ ಪಡುತ್ತಿದ್ದಾರಂತೆ.

  • Share this:

ಮಕ್ಕಳಿಗೆ ಹೊಸದಾಗಿ ಫೋನ್‌, ಸೋಶಿಯಲ್‌ ಮೀಡಿಯಾದ ಪರಿಚಯವನ್ನು ಮಾಡೋ ಅವಶ್ಯಕತೆನೇ ಇಲ್ಲ. ದೊಡ್ಡವರಿಗಿಂತ ಹೆಚ್ಚಾಗಿ ಈ ಬಗ್ಗೆ ತಿಳಿದುಕೊಂಡಿದ್ದಾರೆ. ಕೊರೋನಾ ಬಂದಾಗಿನಿಂದಲೂ ಎಲ್ಲಾ ದೊಡ್ಡವರಂತೆ ಚಿಕ್ಕ ಮಕ್ಕಳಲ್ಲೂ ಫೋನ್‌ (Mobile Phone) ಕೈಗೆ ಬಂದು ಬಿಟ್ಟಿದೆ. ವಿಶ್ವದ ಜನಪ್ರಿಯ ಮತ್ತು ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಸಾಮಾಜಿಕ ಮಾಧ್ಯಮವಂತೂ (Social Media) ಎಲ್ಲರ ಜೀವನದ ಒಂದು ಭಾಗವಾಗಿ ಹೋಗಿದ್ದು, ಮಾನವ ಸಂಘ ಜೀವಿ ಎಂಬುದನ್ನೇ ಮರೆಸುತ್ತಿದೆ.


ಮಕ್ಕಳಿಗೆ ಅಪಾಯಕಾರಿಯಾದ ಸೋಶಿಯಲ್‌ ಮೀಡಿಯಾ ಗೀಳು
ಮೊಬೈಲ್‌ನ ದುಷ್ಪಾರಿಣಾಮದ ಬಗ್ಗೆ ಯಾವಾಗ್ಲೂ ಚರ್ಚೆಯಾಗುತ್ತಲೇ ಇರುತ್ತದೆ, ಅದರಲ್ಲೂ ಈ ಸೋಶಿಯಲ್‌ ಮೀಡಿಯಾಗಳು ಬಂದ ಮೇಲೆ ಮಕ್ಕಳದ್ದು ಬೇರೆಯದ್ದೇ ಬದುಕು. ಆಗಿನ ಮಕ್ಕಳಂತೆ ಎಲ್ಲರೂ ಸೇರಿ ಆಡೋದು, ಹಾಡೋದು ತುಂಬಾ ಕಡಿಮೆಯಾಗಿ ಬಿಟ್ಟಿದೆ. ಯಾವಾಗಲೂ ಫೋನ್‌, ರೀಲ್ಸ್‌, ಗೇಮ್‌ ಅಂತ ಬಾಲ್ಯ ಕಳೆಯುತ್ತಿದ್ದಾರೆ. ಸಣ್ಣ ಮಕ್ಕಳಿಗೂ ಈ ಸೋಶಿಯಲ್‌ ಮೀಡಿಯಾದ ವ್ಯಾಮೋಹ ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ.


ಈ ಸೋಶಿಯಲ್‌ ಮೀಡಿಯಾ ಗೀಳು ಮಕ್ಕಳಲ್ಲಿ ಹತಾಶೆ, ಖಿನ್ನತೆ, ಸಿಟ್ಟು, ಆತಂಕ, ಒತ್ತಡಗಳಿಗೆ ಬಹು ಮುಖ್ಯ ಕಾರಣವಾಗಿದೆ. ಅಷ್ಟೇ ಅಲ್ಲ ಚಿಕ್ಕ ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದಾಗಿ ತಮ್ಮ ದೇಹ, ಸೌಂದರ್ಯದ ಬಗ್ಗೆಯೂ ನಾಚಿಕೆ ಪಡುತ್ತಿದ್ದಾರಂತೆ.


ಸೋಶಿಯಲ್‌ ಮೀಡಿಯಾ ಎಫೆಕ್ಟ್‌, ಬಾಡಿ ಶೇಮ್‌ಗೆ ಅಂಜುತ್ತಿದ್ದಾರೆ ಯುವಕರು
ಇಂದಿನ ಯುವ ಪೀಳಿಗೆಯ ಪ್ರಸ್ತುತ ಮತ್ತು ಭವಿಷ್ಯದ ಆರೋಗ್ಯಕ್ಕೆ ಸಾಮಾಜಿಕ ಮಾಧ್ಯಮವು ಗಮನಾರ್ಹ ಅಪಾಯವನ್ನು ಪ್ರತಿನಿಧಿಸುತ್ತದೆ ಎಂದು ಹಲವು ಸಂಶೋಧನೆಗಳು ಹೇಳುತ್ತಲೇ ಬಂದಿವೆ. ಪ್ರಸ್ತುತ ಹೊರಬಂದಿರುವ ಒಂದು ಅಧ್ಯಯನವು ಸಾಮಾಜಿಕ ಮಾಧ್ಯಮಗಳು ಮಕ್ಕಳು ತಮ್ಮ ದೇಹವನ್ನು ಇಷ್ಟಪಡದಿರಲು ಪ್ರಚೋದಿಸುತ್ತದೆ ಎಂಬ ಗಂಭೀರ ವಿಷಯವನ್ನು ಹೊರಹಾಕಿದೆ.


ದೊಡ್ಡವರು ಸಾಮಾಜಿಕ ಮಾಧ್ಯಮಗಳ ಪ್ರಭಾವಿತರಿಂದ ಬಾಡಿ ಶೇಮಿಂಗ್‌ ವಿರುದ್ಧ ಉತ್ತರ ಅಥವಾ ಅವರಿಂದ ಪ್ರಭಾವಿತವಾಗಿ ಸಣ್ಣವಾಗುವಂತಹ ಜೀವನಶೈಲಿಯನ್ನು ಅನುಸರಿಸುವ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆಶ್ಚರ್ಯ ಎಂದರೆ ಇದು ಮಕ್ಕಳಲ್ಲೂ ಸಹ ಪ್ರಭಾವಿತವಾಗುತ್ತಿದೆ ಅಂತೆ. ಮಕ್ಕಳೂ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವಾಗ ತಮ್ಮದೇಹದ ಬಗ್ಗೆ ಯೋಚಿಸುತ್ತಾರೆ ಎಂದು ಅಧ್ಯಯನ ಹೇಳಿದೆ.


ಸ್ಟೆಮ್ 4 ಚಾರಿಟಿ ನಡೆಸಿದ ಅಧ್ಯಯನ
ಯುವ ಮಾನಸಿಕ ಆರೋಗ್ಯ ಚಾರಿಟಿಯಾದ ಸ್ಟೆಮ್ 4 12 ರಿಂದ 21 ವರ್ಷ ವಯಸ್ಸಿನ 1,024 ಮಕ್ಕಳಲ್ಲಿ ನಡೆಸಿದ ಸಂಶೋಧನೆ ಆಧಾರದ ಮೇಲೆ ವರದಿಯನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆ ಆಧಾರದ ಮೇಲೆ, ಚಾರಿಟಿ ಮಕ್ಕಳ ನಡೆ ಬಗ್ಗೆ ತುರ್ತು ಕ್ರಮದ ಅಗತ್ಯವಿದೆ ಎಂದು ಹೇಳಿದೆ.


"ಸಾಮಾಜಿಕ ಮಾಧ್ಯಮದ ವಿಷಯದ ಸಂಭಾವ್ಯ ಬಲವಾದ ಪ್ರಭಾವದ ತಿಳುವಳಿಕೆಯನ್ನು ನಾವು ಸುಧಾರಿಸಬೇಕಾಗಿದೆ. ಅಲ್ಗಾರಿದಮ್‌ಗಳ ಮೂಲಕ ರಚಿಸಲಾದ ಬಲವರ್ಧನೆ, ಅಪ್ಲಿಕೇಶನ್‌ಗಳೊಂದಿಗೆ ಯುವಜನರ ತೊಡಗಿಸಿಕೊಳ್ಳುವಿಕೆ ಇಲ್ಲಿ ಪ್ರಮುಖವಾಗಿದೆ. ಪರಿಣಾಮವಾಗಿ ಮಾನಸಿಕ ಆರೋಗ್ಯದ ಮೇಲೆ ಬೀರುವ ನಷ್ಟದ ಮೇಲೆ ಗಮನವಿರಬೇಕು ಎಂದು ಸಲಹೆಗಾರ ಕ್ಲಿನಿಕಲ್ ಮನಶ್ಶಾಸ್ತ್ರಜ್ಞ, CEO ಮತ್ತು ಸ್ಟೆಮ್ 4 ನ ಸಂಸ್ಥಾಪಕ ಡಾ ನಿಹಾರಾ ಕ್ರೌಸ್ ಹೇಳಿದರು.


ಸಮೀಕ್ಷೆಯ ಅಂಕಿಅಂಶಗಳು
12 ರಿಂದ 21 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಮತ್ತು ಯುವಜನರಲ್ಲಿ ಸಾಮಾಜಿಕ ಮಾಧ್ಯಮಗಳು ಅವರ ದೇಹವನ್ನು ಇಷ್ಟಪಡದಿರಲು ಪ್ರಚೋದಿಸಿದೆ ಎಂದು ಅಂಕಿಅಂಶಗಳು ತೋರಿಸಿವೆ. ದಪ್ಪವಾಗಿರುವ ಇಲ್ಲಾ ತುಂಬಾ ಸಣ್ಣ ಇರುವ ಮಕ್ಕಳು ಸೋಶಿಯಲ್‌ ಮೀಡಿಯಾದಲ್ಲಿ ಈ ಬಾಡಿ ಶೇಮಿಂಗ್‌ ಅನ್ನು ಅನುಭವಿಸುವ ಹಂತಕ್ಕೆ ಹೋಗಿದ್ದಾರಂತೆ. ಅದಕ್ಕೆ ಅವರು ವ್ಯಾಯಾಮದಂತಹ ಜೀವನಶೈಲಿಗೂ ಮೊರೆ ಹೋಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.


ತಮ್ಮ ದೇಹವನ್ನೇ ಇಷ್ಟಪಡುತ್ತಿಲ್ಲ ಮಕ್ಕಳು!
12 ವರ್ಷ ವಯಸ್ಸಿನ ನಾಲ್ವರಲ್ಲಿ ಮೂವರು ಮಕ್ಕಳು ತಮ್ಮ ದೇಹವನ್ನು ಇಷ್ಟಪಡುವುದಿಲ್ಲ. ಅವರ ನೋಟದಿಂದ ಮುಜುಗರಕ್ಕೊಳಗಾಗುತ್ತಾರೆ ಎಂಬುದಾಗಿ ಅಧ್ಯಯನದಿಂದ ತಿಳಿದುಬಂದಿದೆ.  18 ರಿಂದ 21 ವರ್ಷ ವಯಸ್ಸಿನ 10 ಯುವಕರಲ್ಲಿ ಎಂಟು ಜನರು ಇದೇ ಸ್ಥಿತಿಯನ್ನು ಎದುರಿಸುವುದಾಗಿ ಹೇಳಿಕೊಂಡಿದ್ದಾರೆ.


12 ವರ್ಷ ವಯಸ್ಸಿನ 97% ಮಕ್ಕಳು ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್
12 ವರ್ಷ ವಯಸ್ಸಿನ 97% ಮಕ್ಕಳು ಈಗ ಸಾಮಾಜಿಕ ಮಾಧ್ಯಮದಲ್ಲಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಸಾಮಾಜಿಕ ಮಾಧ್ಯಮವು ಒತ್ತಡ, ಆತಂಕ ಮತ್ತು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ ಎಂದು ಸುಮಾರು 70% ರಷ್ಟು ಮಂದಿ ಉತ್ತರ ನೀಡಿದ್ದಾರೆ. ಮೂರನೇ ಎರಡರಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರು ಕಳೆಯುವ ಸಮಯದ ಪ್ರಮಾಣದಿಂದ ಚಿಂತಿತರಾಗಿದ್ದಾರೆಂದು ಹೇಳುತ್ತಾರೆ. ಒಟ್ಟಾರೆಯಾಗಿ ಒಂದಿಲ್ಲೊಂದು ಆತಂಕ, ಒತ್ತಡ, ಚಿಂತೆಗಳಿಗೆ ನೇರವಾಗಿ ಸೋಶಿಯಲ್‌ ಮೀಡಿಯಾ ಹೊಣೆಯಾಗಿದೆ ಎನ್ನಬಹುದು.


ಆನ್​ಲೈನ್ ಬಿಟ್ಟು ಇರಲೇ ಆಗದು
ಸಾಮಾಜಿಕ ಮಾಧ್ಯಮ ಅಲ್ಗಾರಿದಮ್‌ಗಳಿಂದ ಆನ್‌ಲೈನ್ ವಿಷಯದಿಂದ ಅವರ ಮಾನಸಿಕ ಆರೋಗ್ಯವು ಹಾನಿಗೊಳಗಾಗುತ್ತಿದೆ. ಈ ಕಳವಳದ ಹೊರತಾಗಿಯೂ ಪ್ರತಿದಿನ ಆ ಅಪ್ಲಿಕೇಶನ್‌ಗಳಿಗೆ ಭೇಟಿ ನೀಡುವುದಾಗಿಯೂ ಸಹ ಅವರು ಒಪ್ಪೊಕೊಂಡಿದ್ದಾರೆ. ಈ ಪ್ರಶ್ನೆಗೆ 12-14 ವರ್ಷ ವಯಸ್ಸಿನ ಮಕ್ಕಳು 54% ಇದ್ದರೆ 15-17 ರಲ್ಲಿ 60% ಕ್ಕೆ ಏರಿದೆ.  18-21 ವರ್ಷ ವಯಸ್ಸಿನ ಯುವಕರಲ್ಲಿ ಈ ಸಂಖ್ಯೆ 71% ಕ್ಕೆ ಏರಿಕೆ ಕಂಡಿದೆ.  ಸುಮಾರು 95% ಜನರು ತಮ್ಮ ಆನ್‌ಲೈನ್ ಅಭ್ಯಾಸವನ್ನು ಬಿಟ್ಟುಬಿಡಲು ಆಗುತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ.


ಸಮೀಕ್ಷೆಯಲ್ಲಿ ಭಾಗವಹಿಸಿದವರು ಹೀಗಂತಾರೆ
ಸಮೀಕ್ಷೆಗೆ ಉತ್ತರಿಸಿದ ಯುವಕನೊಬ್ಬ “ಸಾಮಾಜಿಕ ಮಾಧ್ಯಮವು ನನ್ನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಾವು ಯಾವಾಗಲೂ ಸೋಶಿಯಲ್‌ ಮೀಡಿಯಾದಲ್ಲಿ ಸುಂದರವಾಗಿರುವವರ ಜೊತೆ ನಮ್ಮನ್ನು ಹೋಲಿಸಿಕೊಳ್ಳುತ್ತೇವೆ. ಅವರು ಹೇಗಿದ್ದಾರೆ, ನಾವು ನೋಡಿ ಹೇಗಿದ್ದೇವೆ ಎಂಬ ಹೋಲಿಕೆ ನಮ್ಮನ್ನು ನಮ್ಮ ಮೇಲೆ ಕೆಟ್ಟ ಭಾವನೆ ಬರುವಂತೆ ಮಾಡುತ್ತದೆ" ಎಂದು ಯುವಕ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Siddeshwar Swamiji: ಬಿಳಿ ಬಟ್ಟೆಯೇ ಶೃಂಗಾರ, ಜೇಬು ಇಲ್ಲದ ಫಕೀರ! 'ಜ್ಞಾನಯೋಗಿ' ಸಿದ್ದೇಶ್ವರರ ಹೆಜ್ಜೆ ಗುರುತು ಇಲ್ಲಿವೆ


ಇನ್ನೊಬ್ಬ ಯುವಕ ಮಾತನಾಡಿ, “ನಾವು ನಮ್ಮನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಸಾಮಾಜಿಕ ಮಾಧ್ಯಮವು ಭಾರಿ ಪ್ರಭಾವ ಬೀರುತ್ತದೆ. ಎಡಿಟ್ ಮಾಡಿದ ಮತ್ತು ಮಾರ್ಪಡಿಸಿದ ಹಾಗೆ ಕಾಣುವಂತೆ ನಾನು ಮಾಡುವ ವಿಷಯದಲ್ಲಿ ಒತ್ತಡಕ್ಕೊಳಗಾಗಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಕೆಲ ಅಪ್ಲಿಕೇಷನ್​ಗಳಿಂದ ಯುವ ಜನತೆ ಆತ್ಮಹತ್ಯೆಗೂ ಶರಣಾಗುತ್ತಿರುವ ಉದ್ದೇಶದಿಂದ ಮಕ್ಕಳ ಹಿತದೃಷ್ಟಿ ಕಾಪಾಡಲು ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತಿವೆ. ಟಿಕ್‌ಟಾಕ್‌ನ ಮಾರ್ಗಸೂಚಿಗಳು ಆತ್ಮಹತ್ಯೆ ಮತ್ತು ಸ್ವಯಂ-ಹಾನಿಗೆ ಕಾರಣವಾಗುವ ನಡವಳಿಕೆಯನ್ನು ಉತ್ತೇಜಿಸುವ ವಿಷಯವನ್ನು ನಿಷೇಧಿಸುತ್ತವೆ, ಜೊತೆಗೆ ಅನಾರೋಗ್ಯಕರ ಆಹಾರ ನಡವಳಿಕೆಗಳು ಅಥವಾ ಅಭ್ಯಾಸಗಳನ್ನು ಉತ್ತೇಜಿಸುವ ವಿಷಯವನ್ನು ಸಹ ಬ್ಯಾನ್‌ ಮಾಡಿದೆ.


ಮಾನಸಿಕ ಆರೋಗ್ಯ ಕಸಿದುಕೊಳ್ಳುತ್ತಿದೆ


ಸಾಮಾಜಿಕ ಮಾಧ್ಯಮ ಕಂಪನಿಗಳ ವೇದಿಕೆಗಳು ಯುವ ಹದಿಹರೆಯದವರು ಮತ್ತು ವಯಸ್ಕರು ದೇಹದ ಚಿತ್ರಣ, ತಿನ್ನುವ ಅಸ್ವಸ್ಥತೆಗಳು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಉಲ್ಬಣಿಸುತ್ತವೆ.  "TikTok ಯುವ ಬಳಕೆದಾರರನ್ನು ತಮ್ಮ ಸಮಯ ಮತ್ತು ಗಮನವನ್ನು ಬಿಟ್ಟುಕೊಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಕ್ರಮೇಣ ಇದು ಅವರಿಗೆ ಮಾನಸಿಕವಾಗಿ ಹೊಡೆತ ನೀಡುತ್ತದೆ


ಇದನ್ನೂ ಓದಿ: Superbug: ಏನಿದು ಸೂಪರ್​ಬಗ್​? ಇದರಿಂದ ಪ್ರತಿ ವರ್ಷ ಒಂದು ಲಕ್ಷ ಜನ ಸಾಯಬಹುದು!

ಯುವ ಜನರಲ್ಲಿ ಸಕಾರಾತ್ಮಕ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮೀಸಲಾಗಿರುವ ಚಾರಿಟಿಯಾದ ಪ್ಯಾಪಿರಸ್‌ನ ಮುಖ್ಯ ಕಾರ್ಯನಿರ್ವಾಹಕ ಗೆಡ್ ಫ್ಲಿನ್ ಸಹ ಸಮೀಕ್ಷೆಯನ್ನು ಸ್ವಾಗತಿಸಿದ್ದಾರೆ. ಇಂದಿನ ಯುವಜನರ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವ ಸಮಸ್ಯೆಗಳಲ್ಲಿ ಸಾಮಾಜಿಕ ಮಾಧ್ಯಮವು ಒಂದು ಎಂದು ಅವರು ಹೇಳಿದ್ದಾರೆ. ಈ ಆತಂಕ ಕೊನೆ ಮಟ್ಟಕ್ಕೆ ಹೋದಲ್ಲಿ ಯುವಕರು ತಮ್ಮ ಬದುಕನ್ನು ಸಾವಿನ ದಾವಡೆಗೆ ನೂಕುತ್ತಾರೆ. ಈ ಬಗ್ಗೆ ನಿಜಕ್ಕೂ ಕ್ರಮಗಳ ಅಗತ್ಯವಿದೆ" ಎಂದು ಅವರು ಹೇಳಿದರು.


ಪೋಷಕರೇ ಎಚ್ಚರ
ಸಾಮಾಜಿಕ ಮಾಧ್ಯಮ ಬಳಕೆ ಈಗ ಚಟವಾಗಿದ್ದು, ಇದನ್ನು ಬಿಡುತ್ತೇನೆ ಎಂದರೂ ಕಷ್ಟವಾಗಿ ಹೋಗಿದೆ.ಪ್ರಚಲಿತ ಇದೇ ಕಾರಣಕ್ಕೆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಳ್ಳುವ, ಪ್ರೀತಿಗೀತಿ ಎಂತ ಬೀಳೋ ಪ್ರಸಂಗಗಳು ಸಹ ಹೆಚ್ಚಾಗಿವೆ. ಹೀಗಾಗಿ ಮಕ್ಕಳು ಬಳಸುವ ಫೋನ್‌, ಅವರ ಸೋಶಿಯಲ್‌ ಮೀಡಿಯಾದ ಚಟುವಟಿಕೆಗಳ ಬಗ್ಗೆ ಪೋಷಕರು ಸದಾ ಗಮನ ನೀಡುತ್ತಲೇ ಇರಬೇಕು.

Published by:ಗುರುಗಣೇಶ ಡಬ್ಗುಳಿ
First published: