ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ ವಾಲ್​ನಟ್ ತಿನ್ನುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು

ಅನೇಕರು ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹವರಿಗೆ ವಾಲ್​ನಟ್ ಉತ್ತಮ ಆಹಾರ. ಏಕೆಂದರೆ ಇದರ ಸೇವನೆ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಾಲ್​ನಟ್

ವಾಲ್​ನಟ್

 • Share this:
  ಚಳಿಗಾಲದಲ್ಲಿ ನಾವು ಯಾವೆಲ್ಲಾ ರೀತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಾಧ್ಯವೊ ಅದೆಲ್ಲವನ್ನೂ ಪ್ರಯೋಗಿಸುವುದು ಉತ್ತಮ. ಏಕೆಂದರೆ ಚಳಿಗಾಲದಲ್ಲಿ ತಲೆದೂರುವ ಅನಾರೋಗ್ಯ ಸಮಸ್ಯೆಗಳು ಬಹುಬೇಗನೆ ದೂರವಾಗುವುದಿಲ್ಲ. ಚಳಿಗಾಲದಲ್ಲಿ ಆರೋಗ್ಯವಾಗಿರಲು ನೀವು ಬಯಸಿದರೆ, ಅಕ್ರೋಟ್ (ವಾಲ್​ನಟ್) ತಿನ್ನುವುದು ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ಕಚ್ಚಾ ತಿನ್ನುವ ಬದಲು ವಾಲ್​ನಟ್ ಅನ್ನು ನೆನೆಸಿ ತಿಂದರೆ, ಅದರ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಇದಕ್ಕಾಗಿ, ರಾತ್ರಿಯಲ್ಲಿ 2 ವಾಲ್​ನಟ್ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ನೆನೆಸಿದ ವಾಲ್​ನಟ್ ತಿನ್ನುವುದು ನೆನೆಸಿದ ಬಾದಾಮಿ ತಿನ್ನುವುದಕ್ಕೆ ಸಮ. ಇದರಿಂದ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ.

  ರಕ್ತದಲ್ಲಿನ ಸಕ್ಕರೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಬಯಸಿದರೆ, ನೆನೆಸಿದ ವಾಲ್​ನಟ್ ತಿನ್ನುವುದು ಉತ್ತಮ. ಪ್ರತಿದಿನ ವಾಲ್​ನಟ್ ಸೇವಿಸುವ ಜನರಲ್ಲಿ ಟೈಪ್ -2 ಮಧುಮೇಹ ಬರುವ ಅಪಾಯವನ್ನು ಕಡಿಮೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವಾಲ್​ನಟ್ ಸಹಾಯ ಮಾಡುತ್ತದೆ. ಹಾಗೆಯೇ ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

  ವಾಲ್​ನಟ್​ನಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶ ಕಂಡುಬರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಹೊಟ್ಟೆಯನ್ನು ಸರಿಯಾಗಿಡಲು ಮತ್ತು ಮಲಬದ್ಧತೆಯನ್ನು ತಪ್ಪಿಸಲು ಫೈಬರ್ ಸಮೃದ್ಧ ವಸ್ತುಗಳನ್ನು ಸೇವಿಸುವುದು ಬಹಳ ಮುಖ್ಯ. ಈ ಸಂದರ್ಭದಲ್ಲಿ, ನೀವು ಪ್ರತಿದಿನ ವಾಲ್​ನಟ್ ಸೇವಿಸಿದರೆ, ನಿಮ್ಮ ಹೊಟ್ಟೆ ಸಮಸ್ಯೆ ದೂರುವಾಗುತ್ತದೆ. ಹಾಗೆಯೇ ಮಲಬದ್ಧತೆ ಇರುವುದಿಲ್ಲ.

  ವಾಲ್​ನಟ್ ಮೂಳೆಗಳಿಗೆ ಕೂಡ ಪ್ರಯೋಜನಕಾರಿ. ಇದು ನಿಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ವಾಲ್​ನಟ್ ಅಲ್ಫಾ-ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತದೆ, ಇದರಿಂದ ಮೂಳೆಗಳು ಬಲಪಡಿಸಲು ಸಹಾಯ ಮಾಡುತ್ತದೆ.

  ಅನೇಕರು ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹವರಿಗೆ ವಾಲ್​ನಟ್ ಉತ್ತಮ ಆಹಾರ. ಏಕೆಂದರೆ ಇದರ ಸೇವನೆ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಇದರಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  Published by:zahir
  First published: