• Home
  • »
  • News
  • »
  • lifestyle
  • »
  • Almonds And Health: ಬಾದಾಮಿಯ ಆರೋಗ್ಯಕರ ಪೋಷಕಾಂಶ ಪಡೆಯಲು ನೆನೆಸಿ ಸಿಪ್ಪೆ ರಹಿತ ಸೇವಿಸುವುದು ಸೂಕ್ತವೇ?

Almonds And Health: ಬಾದಾಮಿಯ ಆರೋಗ್ಯಕರ ಪೋಷಕಾಂಶ ಪಡೆಯಲು ನೆನೆಸಿ ಸಿಪ್ಪೆ ರಹಿತ ಸೇವಿಸುವುದು ಸೂಕ್ತವೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಣ ಹಣ್ಣುಗಳನ್ನು ತಿನ್ನಲು ಆಸಕ್ತಿ ವಹಿಸಿ. ಯಾಕೆಂದರೆ ಎಲ್ಲಾ ಬೀಜಗಳು ತುಂಬಾ ಆರೋಗ್ಯಕರವೆಂದು ತಜ್ಞರು ಹೇಳುತ್ತಾರೆ. ಒಣಗಿದ ಹಣ್ಣುಗಳನ್ನು ತಿನ್ನುವ ವಿಚಾರದಲ್ಲಿ ಹಿಂದೆ ಮುಂದೆ ನೋಡಬೇಡಿ. ಒಣಹಣ್ಣುಗಳನ್ನು ಪೋಷಕಾಂಶಗಳ ಕಣಜವೆಂದು ಹೇಳುತ್ತಾರೆ.

  • Share this:

    ಜಗತ್ತಿನಲ್ಲಿ (World) ಎಲ್ಲರೂ ಎಲ್ಲವನ್ನೂ ಇಷ್ಟ (Like) ಪಡಲ್ಲ. ಅದು ವಿಷಯ (Subject), ವಸ್ತು (Thing) ಮತ್ತು ತಿನ್ನುವ ಹಾಗೂ ಕುಡಿಯುವ (Eating And Drinking) ವಿಚಾರವೇ ಇರಬಹುದು. ತುಂಬಾ ಜನರು (People) ಹಣ್ಣು ಮತ್ತು ಬೀಜಗಳನ್ನು (Fruits And Seeds) ತಿನ್ನು ಇಷ್ಟ ಪಡ್ತಾರೆ. ಇನ್ನು ಕೆಲವರು ಯಾವುದೇ ರೀತಿಯ ಬೀಜಗಳನ್ನು ತಿನ್ನಲು ಆಸಕ್ತಿ ತೋರಿಸುವುದಿಲ್ಲ. ಹಾಗೆಯೇ ಅನೇಕರು ಕೆಲವು ಹಣ್ಣುಗಳ ಸೇವನೆಯನ್ನು ಮಾತ್ರ ಇಷ್ಟ ಪಡುತ್ತಾರೆ. ಅದಾಗ್ಯೂ ಒಣಹಣ್ಣುಗಳನ್ನು ಪೋಷಕಾಂಶಗಳ ಕಣಜವೆಂದು ಹೇಳುತ್ತಾರೆ. ಆದರೆ ಕೆಲವರು ಡ್ರೈ ಫ್ರೂಟ್ಸ್ ತಿನ್ನಲು ಸಹ ಇಷ್ಟ ಪಡುವುದಿಲ್ಲ. ಇನ್ನು ಕೆಲವರು ಅದನ್ನು ಉತ್ಸಾಹದಿಂದ ತಿನ್ನುತ್ತಾರೆ.


    ಒಣ ಹಣ್ಣುಗಳ ಸೇವನೆ ಆರೋಗ್ಯಕರ ಆಯ್ಕೆ


    ಒಣ ಹಣ್ಣುಗಳನ್ನು ತಿನ್ನಲು ಆಸಕ್ತಿ ವಹಿಸಿ. ಯಾಕೆಂದರೆ ಎಲ್ಲಾ ಬೀಜಗಳು ತುಂಬಾ ಆರೋಗ್ಯಕರವೆಂದು ತಜ್ಞರು ಹೇಳುತ್ತಾರೆ. ಒಣಗಿದ ಹಣ್ಣುಗಳನ್ನು ತಿನ್ನುವ ವಿಚಾರದಲ್ಲಿ ಹಿಂದೆ ಮುಂದೆ ನೋಡಬೇಡಿ. ಕೆಲವರು ಒಣ ಹಣ್ಣುಗಳನ್ನು ನೆನೆಸಿ ಅವುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಇನ್ನು ಕೆಲವರು ಹಾಗೆಯೇ ತಿನ್ನುತ್ತಾರೆ.


    ಹೀಗೆ ನೆನೆಸಿಟ್ಟು ಸಿಪ್ಪೆ ತೆಗೆದು ತಿನ್ನುವ ಹಣ್ಣುಗಳಲ್ಲಿ ಬಾದಾಮಿ ಕೂಡ ಒಂದು. ಕೆಲವರು ಬಾದಾಮಿಯನ್ನು ನೆನೆಸಿ ಸಿಪ್ಪೆ ತೆಗೆದು ತಿನ್ನುತ್ತಾರೆ. ಇನ್ನು ಕೆಲವರು ಬಾದಾಮಿಯನ್ನು ನೆನೆಸಿ ಸಿಪ್ಪೆ ಸಮೇತ ತಿನ್ನುತ್ತಾರೆ. ಇನ್ನು ಕೆಲವರು ಒಣ ಹಣ್ಣನ್ನೆ ತಿನ್ನುತ್ತಾರೆ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಬಾದಾಮಿ ನೆನೆಸಿ ಸಿಪ್ಪೆ ಸುಲಿದು ಸೇವಿಸುವುದು


    ಆದರೆ ಇತ್ತೀಚಿನ ದಿನಗಳಲ್ಲಿ ಬಾದಾಮಿಯನ್ನು ನೆನೆಸಿ ನಂತರ ಸಿಪ್ಪೆ ಸುಲಿದ ನಂತರ ಜನರು ತಿನ್ನುವುದು ಹೆಚ್ಚಾಗಿ ಕಂಡು ಬಂದಿದೆ. ಇದು ಬಾದಾಮಿಯನ್ನು ತಿನ್ನುವ ಹಳೆಯ ಪದ್ಧತಿ. ಆದರೆ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ತಿಳಿಯುವುದು ಮುಖ್ಯ. ಸಿಪ್ಪೆ ಸಹಿತ ಬಾದಾಮಿ ತಿನ್ನುವುದು ಅಥವಾ ನೆನೆಸಿದ ನಂತರ ಸಿಪ್ಪೆ ತೆಗೆದು ಸೇವಿಸುವುದು ಯಾವುದು ಉತ್ತಮ ಎಂದು ತಿಳಿಯುವುದು ಮುಖ್ಯ.


    ಬಾದಾಮಿ ತಿನ್ನುವ ಸರಿಯಾದ ವಿಧಾನ ಯಾವುದು?


    ಅಹಮದಾಬಾದ್‌ನ ನಾರಾಯಣ ಹೃದಯಾಲಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಕ್ಲಿನಿಕಲ್ ಡಯೆಟಿಷಿಯನ್ ಶ್ರುತಿ ಭಾರದ್ವಾಜ್ ಹೇಳಿದ ಪ್ರಕಾರ, ನೆನೆಸಿದ ಬಾದಾಮಿ ಮೃದು ಮತ್ತು ಜೀರ್ಣಿಸಿಕೊಳ್ಳಲು ಸುಲಭ ಎಂದು ಹೇಳ್ತಾರೆ. ಅಲ್ಲದೆ ಅವರು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುತ್ತಾರೆ.


    ಶ್ರುತಿ ಅವರ ಪ್ರಕಾರ, ಹಸಿ ಬಾದಾಮಿ ತಿನ್ನುವುದಕ್ಕಿಂತ ಬಾದಾಮಿಯನ್ನು ನೆನೆಸಿ ಸೇವನೆ ಮಾಡಿದರೆ ದೇಹವು ಹೀರಿಕೊಳ್ಳುವ ಪೋಷಕಾಂಶಗಳು ಮತ್ತು ವಿಟಮಿನ್‌ಗಳ ಪ್ರಮಾಣ ಹೆಚ್ಚಿಸುತ್ತದೆ. ನೆನೆಸಿದ ಬಾದಾಮಿಗೆ ಆದ್ಯತೆ ನೀಡಲಾಗುತ್ತದೆ.


    ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಿಪ್ಪೆ ಸುಲಿದ ಬಾದಾಮಿ ಸೇವನೆ ಸಹಕಾರಿ


    ಬಾದಾಮಿ ಚರ್ಮವು ಟ್ಯಾನಿನ್ ಅನ್ನು ಹೊಂದಿದೆ. ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆ ತಡೆಯುತ್ತದೆ. ಬಾದಾಮಿ ನೆನೆಸಿದರೆ ಸಿಪ್ಪೆ ಸುಲಿಯುತ್ತದೆ. ಮತ್ತು ಬೀಜಗಳು ಎಲ್ಲಾ ಪೋಷಕಾಂಶಗಳನ್ನು ಸುಲಭವಾಗಿ ಬಿಡುಗಡೆ ಮಾಡಲು ಅನುವು ಮಾಡುತ್ತದೆ.


    ನೆನೆಸಿದ ಬಾದಾಮಿ ಸೇವನೆ ಯೋಗ್ಯ ಆಯ್ಕೆ. ನೆನೆಸುವ ಪ್ರಕ್ರಿಯೆಯು ಜೀರ್ಣಕಾರಿ ಸಮಸ್ಯೆಗಳು ಮತ್ತು ಹಲ್ಲಿನ ಸಮಸ್ಯೆ ತಡೆಯುತ್ತದೆ. ವೃದ್ಧಾಪ್ಯದಲ್ಲಿ ಸೇವಿಸಲು ಮತ್ತು ಮೃದುವಾಗಿ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿ.


    ನೆನೆಸಿದ ಬಾದಾಮಿ ಸೇವನೆಯ ಪ್ರಯೋಜನಗಳು


    ಒಂದು ಕಪ್ ನೀರು ತೆಗೆದುಕೊಳ್ಳಿ. ಅದರಲ್ಲಿ ಒಂದು ಹಿಡಿ ಬಾದಾಮಿ ನೆನೆಸಿಡಿ. ಕಪ್ ಅನ್ನು ಮುಚ್ಚಿ ಮತ್ತು ಬಾದಾಮಿಯು ಆರರಿಂದ ಎಂಟು ಗಂಟೆಗಳ ಕಾಲ ನೆನೆಯಲಿ. ಮರುದಿನ ಬೆಳಿಗ್ಗೆ ನೀರು ಮತ್ತು ಸಿಪ್ಪೆ ಸುಲಿದು ತಾಜಾವಾಗಿ ಪ್ರತಿದಿನ ಸೇವಿಸಿ. ಇದು ಉತ್ತಮ ಫಲಿತಾಂಶ ನೀಡುತ್ತದೆ. ತಾಜಾ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಅಭ್ಯಾಸ.


    ಜೀರ್ಣಕ್ರಿಯೆ ಸುಧಾರಿಸುತ್ತದೆ


    ಜೀರ್ಣಕ್ರಿಯೆಯ ದೃಷ್ಟಿಯಿಂದ ನೆನೆಸಿದ ಬಾದಾಮಿ ಉತ್ತಮ. ಜೀರ್ಣಾಂಗ ವ್ಯವಸ್ಥೆಯು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಬಾದಾಮಿಯು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲ. ನೆನೆಸಿದಾಗ ಅವುಗಳ ಪ್ರಯೋಜನಗಳು ದುಪ್ಪಟ್ಟಾಗುತ್ತವೆ.


    ತೂಕ ನಷ್ಟ


    ಬಾದಾಮಿಯನ್ನು ನೆನೆಸಿದಾಗ ಅದು ಲಿಪೇಸ್‌ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಇದು ಚಯಾಪಚಯ ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಕಾರಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಫೈಟಿಕ್ ಆಮ್ಲವನ್ನು ತೆಗೆದು ಹಾಕುತ್ತದೆ


    ಬಾದಾಮಿಯನ್ನು ನೆನೆಸಿ ತಿಂದರೆ ಫೈಟಿಕ್ ಆಮ್ಲ ತೆಗೆದು ಹಾಕಲು ಸಹಕಾರಿ. ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಕಾರಿ. ಸತು ಮತ್ತು ಕಬ್ಬಿಣದಂಶ ದೇಹ ಸೇರುತ್ತದೆ.

    Published by:renukadariyannavar
    First published: