• Home
  • »
  • News
  • »
  • lifestyle
  • »
  • Travel Places: ವಿಭಿನ್ನವಾಗಿ ಬದಲಾಗಿದೆ ಇಂಡಿಯಾ ಗೇಟ್​, ಪ್ರವಾಸಿಗರ ತಲೆಯಲ್ಲಿ ಸಾವಿರ ಪ್ರಶ್ನೆಗಳು

Travel Places: ವಿಭಿನ್ನವಾಗಿ ಬದಲಾಗಿದೆ ಇಂಡಿಯಾ ಗೇಟ್​, ಪ್ರವಾಸಿಗರ ತಲೆಯಲ್ಲಿ ಸಾವಿರ ಪ್ರಶ್ನೆಗಳು

ಇಂಡಿಯಾ ಗೇಟ್​

ಇಂಡಿಯಾ ಗೇಟ್​

India Gate Best Travel Place: ಮೊದಲೆಲ್ಲಾ ಇಂಡಿಯಾ ಗೇಟ್‌ನ ಸುತ್ತ ರಾತ್ರಿಯ ವಿಹಾರಕ್ಕೆ ಅನುಮತಿ ಇತ್ತು, ಆದರೀಗ ಸಾಕಷ್ಟು ಮಾರ್ಪಡುಗಳು ಉಂಟಾಗಿದೆ ಎಂಬುದು  ನಿವಾಸಿಗಳ ಮಾತಾಗಿದೆ. ಇಂಡಿಯಾ ಗೇಟ್ ಬಳಿ ಸ್ಟಾಲ್‌ಗಳನ್ನಿಟ್ಟು ವ್ಯಾಪಾರ ನಡೆಸುತ್ತಿದ್ದ ಹಲವಾರು ವ್ಯಾಪಾರಿಗಳು ಮುಂಚಿನ ರೀತಿ ವ್ಯಾಪಾರ ಮಾಡಲಾಗ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ದೆಹಲಿ (delhi) ರಾಷ್ಟ್ರ ರಾಜಧಾನಿಯಾಗಿ (Capital Of India) ಮಾತ್ರವಲ್ಲದೆ ಕೆಲವೊಂದು ಆಕರ್ಷಣೀಯ ಅಂಶಗಳಿಂದಲೂ ಪ್ರಸಿದ್ಧವಾಗಿದೆ. ಇಂಡಿಯಾ ಗೇಟ್‌ನಿಂದ (India Gate)  ಆರಂಭಿಸಿ ಬಹಾಯಿ ಲೋಟಸ್ ಟೆಂಪಲ್, ಕೆಂಪು ಕೋಟೆ, ಅಕ್ಷರ್ ಧಾಮ್, ಜಾಮಾ ಮಸೀದಿ ಹೀಗೆ ಅನೇಕ ಸುಂದರಮಯ ಸ್ಥಳಗಳನ್ನು ರಾಜಧಾನಿ ಒಳಗೊಂಡಿದೆ. ಆದರೆ ದೆಹಲಿ ಇದೀಗ ಮುಂಚಿನಂತಿಲ್ಲ, ಬದಲಾಗಿದೆ ಎಂಬುದು ಹೆಚ್ಚಿನ ದೆಹಲಿ ನಿವಾಸಿಗಳ ಮಾತಾಗಿದೆ.


ಇಂಡಿಯಾ ಗೇಟ್‌ನಲ್ಲಿ ಉಂಟಾಗಿರುವ ಬದಲಾವಣೆಗಳು


ಅದರಲ್ಲೂ ಇಂಡಿಯಾ ಗೇಟ್‌ನ ಕುರಿತು ಕೆಲವೊಂದು ಅಭಿಪ್ರಾಯಗಳನ್ನು ನಿವಾಸಿಗಳು ಹಂಚಿಕೊಂಡಿದ್ದು ಲೇಖಕರಾದ ಶೌರ್ಯ ಥಾಪಾ ಆ ಅನುಭವಗಳನ್ನು ಒಗ್ಗೂಡಿಸಿಕೊಂಡು ಇಂಡಿಯಾ ಗೇಟ್‌ನ ಅಂದಿನ ಹಾಗೂ ಇಂದಿನ ಬದಲಾವಣೆಗಳನ್ನು ಸೂಚಿಸಿದ್ದಾರೆ.


ಮೊದಲೆಲ್ಲಾ ಇಂಡಿಯಾ ಗೇಟ್‌ನ ಸುತ್ತ ರಾತ್ರಿಯ ವಿಹಾರಕ್ಕೆ ಅನುಮತಿ ಇತ್ತು, ಆದರೀಗ ಸಾಕಷ್ಟು ಮಾರ್ಪಡುಗಳು ಉಂಟಾಗಿದೆ ಎಂಬುದು  ನಿವಾಸಿಗಳ ಮಾತಾಗಿದೆ. ಇಂಡಿಯಾ ಗೇಟ್ ಬಳಿ ಸ್ಟಾಲ್‌ಗಳನ್ನಿಟ್ಟು ವ್ಯಾಪಾರ ನಡೆಸುತ್ತಿದ್ದ ಹಲವಾರು ವ್ಯಾಪಾರಿಗಳು ಮುಂಚಿನ ರೀತಿ ವ್ಯಾಪಾರ ಮಾಡಲಾಗ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.


ಕರ್ತವ್ಯಪಥವಾಗಿ ಮರುನಾಮಕರಣಗೊಂಡಿರುವ ರಾಜಪಥ


ರಾಜ್‌ಪಥ್ ಅನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿದಾಗಿನಿಂದ ರಾಷ್ಟ್ರ ರಾಜಧಾನಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ, ಆಡಳಿತದಲ್ಲೂ ಹಲವಾರು ಮಾರ್ಪಾಡುಗಳು ಉಂಟಾಗಿದೆ.


ಸಿಸಿಟಿವಿ ಕ್ಯಾಮೆರಾ, ಕೆಂಪು ಗ್ರಾನೈಟ್ ಟೈಲ್ಸ್ ಹೀಗೆ ವೈಭವೋಪೇತ ಅಂಶಗಳೊಂದಿಗೆ ಇನ್ನಷ್ಟು ಶ್ರೀಮಂತವಾಗಿದೆ ಹಾಗೂ ಆಕರ್ಷಣೀಯ ಎಂದೆನಿಸಿದೆ ಎಂಬುದು ನಿವಾಸಿಗಳ ಅಭಿಪ್ರಾಯವಾಗಿದೆ ಎಂದು ಶೌರ್ಯ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.


ಮೊದಲಿದ್ದ ಸ್ವಾತಂತ್ರ್ಯ ಈಗ ಇಲ್ಲ ನಿವಾಸಿಗಳ ಅಭಿಪ್ರಾಯ


ಒಟ್ಟಿನಲ್ಲಿ ಸಂಪೂರ್ಣ ರಾಜಪಥವನ್ನೇ ಪುನರ್ ನಿರ್ಮಿಸುವ ಹಾಗೂ ನವೀಕರಿಸುವ ಕೇಂದ್ರದ ಪ್ರಯತ್ನಗಳು ರಾಜಪಥವನ್ನು ಇನ್ನಷ್ಟು ಹೆಚ್ಚು ಪ್ರಜಾಪ್ರಭುತ್ವವನ್ನಾಗಿಸುವ ಕ್ರಮವೆಂದು ಉಲ್ಲೇಖಿಸಬಹುದು ಎಂದು ಇಲ್ಲಿಗೆ ಹೆಚ್ಚು ಭೇಟಿ ನೀಡುವ ಪ್ರಸಾದ್ ಅಭಿಪ್ರಾಯವಾಗಿದೆ.


ಮೊದಲೆಲ್ಲಾ ಮುಕ್ತವಾಗಿ ನಾವೆಲ್ಲಾ ಇಂಡಿಯಾ ಗೇಟ್‌ಗೆ ಭೇಟಿ ನೀಡುತ್ತಿದ್ದೆವು, ಆದರೀಗ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಪ್ರಸಾದ್ ಮಾತಾಗಿದೆ.


ಪ್ರವಾಸಿಗರಿಗೆ ನಿರ್ಬಂಧ


ಇಂಡಿಯಾ ಗೇಟ್‌ಗೆ ಪ್ರವೇಶಿಸಲು ಇದೀಗ ಹೆಚ್ಚಿನ ಭದ್ರತೆಗಳಿದ್ದು ಮೊದಲಿನಂತೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಿಲ್ಲ ಎಂಬುದು ಪ್ರಕಾಶ್ ಮಾತಾಗಿದೆ.


ಸೆಂಟ್ರಲ್ ವಿಸ್ಟಾ ಅವೆನ್ಯೂ ಪಥವನ್ನೇ ತೆಗೆದುಕೊಂಡಾಗ ಇದು ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ಮಾರ್ಗವನ್ನು ಒಳಗೊಂಡಿದೆ. ದಶಕಗಳಿಂದ, ಜೆನೆರಿಕ್ ಟ್ರಾವೆಲ್ ಛಾಯಾಗ್ರಾಹಕರು ಇಂಡಿಯಾ ಗೇಟ್ ಅನ್ನು ವೀಕ್ಷಿಸಲು ಬರುವ ಪ್ರವಾಸಿಗರ ದಂಡು, ಆಟಿಕೆಗಳು ಮತ್ತು ಖಾದ್ಯಗಳ ಮಾರಾಟಗಾರರು ಮತ್ತು ಗೇಟ್‌ನಿಂದ ಮಾನ್ ಸಿಂಗ್ ರಸ್ತೆಯವರೆಗೆ ಹುಲ್ಲುಹಾಸಿನ ಮೇಲೆ ವಿಹಾರ ಮಾಡುತ್ತಿರುವ ಜನರು ಹೀಗೆ ಮೊದಲೆಲ್ಲಾ ಜನಜಂಗುಳಿಯೇ ನೆರೆಯುತ್ತಿತ್ತು.


ಆದರೆ ಸೆಪ್ಟೆಂಬರ್‌ನಲ್ಲಿ ವಿಸ್ಟಾ ಉದ್ಘಾಟನೆಯಾದ ನಂತರ, ಅಂತಹ ಎಲ್ಲಾ ಪಿಕ್ನಿಕ್‌ಗಳನ್ನು, ಜನರ ಓಡಾಟವನ್ನು ನಿಷೇಧಿಸಲಾಯಿತು.


ಮೊದಲಿನ ಸುತ್ತಾಟಕ್ಕೂ ಅವಕಾಶವಿಲ್ಲ ಎಂದು ತಿಳಿಸುವ ನಿವಾಸಿಗಳು


ಈಗ ಹಿಂದಿನಂತೆ ಇಂಡಿಯಾ ಗೇಟ್ ಅನ್ನು ಸುತ್ತಿ ಬರುವುದು ಅಷ್ಟೊಂದು ಸುಲಭವಲ್ಲ ಎಂಬುದು ಇನ್ನೊಬ್ಬ ನಿವಾಸಿ ಭಾವೀಷ್ ಮಾತಾಗಿದೆ.


ಮೊದೆಲ್ಲಾ ರಾತ್ರಿ ಎಷ್ಟು ಹೊತ್ತಾದರೂ ನಾವೆಲ್ಲಾ ಗೆಳೆಯರು ಇಂಡಿಯಾ ಗೇಟ್‌ಗೆ ಭೇಟಿ ನೀಡಿ ಸ್ವಲ್ಪ ಹೊತ್ತು ಹರಟೆ ಹೊಡೆದು ಬರುತ್ತಿದ್ದೆವು, ಆದರೀಗ ಭದ್ರತೆಗಳ ಹೆಸರಿನಿಂದ ಪ್ರವೇಶ ಹಾಗೂ ಓಡಾಟವನ್ನು ನಿಷೇಧಿಸಲಾಗಿದೆ ಎಂಬುದು ಭಾವೀಷ್ ಮಾತಾಗಿದೆ.


ಬರೇ ನೆನಪು ಮಾತ್ರ


ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಇಂಡಿಯಾ ಗೇಟ್‌ ಸುತ್ತ ವಿಹಾರ ನಡೆಸುತ್ತಿದ್ದ ನೆನಪುಗಳನ್ನು ಮೆಲುಕು ಹಾಕಿದ ಪ್ರಕಾಶ್ ಕೋವಿಡ್ ಪೂರ್ವ ಸಮಯದಲ್ಲಿ ರಾತ್ರಿಯ ಸ್ಮರಣೆಗೆ ಮುಡಿಪಾಗಿದ್ದ ಸ್ಥಳವಾಗಿತ್ತು ಎಂದು ತಿಳಿಸಿದ್ದಾರೆ.


ಸಾರ್ವಜನಿಕರಿಗೆ ಪ್ರವೇಶವಿಲ್ಲ ಜೊತೆಗೆ ಬ್ಯಾರಿಕೇಡ್‌ಗಳಿಂದ ತಡೆ


ಲೇಖಕರು ತಮ್ಮ ವೈಯಕ್ತಿಕ ಅನುಭವವನ್ನು ಕೂಡ ಲೇಖನದಲ್ಲಿ ಹಂಚಿಕೊಂಡಿದ್ದು, ಇಂಡಿಯಾ ಗೇಟ್‌ ಬಳಿ ಹಾಕಿರುವ ಬ್ಯಾರಿಕೇಡ್‌ಗಳನ್ನು ದಾಟಿದರೂ ಪೊಲೀಸರು ಪ್ರಶ್ನಿಸುತ್ತಾರೆ ಎಂದು ತಿಳಿಸಿದ್ದಾರೆ.


ಅವರು ಹಾಗೂ ಅವರ ಗೆಳೆಯರು ಕ್ರಿಸ್‌ಮಸ್ ಸಂಜೆಯಂದು ರೆಸ್ಟಾರೆಂಟ್‌ನಲ್ಲಿ ಊಟ ಮುಗಿಸಿ ಇಂಡಿಯಾ ಗೇಟ್‌ನ ಸುತ್ತ ವಿಹಾರಕ್ಕೆ ಹೊರಟಿದ್ದರು, ಆದರೆ ಬ್ಯಾರಿಕೇಡ್‌ಗಳನ್ನು ರಸ್ತೆಯಲ್ಲಿ ಅಳವಡಿಸಲಾಗಿತ್ತು ಹಾಗೂ ರಾತ್ರಿ 10.30 ಯಿಂದ ಬೆಳಗ್ಗೆ 11 ರವರೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕ ಕೂಡ ಅಲ್ಲಿ ಲಗತ್ತಿಸಲಾಗಿತ್ತು ಎಂದು ತಿಳಿಸಿದ್ದಾರೆ.


ಫೋಟೋ ತೆಗೆಯಲು ಅವಕಾಶವಿಲ್ಲ


ಹಾಗಾಗಿ ಬ್ಯಾರಿಕೇಡ್‌ನ ಆ ಕಡೆಗೆ ನಿಂತು ಇಂಡಿಯಾ ಗೇಟ್‌ನ ಫೋಟೋ ಕ್ಲಿಕ್ಕಿಸಲು ಲೇಖಕರು ನಿಶ್ಚಯಿಸಿದರು ಎಂದು ತಿಳಿಸಿದ್ದಾರೆ. ಆದರೆ ಅದೇ ಸಮಯಕ್ಕೆ ಅಲ್ಲಿಗೆ ಸೀಟಿ ಹೊಡೆಯುತ್ತಾ ಬಂದ ಪೇದೆ ಏನು ಮಾಡುತ್ತಿರುವೆ ಎಂದು ಲೇಖಕರನ್ನು ಪ್ರಶ್ನಿಸಿದರು.


ಇಲ್ಲಿ ಫೋಟೋ ತೆಗೆಯಬಾರದು ಎಂದು ನಿರ್ದೇಶಿಸಿದ ಪೇದೆಯು ಬ್ಯಾರಿಕೇಡ್‌ನಿಂದ ಹಿಂದಕ್ಕೆ ಹೋಗಿ ಎಂದು ಆಜ್ಞಾಪಿಸುತ್ತಾರೆ. ಆದರೆ ಸಾರ್ವಜನಿಕರಿಗೆ ಈ ನಿಷಿದ್ಧ ಏಕೆ ಎಂದು ಪೇದೆಯನ್ನು ಲೇಖಕರು ಕೇಳುತ್ತಾರೆ.


ನಿರ್ಬಂಧ ವಿಧಿಸಲು ಕಾರಣವೇನು?


ದೆಹಲಿ ಪೊಲೀಸರು ಗೇಟ್‌ನ ಮುಂದಿನ ಸ್ಥಳವನ್ನು ಸ್ಕ್ವೇರ್ ಎಂಬುದಾಗಿ ಉಲ್ಲೇಖಿಸಿದ್ದು ಸಾಮಾನ್ಯ ಟ್ರಾಫಿಕ್ ಇಲ್ಲಿ ಓಡಾಡಬಹುದು ಆದರೆ 11 ನಂತರ ಸಾರ್ವಜನಿಕರಿಗೆ ಅಡ್ಡಾಡುವುದನ್ನು ನಿಷೇಧಿಸಲಾಗಿದೆ ಎಂದು ಪೇದೆ ತಿಳಿಸುತ್ತಾರೆ.


ಒಟ್ಟಿನಲ್ಲಿ ಕಠಿಣ ಭದ್ರತೆಯಿಂದ ಸುಂದರವಾದ ಇಂಡಿಯಾ ಗೇಟ್ ಅನ್ನು ಕಣ್ತುಂಬಿಕೊಳ್ಳಲು ಭಯಪಡುವಂತಾಗಿದೆ ಎಂಬುದು ಭವೀಶ್ ಮಾತಾಗಿದೆ. ನಗರದಲ್ಲಿ ಅಪರಾಧಗಳು ಹಾಗೂ ಬೆದರಿಕೆಗಳು ಹೆಚ್ಚಾದ ಹಿನ್ನಲೆಯಲ್ಲಿ ಕೆಂಪು ಕೋಟೆಗೂ ಬಿಗಿ ಬಂದೋಬಸ್ತು ಮಾಡಲಾಗುತ್ತಿದೆ.


ರಾತ್ರಿ 11 ರ ನಂತರ ಫೋಟೋ ತೆಗೆಯಬಹುದೇ ಎಂಬುದೇ ಪ್ರಶ್ನೆಯಾಗಿದೆ


ಇದೇ ಸಮಯದಲ್ಲಿ ಲೇಖಕರ ಗೆಳೆಯರೊಬ್ಬರು ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡರು ಎಂದು ತಿಳಿಸಿದ್ದಾರೆ. ಮೊದಲೆಲ್ಲಾ ಫೋಟೋ ತೆಗೆಯಲು ಯಾವುದೇ ನಿರ್ಬಂಧಗಳಿರುತ್ತಿರಲಿಲ್ಲ.


ಆದರೀಗ ನಮ್ಮದೇ ದೇಶದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ ಎಂದು ನುಡಿದಿದ್ದಾರೆ. ಆಗ ಅಲ್ಲಿದ್ದ ಪೇದೆ ಫೋಟೋ ತೆಗೆಯಲು ಅವಕಾಶ ನೀಡಿದರು ಎಂಬುದಾಗಿ ಭವೀಷ್ ಸ್ಮರಿಸುತ್ತಾರೆ.


ಇಂಡಿಯಾ ಗೇಟ್‌ನ ಮುಂದಿನ ರಸ್ತೆಗೆ ಅಂಗಡಿಗಳ ರವಾನೆ


ಹಾಗಿದ್ದರೆ ರಾತ್ರಿ 11 ರ ನಂತರ ಇಂಡಿಯಾ ಗೇಟ್‌ನ ಫೋಟೋ ತೆಗೆಯಬಹುದೇ ತೆಗೆಯಬಾರದೇ ಎಂಬುದೇ ಪ್ರಶ್ನೆಯಾಗಿ ಉಳಿದಿದೆ ಎಂಬುದು ಭವೀಷ್ ಮಾತಾಗಿದೆ.


ಇದನ್ನೂ ಓದಿ: ಈ ಟಿಪ್ಸ್​ ಫಾಲೋ ಮಾಡಿದ್ರೆ ಸ್ಟ್ರಾಂಗ್ & ಉದ್ದ ಕೂದಲು ನಿಮ್ಮದಾಗುತ್ತೆ!


ಪೊಲೀಸ್ ಕಟ್ಟೆಚ್ಚರದ ವಲಯದಿಂದ ಹೊರಬಂದ ಲೇಖಕರು ಹಾಗೂ ಅವರ ಗೆಳೆಯರು ರಸ್ತೆಯ ಬಲಬದಿಗೆ ಹಲವಾರು ಸ್ಟಾಲ್‌ಗಳು ತಲೆ ಎತ್ತಿರುವುದನ್ನು ತಿಳಿಸುತ್ತಾರೆ.


ಕೆಲವೊಂದು ಸ್ಟಾಲ್‌ಗಳು ಅಲ್ಲಿದ್ದವು ಹಾಗೂ ಅವುಗಳಲ್ಲಿ ಟೀ ಮಾರುವವರು ತಮ್ಮ ಸೈಕಲ್‌ಗಳಲ್ಲಿ ಬಗೆ ಬಗೆಯ ತಿಂಡಿಗಳನ್ನು ಜೋಡಿಸಿ ಮಾರಾಟ ಮಾಡುತ್ತಿದ್ದರು.


ಮೊದಲೆಲ್ಲಾ ಇಂಡಿಯಾ ಗೇಟ್ ಬಳಿ ಹೆಚ್ಚಿನ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ಇದೀಗ ಅನತಿ ದೂರದಲ್ಲಿ ಗ್ರಾಹಕರನ್ನು ಎದುರು ನೋಡುತ್ತಿದ್ದಾರೆ.


ಮೊದಲಿನಂತೆ ವ್ಯಾಪಾರವಿಲ್ಲ ಎಂದು ದುಃಖ ತೋಡಿಕೊಂಡ ಮಾರಾಟಗಾರರು


ಇಲ್ಲಿ ಮಾರಾಟಮಾಡುವವರಿಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಮಾರಾಟ ವಲಯ ಹಾಗೂ ಸಮಯವನ್ನು ನಿರ್ದಿಷ್ಟಪಡಿಸಿದೆ ಎಂದು ವ್ಯಾಪಾರಿ ಅಕ್ಬರ್ ತಿಳಿಸಿದ್ದಾರೆ.


ಹಗಲಿನ ವೇಳೆಯಲ್ಲಿ ಗೇಟ್ ತೆರೆದಿರುವುದರಿಂದ ವ್ಯಾಪಾರಕ್ಕೆ ಅಡ್ಡಿ ಏನಿಲ್ಲ ಎಂಬುದು ಅಕ್ಬರ್ ಮಾತಾಗಿದೆ. ಆದರೆ ರಾತ್ರಿಯ ಗಳಿಕೆಯಲ್ಲಿ ಕುಸಿತ ಕಂಡುಬಂದಿದೆ ಎಂಬುದು ಇಲ್ಲಿನ ವ್ಯಾಪಾರಿಗಳ ಮಾತಾಗಿದೆ.


ಇಲ್ಲಿಗೆ ಭೇಟಿ ನೀಡುವ ಭೇಟಿದಾರರು ಇಂಡಿಯಾ ಗೇಟ್ ಅನ್ನು ದೂರದಿಂದಲೇ ನೋಡಿ ಮರಳುತ್ತಾರೆ ಹಾಗಾಗಿ ಈ ಭಾಗಕ್ಕೆ ಬರುವ ಜನರ ಓಡಾಟ ಕಡಿಮೆಯಾಗಿದೆ ಎಂಬುದು ವ್ಯಾಪಾರಿಗಳ ಮಾತಾಗಿದೆ.


ಸಾರ್ವಜನಿಕರ ಪ್ರವೇಶವಿಲ್ಲ ಹಾಗಾಗಿ ವ್ಯಾಪಾರ ಕೂಡ ಇಲ್ಲ


ಐಸ್‌ಕ್ರೀಮ್ ಮಾರಾಟಗಾರ ಅಜಿತ್ ಕೂಡ ತಮ್ಮ ವ್ಯಾಪಾರ ಅಷ್ಟೊಂದು ಆಕರ್ಷಣೀಯವಾಗಿ ನಡೆಯುತ್ತಿಲ್ಲ ಎಂದೇ ತಿಳಿಸಿದ್ದಾರೆ. ಚಳಿಗಾಲದಲ್ಲಿ ಐಸ್‌ಕ್ರೀಮ್‌ಗೆ ಬೇಡಿಕೆ ಕುಸಿರುವುದು ಒಂದು ಕಾರಣವಾದರೆ ಮೊದಲೆಲ್ಲಾ ಗೇಟ್‌ಗೆ ಭೇಟಿ ನೀಡುವವರು ಸಾಕಷ್ಟು ಜನರಿದ್ದರು ಆದರೆ ಹೆಚ್ಚಿನ ಬಿಗಿ ಭದ್ರತೆಯಿಂದಾಗಿ ಜನರೇ ಇಲ್ಲದಂತಾಗಿದೆ ಎಂದು ಅಜಿತ್ ತಿಳಿಸುತ್ತಾರೆ.


ನಿರಂತರವಾಗಿ ಪೊಲೀಸರು ಹಾಗೂ ಬ್ಯಾರಿಕೇಡ್‌ಗಳು ವೀಕ್ಷಕರಿಗೆ ಇಲ್ಲಿ ಅಡ್ಡಿಯಾಗಿರುವುದರಿಂದ ಯಾರೂ ನಿಲ್ಲುವುದಿಲ್ಲ ಹಾಗೂ ಹೆಚ್ಚು ಹೊತ್ತು ನಿಂತರೆ ಪೊಲೀಸರು ಪ್ರಶ್ನಿಸುತ್ತಾರೆ ಎಂಬುದು ಅಜಿತ್ ಮಾತಾಗಿದೆ.


ಇಂಡಿಯಾ ಗೇಟ್ ಪರಿವರ್ತನೆ ಹಲವಾರು ಮಾರ್ಪಾಡುಗಳಿಗೆ ಕಾರಣವಾಗಿದೆ


ಹೀಗೆ ಇಂಡಿಯಾ ಗೇಟ್ ಪರಿವರ್ತನೆಯ ಹಾದಿಯನ್ನು ಕಂಡುಕೊಂಡ ನಂತರ ವ್ಯಾಪಾರಿಗಳು ಹಾಗೂ ದೆಹಲಿ ನಿವಾಸಿಗಳು ತಮ್ಮ ಜೀವನದಲ್ಲಿ ಏನನ್ನೋ ಕಳೆದುಕೊಂಡಂತೆ ಭಾವಿಸುತ್ತಿದ್ದಾರೆ.


ಇದನ್ನೂ ಓದಿ: ಏನಿದು ಸೂಪರ್​ಬಗ್​? ಇದರಿಂದ ಪ್ರತಿ ವರ್ಷ ಒಂದು ಲಕ್ಷ ಜನ ಸಾಯಬಹುದು!


ಆದರೆ ಕೆಲವೊಂದು ನೀತಿ ನಿಯಮಗಳು ಇಲ್ಲಿ ಕಠಿಣವಾಗಿದ್ದು ಅಷ್ಟೊಂದು ಕಠಿಣವಾಗಿ ಈ ನಿಯಮಗಳು ಬೇಕೇ ಎಂದು ಸಾಮಾನ್ಯರಿಗೆ ತೋರುತ್ತಿದೆ.


ಇಂಡಿಯಾ ಗೇಟ್‌ನ ಪ್ರಶಾಂತ ವಾತಾವರಣ ಹಾಗೂ ತಣ್ಣನೆಯ ಗಾಳಿಯಲ್ಲಿ ಓಡಾಡುವ ಆ ಕ್ಷಣಗಳು ಹೆಚ್ಚಿನ ಬದಲಾವಣೆಗಳಿಗೆ ಒಳಗಾಗಿದೆ ಎಂಬುದು ಲೇಖಕರ ಅಭಿಪ್ರಾಯವಾಗಿದೆ. ಒಂದು ರೀತಿಯ ಅತಿಯಾದ ನಿರ್ಬಂಧಗಳಿಗೆ ಈ ಪ್ರದೇಶ ಒಳಗಾಗಿದೆ ಎನ್ನುವ ಅಭಿಪ್ರಾಯ ಮೂಡಿದೆ,

Published by:Sandhya M
First published: