Health Tips: ಗೊರಕೆ ಸಮಸ್ಯೆಯಿಂದ ನಿದ್ದೆ ಹಾಳಾಗುತ್ತಿದೆಯಾ? ಹಾಗಾದ್ರೆ ಈ ಕ್ರಮಗಳನ್ನು ಅನುಸರಿಸಿ

Snoring Problem: ಅನಿಯಮಿತ ಉಸಿರಾಟದ ಜೊತೆಯಲ್ಲಿ ಗೊರಕೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯದ ಸೂಚನೆ ಎಂದು ತಜ್ಞರು ಹೇಳುತ್ತಾರೆ.. ಸ್ಲೀಪ್ ಅಪ್ನಿಯಾ ತೊಂದರೆಯಿಂದ ಬಳಲುತ್ತಿದ್ದರೆ, ಇದು ಕೂಡ ಗೊರಕೆ ಸಮಸ್ಯೆ ಉಂಟಾಗಲು ಒಂದು ಕಾರಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗೊರಕೆ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ. ಇದು ಸುತತಮುತ್ತ ಇರುವವರಿಗೆ ತೊಂದರೆ ಉಂಟು ಮಾಡುತ್ತದೆ. ಕಿರಿಕಿರಿಯಾಗುತ್ತದೆ.  ನ್ಯಾಷನಲ್ ಸ್ಲೀಪ್ ಫೌಂಡೇಶನ್  ಪ್ರಕಾರ ಪ್ರತಿ ಮೂರು ಪುರುಷರಲ್ಲಿ  ಮತ್ತು ನಾಲ್ಕು ಮಹಿಳೆಯರಲ್ಲಿ  ಒಬ್ಬರು ಪ್ರತಿ ರಾತ್ರಿ ಗೊರಕೆ ಹೊಡೆಯುತ್ತಾರೆ. ಗೊರಕೆಯನ್ನು ಸಾಮಾನ್ಯವಾಗಿ ಸಣ್ಣ ಸಮಸ್ಯೆಯೆಂದು ಕಡೆಗಣಿಸಲಾಗಿದೆ, ಆದರೆ ಅದರ ಬಗ್ಗೆ ಗಮನ ನೀಡುವುದು ಮುಖ್ಯವಾಗುತ್ತದೆ.ಈ ಗೊರಕೆ ಸಮಸ್ಯೆ  ವಿವಿಧ ಕಾರಣಗಳಿಂದ ಬರುತ್ತದೆ. ಬೊಜ್ಜು ಅಥವಾ ಹೆಚ್ಚಿದ ದೇಹದ ತೂಕ ಗೊರಕೆಯ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

ಅನಿಯಮಿತ ಉಸಿರಾಟದ ಜೊತೆಯಲ್ಲಿ ಗೊರಕೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯದ ಸೂಚನೆ ಎಂದು ತಜ್ಞರು ಹೇಳುತ್ತಾರೆ.. ಸ್ಲೀಪ್ ಅಪ್ನಿಯಾ ತೊಂದರೆಯಿಂದ ಬಳಲುತ್ತಿದ್ದರೆ, ಇದು ಕೂಡ ಗೊರಕೆ ಸಮಸ್ಯೆ ಉಂಟಾಗಲು ಒಂದು ಕಾರಣ. ಸ್ಲೀಪ್ ಅಪ್ನಿಯಾ ಎನ್ನುವುದು ನಿದ್ರೆಯ ರೋಗವಾಗಿದ್ದು, ಇದರಲ್ಲಿ ಉಸಿರಾಟವು ಪದೇ ಪದೇ ನಿಲ್ಲುತ್ತದೆ ಮತ್ತು ಮತ್ತೆ ಆರಂಭವಾಗುತ್ತದೆ. ನಿಮಗೂ ಸಹ ಗೊರಕೆಯ ಸಮಸ್ಯೆಯಿದ್ದಲ್ಲಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಇನ್ನೊಂದು ಅಂಶವೆಂದರೆ ಗೊರಕೆ ಸಮಸ್ಯೆಗೆ ಮನೆಯಲ್ಲಿಯೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಈ ರಾಶಿಗಳ ಜನರು ಹೆಚ್ಚು ಸೋಮಾರಿಗಳಂತೆ.. ಯಾವುವು ಗೊತ್ತಾ ಈ ರಾಶಿಗಳು?

ದೇಹದ ತೂಕ ಇಳಿಸುವುದು

ತೂಕ ಹೆಚ್ಚಿದ ನಂತರ ಗೊರಕೆ ಸಮಸ್ಯೆ ಕಾಣಿಸಿಕೊಂಡರೆ, ತೂಕ ಇಳಿಸುವುದು ಉತ್ತಮ. ನೀವು ನಿಮ್ಮ ಎತ್ತರ ಮತ್ತು ವಯಸ್ಸಿಗೆ ತಕ್ಕಷ್ಟು ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹೆಚ್ಚು ತೂಕವಿರುವ ಜನರು ಕೊಬ್ಬಿನ ಅಂಶವನ್ನು ಹೊಂದಿರುತ್ತಾರೆ. ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಂಡರೆ ಗೊರಕೆಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಕೆಲವರಿಗಂತೂ ತೂಕ ಕಡಿಮೆ ಆದ ನಂತರ ಗೊರಕೆ ಸಮಸ್ಯೆ ಪರಿಹಾರವಾಗುತ್ತದೆ.

ಮಲಗುವ ಭಂಗಿ ಕೂಡ ಮುಖ್ಯವಾಗುತ್ತದೆ

ಕೆಲವರು  ಮಲಗಿರುವಾಗ ಅಥವಾ ಅವರು ಬೆನ್ನು ಕೆಳಗೆ ಮಾಡಿ ಮಲಗಿದಾಗ ಗೊರಕೆ ಹೆಚ್ಚಾಗುತ್ತದೆ. ಬೆನ್ನು ಕೆಳಗೆ ಮಾಡಿ ಮಲಗಿರುವಾಗ, ಶ್ವಾಸನಾಳದ ಸುತ್ತಲಿನ ಅಂಗಾಂಶಗಳನ್ನು ಗುರುತ್ವಾಕರ್ಷಣೆಯಿಂದ ಕೆಳಕ್ಕೆ ಎಳೆದು ಕಿರಿದಾಗುವಂತೆ ಮಾಡುತ್ತದೆ. ಹಾಗಾಗಿ ಮಲಗುವ ಭಂಗಿಗಳನ್ನು ಬದಲಾಯಿಸಿ ನೋಡಿ. ಕೆಲವರು ಬಲ ಭಾಗದಲ್ಲಿ ತಿರುಗಿ ಮಲಗಿದರೆ ಗೊರಕೆ ಹೊಡೆಯುವುದಿಲ್ಲ.

ಮೂಗು ಕಟ್ಟದಂತೆ ನೋಡಿಕೊಳ್ಳಿ

ಮೂಗು ಕಟ್ಟಿದ್ದರೆ ಉಸಿರಾಟದ ವ್ಯತ್ಯಾಸವಾಗಿ ಗೊರಕೆ ಹೆಚ್ಚಾಗುತ್ತದೆ.ಹಾಗಾಗಿ ಮೂಗಿನ ಹೊಳ್ಳೆಗಳು ಮುಚ್ಚಬಾರದು.  ಮೂಗು ಮುಚ್ಚಿದಾಗ ಗಾಳಿಯು ಹೆಚ್ಚು ವೇಗವಾಗಿ ಚಲಿಸುತ್ತದೆ, ಇದು ಗೊರಕೆಗೆ ಕಾರಣವಾಗುತ್ತದೆ. ಬಿಸಿ ಎಣ್ಣೆ ಮಸಾಜ್ ಅಥವಾ ಮೂಗಿಗೆ ಎಣ್ಣೆಯ ಹನಿಗಳನ್ನು ಹಾಕಿ  ಮೂಗಿನಲ್ಲಿರುವ ಅಡೆತಡೆಗಳನ್ನು ತೆರೆಯಬಹುದು. ಅಲ್ಲದೆ, ಮಲಗುವ ಮುನ್ನ ಬಿಸಿ ಸ್ನಾನವು ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಧೂಮಪಾನ ಮತ್ತು ಮದ್ಯ ಮಾಡಬೇಡಿ.

ಎಡಿಮಾ ಮತ್ತು ಶ್ವಾಸನಾಳದ ಮೇಲ್ಭಾಗದ ಉರಿಯೂತದಿಂದಾಗಿ ಧೂಮಪಾನಿಗಳಲ್ಲಿ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಧೂಮಪಾನವನ್ನು ಬಿಡುವುದರಿಂದ ಗೊರಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.  ಆಲ್ಕೊಹಾಲ್  ಸೇವನೆ ಸಹ ನಮ್ಮ ಗೊರಕೆ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ, ಮಲಗುವ ಮುನ್ನ  ಕುಡಿಯುವ ಅಭ್ಯಾಸವಿದ್ದಲ್ಲಿ ಅದನ್ನು ಬಿಡುವುದು ಒಳ್ಳೆಯದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: