• Home
  • »
  • News
  • »
  • lifestyle
  • »
  • Foot Care: ನಿಮ್ಮ ಪಾದಗಳು ಮೃದುವಾಗಬೇಕೇ? ಹಾಗಾದ್ರೆ ಮನೆಯಲ್ಲಿ ಈ ಮದ್ದು ಟ್ರೈ ಮಾಡಿ

Foot Care: ನಿಮ್ಮ ಪಾದಗಳು ಮೃದುವಾಗಬೇಕೇ? ಹಾಗಾದ್ರೆ ಮನೆಯಲ್ಲಿ ಈ ಮದ್ದು ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಒಡೆದ ಹಿಮ್ಮಡಿ ಸಮಸ್ಯೆ ತುಂಬಾ ಸಾಮಾನ್ಯ. ಇದನ್ನು ನಿರ್ಲಕ್ಷ್ಯ ಮಾಡದೇ ಪಾದಗಳ ಆರೈಕೆ ಮಾಡಿ. ಪಾದಗಳ ದಣಿವು ಮತ್ತು ನೋವು ನಿವಾರಿಸಲು ಆಗಾಗ್ಗೆ ಕಾಲು ಮಸಾಜ್ ಮಾಡುವುದು ಉತ್ತಮ ಪರಿಹಾರ ನೀಡುತ್ತದೆ. ಇದು ಅನೇಕ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ.

  • Share this:

    ಮುಖದ ಹಾಗೂ ಕೈಗಳ (Face And Hands) ಅಂದ ಕಾಪಾಡಲು ಹೇಗೆ ಆರೈಕೆ (Care) ಮಾಡಲಾಗುತ್ತದೆಯೋ, ಹಾಗೆಯೇ ಪಾದಗಳ ಆರೈಕೆ (Foot Care) ಮತ್ತು ಪಾದಗಳು ನಯವಾಗಲು ಕೆಲವು ಮಸಾಜ್ (Massage) ಮತ್ತು ಫೂಟ್ ಮಾಸ್ಕ್ (Foot Mask) ಹಾಕಬೇಕಾಗುತ್ತದೆ. ಕಾಲುಗಳನ್ನು ಚೆನ್ನಾಗಿ ತೊಳೆಯುವುದು, ಎಣ್ಣೆಯಿಂದ ಪಾದಕ್ಕೆ ಮಸಾಜ್ ಮಾಡುವುದು, ಹಿಮ್ಮಡಿ ಒಡೆದಿದ್ದರೆ ಅದನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಯಾಕಂದ್ರೆ ಇಡೀ ದೇಹದ ಭಾರ ಹೊರುವ ಪಾದಗಳು ಹೆಚ್ಚು ದಣಿಯುತ್ತವೆ. ಹಾಗಾಗಿ ಪಾದಗಳ ಆರೈಕೆ ಮಾಡುವುದು ತುಂಬಾ ಅತ್ಯಗತ್ಯ. ಹಿಮ್ಮಡಿ ಒಡೆದಿದ್ದರೆ ಅದು ಸಾಕಷ್ಟು ನೋವುಂಟು ಮಾಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಒಡೆದ ಹಿಮ್ಮಡಿ ಸಮಸ್ಯೆ ತುಂಬಾ ಸಾಮಾನ್ಯ.


    ಪಾದಗಳ ಆರೈಕೆ ಮನೆಯಲ್ಲೇ ಮಾಡಿ


    ಆದರೆ ಇದನ್ನು ನಿರ್ಲಕ್ಷ್ಯ ಮಾಡದೇ ಪಾದಗಳ ಆರೈಕೆ ಮಾಡಿ. ಪಾದಗಳ ದಣಿವು ಮತ್ತು ನೋವು ನಿವಾರಿಸಲು ಆಗಾಗ್ಗೆ ಕಾಲು ಮಸಾಜ್ ಮಾಡುವುದು ಉತ್ತಮ ಪರಿಹಾರ ನೀಡುತ್ತದೆ. ಇದು ಅನೇಕ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ. ಮಸಾಜ್ ಮಾಡುವುದು ಪರಿಣಾಮಕಾರಿ ಕೂಡ ಆಗಿದೆ.


    ಪಾದಗಳ ಸರಿಯಾದ ಆರೈಕೆ ಮಾಡಲು ಸೌಂದರ್ಯ ತಜ್ಞೆ ರೇಖಾ ಕುಮಾರಿ ಕೆಲವು ಸಲಹೆ ನೀಡಿದ್ದಾರೆ. ಇದು ಒಣ ಪಾದಗಳು ಮತ್ತು ಬಿರುಕು ಬಿಟ್ಟ ಹಿಮ್ಮಡಿ ತೊಡೆದು ಹಾಕಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.




    ಹೀಗಾಗಿ ಅವರು ಚಳಿಗಾಲದಲ್ಲಿ ಪಾದಗಳ ಆರೋಗ್ಯಕ್ಕೆ ಅತ್ಯುತ್ತಮ ಮತ್ತು ಸುಲಭ ಕೆಲ ವಿಧಾನಗಳನ್ನು ತಿಳಿಸಿದ್ದಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಪಾದಗಳ ಚರ್ಮವು ಒಣಗುತ್ತದೆ. ಇದು ಪಾದಗಳು ನಿರ್ಜೀವ, ಶುಷ್ಕ ಮತ್ತು ಬಿಳಿ ಮತ್ತು ಒಡೆದ ಹಿಮ್ಮಡಿ ಸಮಸ್ಯೆಗೆ ಕಾರಣವಾಗುತ್ತದೆ.


    ಪಾದಗಳನ್ನು ಮೃದುವಾಗಿಸಲು ಕೆಲವು ಸಲಹೆ ಹೀಗಿದೆ


    ಮಾಯಿಶ್ಚರೈಸರ್


    ದಿನಕ್ಕೆ ಎರಡರಿಂದ ಮೂರು ಬಾರಿ ನಿಮ್ಮ ಪಾದಗಳನ್ನು ತೇವಗೊಳಿಸುವುದು ಮತ್ತು ಸ್ವಚ್ಛವಾಗಿ ಒರೆಸುವುದು ಮುಖ್ಯ. ಜೊತೆಗೆ ಪಾದಗಳಿಗೆ ಮಾಯಿಶ್ಚರೈಸರ್ ಕ್ರೀಮ್ ಅನ್ವಯಿಸಿ. ಇದು ಪಾದದ ಚರ್ಮವು ಮೃದುವಾಗಿಸಲು ಸಹಕಾರಿ.


    ಪಾದಗಳಿಗೆ ಸಾಕ್ಸ್ ಹಾಕಿ. ಪಾದಗಳ ಶುಷ್ಕತೆ ಹೋಗಲಾಡಿಸಲು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಅಲೋವೆರಾ ಜೆಲ್ ಅಥವಾ ಪೆಟ್ರೋಲಿಯಂ ಜೆಲ್ಲಿ ಅನ್ವಯಿಸಬಹುದು.


    ಪ್ಯೂಮಿಸ್ ಕಲ್ಲಿನಿಂದ ಹಿಮ್ಮಡಿ ಸ್ವಚ್ಛಗೊಳಿಸಿ


    ಚಳಿಗಾಲದಲ್ಲಿ ಪಾದಗಳ ಚರ್ಮ ಅದರಲ್ಲೂ ಹಿಮ್ಮಡಿಯ ಒರಟಾದ ಚರ್ಮ ಹೋಗಲಾಡಿಸಲು ಪ್ಯೂಮಿಸ್ ಕಲ್ಲಿನಿಂದ ಪಾದಗಳನ್ನು ಸ್ವಚ್ಛಗೊಳಿಸಿ. ಇದು ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ.


    ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ. ಮೊದಲು ಉಗುರು ಬೆಚ್ಚಗಿನ ನೀರನ್ನು ಟಬ್ ನಲ್ಲಿ ತೆಗೆದುಕೊಳ್ಳಿ. ಐದು ನಿಮಿಷ ಪಾದಗಳನ್ನು ಟಬ್ ನ ನೀರಿನಲ್ಲಿ ನೆನೆಸಿಡಿ.


    ಸಾಂದರ್ಭಿಕ ಚಿತ್ರ


    ಸ್ವಲ್ಪ ಬಾಡಿ ವಾಶ್ ಸೇರಿಸಿ. 5 ನಿಮಿಷಗಳ ನಂತರ ಪ್ಯೂಮಿಸ್ ಕಲ್ಲಿನಿಂದ ಪಾದಗಳನ್ನು ಉಜ್ಜಿ ಸ್ವಚ್ಛಗೊಳಿಸಿ. ಪಾದಗಳನ್ನು ಒಣಗಿಸಿ. ನಂತರ ಕ್ರೀಮ್ ಅನ್ವಯಿಸಿ, ಸಾಕ್ಸ್ ಧರಿಸಿ.


    ಪ್ಯಾರಾಫಿನ್ ವ್ಯಾಕ್ಸ್


    ಪಾದದ ಅಡಿಭಾಗದ ಚರ್ಮವನ್ನು ಮೃದುಗೊಳಿಸಿ. ಪ್ಯಾರಾಫಿನ್ ವ್ಯಾಕ್ಸ್ ಬಳಸಿದರೆ ಒಣಗಿದ ಮತ್ತು ಒಡೆದ ಹಿಮ್ಮಡಿ ಸಮಸ್ಯೆ ಕಡಿಮೆಯಾಗುತ್ತದೆ. ನೈಸರ್ಗಿಕ ಎಮೋಲಿಯಂಟ್ ಹಾಗೂ ಪಾದಗಳು ನಯವಾಗುತ್ತವೆ.


    ಗ್ಲಿಸರಿನ್‌


    ಗ್ಲಿಸರಿನ್ ಚಳಿಗಾಲದಲ್ಲಿ ಪಾದಗಳನ್ನು ಮೃದುವಾಗಿ, ನಯವಾಗಿ ಮತ್ತು ಬಿರುಕು ಮುಕ್ತವಾಗಿಡಲು ಸಹಕಾರಿ. ಎರಡು ಚಮಚ ರೋಸ್ ವಾಟರ್‌, ನಾಲ್ಕು ಚಮಚ ಗ್ಲಿಸರಿನ್ ಮಿಶ್ರಣ ಮಾಡಿ. ಪಾದಗಳಿಗೆ ಹಚ್ಚಿರಿ. ಸಾಕ್ಸ್ ಧರಿಸಿ ಮಲಗಿ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ


    ಸ್ಕ್ರಬ್ಬಿಂಗ್


    ಪಾದದ ಚರ್ಮ ಮೃದುಗೊಳಿಸಲು ಫೂಟ್ ಸ್ಕ್ರಬ್ ಮಾಡಿ. ಸಕ್ಕರೆ ಮತ್ತು ಜೇನುತುಪ್ಪದ ಮಿಶ್ರಣ ಸಹಕಾರಿ. ಇದಕ್ಕಾಗಿ ಬಟ್ಟಲಿನಲ್ಲಿ 4 ಚಮಚ ಜೇನುತುಪ್ಪ ಮತ್ತು 4 ಚಮಚ ಸಕ್ಕರೆ, ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ. ಪಾದಗಳಿಗೆ ಅನ್ವಯಿಸಿ. ಸ್ಕ್ರಬ್ ಮಾಡಿ. 10 ನಿಮಿಷದ ನಂತರ ಸ್ವಚ್ಛಗೊಳಿಸಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು