ಮಕ್ಕಳ ಶ್ವಾಸಕೋಶದ ಖಾಯಿಲೆಗೆ ಕಾರಣರಾಗುತ್ತಿರುವ ಧೂಮಪಾನಿಗಳು!

news18
Updated:August 17, 2018, 12:56 PM IST
ಮಕ್ಕಳ ಶ್ವಾಸಕೋಶದ ಖಾಯಿಲೆಗೆ ಕಾರಣರಾಗುತ್ತಿರುವ ಧೂಮಪಾನಿಗಳು!
news18
Updated: August 17, 2018, 12:56 PM IST
-ನ್ಯೂಸ್ 18 ಕನ್ನಡ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಬೀಡಿ ಸಿಗರೇಟ್ ಸೇದುವವರಿಗೇನು ಕಮ್ಮಿಯಿಲ್ಲ. ನೀವು ಧೂಮಪಾನಿಗಳಾಗಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಮಾತ್ರ ಕೆಟ್ಟ ಪರಿಣಾಮ ಬೀರುವುದಲ್ಲ. ಬದಲಾಗಿ ನಿಮ್ಮ ಮಕ್ಕಳ ಮೇಲೂ ಅಪಾಯ ಉಂಟು ಮಾಡುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಧೂಮಪಾನ ಮಾಡುವರಿಂದ ಮಕ್ಕಳಲ್ಲಿ ಶ್ವಾಸಕೋಶದ ಖಾಯಿಲೆ(ಸಿಒಪಿಡಿ)ಗಳು ಕಂಡು ಬರುತ್ತದೆ. ಅನಿಯಮಿತ ಧೂಮಪಾನಿಗಳೊಂದಿಗೆ ಬಾಲ್ಯವನ್ನು ಕಳೆದಿರುವ ಶೇ.31 ರಷ್ಟು ಮಕ್ಕಳು ಶ್ವಾಸಕೋಶ ಖಾಯಿಲೆಯಿಂದ ಮರಣ ಹೊಂದಿದ್ದಾರೆಂದು ಅಧ್ಯಯನ ತಂಡ ತಿಳಿಸಿದೆ.

ಗಂಟೆಯೊಳಗೆ 10ಕ್ಕಿಂತ ಹೆಚ್ಚು ಬೀಡಿ-ಸಿಗರೇಟ್ ಸೇದುವ ವ್ಯಕ್ತಿಗಳೊಂದಿಗಿರುವ ವಯಸ್ಕರಲ್ಲಿ ಈ ಅಪಾಯವು ಶೇ.9 ರಷ್ಟು ಕಾಣಿಸಿಕೊಳ್ಳುತ್ತದೆ. ಇದರಿಂದ ಹೃದ್ರೋಗದ ಖಾಯಿಲೆ ಶೇ.27 ರಷ್ಟು ಹೆಚ್ಚಾಗುವ ಅಪಾಯವಿದೆ. ಶೇ.23 ರಷ್ಟು ಸ್ಟ್ರೋಕ್​ ಅಪಾಯವನ್ನು ಉಂಟು ಮಾಡಿದರೆ, ಶ್ವಾಸಕೋಶ ಸಂಬಂಧಿತ COPD ಯಿಂದ ಶೇ.42 ರಷ್ಟು ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಧೂಮಪಾನಿಗಳಿಂದ ಮಕ್ಕಳ ಮತ್ತು ವಯಸ್ಕರ ಶ್ವಾಸಕೋಶ ಮತ್ತು ನಾಳೀಯ ವ್ಯವಸ್ಥೆಗಳ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬೇರೆಯವರಿಂದ ಶ್ವಾಸಕೋಶದಲ್ಲಿ ಕಾಣಿಸುವ ಖಾಯಿಲೆಯ ಮೇಲೆ ನಡೆಸಲಾದ ಮೊದಲ ಅಧ್ಯಯನ ಇದಾಗಿದೆ ಎಂದು ಅಮೆರಿಕದ ಕ್ಯಾನ್ಸರ್ ಸೊಸೈಟಿಯ ರಯಾನ್ ಡೈವರ್ ತಿಳಿಸಿದ್ದಾರೆ.

ಈ ಅಧ್ಯಯನವನ್ನು ಎಂದಿಗೂ ಧೂಮಪಾನವನ್ನು ಮಾಡದಿರುವ 50-74 ವರ್ಷ ವಯಸ್ಸಿನ 70,900 ಪುರುಷರು ಮತ್ತು ಮಹಿಳೆಯರ ಮೇಲೆ ನಡೆಸಲಾಗಿತ್ತು. 22 ವರ್ಷಗಳ ಕಾಲ ನಡೆಸಲಾದ ಈ ಅಧ್ಯಯನದಿಂದ ಶ್ವಾಸಕೋಶದ ಮೇಲೆ ಅಪಾಯವನ್ನು ಉಂಟಾಗುತ್ತಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಪ್ರತಿ ವರ್ಷ ಧೂಮಪಾನಿಗಳಿಂದ COPD ಖಾಯಿಲೆಗೆ ಒಳಗಾಗಿ ಮರಣ ಹೊಂದುವವರ ಸಂಖ್ಯೆಯು 10 ಸಾವಿರ ದಾಟಿದೆ ಎಂದು ಡೈವರ್ ಹೇಳಿದ್ದಾರೆ. ಧೂಮಪಾನವು ಮಾರಾಣಾಂತಿಕವಾಗಿದ್ದರೂ, ಧೂಮಪಾನಿಗಳೊಂದಿಗಿರುವ ಮಕ್ಕಳಲ್ಲಿ COPD ಅಪಾಯ ಕಾಣಿಸುತ್ತಿರುವುದ ಈ ಅಧ್ಯಯನ ಸೂಚಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...