• Home
  • »
  • News
  • »
  • lifestyle
  • »
  • Smoking Problem: ಧೂಮಪಾನದಿಂದ ಮೂತ್ರಕೋಶ ಕ್ಯಾನ್ಸರ್ ಅಪಾಯ, ಲಕ್ಷಣಗಳು ಹೀಗಿವೆ!

Smoking Problem: ಧೂಮಪಾನದಿಂದ ಮೂತ್ರಕೋಶ ಕ್ಯಾನ್ಸರ್ ಅಪಾಯ, ಲಕ್ಷಣಗಳು ಹೀಗಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆಯರಿಗಿಂತ ಪುರುಷರಿಗೆ ಬ್ಲ್ಯಾಡ್ಡರ್ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಗಾಳಿಗುಳ್ಳೆಯ ಕ್ಯಾನ್ಸರ್ ಮಾರಣಾಂತಿಕ ಆಗಿದೆ. ಆದರೆ ಅದು ಕೊನೆಯ ಹಂತ ತಲುಪುವವರೆಗೆ ಜೀವಕ್ಕೆ ಅಪಾಯವಿಲ್ಲ. ಹಾಗಾಗಿ ಗಾಳಿಗುಳ್ಳೆಯ ಕ್ಯಾನ್ಸರ್ ಮಾರಣಾಂತಿಕವಾಗುವ ಮೊದಲು ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡುವುದು ಅವಶ್ಯಕ.

ಮುಂದೆ ಓದಿ ...
  • Share this:

    ಧೂಮಪಾನ (Smoking) ಆರೋಗ್ಯಕ್ಕೆ (Health) ಹಾನಿಕರ (Damage) ಎಂಬ ಜಾಹೀರಾತನ್ನು ನೀವು ಸಾಕಷ್ಟು ಬಾರಿ ನೋಡಿರಬಹುದು. ಆದರೂ ಸಿಗರೇಟ್ ಚಟ ನಿಮ್ಮಿಂದ ದೂರವಾಗಿಲ್ಲ ಅಂದ್ರೆ ಅದು ಅಪಾಯಕ್ಕೆ (Danger) ಆಹ್ವಾನ ನೀಡುತ್ತಿದೆ ಎಂದೇ ಅರ್ಥ. ಹೌದು.. ಸಿಗರೇಟ್ ಸೇದುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ಯಾನ್ಸರ್ (Cancer) ಬೆಳೆಯಲು ಮುಖ್ಯ ಕಾರಣವಾಗಿದೆ. ಹಲವಾರು ಕ್ಯಾನ್ಸರ್ ಗಳಲ್ಲಿ ಬ್ಲ್ಯಾಡ್ಡರ್ ಕ್ಯಾನ್ಸರ್ ಕೂಡ ಒಂದಾಗಿದೆ. ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ ಇಂಟರ್ನ್ಯಾಷನಲ್ ಪ್ರಕಾರ, ಬ್ಲ್ಯಾಡ್ಡರ್ ಕ್ಯಾನ್ಸರ್  ಅಥವಾ ಗಾಳಿ ಗುಳ್ಳೆಯ ಕ್ಯಾನ್ಸರ್ 10 ನೇ ಸಾಮಾನ್ಯ ಕ್ಯಾನ್ಸರ್ ಆಗಿದೆ ಎಂದು ಹೇಳಿದೆ.


    ಧೂಮಪಾನದಿಂದ ಬ್ಲ್ಯಾಡ್ಡರ್ ಕ್ಯಾನ್ಸರ್


    ಮಹಿಳೆಯರಿಗಿಂತ ಪುರುಷರಿಗೆ ಬ್ಲ್ಯಾಡ್ಡರ್ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಗಾಳಿಗುಳ್ಳೆಯ ಕ್ಯಾನ್ಸರ್ ಮಾರಣಾಂತಿಕ ಆಗಿದೆ. ಆದರೆ ಅದು ಕೊನೆಯ ಹಂತ ತಲುಪುವವರೆಗೆ ಜೀವಕ್ಕೆ ಅಪಾಯವಿಲ್ಲ. ಹಾಗಾಗಿ ಗಾಳಿಗುಳ್ಳೆಯ ಕ್ಯಾನ್ಸರ್ ಮಾರಣಾಂತಿಕವಾಗುವ ಮೊದಲು ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡುವುದು ಅವಶ್ಯಕ.


    ಇಂದು ನಾವು ಗಾಳಿ ಗುಳ್ಳೆಯ ಕ್ಯಾನ್ಸರ್ ನ ರೋಗ ಲಕ್ಷಣಗಳ ಬಗ್ಗೆ ನೋಡೋಣ. ಹೇಗೆ ಕ್ಯಾನ್ಸರ್ ಮಾರಣಾಂತಿಕ ಪರಿಣಾಮ ತಪ್ಪಿಸಬಹುದು ಎಂದು ತಿಳಿಯೋಣ.


    ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


    ಮೂತ್ರಕೋಶ ಕ್ಯಾನ್ಸರ್ ನಲ್ಲಿ ಮೂರು ವಿಧಗಳಿವೆ


    ಮೇಯೊ ಕ್ಲಿನಿಕ್ ಪ್ರಕಾರ, ಮೂತ್ರಕೋಶದ ಕ್ಯಾನ್ಸರ್ ನಲ್ಲಿ ಮೂರು ವಿಧಗಳಿವೆ. ಇದು ಯುರೊಥೆಲಿಯಲ್ ಕಾರ್ಸಿನೋಮ, ಸ್ಕ್ವಾಮಸ್ ಸೆಲ್ ಕಾರ್ಸಿನೋಮ, ಅಡೆನೊಕಾರ್ಸಿನೋಮ ಒಳಗೊಂಡಿದೆ. ಇದಲ್ಲದೆ ಮೂತ್ರಕೋಶದ ಮೇಲ್ಮೈಯಲ್ಲಿ ಸಂಭವಿಸುವ ಕ್ಯಾನ್ಸರ್ ಅನ್ನು ಬಾಹ್ಯ ಮೂತ್ರಕೋಶದ ಕ್ಯಾನ್ಸರ್ ಎಂದು ಕರೆಯುತ್ತಾರೆ.


    ಮೂತ್ರಕೋಶದ ಮೇಲ್ಮೈಯಿಂದ ಸ್ನಾಯುಗಳಿಗೆ ಹರಡುವ ಕ್ಯಾನ್ಸರ್ ಅನ್ನು ಆಕ್ರಮಣಕಾರಿ ಗಾಳಿಗುಳ್ಳೆಯ ಕ್ಯಾನ್ಸರ್ ಎಂದು ಕರೆಯುತ್ತಾರೆ.


    ಗಾಳಿಗುಳ್ಳೆಯ ಕ್ಯಾನ್ಸರ್ ಉಂಟಾಗಲು ಕಾರಣಗಳು


    ಸಿಗರೇಟ್, ಸಿಗಾರ್ ಅಥವಾ ಪೈಪ್ ಅನ್ನು ಧೂಮಪಾನ ಮಾಡುವುದು, ವಿಷಕಾರಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧ, ಆಗಾಗ್ಗೆ ಉಂಟಾಗುವ ಮೂತ್ರದ ಸೋಂಕು ಅಥವಾ ಉರಿಯೂತ, ಕ್ಯಾನ್ಸರ್ ಕುಟುಂಬದ ಇತಿಹಾಸ.


    ಗಾಳಿಗುಳ್ಳೆಯ ಕ್ಯಾನ್ಸರ್ ಲಕ್ಷಣಗಳು


    ಮೂತ್ರ ವಿಸರ್ಜನೆಯ ಮಾದರಿಯಲ್ಲಿ ಬದಲಾವಣೆ ಆಗುವುದು, ಮೂತ್ರದೊಂದಿಗೆ ರಕ್ತ ಹೋಗುವುದು, ಬೆನ್ನು ನೋವು, ಮೂತ್ರ ವಿಸರ್ಜಿಸುವಾಗ ನೋವು ಲಕ್ಷಣಗಳು ಆಗಿವೆ.


    ಗಾಳಿಗುಳ್ಳೆಯ ಕ್ಯಾನ್ಸರ್ ಗೆ ಚಿಕಿತ್ಸೆ ಯಾವುದು?


    ಗಾಳಿಗುಳ್ಳೆಯ ಕ್ಯಾನ್ಸರ್ ಹರಡುವ ಮೊದಲು, ಅದನ್ನು ಮೊದಲೇ ಪತ್ತೆ ಮಾಡಬೇಕು. ಆಗ ಅದನ್ನು ಗುಣಪಡಿಸಲು ಸಾಧ್ಯ. ಸ್ಕೋಪ್ಡ್ ಟ್ರಾನ್ಸ್‌ಯುರೆಥ್ರಲ್ ಅನ್ನು ಬಳಸಿ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು, ಗೆಡ್ಡೆಯನ್ನು ತುಂಡಾಗಿ ಕತ್ತರಿಸುವುದು ಪ್ರಾಥಮಿಕ ಚಿಕಿತ್ಸೆಯಾಗಿದೆ. ಶಸ್ತ್ರಚಿಕಿತ್ಸೆಯ ಮೊದಲು ಕೀಮೋಥೆರಪಿ ನೀಡಲಾಗುತ್ತದೆ. ಇಮ್ಯುನೊಥೆರಪಿ ಅತ್ಯುತ್ತಮ ಆಯ್ಕೆಯಾಗಿದೆ.


    ಮೂತ್ರದ ಬಣ್ಣ ಬದಲಾಗಿದ್ದರೆ, ಅಥವಾ ಅದು ರಕ್ತ ಹೊಂದಿದ್ದರೆ, ಅದನ್ನು ಪರೀಕ್ಷಿಸಲು ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಮೂತ್ರಕೋಶದ ಕ್ಯಾನ್ಸರ್ ಯಾವುದಾದರೂ ಒಂದು ರೋಗ ಲಕ್ಷಣ ಪರೀಕ್ಷಿಸಿ.


    ಇದನ್ನೂ ಓದಿ: ಚಳಿಗಾಲದಲ್ಲಿ ಶೀತ, ಜ್ವರವನ್ನು ನಿರ್ಲಕ್ಷ್ಯ ಮಾಡ್ತೀರಾ? ಹುಷಾರ್, ಇವು ನಿಮ್ಮ ಜೀವಕ್ಕೆ ಕುತ್ತು ತಂದೀತು!


    ಗಾಳಿಗುಳ್ಳೆಯ ಕ್ಯಾನ್ಸರ್ ನ್ನು ತಡೆಯುವ ಕ್ರಮಗಳು


    ಗಾಳಿಗುಳ್ಳೆಯ ಕ್ಯಾನ್ಸರ್ ತಡೆಯಲು ಖಚಿತವಾದ ಮಾರ್ಗವಿಲ್ಲ. ಧೂಮಪಾನ ತ್ಯಜಿಸುವುದು, ವಿಷಕಾರಿ ರಾಸಾಯನಿಕಗಳಿಂದ ದೂರ ಇರುವುದು ಅದರ ಅಪಾಯ ಕಡಿಮೆ ಮಾಡುತ್ತದೆ. ಇದರ ಜೊತೆ ವೈವಿಧ್ಯಮಯ ಬಣ್ಣ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧ ಆಹಾರ ಸೇವಿಸಿ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    Published by:renukadariyannavar
    First published: