ಸ್ಮಾರ್ಟ್​ಫೋನ್​ ಬಳಕೆ ಪರಿಸರಕ್ಕೆ ಮಾರಕ

news18
Updated:March 12, 2018, 2:09 PM IST
ಸ್ಮಾರ್ಟ್​ಫೋನ್​ ಬಳಕೆ ಪರಿಸರಕ್ಕೆ ಮಾರಕ
news18
Updated: March 12, 2018, 2:09 PM IST
ನ್ಯೂಸ್ 18 ಕನ್ನಡ

ಮೊಬೈಲ್​ ಫೋನ್​ಗಳ ಬಳಕೆ ಆರಂಭವಾದಾಗ ಅವುಗಳ ಬೆಲೆ ಸಹ ಅಷ್ಟೇ ಹೆಚ್ಚಿತ್ತು. ಆದರೆ ಟೆಲಿಕಾಂ ಕ್ಷೇತ್ರದಲ್ಲಿ ಆದ ಕ್ರಾಂತಿ ಹಾಗೂ ಬಲದಾವಣೆಗಳಿಂದಾಗಿ ಈಗ ಮೊಬೈಲ್​ ಹಾಗೂ ಕರೆ ಮಾಡುವ ದರಗಳು ಸಹ ಗಣೀಯವಾಗಿ ಕಡಿಮೆ ಆಗಿದೆ. ಇದರಿಂದಾಗಿಯೇ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್​ ಫೋನ್​ಗಳೇ ಕಾಣುತ್ತವೆ.

ಸಾಲದಕ್ಕೆ ಟೆಲಿಕಾಂ ಕಂಪೆನಿಗಳು ಸ್ಪರ್ಧೆಗೆ ಬಿದ್ದಂತೆ ಇಂಟರ್​ನೆಟ್​ ಅನ್ನು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ಇದರಿಂದಾಗಿಯೇ ದಿನೇ ದಿನೇ ಸ್ಮಾರ್ಟ್​ಫೋನ್​ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇಂಟರ್​ನೆಟ್​ ಬಳಕೆಗೆಂದೇ ಸ್ಮಾರ್ಟ್​ಫೋನ್​ ಬಳಸುವವರಿದ್ದಾರೆ. ಆದರೆ ಅಧ್ಯಯನದ ಪ್ರಕಾರ 2040ರ ವೇಳೆಗೆ ಸ್ಮಾರ್ಟ್ ಫೋನ್​ಗಳು ಹಾಗೂ ಡಾಟಾ ಕೇಂದ್ರದಿಂದ ಪರಿಸರದ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಲ್ಯಾಪ್​ಟಾಪ್, ಟ್ಯಾಬ್ಲೆಟ್​, ಡೆಸ್ಕ್​ಟಾಪ್, ಸ್ಮಾರ್ಟ್​ ಫೋನ್​ಗಳ ಬಗ್ಗೆ ಅಧ್ಯಯನ ನಡೆಸಿರುವ ಕೆನಡಾದ ಮೆಕ್ ಮಾಸ್ಟರ್ ಯುನಿವರ್ಸಿಟಿಯ ಸಂಶೋಧಕರು, ಸ್ಮಾರ್ಟ್​ಫೋನ್​ಗಳು ಮುಂದೊಂದಿನ ಪರಿಸರದ ಮೇಲೆ ಹಾನಿಯುಂಟು ಮಾಡಲಿವೆ.  ಅಲ್ಲದೆ 2020ರ ವೇಳೆಗೆ ಲ್ಯಾಪ್​ಟಾಪ್, ಡೆಸ್ಕ್​ಟಾಪ್​​ಗಳಿಗಿಂತ ಹೆಚ್ಚಿನ ಶಕ್ತಿಯನ್ನು ಸ್ಮಾರ್ಟ್​ ಫೋನ್ ಹೀರಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಈಗ ಶೇ. 1.5ರಷ್ಟು ಸ್ಮಾರ್ಟ್​ಫೋನ್​ಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಪ್ರತಿಯೊಂದು ಟೆಕ್ಸ್ಟ್ ಸಂದೇಶ, ಫೋನ್ ಕರೆ, ವಿಡಿಯೋ ಕರೆ, ಡೌನ್​ಲೋಡ್​ಗಳಿಗೆ ಡಾಟಾ ಸಂಸ್ಥೆಗಳು ವಿದ್ಯುತ್​ನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿವೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ 2040ರ ಹೊತ್ತಿಗೆ ಸ್ಮಾರ್ಟ್​ಫೋನ್​ಗಳು ಪರಿಸರಕ್ಕೆ ಮಾರಕವಾಗುವುದು ಖಂಡಿತ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಒಟ್ಟಾರೆ ತಂತ್ರಜ್ಞಾನದಿಂದ ಹಾಗೂ ಜನರ ಲೈಫ್​ಸ್ಟೈಲ್​ನಿಂದ ಪರಿಸರನಾಶವಾಗುತ್ತಿರುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿ ಸಾಬೀತು ಮಾಡುತ್ತಿದ್ದರೂ, ಜನರಿಗೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ.
First published:March 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ