ಸ್ಮಾರ್ಟ್​ಫೋನ್​ ಫ್ಲ್ಯಾಶ್ ಬಳಸಿ ಕಣ್ಣಿನ ಕ್ಯಾನ್ಸರ್​ ಪತ್ತೆ ಹಚ್ಚಬಹುದು

news18
Updated:May 26, 2018, 4:13 PM IST
ಸ್ಮಾರ್ಟ್​ಫೋನ್​ ಫ್ಲ್ಯಾಶ್ ಬಳಸಿ ಕಣ್ಣಿನ ಕ್ಯಾನ್ಸರ್​ ಪತ್ತೆ ಹಚ್ಚಬಹುದು
news18
Updated: May 26, 2018, 4:13 PM IST
ನ್ಯೂಸ್ 18 ಕನ್ನಡ

ಸ್ಮಾರ್ಟ್​ಫೋನ್​ ಕ್ಯಾಮೆರಾದಿಂದ ಕಣ್ಣಿನ ಕ್ಯಾನ್ಸರ್​ ಪತ್ತೆ ಹಚ್ಚಬಹುದೆಂದು ಯುನೈಟೆಡ್​ ಕಿಂಗ್​ಡಮ್​​ನ  ಸಂಶೋಧಕರು ತಿಳಿಸಿದ್ದಾರೆ. ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಇಂತಹ ಕ್ಯಾನ್ಸರ್ ಕಂಡು ಬರುತ್ತಿರುವುದಾಗಿ ಅಧ್ಯಯನ ತಂಡ ಹೇಳಿದೆ.

ಕಣ್ಣಿನ ರೆಟಿನಾದಲ್ಲಿ ಟ್ಯೂಮರ್ ಉಂಟಾಗುವುದರಿಂದ ಇದನ್ನು ರೆಟಿನೊಬ್ಲಾಸ್ಟೊಮಾ(Retinoblastoma) ಎಂದು ಕರೆಯಲಾಗುತ್ತದೆ. ಈ ಕ್ಯಾನ್ಸರ್​ನ್ನು ಪತ್ತೆ ಹಚ್ಚಲು ಸ್ಮಾರ್ಟ್​ಫೋನ್ ಕ್ಯಾಮೆರಾ ಫ್ಲ್ಯಾಶ್​ ಬಳಸಿಕೊಳ್ಳಬಹುದು.

ಬ್ರಿಟನ್​ನ ನಾಲ್ಕು ತಿಂಗಳ ಆರ್ವಿನ್​ನ ಕಣ್ಣಿನ ಸಮಸ್ಯೆಯನ್ನು ವೈದ್ಯ ತಂಡ ಸ್ಮಾರ್ಟ್​ಫೋನ್​ ಬಳಸಿ ಪತ್ತೆಹಚ್ಚಿದ್ದರು. ಮಗು ರೆಟಿನೊಬ್ಲಾಸ್ಟೊಮಾದಿಂದ ಬಳಲುತ್ತಿದ್ದರಿಂದ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ ಎಂದು ದಿ ವರ್ಜ್ ವರದಿ ಮಾಡಿದೆ.

ಮಕ್ಕಳಲ್ಲಿ ಕಾಣಿಸುವ ಈ ತರಹದ ಕಣ್ಣಿನ ಕ್ಯಾನ್ಸರ್​ಗೆ ಚಿಕಿತ್ಸೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂದು ಸಿಎಚ್​ಇಸಿಟಿ ಇನ್ಸಿಟಿಟ್ಯೂಟ್ ತಂಡದ ಸಂಶೋಧಕರು ತಿಳಿಸಿದ್ದಾರೆ. ಫ್ಲ್ಯಾಶ್​ ಉಪಯೋಗಿಸಿ ಮಗುವಿನ ಫೋಟೋ ತೆಗೆದಾಗ ಕಣ್ಣಿನ ಸುತ್ತಲೂ ಬಿಳಿ ಹೊಳಪು ಕಂಡು ಬಂದರೆ ಅದು ರೆಟಿನೊಬ್ಲಾಸ್ಟೊಮಾ ಆಗಿರುವ ಸಾಧ್ಯತೆ ಇರುತ್ತದೆ.

ಹಾಗೆಯೇ, ಮಗುವಿನ ಕಣ್ಣಿನಲ್ಲಿ ಟ್ಯೂಮರ್​ ಇದ್ದರೆ, ಫ್ಲ್ಯಾಶ್​ ಬಳಸಿ ಫೋಟೋ ಕ್ಲಿಕ್ಕಿಸಿದಾಗ ಕಣ್ಣಿನ ಭಾಗವು ಬಿಳಿ ಬಣ್ಣದಿಂದ ಕೂಡಿರುತ್ತದೆ. ಈ ರೀತಿಯಾಗಿ ಕಂಡು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...