ನಿಧಾನವಾಗಿ ಆಹಾರ ಸೇವಿಸುವುದರಿಂದ ಸ್ಥೂಲ ಕಾಯದ ಸಮಸ್ಯೆ ತಡೆಯಬಹುದು!

news18
Updated:April 13, 2018, 5:15 PM IST
ನಿಧಾನವಾಗಿ ಆಹಾರ ಸೇವಿಸುವುದರಿಂದ ಸ್ಥೂಲ ಕಾಯದ ಸಮಸ್ಯೆ ತಡೆಯಬಹುದು!
news18
Updated: April 13, 2018, 5:15 PM IST
ನ್ಯೂಸ್​ 18 ಕನ್ನಡ

ಸೊಂಟದ ಸುತ್ತ  ಮಾಂಸ ಬೆಳೆಯುತ್ತಿರುವ ಅನುಭವ ಎಲ್ಲರಿಗೂ ಆಗುತ್ತದೆ? ಆದರೆ ಅದರಲ್ಲಿ ವಿಶೇಷವೇನೂ ಇಲ್ಲ. ಇದಕ್ಕೆಲ್ಲ ಕಾರಣ ನಿಮ್ಮ ಆಹಾರ ಪದ್ಧತಿ. ನೀವು ಏನನ್ನು ತಿನ್ನುತ್ತಿದ್ದಿರಿ ಎನ್ನುವುದಕ್ಕಿಂತ, ನೀವು ಹೇಗೆ ತಿನ್ನುತ್ತೀರಿ ಎಂಬುದು ಮುಖ್ಯ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕನ್ ಹಾರ್ಟ್ ಅಸೋಸಿಯೆಷನ್ ಸೈಂಟಿಫಿಕ್ ಸೆಷನ್ಸ್ 2017ರ ಪ್ರಕಾರ, ನಿಧಾನವಾಗಿ ಊಟ ಮಾಡುವ ಮೂಲಕ ಸಾಕಷ್ಟು ಖಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದಂತೆ. ಅದರಲ್ಲೂ ಬೊಜ್ಜು ಅಥವಾ ಮೆಟಾಬಾಲಿಕ್ ಸಿಂಡ್ರೋಮ್, ಹೃದ್ರೋಗ, ಮಧುಮೇಹ ಮತ್ತು ಸ್ಟ್ರೋಕ್​​ನಂತಹ ಅಪಾಯದ ಬೆಳವಣಿಗೆಗಳನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಬಹುದು ಎಂದು ಪ್ರಸ್ತುತಪಡಿಸಿದೆ.

ಕಿಬ್ಬೊಟ್ಟೆಯ ಸ್ಥೂಲಕಾಯ, ಹೆಚ್ಚಿನ ಉಪವಾಸದಿಂದಾಗುವ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಅಧಿಕ ಟ್ರೈ ಗ್ಲಿಸರೈಡ್​ಗಳು ಅಥವಾ ಕಡಿಮೆ ಕೊಬ್ಬ ಒಳಗೊಂಡಿರುವ ಮೂರು ಅಪಾಯಕಾರಿ ಅಂಶಗಳನ್ನು ಯಾರಾದರೂ ಹೊಂದಿದ್ದಾಗ ಅಂತವರಿಗೆ ಮೆಟಾಬಾಲಿಕ್ ಸಿಂಡ್ರೋಮ್ ಸಂಭವಿಸುತ್ತದೆ ಎಂದು ಜಪಾನಿನ ಸಂಶೋಧಕರು ಹೇಳಿದ್ದಾರೆ.

2008ರ ನಂತರ ಯಾರು  ಮೆಟಾಬಾಲಿಕ್ ಸಿಂಡ್ರೋಮ್​ಗೆ ಒಳಗಾಗಿಲ್ಲವೋ ಅಂತಹ ಸರಾಸರಿ 51 ವರ್ಷದ 642 ಪುರುಷರು ಹಾಗೂ 441 ಮಹಿಳೆಯರನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು. ಅವರ ಆಹಾರ ಪದ್ಧತಿಗೆ ಅಂದರೆ ಅವರು ನಿಧಾನ, ಸಾಮಾನ್ಯ ಅಥವಾ ವೇಗವಾಗಿ ಆಹಾರ ಸೇವಿಸುತ್ತಾರೆಯೇ ಎಂದು ಮೂರು ಗುಂಪುಗಳಾಗಿ ವಿಂಗಡಿಸಿ ಅವರ ಮೇಲೆ ಪ್ರಯೋಗ ಮಾಡಲಾಗಿದೆ.

ಸುದೀರ್ಘ ಐದು ವರ್ಷಗಳ ಅಧ್ಯಯನದ ನಂತರ ಸಂಶೋಧಕರು ವೇಗವಾಗಿ ಆಹಾರ ಸೇವಿಸುವವರಲ್ಲಿ ಶೇಖಡ 11.6ರಷ್ಟು ಮೆಟಾಬಾಲಿಕ್ ಸಿಂಡ್ರೋಮ್​ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಸಾಮಾನ್ಯವಾಗಿ ಆಹಾರ ಸೇವಿಸುವವರಲ್ಲಿ ಶೇ.6.5ರಷ್ಟು, ನಿಧಾನವಾಗಿ ಆಹಾರ ಸೇವಿಸುವವರಲ್ಲಿ ಶೇಖಡ 2.3ರಷ್ಟು ಮಂದಿ ಮಾತ್ರ ಮೆಟಾಬಾಲಿಕ್ ಸಿಂಡ್ರೋಮ್ ಗೆ ಒಳಗಾಗುತ್ತಾರೆ ಎಂಬುದು ಬಹಿರಂಗಪಡಿಸಿದೆ.

ವೇಗವಾಗಿ ಆಹಾರ ಸೇವನೆ ಮಾಡುವುದರಿಂದ ಅಧಿಕ ತೂಕ, ಅಧಿಕ ರಕ್ತದೊತ್ತಡ ಮತ್ತು ಸೊಂಟದ ಸುತ್ತ ಬೊಜ್ಜು ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗಗೊಂಡಿದೆ.
First published:April 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...