Weight Loss: ತೂಕ ಇಳಿಸೋಕೆ ಚೆನ್ನಾಗಿ ನಿದ್ರೆ ಮಾಡ್ಬೇಕು, ಆರೋಗ್ಯಕ್ಕೂ ಬಹಳ ಒಳ್ಳೆಯದಂತೆ

ನಿದ್ರೆಯ ಕೊರತೆ ಹಾಗೂ ತೂಕ ಇಳಿಕೆಗೆ ನೇರವಾಗಿ ಸಂಬಂಧವಿದೆ ಅನ್ನೋದು ನಿಮಗೆ ತಿಳೀದಿದೆಯಾ? ಹೌದು sleepfoundation.org ಪ್ರಕಾರ, ವೇಯ್ಟ್‌ ಲಾಸ್‌ ಗೂ ಒಳ್ಳೆಯ ನಿದ್ದೆಗೂ ನೇರ ಸಂಬಂಧವಿದೆ. ನಿದ್ದೆಯ ಕೊರತೆ ಹಾಗೂ ಕಳಪೆ ಗುಣಮಟ್ಟದ ನಿದ್ದೆ ತೂಕ ಹೆಚ್ಚಾಗೋದು, ಒಬೆಸಿಟಿ, ಜೀರ್ಣಕ್ರಿಯೆಯಲ್ಲಿ ತೊಂದರೆ ಹಾಗೂ ಬೇರೆ ಬೇರೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆರೋಗ್ಯವಂತ ದೇಹ (Healthy Body) ಹಾಗೂ ಮನಸ್ಸಿಗೆ ಒಳ್ಳೆಯ ನಿದ್ದೆ ಬೇಕೇ ಬೇಕು. ನಿದ್ದೆಯಲ್ಲಿ (Sleep) ಕೊರತೆ ಆದ್ರೆ ಸಾಕಷ್ಟು ಆರೋಗ್ಯ ಸಮಸ್ಯೆಯಿಂದ ಬಳಲಬೇಕಾದೀತು. ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆ, ದುರ್ಬಲವಾದ ಅರಿವಿನ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳಂತಹ ಹಲವಾರು ಆರೋಗ್ಯ ಸಮಸ್ಯೆ ಗಳಿಗೆ ನಾವು ಒಳಗಾಗುತ್ತೇವೆ. ಆದ್ರೆ ನಿದ್ರೆಯ ಕೊರತೆ ಹಾಗೂ ತೂಕ ಇಳಿಕೆಗೆ (Weight Loss) ನೇರವಾಗಿ ಸಂಬಂಧವಿದೆ ಅನ್ನೋದು ನಿಮಗೆ ತಿಳೀದಿದೆಯಾ? ಹೌದು sleepfoundation.org ಪ್ರಕಾರ, ವೇಯ್ಟ್‌ ಲಾಸ್‌ ಗೂ ಒಳ್ಳೆಯ ನಿದ್ದೆಗೂ ನೇರ ಸಂಬಂಧವಿದೆ. ನಿದ್ದೆಯ ಕೊರತೆ ಹಾಗೂ ಕಳಪೆ ಗುಣಮಟ್ಟದ ನಿದ್ದೆ ತೂಕ ಹೆಚ್ಚಾಗೋದು, ಒಬೆಸಿಟಿ, ಜೀರ್ಣಕ್ರಿಯೆಯಲ್ಲಿ ತೊಂದರೆ ಹಾಗೂ ಬೇರೆ ಬೇರೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ (Health Problems) ಕಾರಣವಾಗುತ್ತೆ.

ಯುರೋಪಿಯನ್ ಕಾಂಗ್ರೆಸ್ ಆನ್ ಒಬೆಸಿಟಿ (ಇಸಿಒ) ನಲ್ಲಿ ಪ್ರಸ್ತುತಪಡಿಸಲಾದ ಅಧ್ಯಯನವು ಸಾಕಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡದೇ ಹೋದರೆ ನೀವು ಮಾಡುತ್ತಿರುವ ತೂಕ ಇಳಿಕೆ ಪ್ರಯತ್ನ ಸಫಲವಾಗದೇ ಹೋಗಬಹುದು ಎಂದಿದೆ. ಇನ್ನು ಲಖ್ನೌದ ಮೇದಾಂತ, ಉಸಿರಾಟ ಮತ್ತು ನಿದ್ರಾ ಔಷಧಿಗಳ ಹಿರಿಯ ಸಲಹೆಗಾರ ಡಾ ಜುಗೇಂದ್ರ ಸಿಂಗ್ ಅವರ ಪ್ರಕಾರ, ಕೆಫೀನ್‌ ಹಾಗೂ ಸಕ್ಕರೆಯಿಂದಾಗಿ ಶಕ್ತಿಯ ಕೊರತೆ, ನಿದ್ರಾಹೀನತೆ ಮತ್ತು ಆಯಾಸವನ್ನು ಹೆಚ್ಚಾಗುತ್ತದೆ. ಇದು ತೂಕ ಹೆಚ್ಚಾಗೋದಿಕ್ಕೆ ಹಾಗೂ ಕಡಿಮೆ ವ್ಯಾಯಾಮಕ್ಕೆ ಕಾರಣವಾಗುತ್ತದೆ.

ನಾವು ಎಷ್ಟು ಗಂಟೆ ಮಲಗಬೇಕು?
ತೂಕ ನಷ್ಟಕ್ಕೆ ಸಹಾಯ ಮಾಡಲು, 7-8 ಗಂಟೆಗಳ ಕಾಲ ನಿದ್ರೆ ಬೆಸ್ಟ್ ಅನ್ನೋದು ತಜ್ಷರ ಅಭಿಪ್ರಾಯ. "7-8 ಗಂಟೆಗಳ ನಿರಂತರ ನಿದ್ರೆಯು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ನಿಮ್ಮನ್ನು ಶಕ್ತಿಯುತರನ್ನಾಗಿ ಮಾಡುತ್ತದೆ, ಆ ಮೂಲಕ ತೂಕ ನಷ್ಟಕ್ಕೆ ನೇರವಾಗಿ ಸಂಬಂಧಿಸಿದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತೆ.

ಇದನ್ನೂ ಓದಿ: Weight Loss Tips: ಈ ವಸ್ತುಗಳಿದ್ರೆ ಸಾಕು ನಿಮ್ಮ ಬೊಜ್ಜು ಬೇಗ ಕರಗಿ ಬಿಡುತ್ತೆ

ಅಲ್ಲದೆ, ಬೇಗ ಮಲಗುವುದರಿಂದ ತಡರಾತ್ರಿಯಲ್ಲಿ ಜಂಕ್ ಫುಡ್, ಅಧಿಕ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ತಿಂಡಿಗಳನ್ನು ಸೇವಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತೆ. ಹೀಗಂತ ಗುರುಗ್ರಾಮ್‌ನ ಮ್ಯಾಕ್ಸ್ ಆಸ್ಪತ್ರೆಯ ಮುಖ್ಯ ಪೌಷ್ಟಿಕತಜ್ಞೆ ಉಪಾಸನಾ ಶರ್ಮಾ ಹೇಳುತ್ತಾರೆ.

ತೂಕ ಹೆಚ್ಚಳದಿಂದ ನಿದ್ರೆಯ ಮೇಲೆ ಪರಿಣಾಮ?
ಇನ್ನು ಡಾ. ಸಿಂಗ್‌ ಅವರ ಪ್ರಕಾರ, "ಅಸ್ವಸ್ಥ ಸ್ಥೂಲಕಾಯತೆಯು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ (OSA) ಸಿಂಡ್ರೋಮ್‌ಗೆ ಕಾರಣವಾಗುತ್ತದೆ, ಇದು ಮತ್ತಷ್ಟು ಕಳಪೆ ಗುಣಮಟ್ಟ ಮತ್ತು ಮತ್ತಷ್ಟು ತೂಕ ಹೆಚ್ಚಾಗಲು ಕಾರಣವಾಗುತ್ತದೆ".ಡಾ ಸೂದ್ ಹೇಳೋ ಪ್ರಕಾರ, "ಹೆಚ್ಚುವರಿ ಕೊಬ್ಬು ನಿಮ್ಮ ದೇಹದಲ್ಲಿ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತೆ. ಇದು ದೊಡ್ಡ ಹೊಟ್ಟೆ, ಪೂರ್ಣ ಮುಖ, ಹಿಗ್ಗಿದ ಸೊಂಟ, ಪ್ರಮುಖವಾದ ಪೃಷ್ಠದ ಭಾಗದಲ್ಲಿ ನಿಮಗೆ ಸ್ಪಷ್ಟವಾಗುತ್ತೆ. ಇದರ ಪರಿಣಾಮ ದೊಡ್ಡ ಕುತ್ತಿಗೆ ಅಥವಾ ಹೊಟ್ಟೆಯಂತಹ ಹೆಚ್ಚುವರಿ ತೂಕವನ್ನೂ ನೀವು ಭರಿಸೋದ್ರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ ಎನ್ನುತ್ತಾರೆ.

ಆರೋಗ್ಯಕರ ತೂಕ ನಷ್ಟಕ್ಕೆ ಸ್ಲೀಪಿಂಗ್ ಸಲಹೆ

  • ಪ್ರತಿದಿನ ವ್ಯಾಯಾಮ ಮಾಡಿ

  • ಮಲಗುವ 2-3 ಗಂಟೆಗಳ ಮೊದಲೇ ಊಟ ಮಾಡಿ

  • ನಿದ್ರೆಗೆ ಮೊದಲು ಧ್ಯಾನ ಮಾಡಿ

  • ಮಲಗುವ ಮುನ್ನ ಕೆಫೀನ್ ಅನ್ನು ಸೇವಿಸಬೇಡಿ

  • ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ

  • ಮಲಗುವ ಮೊದಲು ಕನಿಷ್ಠ ಒಂದು ಗಂಟೆಯ ಮೊದಲು ನಿಮ್ಮ ಕಂಪ್ಯೂಟರ್, ಸೆಲ್ ಫೋನ್ ಮತ್ತು ಟಿವಿ ಯನ್ನು ಆಫ್ ಮಾಡಿ

  • ಮಲಗುವ ಸಮಯವನ್ನು ನಿಗದಿಪಡಿಸಿ ಅದೇ ಸಮಯಕ್ಕೆ ದಿನವೂ ಮಲಗಿ


ಇದನ್ನೂ ಓದಿ:  Constipation Remedy: ಈ ಆಹಾರಗಳಿಂದ ನೀವು ದೂರವಿದ್ರೆ ಮಲಬದ್ಧತೆ ಸಮಸ್ಯೆ ಹತ್ತಿರಕ್ಕೂ ಸುಳಿಯಲ್ಲ

ಇವಿಷ್ಟು ಆರೋಗ್ಯಕರ ನಿದ್ರೆ ಮಾಡಬೇಕೆಂದರೆ ನೀವು ಅನುಸರಿಸಬೇಕಾದ ಕ್ರಮಗಳು. ಇವಿಷ್ಟನ್ನೂ ಪಾಲಿಸಿದರೆ ಒಳ್ಳೆಯ ನಿದ್ರೆ ಬರೋದ್ರ ಜೊತೆಗೆ ನಿಮ್ಮ ತೂಕ ಇಳಿಕೆಗೂ ಇದು ಕಾರಣವಾಗುತ್ತೆ ಅನ್ನೋದು ತಜ್ಞರ ಅಭಿಪ್ರಾಯ.
Published by:Ashwini Prabhu
First published: