• Home
  • »
  • News
  • »
  • lifestyle
  • »
  • Sleeping Problem: ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ರೆ ಹೀಗೆ ಮಾಡಿ ನೋಡಿ!

Sleeping Problem: ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ರೆ ಹೀಗೆ ಮಾಡಿ ನೋಡಿ!

ನಿದ್ರಾ ದಿನ

ನಿದ್ರಾ ದಿನ

ಬಹುತೇಕ ಮಂದಿ ಇಂದು ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಕೂಡ ಆಗಿದೆ.

  • Share this:

ಆರೋಗ್ಯಕರ ಜೀವನಕ್ಕೆ ಎರಡು ಆಧಾರ ಸ್ಥಂಭಗಳೆಂದರೆ, ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಅಗತ್ಯವಿರುವಷ್ಟು ನಿದ್ದೆ.  ಊಟ ಮತ್ತು ನಿದ್ದೆ ಒಂದಕ್ಕೊಂದು ಕೊಂಡಿಯಾಗಿವೆ.. ಸರಿಯಾದ ಆಹಾರ ತಿನ್ನುವುದು ನಿದ್ದೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ನಿದ್ರಾ ತಜ್ಞರ ಪ್ರಕಾರ, ನಾವು ತಿನ್ನುವ ಆಹಾರದ ಪ್ರಮಾಣ ಹಾಗೂ ಗುಣಮಟ್ಟ, ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ನಿಮಗೆ ರಾತ್ರಿ ಒಳ್ಳೆಯ ನಿದ್ದೆ ಬೇಕೆಂದರೆ, ಊಟ ಮತ್ತು ನಿದ್ದೆಯ ಬಗ್ಗೆ ತಿಳಿದುಕೊಳ್ಳಲೇಬೇಕು ಎನ್ನುತ್ತವೆ ಸಂಶೋಧನೆಗಳು.


ನಿದ್ದೆ ಮತ್ತು ಅತಿಯಾಗಿ ತಿನ್ನುವುದು
ಸಾಮಾನ್ಯವಾಗಿ ನಾವು ಹೊಟ್ಟೆ ಬಿರಿಯುವಷ್ಟು ತಿಂದಾಗ ಏನಾಗುತ್ತದೆ? ಜಡ ಮತ್ತು ತೂಕಡಿಕೆ ಬರುತ್ತದೆ. ಆದರೆ, ಜರ್ನಲ್ ಆಫ್ ಅಮೆರಿಕ ಹಾರ್ಟ್ ಅಸೋಸಿಯೇಶನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ, ಅತಿಯಾಗಿ ತಿನ್ನುವುದು ಕಳಪೆ ನಿದ್ದೆಯ ಲಕ್ಷಣ ಎಂದು ತಿಳಿಸಲಾಗಿದೆ.


ಈ ಅಧ್ಯಯನದಲ್ಲಿ, 20-76 ವಯೋಮಾನದ 495 ಮಹಿಳೆಯರ ಊಟದ ಅಭ್ಯಾಸ, ನಿದ್ದೆಯ ಗುಣಮಟ್ಟ ಮತ್ತು ರಾತ್ರಿ ಎಷ್ಟು ಬೇಗ ನಿದ್ರೆಗೆ ಜಾರುತ್ತಾರೆ ಎಂಬ ಅಂಶಗಳನ್ನು ಸಂಶೋಧನೆಗೆ ಒಳಪಡಿಸಿದಾಗ, ಸೇವಿಸಿದ ಆಹಾರದ ಪ್ರಮಾಣ ಸೇರಿದಂತೆ ಹಲವಾರು ಸಂಗತಿಗಳು ನಿದ್ರಾ ಹೀನತೆಗೆ ಕಾರಣ ಎಂಬುದು ತಿಳಿದು ಬಂತು.ನಿದ್ರೆ, ಕೆಫಿನ್ ಮತ್ತು ಸಕ್ಕರೆ
ಜರ್ನಲ್ ಆಫ್ ಅಮೆರಿಕ ಹಾರ್ಟ್ ಅಸೋಸಿಯೇಶನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ನಿದ್ರೆಯ ಕಳಪೆ ಗುಣಮಟ್ಟ ಮತ್ತು ಸಕ್ಕರೆ ಹಾಗೂ ಕೆಫಿನ್ ಸೇವನೆಯ ಮಧ್ಯೆ ಕೂಡ ಸಂಬಂಧ ಇದೆಯಂತೆ.ಈ ಅಧ್ಯಯನದ ಪ್ರಕಾರ, ಹೆಚ್ಚು ಕೆಫಿನ್ ಸೇವಿಸಿದಷ್ಟು ನಿದ್ರಾ ಹೀನತೆಯ ಪ್ರಮಾಣ ಕೂಡ ಹೆಚ್ಚಿರುತ್ತದೆ. ಅತೀ ಹೆಚ್ಚು ಕೆಫಿನ್ ಹಾಗೂ ಸಕ್ಕರೆ ಸೇವನೆ ಮಾಡುವರರಲ್ಲಿ ನಿದ್ರೆಯ ಕಳಪೆ ಗುಣಮಟ್ಟ ಕಂಡುಬಂದಿದೆ.ನಿದ್ರೆ ಮಾಡುವ ಮುನ್ನ ಕಾಫಿ ಮತ್ತು ಸಕ್ಕರೆ ಸೇವನೆ ಮಾಡಬೇಡಿ. ಕಾಫಿ ಕುಡಿಯಲೇಬೇಕೆಂದಿದ್ದರೆ, ಮಲಗುವ ಕೆಲವು ಗಂಟೆಗಳ ಮುನ್ನ ಕುಡಿಯಿರಿ.


ನಿದ್ರೆ, ಅನ್‍ಸ್ಯಾಚುರೇಟೆಡ್ ಫ್ಯಾಟ್ಸ್
ಅನ್ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಡೈರಿ ಉತ್ಪನ್ನಗಳು ಮತ್ತು ಆಹಾರಗಳು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕೂಡ ಜರ್ನಲ್ ಆಫ್ ಅಮೆರಿಕ ಹಾರ್ಟ್ ಅಸೋಸಿಯೇಶನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ನಿದ್ರೆಯ ಸಮಸ್ಯೆ ಮತ್ತು ಹಾಲಿನ ಉತ್ಪನ್ನಗಳ ಸೇವನೆಯ ಮಧ್ಯೆ ಸಂಶೋಧಕರು ವಿಲೋಮ ಸಂಬಂಧವನ್ನು ಹುಡುಕಿದ್ದಾರೆ. ಅಂದರೆ, ಹಾಲಿನ ಉತ್ಪನ್ನಗಳನ್ನು ತಿನ್ನದವರಲ್ಲಿ ನಿದ್ರೆಯ ಸಮಸ್ಯೆಗಳು ಇರುತ್ತವೆ. ಹಾಗಾದರೆ, ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯಬೇಕು ಎಂಬುದರ ಹಿಂದೆ ವೈಜ್ಞಾನಿಕ ಕಾರಣ ಇದೆ ಎನ್ನಬಹುದಲ್ಲವೆ?ನಿದ್ರೆ ಮತ್ತು ಧಾನ್ಯಗಳು
ಕಡಿಮೆ ಪ್ರಮಾಣದಲ್ಲಿ ಧಾನ್ಯಗಳನ್ನು ತಿನ್ನುವುದರಿಂದ, ನಿದ್ರೆಯ ಸಮಸ್ಯೆಗಳು ಬರುತ್ತವೆ ಎಂಬುವುದು ಕೂಡ ಜರ್ನಲ್ ಆಫ್ ಅಮೆರಿಕ ಹಾರ್ಟ್ ಅಸೋಸಿಯೇಶನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.ನಿದ್ರೆ ತಜ್ಞೆ ಡಾ.ಕಿಂಬರ್ಲಿ ಟ್ರೋಂಗ್ ಅವರ ಪ್ರಕಾರ, ಫೈಬರ್, ಪೊಟಾಶಿಯಂ ಮತ್ತು ಮೆಗ್ನೀಶಿಯಂ ಅಧಿಕ ಪ್ರಮಾಣದಲ್ಲಿರುವ ಧಾನ್ಯಗಳನ್ನು ತಿನ್ನುವುದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ ಮತ್ತು ಒಳ್ಳೆಯ ನಿದ್ರೆ ಬರುತ್ತದೆ.


ನಿದ್ರೆ ಮತ್ತು ಸೂಕ್ಷ್ಮ ಪೋಷಕಾಂಶಗಳು
ಸೂಕ್ಷ್ಮ ಪೋಷಕಾಂಶಗಳ ಸೇವನೆ ಮತ್ತು ನಿದ್ದೆಯ ನಡುವೆ ಕೂಡ ಸಂಬಂಧ ಇದೆ. ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ವಿಟಮಿನ್ ಎ, ಸಿ, ಡಿ, ಇ ಹಾಗೂ ಕೆ ನಮ್ಮ ನಿದ್ದೆಯ ಮೇಲೆ ಪ್ರಭಾವ ಬೀರುತ್ತವೆ.


ಚೆನ್ನಾಗಿ ತಿನ್ನಿ, ಚೆನ್ನಾಗಿ ನಿದ್ರಿಸಿ , ಚೆನ್ನಾಗಿ ಜೀವಿಸಿ
ನಾವೆಷ್ಟು ಚೆನ್ನಾಗಿ ಮತ್ತು ದೀರ್ಘವಾಗಿ ನಿದ್ರಿಸುತ್ತೇವೆ ಎಂಬುವುದು ನಾವೇನನ್ನು ತಿನ್ನುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ನಿಮ್ಮ ನಿದ್ರೆಯ ಅಭ್ಯಾಸ ಸರಿ ಹೋಗಬೇಕೆಂದಿದ್ದರೆ, ಮೊದಲು ಮಲಗುವ ಮುನ್ನ ತಿನ್ನಬಾರದಂತಹ ಆಹಾರಗಳ ಬಗ್ಗೆ ಅರಿತುಕೊಳ್ಳುವುದನ್ನು ಕಲಿಯಿರಿ. ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಖಂಡಿತಾ ನಿದ್ದೆ ಬರುತ್ತದೆ.


First published: