• Home
  • »
  • News
  • »
  • lifestyle
  • »
  • Sleeping Problem: ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚಗೆ ನಿದ್ದೆ ಮಾಡ್ಬೇಕಾ? ಹಾಗಾದ್ರೆ ಇವುಗಳನ್ನು ಆಹಾರದಲ್ಲಿ ಸೇರಿಸಿ!

Sleeping Problem: ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚಗೆ ನಿದ್ದೆ ಮಾಡ್ಬೇಕಾ? ಹಾಗಾದ್ರೆ ಇವುಗಳನ್ನು ಆಹಾರದಲ್ಲಿ ಸೇರಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರಂತೂ ಚಳಿಗಾಲದಲ್ಲಿ ನೀರು ಹೆಚ್ಚು ಕುಡಿಯುವುದೇ ಇಲ್ಲ. ಯಾಕಂದ್ರೆ ನೀರು ಕುಡಿದಷ್ಟು ತಂಪು ವಾತಾವರಣದಲ್ಲಿ ಮೂತ್ರ ವಿಸರ್ಜನೆಗೆ ಹೆಚ್ಚು ಬಾರಿ ಹೋಗಬೇಕಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಚಳಿಯಲ್ಲಿ ಚೆನ್ನಾಗಿ ನಿದ್ದೆ ಬರುವಂತೆ ಮಾಡುವುದು ಹೇಗೆ?

  • Share this:

    ಚಳಿಗಾಲದಲ್ಲಿ (Winter) ಹಲವು ಆರೋಗ್ಯ ಸಮಸ್ಯೆಗಳು (Health Problems) ಕಾಡುತ್ತವೆ. ಅವುಗಳಲ್ಲಿ ನಿದ್ದೆಯ ಕೊರತೆ (Sleeping Problem) ಅಥವಾ ನಿದ್ರಾಹೀನತೆ, ಅಥವಾ ಸರಿಯಾಗಿ ನಿದ್ದೆ ಮಾಡಲಾಗದ ಸಮಸ್ಯೆ ಸಹ ಒಂದಾಗಿದೆ. ಚಳಿಗಾಲದಲ್ಲಿ ಜನರು (People) ಹೆಚ್ಚು ನೀರು (Water) ಕುಡಿಯಲು ತುಂಬಾ ಆಲೋಚಿಸುತ್ತಾರೆ. ಕೆಲವರಂತೂ ಚಳಿಗಾಲದಲ್ಲಿ ನೀರು ಹೆಚ್ಚು ಕುಡಿಯುವುದೇ ಇಲ್ಲ. ಯಾಕಂದ್ರೆ ನೀರು ಕುಡಿದಷ್ಟು ತಂಪು ವಾತಾವರಣದಲ್ಲಿ ಮೂತ್ರ ವಿಸರ್ಜನೆಗೆ ಹೆಚ್ಚು ಬಾರಿ ಹೋಗಬೇಕಾಗುತ್ತದೆ ಎಂದುಕೊಳ್ಳುತ್ತಾರೆ. ಇನ್ನು ಕೆಲವರು ಚಳಿಗಾಲದಲ್ಲಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಆಗಲ್ಲ. ಯಾಕಂದ್ರೆ ರಾತ್ರಿ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಏಳಬೇಕಾಗುತ್ತದೆ. ಇದು ನಿದ್ರೆಗೆ ಭಂಗ ತರುತ್ತದೆ.


    ಚಳಿಗಾಲದಲ್ಲಿ ನಿದ್ರೆಯ ಕೊರತೆ ಸಮಸ್ಯೆ


    ತಂಪು ವಾತಾವರಣದಲ್ಲಿ ಉತ್ತಮವಾಗಿ ನಿದ್ದೆ ಮಾಡಲು ಎಲ್ಲರೂ ದೇಹ ಬೆಚ್ಚಗಿಡುವ ಸ್ವೆಟ್ಟರ್, ಗ್ಲೌಸ್, ಹಾಸಿಗೆ ಬಳಕೆ ಮಾಡ್ತಾರೆ. ತಂಪಾದ ಗಾಳಿಯು ನಿಮ್ಮ ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ತಂಪು ವಾತಾವರಣವು ನಿದ್ರೆ ಮತ್ತು ಆರೋಗ್ಯದ ಇತರೆ ಅಂಶಗಳ ಮೇಲೆ ಪರಿಣಾಮ ಬೀರಬಹುದು ಅಂತಾರೆ ತಜ್ಞರು.


    ನಿದ್ರೆ ಮಾಡುವಾಗ ನೀವು ತುಂಬಾ ಚಳಿ ಅನುಭವಿಸಿದರೆ, ಅದು ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ. ಹಾಗೆಯೇ ಚಳಿಯಿಂದ ಆಗಾಗ್ಗೆ ಎಚ್ಚರವಾಗುತ್ತದೆ. ಚಳಿಯ ಅನುಭವದಿಂದ ದೇಹವು ಸ್ವನಿಯಂತ್ರಿತ ಪ್ರತಿಕ್ರಿಯೆ ಬದಲಾಯಿಸುತ್ತದೆ. ಆಗ ಎಂಟು ಗಂಟೆಗಳ ಉತ್ತಮ ನಿದ್ರೆ ಹೊಂದಲು ಕಷ್ಟಕರ.




    ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಎಂಟು ಗಂಟೆಗಳ ಉತ್ತಮ ನಿದ್ದೆ ಮಾಡುವುದು ಮುಖ್ಯ. ಹಾಗಾಗಿ ನೀವು ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಿ. ಇವುಗಳ ಸೇವನೆಯಿಂದ ದೇಹವು ಬೆಚ್ಚಗಿರುತ್ತದೆ. ಜೊತೆಗೆ ನಿದ್ರೆಯ ಚಕ್ರವು ಸುಧಾರಿಸುತ್ತದೆ.


    ಡ್ರೈ ಫ್ರೂಟ್ಸ್ ಸೇವನೆ ಮಾಡಿ


    ಅಧ್ಯಯನವೊಂದರ ಪ್ರಕಾರ, ಮಲಗುವ ಮೊದಲು ಕಡಲೆಕಾಯಿ, ಬಾದಾಮಿ ಮತ್ತು ಪಿಸ್ತಾ ಡ್ರೈ ಫ್ರೂಟ್ಸ್ ಸೇವನೆ ಚಯಾಪಚಯ ಹೆಚ್ಚಿಸುತ್ತದೆ. ದೇಹದಲ್ಲಿ ಶಾಖ ಉತ್ಪತ್ತಿಯಾಗಲು ಸಹಕಾರಿ. ಇದು ನಿಮ್ಮ ನಿದ್ರೆಯ ಚಕ್ರ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೂ ನಿದ್ರೆಯನ್ನು ಉತ್ತೇಜಿಸುತ್ತದೆ.


    ದಾಲ್ಚಿನ್ನಿ ಆಹಾರದಲ್ಲಿ ಸೇರಿಸಿ


    ಅನೇಕ ಔಷಧೀಯ ಗುಣ ಹೊಂದಿರುವ ದಾಲ್ಚಿನ್ನಿ ಹಲವು ಕಾಯಿಲೆ ನಿಯಂತ್ರಣಕ್ಕೆ ಸಹಕಾರಿ. ಚಳಿಗಾಲದಲ್ಲಿ ವೈರಸ್‌, ಸೋಂಕು ಸಮಸ್ಯೆಯಿಂದ ದೇಹವನ್ನು ರಕ್ಷಿಸುತ್ತದೆ. ಸಕ್ಕರೆ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ ಸಮಸ್ಯೆ ನಿಯಂತ್ರಿಸುತ್ತದೆ. ದಾಲ್ಚಿನ್ನಿ ಒಂದು ಮೂಲಿಕೆಯಾಗಿದೆ. ಹೀಗಾಗಿ ಇದನ್ನು ಆಯುರ್ವೇದದಲ್ಲಿ ದೀರ್ಘಕಾಲದಿಂದ ಬಳಕೆ ಮಾಡಲಾಗ್ತಿದೆ.


    ದಾಲ್ಚಿನ್ನಿ ಥರ್ಮೋಜೆನಿಕ್ ಗುಣಲಕ್ಷಣ ಹೊಂದಿದ್ದು, ದೇಹವನ್ನು ಬೆಚ್ಚಗಿರಿಸುತ್ತದೆ. ಇದು ನಿದ್ದೆಯ ಚಕ್ರ ಸುಧಾರಿಸಿ, ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಮಲಗುವ ಮೊದಲು ಹಾಲಿನಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಬೆರೆಸಿ ಕುಡಿದರೆ ಚಳಿಗಾಲದಲ್ಲಿ ರಾತ್ರಿ ಉತ್ತಮ ನಿದ್ದೆ ಮಾಡಲು ಸಹಕಾರಿ.


    ಸಾಂದರ್ಭಿಕ ಚಿತ್ರ


    ಆಹಾರದಲ್ಲಿ ಓಟ್ಸ್ ಸೇರಿಸಿ


    ಓಟ್ಸ್ ಹೆಚ್ಚಿಚ್ಚು ಫೈಬರ್ ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಕಾರಿ. ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಜೀರ್ಣಕ್ರಿಯೆ ದೇಹವನ್ನು ಬಿಸಿ ಮಾಡುತ್ತದೆ. ನಿದ್ರೆ ಸುಧಾರಿಸುವ ಅಂಶ ಹೊಂದಿದೆ.


    ಆಹಾರದಲ್ಲಿ ಶುಂಠಿ ಸೇರಿಸಿ


    ಶುಂಠಿ ಆಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ವೈರಲ್ ಸೇರಿ ಅನೇಕ ಪೋಷಕಾಂಶ ಹೊಂದಿದೆ. ಇದು ವಾಸೋಡಿಲೇಟಿಂಗ್ ಅಂಶ ಹೊಂದಿದೆ. ರಕ್ತನಾಳಗಳು ವಿಶ್ರಾಂತಿ ಮಾಡಲು ಸಹಕಾರಿ. ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ದೇಹ ಬೆಚ್ಚಗಿರುತ್ತದೆ.


    ಮಲಗುವ ಮೊದಲು ಶುಂಠಿಯ ಕೆಲ ತುಂಡುಗಳನ್ನು ನೀರಿನಲ್ಲಿ ಕುದಿಸಿ, ಶೋಧಿಸಿ ಚಹಾದಂತೆ ಕುಡಿಯಿರಿ. ಇದು ಶೀತದ ಲಕ್ಷಣ  ತೊಡೆದು ಹಾಕುತ್ತದೆ. ನಿದ್ರಾಹೀನತೆ ಸಮಸ್ಯೆ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಮೊಸರಿನಿಂದ ಮನೆಯಲ್ಲೇ ತಯಾರಿಸಿ 8 ಹೇರ್​ಮಾಸ್ಕ್


    ಕ್ಯಾರೆಟ್ ಸೇವಿಸಿ


    ಚಳಿಗಾಲದಲ್ಲಿ ಆಹಾರದಲ್ಲಿ ಕ್ಯಾರೆಟ್ ತರಕಾರಿ ಸೇರಿಸಿ. ಇದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ದೇಹವನ್ನು ಬೆಚ್ಚಗಿಡುತ್ತದೆ. ಕ್ಯಾರೆಟ್‌ ಅಂಶಗಳು ನಿದ್ರೆಯನ್ನು ಉತ್ತೇಜಿಸುತ್ತವೆ. ಚಳಿಯ ರಾತ್ರಿಯ ಊಟದಲ್ಲಿ ಕ್ಯಾರೆಟ್ ಸಲಾಡ್ ಸೇವಿಸಿ.

    Published by:renukadariyannavar
    First published: