ನಿದ್ದೆ ಮಾಡುವ ವಿಧಾನದಿಂದ ಸಂಗಾತಿಯ ಸ್ವಭಾವ ತಿಳಿಯಿರಿ

news18
Updated:May 16, 2018, 7:10 PM IST
ನಿದ್ದೆ ಮಾಡುವ ವಿಧಾನದಿಂದ ಸಂಗಾತಿಯ ಸ್ವಭಾವ ತಿಳಿಯಿರಿ
news18
Updated: May 16, 2018, 7:10 PM IST
ನ್ಯೂಸ್ 18 ಕನ್ನಡ

ಮನುಷ್ಯನಿಗೆ ನಿದ್ದೆ ಅತ್ಯವಶ್ಯಕವಾಗಿದ್ದು, ಇದು ದೈನಂದಿನ ಜೀವನದ ಒಂದು ಭಾಗವಾಗಿದೆ. ನಿದ್ರಿಸಲು ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಮಲಗುತ್ತಾರೆ. ಮಲಗುವ ಭಂಗಿ ಕೂಡ ವ್ಯಕ್ತಿಯ ವ್ಯಕ್ತಿತ್ವ ಅಥವಾ ಸ್ವಭಾವವನ್ನು ಸೂಚಿಸುತ್ತದೆ. ನಿಮ್ಮ ಸಂಗಾತಿ ಮಲಗುವ ಭಂಗಿಯಿಂದ ಅವರ ವ್ಯಕ್ತಿತ್ವ ಅಥವಾ ಸ್ವಭಾವವನ್ನು ತಿಳಿದುಕೊಳ್ಳಬಹುದು.

ನೇರ ಅಥವಾ ನೆಟ್ಟಗೆ ಮಲಗುವ ಹುಡುಗಿಯರು ಸಾಮಾನ್ಯವಾಗಿ ಸರಳ ಸ್ವಭಾವದವರಾಗಿರುತ್ತಾರೆ. ಈ ಸ್ವಭಾವದ ಹುಡುಗಿಯರು ಹೆಚ್ಚಾಗಿ ಆಕ್ರಮಣಕಾರಿ ಸ್ವಭಾವದ ಸಂಗಾತಿಗಳನ್ನು ಇಷ್ಟಪಡುತ್ತಾರೆ. ಅಲ್ಲದೆ ಈ ರೀತಿ ಮಲಗುವವರ ಜೀವನವು ಹೆಚ್ಚು ಸಮತೋಲನದಿಂದ ಕೂಡಿರುತ್ತದೆ.

ಬೋರಲಾಗಿ ಮಲಗುವ ಹುಡುಗಿಯರಲ್ಲಿ ಜೀವನದ ಬಗ್ಗೆ ಅನೇಕ ಕನಸುಗಳಿರುತ್ತದೆ. ಇವರು ಸಂಗಾತಿಯಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅಲ್ಲದೆ ಸಂಗಾತಿಯೊಂದಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತಾರೆ.

ಅನೇಕ ಹುಡುಗಿಯರು ಎದೆ ಮೇಲೆ ಕೈಯಿಟ್ಟು ಮಲಗುವ ಸ್ವಭಾವ ಹೊಂದಿರುತ್ತಾರೆ. ಈ ಹುಡುಗಿಯರು ಕುಟುಂಬ ಮತ್ತು ಸ್ನೇಹಿತರ ಸಂತೋಷಕ್ಕೆ ಆದ್ಯತೆ ನೀಡುತ್ತಾರೆ. ಕುಟುಂಬಕ್ಕಾಗಿ ತಮ್ಮ ಕನಸುಗಳನ್ನೂ ಸಹ ತ್ಯಾಗ ಮಾಡಲು ಸಿದ್ದರಿರುತ್ತಾರೆ.

ಎಡಮಗ್ಗುಲಲ್ಲಿ ಮಲಗುವ ಹುಡುಗಿಯರಲ್ಲಿ ವ್ಯವಹಾರಿಕ ಕೌಶಲ್ಯ ಹೆಚ್ಚಾಗಿರುತ್ತದೆ. ಇಂತಹ ಸ್ವಭಾವದವರು ಎಲ್ಲೇ ಇದ್ದರೂ ಕುಟುಂಬ ವರ್ಗದವರ ಪ್ರೀತಿ ಪಡೆಯುತ್ತಾರೆ. ಇವರು ನಾಯಕತ್ವದ ಗುಣಗಳನ್ನು ಹೊಂದಿರುವ ಸಂಗಾತಿ ಸಿಗಲು ಬಯಸುತ್ತಾರೆ.

ಕೆಲವರು ಹೊದಿಕೆ ಇಲ್ಲದೆ ನಿದ್ರಿಸುವುದಿಲ್ಲ. ಈ ರೀತಿ ನಿದ್ದೆ ಮಾಡುವ ಹುಡುಗಿಯರು ಸಂಪ್ರದಾಯ ಮತ್ತು ಕುಟುಂಬ ವರ್ಗದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ. ಇಂತಹ ಸ್ವಭಾದವರು ಹೆಚ್ಚಾಗಿ ಗೃಹಸ್ಥ ಜೀವನವನ್ನು ಬಯಸುತ್ತಾರೆ. ಇದಕ್ಕಾಗಿ ವೃತ್ತಿಜೀವನವನ್ನೂ ತ್ಯಜಿಸಲು ತಯಾರಾಗಿರುತ್ತಾರೆ.
Loading...

ಹಾಸಿಗೆಯಲ್ಲಿ ಆರಾಮವಾಗಿ ಮಲಗುವ ಸ್ವಭಾವದ ಹುಡುಗಿಯರು ಉತ್ತಮ ಆಲೋಚನಾ ಶಕ್ತಿ ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಬಯಸುವ ಇವರು ಬೆನ್ನಹಿಂದೆ ಮಾತನಾಡುವುದನ್ನು ಇಷ್ಟಪಡುವುದಿಲ್ಲ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ